ನಾನೊಬ್ಬ ‘ಉದ್ಯಮಿಯಿಂದ ಸಾಧಕ ಉದ್ಯಮಿಯಾದೆನು’ !

ಶ್ರೀ. ರವೀಂದ್ರ ಪ್ರಭುದೇಸಾಯಿ

ನಮಸ್ಕಾರ ! ನಾನು ರವೀಂದ್ರ ಪ್ರಭುದೇಸಾಯಿ ! ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಕೃಪೆಯಿಂದಲೇ ನನಗೆ ನನ್ನ ಉದ್ಯಮ ಮತ್ತು ವ್ಯವಹಾರದಲ್ಲಿ ಅನೇಕ ಒಳ್ಳೆಯ ಅನುಭೂತಿಗಳು ಬಂದಿವೆ ಮತ್ತು ಅವರ ಕೃಪಾಶೀರ್ವಾದ ದೊರಕಿದೆ. ಇದಕ್ಕಾಗಿ ನಾನು ಮೊದಲು ಗುರುದೇವರ ಮತ್ತು ಸನಾತನ ಸಂಸ್ಥೆಯ ಚರಣಗಳಲ್ಲಿ ನತಮಸ್ತಕನಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.

ಗುರುದೇವರೇ ನನ್ನ ಮೇಲೆ ತನು-ಮನ-ಧನದ ಅರ್ಪಣೆಯ ಸಂಸ್ಕಾರ ಮಾಡಿದರು. ಇದರಿಂದ ನನಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಯಿತು. ಪಿತಾಂಬರಿಯ ಎಲ್ಲ ಉತ್ಪಾದನೆಗಳು, ‘ಕ್ರಿಯೇಟಿವ್ (ಕಲ್ಪಕ) ಜಾಹೀರಾತು ಕೂಡ ಪರಮೇಶ್ವರನೇ ನಮ್ಮಿಂದ ನಿರ್ಮಾಣ ಮಾಡಿಸಿಕೊಂಡಿದ್ದಾನೆ. ಎಲ್ಲ ಅನುಭವಗಳಿಂದ ರವೀಂದ್ರ ಪ್ರಭುದೇಸಾಯಿ ಹೆಸರಿನ ‘ಉದ್ಯಮಿಯು ‘ಸಾಧಕ-ಉದ್ಯಮಿಯಾಗಿ ಬದಲಾಗಿದ್ದಾನೆ.

ಶ್ರೀ ಪ್ರಭುದೇಸಾಯಿಯವರನ್ನು ಬೀಳ್ಕೊಡುತ್ತಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

೧. ‘ಪಿತಾಂಬರಿಯ ಯಶಸ್ಸಿನ ಹಿಂದೆ ಪರಿಶ್ರಮ ಸಹಿತ ಆತ್ಮಬಲ ನೀಡುವ ಅಧ್ಯಾತ್ಮದ ಮಹತ್ವಪೂರ್ಣ ಪಾಲು

‘ಪಿತಾಂಬರಿ ಉದ್ಯಮ ಸಮೂಹ ಈ ಹೆಸರು ಈಗ ಮಹಾರಾಷ್ಟ್ರದ ಉದ್ಯಮ ಜಗತ್ತಿನಲ್ಲಿನ ಒಂದು ಪ್ರತಿಷ್ಠಿತ ಹೆಸರಾಗಿದೆ. ಕಳೆದ ೩೫ ವರ್ಷಗಳಿಂದ ಅತ್ಯಂತ ಸ್ಥಿರತೆಯಿಂದ ಪ್ರಗತಿ ಮಾಡುತ್ತಿರುವ ‘ಪಿತಾಂಬರಿ ಉದ್ಯಮ ಸಮೂಹವು ಇಂದು ವಾರ್ಷಿಕ ೩೦೦ ಕೋಟಿ ರೂಪಾಯಿಗಳ ವಹಿವಾಟು (ಟರ್ನೊವರ್) ಹಂತವನ್ನು ದಾಟಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ದೇಶದ ಎಲ್ಲ ಭಾಗಗಳಲ್ಲಿ ೩ ಸಾವಿರ ೫೦೦ ಮುಖ್ಯ ವಿತರಕರು, ಸಣ್ಣ ಅಂಗಡಿಯವರಿಂದ ದೊಡ್ಡ ಮಾಲ್‌ಗಳ ವರೆಗೆ ಮೂರೂವರೆಯಿಂದ ೪ ಲಕ್ಷಗಳ ವರೆಗೆ ಮಾರಾಟ ಕೇಂದ್ರಗಳನ್ನು ಹೊಂದಿದ್ದು, ಇಷ್ಟು ದೊಡ್ಡ ಪ್ರಮಾಣದಲ್ಲಿ ಸಂಸ್ಥೆ (ಕಂಪನಿ) ವಿಸ್ತಾರವಾಗಿದೆ. ಈ ಯಶಸ್ಸಿನ ಹಿಂದೆ ಪರಿಶ್ರಮ, ಸಮರ್ಪಣೆಯಂತೂ ಇದ್ದೇ ಇದೆ. ಆದರೆ ಇದೆಲ್ಲವನ್ನೂ ಸಾಧಿಸಲು ಆವಶ್ಯಕವಿರುವ ಆತ್ಮಬಲ ನೀಡುವ ಅಧ್ಯಾತ್ಮದ ಸಹಭಾಗಿತ್ವ ಅಷ್ಟೇ ಮಹತ್ವದ್ದಾಗಿದೆ.

