ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಷ್ಟ್ರ ಮತ್ತು ಧರ್ಮ ಕಾರ್ಯಕ್ಕಾಗಿ ಆಧ್ಯಾತ್ಮಿಕ ಬಲ ನೀಡಿದ ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರು

ಆಸನದಲ್ಲಿ ಕುಳಿತಿರುವವರು ಯೋಗತಜ್ಞ ದಾದಾಜಿ ವೈಶಂಪಾಯನರೊಂದಿಗೆ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ, ಹಾಗೆಯೇ ಸನಾತನದ ಸಾಧಕ ಶ್ರೀ. ಅತುಲ ಪವಾರ ಮತ್ತು ಶ್ರೀ. ರಾಜೇಶ ಮೇಸ್ವಾನಿ (ಎಡಗಡೆ

೧. ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ‘ಸಂಸ್ಕರಿತ ಅಮೂಲ್ಯ ನವಗ್ರಹ ಸುರಕ್ಷಾ-ಕವಚ’ ನೀಡಲು ನಿರ್ಧರಿಸುವುದು.

‘ನಾನು ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರ ಸೇವೆ ಮಾಡಲು ನಾಸಿಕ್‌ನಲ್ಲಿದ್ದೆ. ಅಕ್ಟೋಬರ್‌ ೨೦೧೮ ರಲ್ಲಿ ಒಂದು ದಿನ, ಬೆಳಿಗ್ಗೆ ೪ ಗಂಟೆಗೆ ಯೋಗತಜ್ಞ ದಾದಾಜಿ ಯವರು ನನಗೆ ”ನಾವು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿಯವರನ್ನು ಭೇಟಿಯಾಗಬೇಕಾಗಿದೆ. ನಾನು ಅವರಿಗೆ ಒಂದು ‘ಸಂಸ್ಕರಿತ ಅತ್ಯಮೂಲ್ಯ ನವಗ್ರಹ ರಕ್ಷಾ ಕವಚ’ ಕೊಡಬೇಕಾಗಿದೆ. ಅವರು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಅವರಿಂದ ಮತ್ತಷ್ಟು ಒಳ್ಳೆಯ ಕಾರ್ಯಗಳಾಗಬಹುದು. ಸದ್ಯ ಅವರಿಗೆ ಆಧ್ಯಾತ್ಮಿಕ ಬಲದ ಆವಶ್ಯಕತೆಯಿದೆ. ಅವರಿಗೆ ದೈವಿ ಬಲವನ್ನು ನೀಡುವುದರಿಂದ ಅವರ ಮೇಲೆ ಬರುವ ಸಂಕಟಗಳು ಸೌಮ್ಯವಾಗುವುದು. ನಾನು ವೈಕುಂಠಕ್ಕೆ ಹೋಗುವ ಮೊದಲು (ದೇಹತ್ಯಾಗದ ಮೊದಲು) ಅವರನ್ನು ಭೇಟಿಯಾಗಿ ಅವರಿಗೆ ರಕ್ಷಾಕವಚವನ್ನು ನೀಡೋಣ.’ ಎಂದು ಹೇಳಿದರು. ಯೋಗತಜ್ಞ ದಾದಾಜಿ ಬೆಳಿಗ್ಗೆ ಧ್ಯಾನದಿಂದ ದೈವಿಶಕ್ತಿಯೊಂದಿಗೆ ಸೂಕ್ಷ್ಮದಿಂದ ಸಂವಾದ ನಡೆಸುತ್ತಿರುತ್ತಾರೆ. ‘ಯೋಗತಜ್ಞ ದಾದಾಜಿಯವರಿಗೆ ದೈವಿ ಶಕ್ತಿಯಿಂದ ಶ್ರೀ. ನರೇಂದ್ರ ಮೋದಿಯವರಿಗೆ ರಕ್ಷಾ ಕವಚವನ್ನು ನೀಡುವ ವಿಷಯದಲ್ಲಿ ಸಂದೇಶ ಬಂದಿರಬೇಕು’, ಎಂದು ನನಗೆ ಅನಿಸಿತು.

