ಸನಾತನ ಧರ್ಮ ಮತ್ತು ಸನಾತನ ಸಂಸ್ಕೃತಿ ಇವು ಜಗತ್ತಿನಲ್ಲಿನ ಅತ್ಯಂತ ಶ್ರೇಷ್ಠ ಸಂಸ್ಕೃತಿಯಾಗಿವೆ. ಸನಾತನದ ಅರ್ಥ ‘ನಿತ್ಯ ನೂತನ ಎಂದಾಗಿದೆ, ಅಂದರೆ ಸನಾತನ ಧರ್ಮ ಮತ್ತು ಸನಾತನ ಸಂಸ್ಕೃತಿ ಎಂದಿಗೂ ಕಾಲಬಾಹ್ಯವಾಗುವುದಿಲ್ಲ. ‘ಈ ಧರ್ಮದ ಮೂಲ ತತ್ತ್ವಗಳು ನಿಸರ್ಗದ ನಿಯಮಕ್ಕೆ ಅನುಸರಿಸಿವೆ, ಇಂತಹ ಸನಾತನ ಧರ್ಮವನ್ನು ನಶಿಸಲು ಅನೇಕ ಶತಕಗಳಿಂದ ವಿದೇಶಿ ಆಕ್ರಮಣಕಾರರು ಪ್ರಯತ್ನಿಸಿದರು. ಜಗತ್ತಿನ ಅನೇಕ ಪ್ರಾಚೀನ ಸಂಸ್ಕೃತಿ ಮತ್ತು ಧರ್ಮಗಳು ನಾಶವಾದವು; ಆದರೆ ಹಿಂದೂ ಧರ್ಮವು ತನ್ನ ವೈಶಿಷ್ಟ್ಯಗಳಿಂದಾಗಿ ಇಂದಿಗೂ ಉಳಿದುಕೊಂಡಿದೆ. ಕಾಲದ ಪ್ರವಾಹದಲ್ಲಿ ಆಗುವ ಅನೇಕ ಬದಲಾವಣೆಗಳನ್ನು ಸನಾತನ ಧರ್ಮ ಮತ್ತು ಸಂಸ್ಕೃತಿಯು ಸ್ವೀಕರಿಸಿದೆ; ಆದುದರಿಂದ ಸನಾತನ ಸಂಸ್ಕೃತಿಯ ಮೂಲ ತಿರುಳು ನಾಶವಾಗಿಲ್ಲ.
ಇಂಗ್ಲೆಂಡಿನ ಪ್ರಧಾನಿ ದಿವಂಗತ ಚರ್ಚಿಲ್ ಇವರು, ”Culture and literature are all well but a culture without strength ceases to be a living culture”. (ಅರ್ಥ : ಸಂಸ್ಕೃತಿ ಮತ್ತು ಸಾಹಿತ್ಯ ಉತ್ತಮವಾಗಿವೆ: ಆದರೆ ಸಂಸ್ಕೃತಿಗೆ ಬಲವಿಲ್ಲದಿದ್ದರೆ, ಅಸ್ತಿತ್ವದಲ್ಲಿರುವ ಸಂಸ್ಕೃತಿಯ ಅಂತ್ಯವು ಸಮೀಪ ಬಂದಿದೆ) ಎಂದು ಹೇಳಿದ್ದರು. ಹೀಗಿದ್ದರೂ ಸನಾತನ ಧರ್ಮ ಮತ್ತು ಸಂಸ್ಕೃತಿಯ ನಿಜಸ್ವರೂಪವನ್ನು ಉಳಿಸಿಡುವುದು, ಈ ಧರ್ಮದ ಅನುಯಾಯಿಗಳ ಕರ್ತವ್ಯವಾಗಿದೆ. ಈ ಕರ್ತವ್ಯವನ್ನು ನಿರ್ವಹಿಸುತ್ತಿರುವ ಇಂದಿನ ಅಗ್ರಗಣ್ಯ ಸಂಸ್ಥೆ ಎಂದರೆ ‘ಸನಾತನ ಸಂಸ್ಥೆ. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಮಾರ್ಗದರ್ಶನ ಮತ್ತು ಪ್ರೇರಣೆಯಿಂದ ಈ ಸಂಸ್ಥೆಯ ಕಾರ್ಯವು ನಿರಂತರವಾಗಿ ಮುಂದುವರೆದಿದೆ.
