ಸನಾತನ ಸಂಸ್ಥೆಯ ಕಾರ್ಯಕ್ಕಾಗಿ ಜ್ಞಾನಶಕ್ತಿ ಮತ್ತು ಚೈತನ್ಯಶಕ್ತಿ ಪೂರೈಸುವ ಸನಾತನದ ಗ್ರಂಥ ಸಂಪತ್ತು !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ (ಗುರುದೇವರು) ಇವರು ‘ಪೃಥ್ವಿಯಲ್ಲಿ ಧರ್ಮಸಂಸ್ಥಾಪನೆಯಾಗಿ ಅಖಿಲ ಮನುಕುಲ ಆನಂದದಿಂದಿರಬೇಕು ಮತ್ತು ಎಲ್ಲಾ ದೃಷ್ಟಿಯಿಂದ ಆದರ್ಶವಾದಂತಹ ಸಾತ್ತ್ವಿಕ ರಾಜ್ಯ (ಈಶ್ವರಿ ರಾಜ್ಯ, ರಾಮರಾಜ್ಯ, ಹಿಂದೂ ರಾಷ್ಟ್ರ) ಸ್ಥಾಪನೆಯಾಗಬೇಕು, ಎಂಬುದಕ್ಕಾಗಿ ಕಳೆದ ೩೫ ವರ್ಷಗಳಿಂದ ಅಖಂಡವಾಗಿ ಕಾರ್ಯನಿರತವಾಗಿದ್ದಾರೆ. ಅವರ ಈ ಕಾರ್ಯದ ವಾಹಕವಾಗಿರುವ ಸನಾತನ ಸಂಸ್ಥೆಗೆ ಆವಶ್ಯಕವಾದಂತಹ ಜ್ಞಾನಶಕ್ತಿ ಮತ್ತು ಚೈತನ್ಯಶಕ್ತಿಯು ಸನಾತನದ ಗ್ರಂಥ ಸಂಪತ್ತಿನಿಂದ ದೊರೆಯುತ್ತದೆ. ಗುರುದೇವರು ಒಮ್ಮೆ ನನಗೆ ಹೇಳಿದ್ದರು, “ಸನಾತನದ ಗ್ರಂಥಗಳೇ ನಿಜವಾದ ಧರ್ಮಪ್ರಸಾರಕರಾಗಿವೆ ! ಅದು ಅನುಭವಕ್ಕೂ ಬರುತ್ತಿದೆ. ೧೯೯೯ ರಲ್ಲಿ ಸ್ಥಾಪನೆಯಾಗಿರುವ ಸನಾತನ ಸಂಸ್ಥೆಯ ಈ  ರಜತ ಮಹೋತ್ಸವದ ವರ್ಷವಾಗಿದೆ. ಈ ಪ್ರಯುಕ್ತ ‘ಸನಾತನದ ಗ್ರಂಥಗಳಿಂದ ಸನಾತನ ಸಂಸ್ಥೆಯ ರಾಷ್ಟ್ರ ಮತ್ತು ಧರ್ಮದ ಸಂದರ್ಭದಲ್ಲಿನ ಕಾರ್ಯ ಹೇಗೆ ವೇಗವಾಗಿ ಬೆಳೆಯುತ್ತಿದೆ ?, ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ಬೆಳಕು ಚೆಲ್ಲುವ ಲೇಖನ ಇದಾಗಿದೆ.