೨. ‘ಶ್ರೀ. ನರೇಂದ್ರ ಮೋದಿಯವರ ಜೀವಕ್ಕೆ ಯಾವುದೇ ರೀತಿಯ ಅಪಾಯವಾಗಬಾರದು, ಅಲ್ಲದೇ ಅವರು ಮಾಡುತ್ತಿರುವ ಕಾರ್ಯಕ್ಕೆ ಸಂಪೂರ್ಣ ದೈವಿ ಬಲ ಸಿಗಬೇಕು’, ಎಂಬ ಉದ್ದೇಶದಿಂದ ಅವರಿಗೆ ‘ಅತ್ಯಮೂಲ್ಯ ಸಂಸ್ಕರಿತ ನವಗ್ರಹ ರಕ್ಷಾಕವಚ’ ಸಿದ್ಧಗೊಳಿಸಲು ಯೋಗತಜ್ಞ ದಾದಾಜಿ ಇವರು ತಮ್ಮ ಸ್ವಂತ ದೈವಿ ಶಕ್ತಿಯನ್ನು ಬಹಳಷ್ಟು ಉಪಯೋಗಿಸಿದ್ದರು.

ಯೋಗತಜ್ಞ ದಾದಾಜಿ ವೈಶಂಪಾಯನ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನೀಡಿದ ಆಶೀರ್ವಾದ ಫಲಪ್ರದವಾಗುತ್ತಿರುವುದು

೧೮.೧೨.೨೦೧೮ ರಂದು ಯೋಗತಜ್ಞ ದಾದಾಜಿಯವರು ನರೇಂದ್ರ ಮೋದಿಯವರಿಗೆ ರಕ್ಷಾಕವಚದ ಮಾಧ್ಯಮದಿಂದ ನೀಡಿದ ದೈವಿಬಲ ಈಗ ಸತ್ಯವಾಗುತ್ತಿರುವುದು ಕಂಡು ಬರುತ್ತಿದೆ. ಪ್ರಧಾನಮಂತ್ರಿ ಮೋದಿಯವರು ‘ರಾಷ್ಟ್ರ್ರದ ಹಿತ ಮತ್ತು ರಾಷ್ಟ್ರದ ಪ್ರಗತಿ’ಗಾಗಿ ಒಳ್ಳೆಯ ನಿರ್ಣಯವನ್ನು ತೆಗೆದುಕೊಳ್ಳುತ್ತಿದ್ದಾರೆ. ಮತ್ತು ಜಗತ್ತಿನಲ್ಲಿ ಭಾರತದ ಶ್ರೇಷ್ಠತೆಯು ಸಾಬೀತಾಗುತ್ತಿದೆ.

– ಶ್ರೀ. ಅತುಲ ಪವಾರ

೩. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯೋಗತಜ್ಞ ದಾದಾಜಿ ವೈಶಂಪಾಯನರ ವಯಸ್ಸಿನ ವಿಚಾರ ಮಾಡಿ, ದೆಹಲಿಯಲ್ಲಿ ಭೇಟಿಯಾಗುವುದರ ಬದಲಾಗಿ ಕಲ್ಯಾಣದಲ್ಲಿ ಭೇಟಿಯಾಗಲು ನಿರ್ಧರಿಸುವುದು

ಯೋಗತಜ್ಞ ದಾದಾಜಿಯವರ ಓರ್ವ ಸಾಧಕನು ಶ್ರೀ. ನರೇಂದ್ರ ಮೋದಿಜಿಯವರ ಭೇಟಿ ಮಾಡಿಸಲು ಪ್ರಯತ್ನಿಸಿದನು. ‘ಶ್ರೀ. ನರೇಂದ್ರ ಮೋದಿ ಮತ್ತು ಯೋಗತಜ್ಞ ದಾದಾಜಿಯವರ ಭೇಟಿಯಾಗುವುದು’, ಎಂದು ಪ್ರಧಾನಮಂತ್ರಿಗಳ ಕಾರ್ಯಾಲಯದಿಂದ ಸಂದೇಶ ಬಂದಿತು. ವಾಸ್ತವವಾಗಿ, ಅವರಿಬ್ಬರ ಭೇಟಿ ದೆಹಲಿಯಲ್ಲಿ ಆಗಲಿಕ್ಕಿತ್ತು; ಆದರೆ ‘ಯೋಗತಜ್ಞ ದಾದಾಜಿ ಯವರ ವಯಸ್ಸನ್ನು (೯೯ ವರ್ಷಗಳು) ಗಮನಿಸಿ ಅವರು ಇಷ್ಟು ದೂರದ ಪ್ರವಾಸ ಮಾಡುವುದಕ್ಕಿಂತ, ಶ್ರೀ. ಮೋದಿಯವರು ಮುಂಬಯಿಗೆ ಬಂದಾಗ ಯೋಗತಜ್ಞ ದಾದಾಜಿಯವರನ್ನು ಭೇಟಿಯಾಗುವರು’, ಎಂದು ನಮಗೆ ತಿಳಿಸಲಾಯಿತು.