೨. ರಾಷ್ಟ್ರಭಕ್ತಿ ಮತ್ತು ಅಧ್ಯಾತ್ಮ ಇವುಗಳಸಾಂಗತ್ಯದಿಂದ ನಿರಾಶೆಯ ಸ್ಥಿತಿಯಿಂದ ಹೊರಗೆ ಬರುವುದು

ಟೀಕೆ, ನಿರಾಕರಣೆ ಮತ್ತು ಸೋಲು ಇವು ಯಾವುದೇ ಉದ್ಯಮಿಗೆ ಹೊಸತೇನಲ್ಲ. ನಾನು ಕೂಡ ಒಂದು ಸಮಯದಲ್ಲಿ ಇವೆಲ್ಲವನ್ನು ದಾಟಿ ಬಂದಿದ್ದೇನೆ. ‘ಪಿತಾಂಬರಿ ಶೈನಿಂಗ್ ಪೌಡರ್ ಈ ಉತ್ಪಾದನೆಯನ್ನು ಕಂಡು ಹಿಡಿಯುವ ಮೊದಲು ‘ಮೊಝಾಕ್ ಟೈಲ್ಸ ಹೆಸರಿನ ಒಂದು ವ್ಯಾಪಾರವನ್ನು ನಾನು ಪ್ರಾರಂಭಿಸಿದ್ದೆನು; ಆದರೆ ಈ ವ್ಯಾಪಾರದಲ್ಲಿ ಅನುಭವದ ಕೊರತೆಯಿಂದ ನನಗೆ ಬಹಳಷ್ಟು ನಷ್ಟವಾಯಿತು ಮತ್ತು ಸೋಲನ್ನು ಅನುಭವಿಸಬೇಕಾಯಿತು. ದೊಡ್ಡ ಉದ್ಯಮಿಯಾಗುವ ಧ್ಯೇಯವನ್ನು ಇಟ್ಟುಕೊಂಡು ಪ್ರಾಮಾಣಿಕ ಪ್ರಯತ್ನ ಮಾಡುವಾಗ ವ್ಯಾಪಾರದಲ್ಲಿ ಎದುರಾದ ಸೋಲು, ಹತ್ತಿರದ ಜನರ ಟೀಕೆ, ಆರ್ಥಿಕ ನಷ್ಟ ಮತ್ತು ಭವಿಷ್ಯದ ಚಿಂತೆ ಹೀಗೆ ಎಲ್ಲ ವಿಚಾರಗಳಿಂದ ಒಂದು ಹಂತದಲ್ಲಿ ನನ್ನಲ್ಲಿ ಬಹಳ ನಕಾರಾತ್ಮಕತೆ ವ್ಯಾಪಿಸಿತ್ತು. ನಾನು ನನ್ನ ಆತ್ಮವಿಶ್ವಾಸವನ್ನು ಕಳೆದುಕೊಂಡಿದ್ದೆ.