ಸಂಕಲನಕಾರರು : (ಪೂ.) ಸಂದೀಪ ಆಳಶಿ, ಸನಾತನದ ಗ್ರಂಥಗಳ ಸಂಕಲನಕಾರರು

(ಪೂ.) ಶ್ರೀ. ಸಂದೀಪ ಆಳಶಿ

೧. ‘ಗ್ರಂಥಗಳಿಂದ ಧರ್ಮಪ್ರಸಾರ ಹೇಗೆ ಆಗುತ್ತದೆ ? ಇದರ ಬಗ್ಗೆ ಧರ್ಮಪ್ರಚಾರಕ ಸಾಧಕರ ಅನುಭವ 

‘ನನಗೆ ೨೦೧೫ ರಲ್ಲಿ ಉಜ್ಜೈನ್, ಮಧ್ಯಪ್ರದೇಶದಲ್ಲಿ ನಡೆಯುವ ಕುಂಭಮೇಳದಲ್ಲಿ ಅಧ್ಯಾತ್ಮ ಪ್ರಸಾರದ ಪೂರ್ವಸಿದ್ಧತೆ ಮಾಡುವಾಗ ವಿವಿಧ ವ್ಯಕ್ತಿಗಳನ್ನು ಸಂಪರ್ಕಿಸುವ ಅವಕಾಶ ದೊರೆ ಯಿತು. ಸಂಪರ್ಕ ಮಾಡುವಾಗ ನಾವು ಆ ವ್ಯಕ್ತಿಗಳಿಗೆ ಸನಾತನದ ‘ಧರ್ಮಶಿಕ್ಷಣ ಫಲಕ ಈ ಗ್ರಂಥ ನೋಡಲು ನೀಡುತ್ತಿದ್ದೆವು. ಅದನ್ನು ನೋಡಿ ಅನೇಕ ವ್ಯಕ್ತಿಗಳು ನಮಗೆ ಅವರ ಸಂಕುಲದಲ್ಲಿನ ಗೋಡೆಯ ಮೇಲೆ ಧರ್ಮಪ್ರಸಾರ ಮಾಡುವ ಬರವಣಿಗೆ ಬರೆಯಲು ಸುಹಜವಾಗಿ ಅನುಮತಿ ನೀಡಿದರು. ದೊಡ್ಡ ಫಲಕ ಹಾಕುವುದಕ್ಕಾಗಿ ನಮಗೆ ಅನೇಕರು ಸ್ಥಳವನ್ನೂ ನೀಡಿದ್ದರು.

ಶ್ರೀ. ನಿರಂಜನ ಚೋಡಣಕರ, ಉಜ್ಜೈನ್. (೧೮.೨.೨೦೧೬)

೨. ಗ್ರಂಥದಿಂದ ವಿವಿಧ ಸ್ತರಗಳ ವ್ಯಕ್ತಿಗಳು ಸನಾತನದೊಂದಿಗೆ ಜೋಡಣೆಯಾಗುವುದು

ಧರ್ಮ, ಅಧ್ಯಾತ್ಮ, ವಿವಿಧ ಸಾಧನಾಮಾರ್ಗ, ದೇವತೆ, ಸ್ವಭಾವದೋಷ ಮತ್ತು ಅಹಂಗಳ ನಿರ್ಮೂಲನೆ, ಕಲೆ, ಬಾಲಸಂಸ್ಕಾರ, ಮಕ್ಕಳ ವಿಕಾಸ, ಆಯುರ್ವೇದ ಇವುಗಳಂತಹ ವಿಷಯಗಳಲ್ಲಿ ಸನಾತನದ ಗ್ರಂಥಗಳಿವೆ. ನೆರೂಳ ಮುಂಬೈಯ ಸೌ. ಪ್ರತಿಭಾ ಪಾಟೀಲರು ಹೀಗೆಂದರು, ‘ಹಬ್ಬ ಉತ್ಸವ ಮತ್ತು ವ್ರತಗಳು ಎಂಬ ಸನಾತನ ರಚಿತ ಗ್ರಂಥದಲ್ಲಿ ಎಲ್ಲ ಶಾಸ್ತ್ರಗಳು ಬಹಳ ಒಳ್ಳೆಯದಿವೆ ! ನಮಗೆ ಅಲ್ಪಸ್ವಲ್ಪ ಮಾಹಿತಿಯಿರುತ್ತದೆ. ಆದರೆ ಈ ಗ್ರಂಥದ ವಾಚನದ ನಂತರ ಸಂಪೂರ್ಣ ಮಾಹಿತಿ ಸಿಗುತ್ತದೆ. ಇಂತಹ ರೀತಿಯಲ್ಲಿ ಅನೇಕ ಜಿಜ್ಞಾಸುಗಳು ವಿವಿಧ ವಿಷಯಗಳ ಗ್ರಂಥಗಳ ಬಗ್ಗೆ ಅವರಿಗೆ ಮನ ದಟ್ಟಾದ ಜ್ಞಾನದಿಂದ ಸನಾತನ ದೆಡೆಗೆ ಆಕರ್ಷಿತರಾಗುತ್ತಾರೆ ಮತ್ತು ಮುಂದೆ ಸಾಧನೆಯನ್ನೂ ಮಾಡತೊಡಗುತ್ತಾರೆ.