೧. ಧರ್ಮ ಮತ್ತು ಸಂಸ್ಕೃತಿಯ ಸೇವೆಗೆ ಕಾರ್ಯನಿರತ ‘ಸಂಸ್ಥೆ !
ವೈದಿಕ ಕಾಲದಲ್ಲಿ ಋಷಿಮುನಿ ಗಳು ಭೌತಿಕ ಮತ್ತು ಆಧ್ಯಾತ್ಮಿಕ ಈ ಎರಡೂ ಜೀವನಗಳ ಉತ್ತಮ ಸಮನ್ವಯದಿಂದ ಸ್ವಯಂಶಿಸ್ತಿರುವ ಮಾನವಿ ಸಮಾಜವನ್ನು ತಯಾರಿಸಿ ದರು. ಇಂತಹ ಮಾನವಿ ಸಮಾಜ ತಯಾರಿಗೆ ಸ್ಥಳಕಾಲದ ಬಂಧನವಿಲ್ಲ, ಇದುವೇ ಸನಾತನ ಧರ್ಮದ ಮೂಲಭೂತ ಸಿದ್ಧಾಂತವಾಗಿದೆ. ಈ ಸಿದ್ಧಾಂತಕ್ಕನುಸಾರ ಕಾರ್ಯ ಮಾಡಿ ನಾವು ನಮ್ಮ ಧರ್ಮದ ಮತ್ತು ಸಂಸ್ಕೃತಿಯ ಸೇವೆಯನ್ನು ಮಾಡಬಹುದು, ಈ ವಿಚಾರದಿಂದ ಪ್ರೇರಿತರಾಗಿ ‘ಸನಾತನ ಸಂಸ್ಥೆಯು ಕಾರ್ಯನಿರತವಾಗಿದೆ. ಮನುಷ್ಯನ ಸಾಮಾಜಿಕ ಜೀವನವು ಸರ್ವಾರ್ಥದಿಂದ ಪರಿಪೂರ್ಣವಾಗಲು ಮಾರ್ಗದರ್ಶನ ಮಾಡುವ ಸಂತರು, ಮಹಾತ್ಮರು ಈ ಭೂಮಿಯಲ್ಲಿ ಅವತರಿಸಿದರು. ದೇಶದಲ್ಲಿ, ವಿದೇಶಿ ರಾಜಕೀಯ ಶಕ್ತಿಗಳು ನೆಲೆಯೂರಿದಾಗ ಸಂತರು ಈ ಕಾರ್ಯವನ್ನು ಮಾಡಿದರು. ಇಂದು ಪಾಶ್ಚಿಮಾತ್ಯ ವಿಚಾರಗಳ ಪ್ರಭಾವಕ್ಕೆ ಒಳಗಾದ ಹಿಂದೂ ಸಮಾಜವನ್ನು ಅದರ ಮೂಲ ಸನಾತನ ಧರ್ಮದ ಕಡೆಗೆ ಹೊರಳಿಸುವ ಉದ್ದೇಶದೊಂದಿಗೆ ‘ಸನಾತನ ಸಂಸ್ಥೆಯು ಆಧ್ಯಾತ್ಮಿಕ ಮಾರ್ಗದರ್ಶನ ಮಾಡುತ್ತಿದೆ.