೪. ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ಯೋಗತಜ್ಞ ದಾದಾಜಿ ವೈಶಂಪಾಯನರ ಭೇಟಿ

೪ ಅ. ಯೋಗತಜ್ಞ ದಾದಾಜಿಯವರು ‘೨೦೧೪ ರಲ್ಲಿ ನರೇಂದ್ರ ಹೆಸರಿನ ವ್ಯಕ್ತಿ ಭಾರತದ ಪ್ರಧಾನಮಂತ್ರಿಯಾಗುವರು’, ಎಂದು ಭವಿಷ್ಯ ಬರೆದಿದ್ದ ಕಾಗದ ಮತ್ತು ದೈನಿಕ ‘ಸನಾತನ ಪ್ರಭಾತ’ದ ಸಂಚಿಕೆಯನ್ನು ನರೇಂದ್ರ ಮೋದಿಯವರಿಗೆ ನೀಡುವುದು : ದಿನಾಂಕ ೧೮.೧೨.೨೦೧೮ ರಂದು ಕಲ್ಯಾಣದಲ್ಲಿ ಒಂದು ಯೋಜನೆಯ ಉದ್ಘಾಟನೆಯ ಸಮಯದಲ್ಲಿ ಒಂದು ಕೋಣೆಯಲ್ಲಿ ಯೋಗತಜ್ಞ ದಾದಾಜಿ ಮತ್ತು ಶ್ರೀ. ನರೇಂದ್ರ ಮೋದಿಯವರ ಭೇಟಿ ನಡೆಯಿತು. ಶ್ರೀ. ನರೇಂದ್ರ ಮೋದಿಯವರು ಯೋಗತಜ್ಞ ದಾದಜಿಯವರಿಗೆ ನಮ್ರತೆಯಿಂದ ನಮಸ್ಕರಿಸಿದರು. ಅವರು ಯೋಗತಜ್ಞ ದಾದಾಜಿಯವರ ಆರೋಗ್ಯವನ್ನು ವಿಚಾರಿಸಿದರು. ಯೋಗತಜ್ಞ ದಾದಾಜಿ ಯವರು ೨೦೦೩ ರಲ್ಲಿ ಭವಿಷ್ಯ ಬರೆದಿದ್ದರು, ‘೨೦೧೪ ರಲ್ಲಿ ಶ್ರೀ. ನರೇಂದ್ರ ಹೆಸರಿನ ವ್ಯಕ್ತಿ ಭಾರತದ ಪ್ರಧಾನಮಂತ್ರಿಯಾಗುವರು’, ಎಂಬ ಭವಿಷ್ಯ ಬರೆದಿದ್ದ ಕಾಗದ ಮತ್ತು ದಿನಪತ್ರಿಕೆ ‘ಸನಾತನ ಪ್ರಭಾತ’ದಲ್ಲಿ ಪ್ರಕಟಿಸಲಾಗಿದ್ದ ಸುದ್ದಿಯನ್ನು ಯೋಗತಜ್ಞ ದಾದಾಜಿ ಇವರು ಶ್ರೀ. ನರೇಂದ್ರ ಮೋದಿಯವರಿಗೆ ನೀಡಿದರು. ಆಗ ಶ್ರೀ. ಮೋದಿಯವರು ಯೋಗತಜ್ಞ ದಾದಾಜಿಯವರಿಗೆ ‘ನಾನು ನಿಮ್ಮ ಬಗ್ಗೆ ಓದಿದ್ದೇನೆ’ ಎಂದು ಹೇಳಿದರು.