೩. ರಾಷ್ಟ್ರನಿಷ್ಠ ಮತ್ತು ಧರ್ಮನಿಷ್ಠ ಸಾಧಕರನ್ನು ತಯಾರಿಸುವ ಸನಾತನದ ಗ್ರಂಥಗಳು

ಗುರುದೇವರು ರಾಷ್ಟ್ರ ಮತ್ತು ಧರ್ಮದ ಬಗ್ಗೆ ‘ಹಿಂದೂ ರಾಷ್ಟ್ರ ಏಕೆ ಬೇಕು ?, ‘ಹಿಂದೂ ರಾಷ್ಟ್ರ : ಆಕ್ಷೇಪ ಮತ್ತು ಖಂಡನೆ ಮುಂತಾದ ಗ್ರಂಥಗಳನ್ನು ಬರೆದಿದ್ದಾರೆ. ಈ ಗ್ರಂಥಗಳಿಂದ ಅನೇಕ ರಾಷ್ಟ್ರನಿಷ್ಠ ಮತ್ತು ಧರ್ಮಪ್ರೇಮಿಗಳಿಗೆ ಆದರ್ಶ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಪ್ರಯತ್ನಿಸುವುದು ಕಾಲಾನುಸಾರ ಅವಶ್ಯಕವಾದ ಸಮಷ್ಟಿ ಸಾಧನೆಯೇ ಆಗಿದೆ ಎಂದು ಕಲಿಯಲು ಸಿಗುತ್ತದೆ. ಅದರ ಜೊತೆಗೆ ಆ ವಿಷಯದಲ್ಲಿ ಕಾನೂನುರೀತ್ಯಾ ಮಾಡಬೇಕಾದ ಕೃತಿಗಳ ಬಗ್ಗೆ ಮಾರ್ಗದರ್ಶನವೂ ಸಿಗುತ್ತದೆ. ಹಾಗಾಗಿ ಸನಾತನದ ಗ್ರಂಥಗಳು ಎಂದರೆ ರಾಷ್ಟ್ರನಿಷ್ಠ ಮತ್ತು ಧರ್ಮಪ್ರೇಮಿ ಸಾಧಕರನ್ನು ತಯಾರಿಸುವ ಕಾರ್ಯಶಾಲೆಯೆ ಆಗಿವೆ ! – ಪೂ. ಸಂದೀಪ ಆಳಶಿ

‘ಸನಾತನದ ಗ್ರಂಥಗಳಿಂದ ಧರ್ಮಪ್ರಸಾರ ಹೇಗೆ ಆಗುತ್ತಿದೆ ? ಇದರ ಬಗ್ಗೆ ಸನಾತನದ ಧರ್ಮಪ್ರಚಾರಕ ಸದ್ಗುರು ಸ್ವಾತಿ ಖಾಡ್ಯೆ ಇವರ ಅನುಭವ