ಸ್ತೋತ್ರ, ಶ್ಲೋಕ ಮುಂತಾದವುಗಳನ್ನು ಪಠಿಸಿದಾಗ ಸ್ವಲ್ಪ ಸಮಯದ ವರೆಗೆ ಮನಸ್ಸಿಗೆ ಶಾಂತಿ ಲಭಿಸುತ್ತಿತ್ತು. ತದನಂತರ ಪರಾತ್ಪರ ಗುರು ಡಾ. ಆಠವಲೆಯವರ ಪ್ರವಚನ ಇದೆಯೆಂದು ತಿಳಿಯಿತು. ಸ್ವಲ್ಪ ಅರೆಮನಸ್ಸಿನಿಂದಲೇ ನಾನು ಆ ಪ್ರವಚನಕ್ಕೆ ಹೋದೆನು. ಆಗ ಅವರು ರಾಷ್ಟ್ರಭಕ್ತಿ ಮತ್ತು ಅಧ್ಯಾತ್ಮ ಇವುಗಳ ಜೊತೆಯೊಂದಿಗೆ ‘ವೈಯಕ್ತಿಕ ಆಧ್ಯಾತ್ಮಿಕ ಉನ್ನತಿಯ ವಿಚಾರವನ್ನು ನೀಡಿದರು. ಈ ವಿಷಯ ಮನಸ್ಸಿಗೆ ನಾಟಿತು. ಈ ಸತ್ಸಂಗದಿಂದ ನನಗೆ ನಿರಾಶೆಯ ಸ್ಥಿತಿಯಿಂದ ಹೊರಬರಲು ಸಹಾಯವಾಯಿತು. ತದನಂತರ ನಾನು ನಿಯಮಿತವಾಗಿ ಸನಾತನ ಸಂಸ್ಥೆಯ ಸತ್ಸಂಗಕ್ಕೆ ಹೋಗಲು ಪ್ರಾರಂಭಿಸಿದೆನು ಮತ್ತು ನನ್ನ ಆಧ್ಯಾತ್ಮಿಕ ಉನ್ನತಿಗಾಗಿ ಸನಾತನ ಸಂಸ್ಥೆಯೊಂದಿಗೆ ಜೋಡಿಸಲ್ಪಟ್ಟೆನು.

– ಶ್ರೀ. ರವೀಂದ್ರ ಪ್ರಭುದೇಸಾಯಿ, ಪಿತಾಂಬರಿ ಪ್ರಾಡಕ್ಟ್ಸ ಪ್ರೈ.ಲಿ., ಉದ್ಯಮ ಸಮೂಹದ ನಿರ್ದೇಶಕರು, ಠಾಣೆ, ಮಹಾರಾಷ್ಟ್ರ (೨೨.೨.೨೦೨೪)


ಸನಾತನ ಸಂಸ್ಥೆಯು ಹೇಳಿರುವ ಸಾಧನೆಯನ್ನು ಮಾಡಿದ್ದರಿಂದ ಸದ್ಗುಣಗಳು ಹೆಚ್ಚಾಗಿದೆ !

ಸನಾತನ ಸಂಸ್ಥೆಯ ಮಾಧ್ಯಮದಿಂದ ಆಧ್ಯಾತ್ಮಿಕ ಸಾಧನೆಯ ಮಾರ್ಗದರ್ಶನ ದೊರಕಿದ್ದರಿಂದ ಮತ್ತು ಈಶ್ವರಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರ ರೂಪದಲ್ಲಿ ಗುರುಗಳು ದೊರಕಿದ್ದರಿಂದ ನಾಮಸ್ಮರಣೆ, ಸತ್ಸಂಗ, ಸತ್ಸೇವೆ ಮತ್ತು ತ್ಯಾಗ ಈ ಆಧ್ಯಾತ್ಮಿಕ ಸಂಸ್ಕಾರಗಳನ್ನು ಆಚರಣೆಯಲ್ಲಿ ತರಲು ಸಹಾಯವಾಯಿತು ಮತ್ತು ಜೀವನ ಸಂಪದ್ಭರಿತವಾಯಿತು. ಅವರ ಬೋಧನೆಯಿಂದ ಇಂದು ನನ್ನ ಕುಟುಂಬ ಅಂದರೆ ಅದು ನನ್ನ ಸ್ವಂತ ಕುಟುಂಬವಾಗಿರಲಿ ಅಥವಾ ಉದ್ಯಮದ, ಸಾಮಾಜಿಕ, ಆಧ್ಯಾತ್ಮಿಕ ಕುಟುಂಬವಾಗಿರಲಿ ಪ್ರತಿಯೊಂದು ಸ್ಥಳದಲ್ಲಿ ಆನಂದ, ಉತ್ಸಾಹ, ಆತ್ಮೀಯತೆ, ಸಾಮಾಜಿಕ ಬದ್ಧತೆ ನೋಡಲು ಸಿಗುತ್ತದೆ.