೨. ಭೌತಿಕ ಮತ್ತು ಆಧ್ಯಾತ್ಮಿಕ ಜೀವನ ಇವೆರಡರ ಸೂಕ್ತ ಸಮನ್ವಯ ಸಾಧಿಸಲು ಕಲಿಸುವ ‘ಸನಾತನ ಸಂಸ್ಥೆ’
ಮನುಷ್ಯನ ಜೀವನದ ಲೌಕಿಕ ಜೀವನ ಮತ್ತು ಪಾರಲೌಕಿಕ ಜೀವನ, ಹೀಗೆ ಎರಡು ಅಂಗಗಳಿವೆ. ಈ ಎರಡೂ ಅಂಗಗಳ ಸರಿಯಾದ ಸಮನ್ವಯವನ್ನು ಸಾಧಿಸಿ ಮನುಷ್ಯನು ತನ್ನ ಜೀವನ ವನ್ನು ಸುಖಮಯಗೊಳಿಸಬೇಕು. ಈ ಶಿಕ್ಷಣವನ್ನು ಸನಾತನ ಧರ್ಮವು ನೀಡುತ್ತದೆ. ಸ್ವಲ್ಪದರಲ್ಲಿ ಭೌತಿಕ ಮತ್ತು ಆಧ್ಯಾತ್ಮಿಕ ಜೀವನ ಇವೆರಡರ ಸರಿಯಾದ ಸಮನ್ವಯ ಸಾಧಿಸಿ ಮನುಷ್ಯನು ತನ್ನ ಐಹಿಕ ಮತ್ತು ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಕೊಳ್ಳಬಹುದು, ಎಂಬ ನಂಬಿಕೆಯನ್ನು ಇಂದಿನ ಆಧುನಿಕ ಕಾಲದ ಹಿಂದೂಗಳ ಮನಸ್ಸಿನಲ್ಲಿ ಬಿಂಬಿಸಲು ‘ಸನಾತನ ಸಂಸ್ಥೆಯು ಕಳೆದ ೨೫ ವರ್ಷಗಳಿಂದ ಪ್ರಯತ್ನಿಸುತ್ತಿದೆ.
೩. ‘ಸನಾತನ ಸಂಸ್ಥೆಯನ್ನು ‘ಸನಾತನ ಧರ್ಮದ ಸುಯೋಗ್ಯ ಜೋಪಾಸನೆಗಾಗಿ ಸ್ಥಾಪಿಸಲಾಗಿದೆ, ಎಂಬುದು ಅದರ ಕಾರ್ಯದಿಂದ ನಾವು ಊಹಿಸಬಹುದು.
‘ಹಿಂದೂ ಯಾರು ?, ಈ ಪ್ರಶ್ನೆಗೆ ಉತ್ತರ ‘ಹೀನಂ ದುಷಯತಿ ಇತಿ ಹಿಂದುಃ |, ಅಂದರೆ ‘ಯಾವನು ತನ್ನಲ್ಲಿನ ದೋಷಗಳನ್ನು ಮತ್ತು ಅಹಂಅನ್ನು ದೂರ ಮಾಡಲು ನಿರಂತರ ಪ್ರಯತ್ನಿಸುತ್ತಾನೆಯೋ, ಅವನೇ ಹಿಂದು !, ಹೀಗೆ ‘ಹಿಂದು ಶಬ್ದದ ವ್ಯಾಖ್ಯೆಯನ್ನು ‘ಶಬ್ದಕಲ್ಪದ್ರುಮ ಕೋಶವು ನೀಡಿದೆ.
೪. ಹಿಂದೂ ಸಮಾಜಕ್ಕೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ನೀಡಲು ಪ್ರಯತ್ನಿಸುತ್ತಿರುವ ‘ಸನಾತನ ಸಂಸ್ಥೆ !