ಸದ್ಗುರು (ಸುಶ್ರೀ (ಕು.)) ಸ್ವಾತಿ ಖಾಡ್ಯೆ

‘ನಾವು ಇತ್ತೀಚಿಗೆ ಕೇಂದ್ರ ಪರಿಸರ ರಾಜ್ಯ ಸಚಿವ ಶ್ರೀ. ಶ್ರೀಪಾದ ನಾಯಿಕ, ಗೋವಾ ಇವರಿಗೆ ಚಿಕ್ಕ ಮಕ್ಕಳು ಮತ್ತು ವಿದ್ಯಾರ್ಥಿ ಇವರಿಗಾಗಿ ಅವಶ್ಯಕ ಇರುವ ಸನಾತನದ ಗ್ರಂಥಗಳನ್ನು ತೋರಿಸಿದ್ದೆವು. ಅದನ್ನು ನೋಡಿದ ನಂತರ ಶ್ರೀ. ಶ್ರೀಪಾದ ನಾಯಿಕ ಇವರಿಗೆ ಬಹಳ ಆನಂದವಾಯಿತು ಮತ್ತು ಅವರು ತಮಗಾಗಿ ಈ ಗ್ರಂಥಗಳ ಎರಡು ಸೆಟ್ ಖರೀದಿಸಿದರು. ಆ ಸಮಯದಲ್ಲಿ ಅವರು, “ಸಮಾಜಕ್ಕೆ ಆವಶ್ಯಕವಾಗಿರುವ ಎಲ್ಲಾ ವಿಷಯಗಳು ಕುರಿತು ಸನಾತನ ಸಂಸ್ಥೆಯಿಂದ ಗ್ರಂಥಗಳು ಪ್ರಕಾಶಿತಗೊಂಡಿವೆ. ಸಮಾಜಕ್ಕೆ ಈ ಗ್ರಂಥಗಳ ಬಹಳ ಅವಶ್ಯಕತೆ ಇದೆ. ನಾನು ನನ್ನ ಪರಿಯಿಂದ ಈ ಗ್ರಂಥಗಳನ್ನು ಸಮಾಜದ ವರೆಗೆ ತಲುಪಿಸುವ ಪ್ರಯತ್ನ ಮಾಡುತ್ತೇನೆ, ಎಂದರು. ಅವರ ೨೦೦ ಶಾಲೆಗಳಲ್ಲಿ ಗ್ರಂಥದ ಸೆಟ್‌ಗಳನ್ನು ನೀಡುವ ಆಸೆ ಇದ್ದು ಅವರು ನಮಗೆ ಪ್ರತಿ ತಿಂಗಳಲ್ಲಿ ೨೫ ಶಾಲೆಗಳಿಗೆ ಸೆಟ್ ನೀಡಲು ಸಲಹೆ ನೀಡಿದರು.

– ಸದ್ಗುರು ಸ್ವಾತಿ ಖಾಡ್ಯೆ, ಧರ್ಮಪ್ರಚಾರಕರು, ಸನಾತನ ಸಂಸ್ಥೆ. (೨೪.೧೦.೨೦೨೧)

 ಸನಾತನದ ಗ್ರಂಥಗಳ ಬಗ್ಗೆ ಸನಾತನದ ಸಂತರ ಅಭಿಪ್ರಾಯಗಳು !

ಸನಾತನದ ಗ್ರಂಥ ಅಂದರೆ ಜೀವನವನ್ನು ಸುವರ್ಣಗೊಳಿಸುವ ಸ್ಪರ್ಶಮಣಿ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

ಗುರುದೇವರು ರಚಿಸಿದ ಸನಾತನದ ಗ್ರಂಥಗಳೆಂದರೆ ಕಬ್ಬಿಣವನ್ನು ಚಿನ್ನವನ್ನಾಗಿಸುವ ಸ್ಪರ್ಶಮಣಿ ಯಂತಿದೆ. ಈ ಗ್ರಂಥವನ್ನು ಓದಿದ ಅನೇಕರು ತಮ್ಮ ಜೀವನದಲ್ಲಿ ಆಮೂಲಾಗ್ರ ಬದಲಾವಣೆಯಾದ ಅನುಭೂತಿಯನ್ನು ಪಡೆದಿದ್ದಾರೆ. ಈ ಗ್ರಂಥದಿಂದ ನಮ್ಮ ಜೀವನದಲ್ಲಿ ಗುರುಭಕ್ತಿ ಮತ್ತು ಈಶ್ವರಭಕ್ತಿಯ ಸ್ಪರ್ಶಮಣಿಯ ಸ್ಪರ್ಶ ವಾಗುತ್ತದೆ ಮತ್ತು ಅದು ನಮ್ಮ ಜೀವನವನ್ನು ಬೆಳಗಿಸಿ ಬಿಡುತ್ತದೆ

