ಹಿಂದೂ ಧರ್ಮದ ಉಳಿವಿಗಾಗಿ ಎಲ್ಲ ವಿಧದ ಮಾಧ್ಯಮಗಳನ್ನು ಯಥೋಚಿತ ಬಳಸುವ ‘ಸನಾತನ ಸಂಸ್ಥೆ !

ಇಂದು ಕಾಲಪ್ರವಾಹದಲ್ಲಿ ಮನೆಮನೆಗಳಲ್ಲಿ ‘ಸಂಸ್ಕಾರಗಳಾವುದು ಬಹುತೇಕ ನಿಂತುಹೋಗಿದೆ. ಹೀಗಿರುವಾಗ ಸಂಸ್ಕಾರಗಳ ಜವಾಬ್ದಾರಿಯನ್ನು ಸ್ವೀಕರಿಸಿ ಹಿಂದೂ ಸಮಾಜದಲ್ಲಿ ಶ್ರೇಷ್ಠವಾಗಿರುವ ನಮ್ಮ ಸಂಸ್ಕೃತಿಯ ಅಭಿಮಾನವನ್ನು ಜಾಗೃತ ಮಾಡುವ ಕಾರ್ಯವನ್ನು ‘ಸನಾತನ ಸಂಸ್ಥೆಯು ತಳಮಳದಿಂದ ಮಾಡುತ್ತಿದೆ. ನಮ್ಮ ಸಂಸ್ಕೃತಿಯು ಹಾಕಿ ಕೊಟ್ಟ ಮಿತಿಯನ್ನು ನಾವೇ ಉಲ್ಲಂಘಿಸಿದರೆ ನಮ್ಮ ಸಂಸ್ಕೃತಿ ನಾಶವಾಗಲು ಬಹಳ ಸಮಯ ಬೇಕಾಗುವುದಿಲ್ಲ. ಇಂತಹ ಪ್ರಮೇಯ ಬರಬಾರದೆಂದು, ‘ಸನಾತನ ಸಂಸ್ಥೆಯು ಪ್ರಯತ್ನಿಸುತ್ತಿದೆ. ಅದಕ್ಕಾಗಿ ಹಿಂದೂ ಧರ್ಮ ಮತ್ತು ಸಂಸ್ಕೃತಿಗನುಸಾರ ಇರುವ ವಿವಿಧ ವಿಷಯಗಳ ಬಗೆಗಿನ ಗ್ರಂಥಗಳನ್ನು ‘ಸನಾತನ ಸಂಸ್ಥೆಯು ಪ್ರಕಾಶಿಸುತ್ತದೆ. ಹಾಗೆಯೇ ‘ಧರ್ಮಾಚರಣೆಯನ್ನು ಹೇಗೆ ಮಾಡಬೇಕು ?, ನಮ್ಮ ಹಬ್ಬ ಉತ್ಸವಗಳನ್ನು ಹೇಗೆ ಆಚರಿಸಬೇಕು ?, ಈ ಬಗ್ಗೆಯೂ ಮಾರ್ಗದರ್ಶನ ನೀಡುವ ಗ್ರಂಥಗಳನ್ನು ಸನಾತನ ಸಂಸ್ಥೆಯು ರಚಿಸಿದೆ. ಆಧುನಿಕ ಕಾಲದ ಎಲ್ಲ ಪ್ರಚಾರ ಮತ್ತು ಪ್ರಸಾರ ಮಾಧ್ಯಮಗಳ ಆಧಾರ ಪಡೆದು ಹಿಂದೂ ಧರ್ಮದ ಉಳಿವಿಗಾಗಿ ‘ಸನಾತನ ಸಂಸ್ಥೆ’ಯು ಅವಿರತ ಪ್ರಯತ್ನಿಸುತ್ತಿದೆ. ಇದು ಶ್ಲಾಘನೀಯವಾಗಿದೆ.