ಈ ಆಧುನಿಕ ಜಗತ್ತಿನಲ್ಲಿ ಜೀವಿಸುತ್ತಿರುವಾಗ ಅನೇಕ ಆಮಿಷಗಳು ನಮ್ಮೆದುರಿಗಿರುತ್ತವೆ. ನಮ್ಮ ಜೀವನ ಸ್ವಚ್ಛ, ಪ್ರಾಮಾಣಿಕ ಮತ್ತು ಶುದ್ಧವಾಗಿರಬೇಕು, ಹೀಗಿದ್ದರೆ ಮಾತ್ರ ನಮ್ಮ ನಿಜವಾದ ವಿಕಾಸವಾಗುತ್ತದೆ. ಇಲ್ಲವಾದರೆ ನಾವು ದುಃಖವನ್ನು ಎದುರಿಸಬೇಕಾಗುತ್ತದೆ, ಹಾಗೆಯೇ ಬದಲಾಗುತ್ತಿರುವ ಇಂದಿನ ಕಾಲಕ್ಕನುಸಾರ ಮನುಷ್ಯನು ಆಧುನಿಕ ಜಗತ್ತಿನ ಹೊಸ ಜೀವನ ಪದ್ಧತಿಗೆ ಬಲಿಯಾಗಿ ವ್ಯಸನಾಧೀನನಾಗುತ್ತಾನೆ. ಧನ ಸಂಪಾದನೆಯ ಹುಚ್ಚಿನಲ್ಲಿ ಅಯೋಗ್ಯ ಮಾರ್ಗವನ್ನು ಆಯ್ದುಕೊಳ್ಳುತ್ತಾನೆ. ಇದರಿಂದ ಮನುಷ್ಯನು ಸುಖಿಯಾಗುವ ಬದಲು ದುಃಖಿಯಾಗುತ್ತಾನೆ. ಹೀಗಾಗಬಾರದೆಂದು, ಸಾಂಸ್ಕೃತಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಶಿಕ್ಷಣವನ್ನು ಹಿಂದೂ ಸಮಾಜಕ್ಕೆ ನೀಡಲು ‘ಸನಾತನ ಸಂಸ್ಥೆಯು ಕಳೆದ ೨೫ ವರ್ಷಗಳಿಂದ ನಿರಂತವಾಗಿ ಪ್ರಯತ್ನಿಸುತ್ತಾ ಬಂದಿದೆ.
೪. ಹಿಂದೂ ಸಮಾಜಕ್ಕೆ ಮಾರ್ಗದರ್ಶನಾತ್ಮಕ ಕೆಲಸವನ್ನು ‘ಸನಾತನ ಸಂಸ್ಥೆ ಮಾಡುತ್ತಿದೆ !
ಹಿಂದೂ ಧರ್ಮದೊಂದಿಗೆ ಹಿಂದೂ ಸಂಸ್ಕೃತಿಯು ಕಾಲಾನುಸಾರ ಹೆಚ್ಚುತ್ತಿದೆ, ಬದಲಾಗುತ್ತಿದೆ ವಿಕಾಸ ಹೊಂದುತ್ತಿದೆ; ಆದರೆ ಅದರ ಮೂಲಭೂತ ತತ್ತ್ವದಲ್ಲಿ ಮತ್ತು ಚೈತನ್ಯದಲ್ಲಿ ಪರಿವರ್ತನೆಯಾಗುವುದಿಲ್ಲ. ವೈದಿಕ ಯುಗದ ಸಂಸ್ಕೃತಿ, ಉಪನಿಷದ್ ಯುಗದ ಸಂಸ್ಕೃತಿ, ಮಹಾಭಾರತ, ಸ್ಮೃತಿ, ಪುರಾಣಗಳು, ಭಾಷ್ಯಕಾರರು, ಮಧ್ಯಯುಗದ ಸಂತರು ಮತ್ತು ಆಧುನಿಕ ಕಾಲದ ಸುಧಾರಕರಲ್ಲಿ ಒಂದೇ ಚೈತನ್ಯವಿದೆ, ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ಭಾವೈಕ್ಯದ ಕಲ್ಪನೆ, ದೇಶಭಕ್ತಿ ಮತ್ತು ಪರಂಪರೆಯ ಅಭಿಮಾನವನ್ನು ಪ್ರತಿಯೊಬ್ಬರು ಅಂಗೀಕರಿಸಬೇಕು, ಆಗಲೇ ನಮ್ಮ ಅಸ್ತಿತ್ವವು ಉಳಿಯುತ್ತದೆ. ನಮ್ಮ ಶ್ರೇಷ್ಠ ಪೂರ್ವಜರ ದೈದೀಪ್ಯಮಾನ ವಾದ ಸ್ಮೃತಿಗಳನ್ನು ನಾವು ಮರೆಯಬಾರದು ಮತ್ತು ಹಿಂದೂ ಸಮಾಜವು ದಾರಿ ತಪ್ಪಬಾರದೆಂದು ಹಿಂದೂ ಸಮಾಜಕ್ಕೆ ಮಾರ್ಗದರ್ಶನವನ್ನು ‘ಸನಾತನ ಸಂಸ್ಥೆಯು ಮಾಡುತ್ತಿದೆ.