೪ ಆ. ಯೋಗತಜ್ಞ ದಾದಾಜಿಯವರು ನರೇಂದ್ರ ಮೋದಿಯವರಿಗೆ ಬಹಳಷ್ಟು ಕಾರ್ಯವನ್ನು ಮಾಡಲು ‘ಸಂಸ್ಕರಿತ ಅತ್ಯಮೂಲ್ಯ ನವಗ್ರಹ ರಕ್ಷಾಕವಚ’ದ ಮಾಧ್ಯಮದಿಂದ ಆಶೀರ್ವಾದ ನೀಡುವುದು : ಯೋಗತಜ್ಞ ದಾದಾಜಿಯವರು ಶ್ರೀ. ನರೇಂದ್ರ ಮೋದಿಯವರಿಗೆ ‘ಸಂಸ್ಕರಿತ ಅತ್ಯಮೂಲ್ಯ ನವಗ್ರಹ ರಕ್ಷಾ-ಕವಚ’ ತಮ್ಮೊಂದಿಗೆ ಇಟ್ಟುಕೊಳ್ಳಲು ನೀಡಿದರು. ಶ್ರೀ. ಮೋದಿಯವರು ಆ ಕವಚವನ್ನು ಭಾವಪೂರ್ಣವಾಗಿ ಸ್ವೀಕರಿಸಿದರು. ಅವರು ಯೋಗತಜ್ಞ ದಾದಾಜಿ ಯವರಿಗೆ, ‘ನನಗೆ ಬಹಳಷ್ಟು ಕಾರ್ಯಗಳನ್ನು ಮಾಡುವುದಿದೆ. ನನಗೆ ಆಶೀರ್ವದಿಸಿ’, ಎಂದು ಹೇಳಿದರು. ಆಗ ಯೋಗತಜ್ಞ ದಾದಾಜಿಯವರು ”ಈ ಕವಚದ ಮಾಧ್ಯಮದಿಂದ ನಿಮಗೆ ಆಶೀರ್ವಾದ ನೀಡಿದ್ದೇನೆ’’ ಎಂದು ಹೇಳಿದರು.

೪ ಇ. ‘ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸಲು ದೇವರೇ ಶಕ್ತಿಯನ್ನು ನೀಡುತ್ತಾನೆ’, ಎಂದು ನರೇಂದ್ರ ಮೋದಿಯವರು ಹೇಳುವುದು : ಅನೌಪಚಾರಿಕವಾಗಿ ಮಾತುಕತೆಯಾದ ಬಳಿಕ ಯೋಗತಜ್ಞ ದಾದಾಜಿಯವರು ಶ್ರೀ. ನರೇಂದ್ರ ಮೋದಿಯವರಿಗೆ ”ನೀವು ಇಷ್ಟು ದೊಡ್ಡ ಜವಾಬ್ದಾರಿಯನ್ನು ಹೇಗೆ ನಿರ್ವಹಿಸುತ್ತೀರಿ ?’’ ಎಂದು ಕೇಳಿದಾಗ, ಶ್ರೀ. ಮೋದಿಯವರು ಮಾತನಾಡಿ, ”ದೇವರೇ ನನಗೆ ಶಕ್ತಿಯನ್ನು ನೀಡುತ್ತಾನೆ. ನಾನು ಬೆಳಿಗ್ಗೆ ಬೇಗನೆ ಎದ್ದು, ನಿಯಮಿತ ಯೋಗಾಸನಗಳು, ಪ್ರಾಣಾಯಾಮ ಮತ್ತು ಸಾಧನೆಯನ್ನು ಮಾಡಿಯೇ ಮುಂದಿನ ಕೆಲಸಗಳನ್ನು ಮಾಡುತ್ತೇನೆ’’ ಎಂದರು.