ಈ ಸಾಧನೆಯಿಂದ ಪ್ರೇಮಭಾವ, ಸಂಘಟನೆ, ಇತರರನ್ನು ಅರಿತುಕೊಳ್ಳುವುದು, ಇತರರ ವಿಚಾರ ಮಾಡುವುದು, ಏಕಾಗ್ರತೆ ಹೆಚ್ಚಾಗುವುದು, ಆಯೋಜನಾ ಕೌಶಲ್ಯ, ಸಾಮಾಜಿಕ ಬದ್ಧತೆಯ ಅರಿವು ಇಟ್ಟುಕೊಳ್ಳುವುದು. ಅತಿ ಕೆಳಸ್ತರದಲ್ಲಿರುವ ವ್ಯಕ್ತಿಗಳಿಗೆ ಸಹಾಯ ಮಾಡುವುದು, ಅಕ್ಕಪಕ್ಕದ ವಾತಾವರಣವನ್ನು ಆನಂದದಲ್ಲಿಡುವುದು, ಉದ್ಯಮದಲ್ಲಿ ಸಿಕ್ಕ ಧನವನ್ನು ರಾಷ್ಟ್ರರಕ್ಷಣೆ ಮತ್ತು ಧರ್ಮ ಜಾಗೃತಿಯ ಕಾರ್ಯಕ್ಕಾಗಿ ಉಪಯೋಗಿಸುವುದು. ಸಮಾಜದಲ್ಲಿ ಸಾಮಾಜಿಕ ಸಾಂಸ್ಕೃತಿಕ ಕಾರ್ಯ ಮಾಡುವ ಸಂಸ್ಥೆಗಳಿಗೆ ಉದಾರವಾಗಿ ಸಹಾಯ ಮಾಡುವುದು ಮುಂತಾದ ಸದ್ಗುಣಗಳು ನನ್ನಲ್ಲಿ ವೃದ್ಧಿಸಿ ನನ್ನ ವೈಯಕ್ತಿಕ ಮತ್ತು ವ್ಯಾವಹಾರಿಕ ಜೀವನದಲ್ಲಿ ನನ್ನಲ್ಲಿ ಸಂಪೂರ್ಣ ಪರಿವರ್ತನೆಯಾಯಿತು. – ಶ್ರೀ. ರವೀಂದ್ರ ಪ್ರಭುದೇಸಾಯಿ.

ಸಾಧನೆಯಿಂದ ಜೀವನದಲ್ಲಿ ಉತ್ಸಾಹ ಹೆಚ್ಚಾಗುವುದು

ಸನಾತನ ಸಂಸ್ಥೆಗೆ ೨೫ ವರ್ಷಗಳು ಪೂರ್ಣವಾಗಿವೆ. ಸಂಸ್ಥೆಯು ಮೊದಲ ಹಂತದಲ್ಲಿ ನಾಮ, ಸತ್ಸಂಗ, ಸತ್ಸೇವೆ, ತ್ಯಾಗ, ಹಾಗೆಯೇ ಮುಂದೆ ಪ್ರಾರ್ಥನೆ, ಪ್ರೀತಿ, ಕೃತಜ್ಞತೆ, ಸ್ವಭಾವದೋಷ ನಿರ್ಮೂಲನೆ ಈ ವಿಷಯದಲ್ಲಿ ಭಾರತದಾದ್ಯಂತ ಅಧ್ಯಾತ್ಮಪ್ರಸಾರದ ಕಾರ್ಯ ಪ್ರಾರಂಭಿಸಿತು. ‘ಸನಾತನ ಪ್ರಭಾತ ಪತ್ರಿಕೆಯಲ್ಲಿರುವ ತೇಜಸ್ವಿ ವಿಚಾರಗಳು ಸಾವಿರಾರು ಹಿಂದೂಗಳ ಮನಸ್ಸಿನಲ್ಲಿ ಅಧ್ಯಾತ್ಮ, ಧರ್ಮ ಮತ್ತು ರಾಷ್ಟ್ರತೇಜದ ಜ್ಯೋತಿಯನ್ನು ಬೆಳಗಿದೆ. ‘ವೈಯಕ್ತಿಕ ಸಾಧನೆಯೊಂದಿಗೆ ಸಮಾಜದ ಅಭಿವೃದ್ಧಿಯ ಸಾಧನೆಯ ಬೋಧನೆಯನ್ನು ನೀಡಲಾಗುತ್ತಿದೆ. ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದ ಸಾಧನೆಯಿಂದ ಇಂದು ೬೧ ನೇ ವಯಸ್ಸಿನಲ್ಲೂ ನನ್ನಲ್ಲಿ ಉತ್ಸಾಹ, ಚೈತನ್ಯ ಮತ್ತು ಕಾರ್ಯಕ್ಷಮತೆ ಇದೆ. ಅದು ಇತರರಲ್ಲಿಯೂ ಇರಬೇಕೆಂದು ಪ್ರಯತ್ನಿಸುತ್ತೇನೆ.