೫. ಒತ್ತಡಮುಕ್ತ ಜೀವನದ ಮಾರ್ಗದರ್ಶಕ ಸಂಸ್ಥೆ !
ಅಧ್ಯಾತ್ಮ, ನೈತಿಕತೆ, ಶುದ್ಧ ಆಚರಣೆ ಮತ್ತು ಉಪಾಸನೆ ಈ ೪ ವಿಷಯಗಳು ಮನುಷ್ಯ ಜೀವನಕ್ಕೆ ಆಕಾರವನ್ನು ನೀಡುತ್ತವೆ. ಮನುಷ್ಯನು ಒತ್ತಡಗಳಿಂದ ಮುಕ್ತನಾಗಲು ಇವುಗಳ ಆವಶ್ಯಕತೆ ಬಹಳಷ್ಟಿದೆ. ಇದಕ್ಕಾಗಿ ಕಾಲಕ್ಕನುಗುಣವಾದ ಆಧುನಿಕ ಪದ್ಧತಿಯನ್ನು ‘ಸನಾತನ ಸಂಸ್ಥೆಯು ಪ್ರಚಲಿತ ಮಾಡಿದೆ ಮತ್ತು ಅದಕ್ಕಾಗಿ ಮಾರ್ಗ ದರ್ಶನವನ್ನು ಮಾಡುತ್ತದೆ.
೬. ಹಿಂದೂ ಸಂಸ್ಕೃತಿಯ ‘ಕಲೆ ಬಗ್ಗೆ ಜಗತ್ತಿನ ಗಮನವನ್ನು ಸೆಳೆಯುವ ‘ಸನಾತನ ಸಂಸ್ಥೆ !
ಸಂಗೀತ, ನೃತ್ಯ, ಚಿತ್ರಕಲೆ ಇವು ಮತ್ತು ಇಂತಹ ವಿವಿಧ ಕಲೆಗಳ ಗುಣಗಳ ವಿಕಾಸವನ್ನು ಶಾಸ್ತ್ರಬದ್ಧ ಪದ್ಧತಿಯಿಂದ ಮಾಡುವ ಬಗ್ಗೆ ಸನಾತನ ಸಂಸ್ಥೆಯು ಜಗತ್ತಿನ ಗಮನವನ್ನು ಸೆಳೆದಿದೆ.ಇದೇ ಸಂಸ್ಥೆಯ ಕಾರ್ಯದ ಪ್ರಮುಖ ವೈಶಿಷ್ಟ್ಯವಾಗಿದೆ
೭. ಸುಸಂಸ್ಕೃತ ಉಡುಪುಗಳ ಬಗ್ಗೆ ಆಗ್ರಹದ ನಿಲುವನ್ನು ತಳೆಯುವ ‘ಸನಾತನ ಸಂಸ್ಥೆ !
‘ವಿದ್ಯಾವಂತ, ಸುಸಂಸ್ಕೃತ ಸಮಾಜವು ಸೂಕ್ತ ಉಡುಪು ಧರಿಸಬೇಕು, ಎಂಬ ಆಗ್ರಹದ ನಿಲುವು ಸಂಸ್ಥೆಯದ್ದಾಗಿದೆ. ನಾವು ಆಧುನಿಕ ಜಗತ್ತಿನಲ್ಲಿದ್ದರೂ, ಸಭ್ಯತೆ ಮತ್ತು ಸುಸಂಸ್ಕೃತತನವನ್ನು ದುರ್ಲಕ್ಷಿಸಬಾರದು, ಎಂದು ಒತ್ತಾಯಿಸಿದರೆ ಅದು ಅಯೋಗ್ಯ ಅನಿಸುವುದಿಲ್ಲ.
– ಶ್ರೀ. ದುರ್ಗೇಶ ಜಯವಂತ ಪರುಳಕರ, ಹಿಂದುತ್ವನಿಷ್ಠ ವ್ಯಾಖ್ಯಾನಕಾರರು ಮತ್ತು ಲೇಖಕರು, ಡೊಂಬಿವಲಿ