೪ ಈ. ಯೋಗತಜ್ಞ ದಾದಾಜಿಯವರ ಶ್ರೇಷ್ಠತೆಯನ್ನು ಅರಿತಿದ್ದ ನರೇಂದ್ರ ಮೋದಿ : ನಮ್ಮ ಎಲ್ಲ ಮಾತುಕತೆ ಮುಗಿದ ಬಳಿಕ ಅಲ್ಲಿಂದ ಹೊರಡುವಾಗ, ನಾನು ಶ್ರೀ. ನರೇಂದ್ರ ಮೋದಿಯವರಿಗೆ ಬಗ್ಗಿ ನಮಸ್ಕರಿಸಿದೆನು. ಆಗ ಅವರು ನನಗೆ, ”ನನಗೆ ನಮಸ್ಕಾರ ಮಾಡದೇ ಇವರಿಗೆ (ಯೋಗತಜ್ಞ ದಾದಾಜಿಯವರನ್ನು ನೋಡಿ) ನಮಸ್ಕಾರ ಮಾಡಿರಿ’ ಎಂದು ಹೇಳಿದರು.

೫. ೨೦೧೯ ರಲ್ಲಿ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಬಹುಮತದಿಂದ ಚುನಾಯಿಸಿ ಬರಲಿದ್ದಾರೆ’ ಎಂದು ಹೇಳುವ ದಾರ್ಶನಿಕ ಯೋಗತಜ್ಞ ದಾದಾಜಿ ವೈಶಂಪಾಯನರು ೨೦.೫.೨೦೧೯ ರಂದು ತಮ್ಮ ೧೦೦ ನೇ ವಯಸ್ಸಿನಲ್ಲಿ ಯೋಗತಜ್ಞ ದಾದಾಜಿಯವರು ದೇಹತ್ಯಾಗ ಮಾಡಿದರು. ಅವರು ದೇಹತ್ಯಾಗ ಮಾಡುವ ೧ ವಾರ ಮೊದಲು ನನಗೆ ”ಈಗ ನಡೆದಿರುವ ಲೋಕಸಭೆ ಚುನಾವಣೆಯಲ್ಲಿ ಶ್ರೀ. ನರೇಂದ್ರ ಮೋದಿ ಬಹುಮತದೊಂದಿಗೆ ಚುನಾಯಿತಗೊಳ್ಳುತ್ತಾರೆ” ಎಂದು ಹೇಳಿದ್ದರು. ಯೋಗತಜ್ಞ ದಾದಾಜಿಯವರ ದೇಹತ್ಯಾಗದ ನಂತರ ಅಂದರೆ ೨೩.೫.೨೦೧೯ ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಂದಿತು. ಶ್ರೀ ನರೇಂದ್ರ ಮೋದಿಯವರ ಪಕ್ಷಕ್ಕೆ (ಭಾಜಪಕ್ಕೆ) ಬಹುಮತ ಸಿಕ್ಕಿತು. ಯೋಗತಜ್ಞ ದಾದಾಜಿ ದಾರ್ಶನಿಕ ಸಂತರಾಗಿದ್ದರು. ಅವರ ವಾಣಿ ಸತ್ಯವಾಯಿತು.

೬. ಯೋಗತಜ್ಞ ದಾದಾಜಿಯವರ ದೇಹತ್ಯಾಗದ ಬಳಿಕ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿಯವರು ಸ್ವತಃ ಪತ್ರವನ್ನು ಬರೆದು (೨೨.೫.೨೦೧೯) ಶೋಕವನ್ನು ವ್ಯಕ್ತಪಡಿಸಿದರು ಮತ್ತು ಯೋಗತಜ್ಞ ದಾದಾಜಿಯವರ ದೈವಿ ಕಾರ್ಯವನ್ನು ಕೊಂಡಾಡಿದರು.

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿಯವರಿಗೆ ರಾಷ್ಟ್ರ ಮತ್ತು ಧರ್ಮದ ಕಾರ್ಯಕ್ಕಾಗಿ ಆಧ್ಯಾತ್ಮಿಕ ಬಲ ನೀಡಿದ ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರ ಚರಣಗಳಿಗೆ ಕೋಟಿಶಃ ಕೃತಜ್ಞತೆಗಳು !

– ಶ್ರೀ. ಅತುಲ ಪವಾರ, ಸನಾತನ ಆಶ್ರಮ, ದೇವದ, ಪನವೇಲ. (೨೬.೧.೨೦೨೪)