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಉತ್ತರಾಧಿಕಾರಿಗಳಲ್ಲಿ ಒಬ್ಬರು, ಗೋವಾ (೧೮.೨.೨೦೨೨)

ಸನಾತನದ ಗ್ರಂಥಗಳೆಂದರೆ ಪೃಥ್ವಿಯಲ್ಲಿನ ಆಧ್ಯಾತ್ಮಿಕ ರತ್ನಗಳು !

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಮುಕುಲ ಗಾಡಗೀಳ

ಸನಾತನದ ಗ್ರಂಥಗಳ ಮೂಲಕ ಜಿಜ್ಞಾಸುಗಳ ಆಧ್ಯಾತ್ಮಿಕ ಉನ್ನತಿಗಾಗಿ ಗುರುದೇವರ  ಅವ್ಯಕ್ತ ಸಂಕಲ್ಪ ಕಾರ್ಯನಿರತವಾಗಿದ್ದು ಗ್ರಂಥದ ಮಾರ್ಗದರ್ಶನವನ್ನು ಕೃತಿಯಲ್ಲಿ ತಂದರೆ ನಿಶ್ಚಿತವಾಗಿಯೂ ಅವರ ಆಧ್ಯಾತ್ಮಿಕ ಉನ್ನತಿಯಾಗುವುದು. ಈಶ್ವರಪ್ರಾಪ್ತಿಯ ಮಾರ್ಗದರ್ಶಕವಾದ ಈ ಗ್ರಂಥಗಳು ಮುಂದೆ ಸಾವಿರಾರು ವರ್ಷ ಬ್ರಹ್ಮಾಂಡದಲ್ಲಿನ ಗುರುತತ್ತ್ವ ಅಂದರೆ ಅಖಂಡವಾಗಿ ಕಾರ್ಯನಿರತವಾಗಿರುವವು !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಉತ್ತರಾಧಿಕಾರಿ ಗಳಲ್ಲಿ ಒಬ್ಬರು, ಗೋವಾ (೧೭.೨.೨೦೨೨)

 

ಸನಾತನದ ಗ್ರಂಥಗಳು ವೇದಸಮಾನ ಸ್ವಯಂಭೂ ಚೈತನ್ಯದ ಸ್ರೋತಗಳಾಗಿವೆ !

ಪೂ. ರಮಾನಂದ ಗೌಡ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರು ಸಂಕಲನವನ್ನು ಮಾಡಿದ ಸನಾತನದ  ಹಿಂದೂ ಧರ್ಮಕ್ಕೆ ಸಂಬಂಧಿತ ಎಲ್ಲ ಗ್ರಂಥಗಳು ನಾಲ್ಕೂ ವೇದಗಳಿಗೆ ಸಮಾನವಾದ ಸ್ವಯಂಭೂ ಚೈತನ್ಯ ಸ್ರೋತಗಳಾಗಿವೆ. ಈ ಚೈತನ್ಯಯುಕ್ತ ಗ್ರಂಥಗಳ ಅಧ್ಯಯನ ಮಾಡುವವರು ಗ್ರಂಥದಲ್ಲಿ ಹೇಳಿದಂತಹ ಮಾರ್ಗದರ್ಶನವನ್ನು ಯೋಗ್ಯ ರೀತಿಯಲ್ಲಿ ಕೃತಿಯಲ್ಲಿ ತರಬೇಕು. ಅದರಿಂದ ಆ ಸಾಧಕರು, ಶಿಷ್ಯ ಮತ್ತು ಮುಂದೆ ಸಂತರಾಗಬಲ್ಲರು !

ಪೂ. ರಮಾನಂದ ಗೌಡ, ಧರ್ಮಪ್ರಸಾರಕರು, ಸನಾತನ ಸಂಸ್ಥೆ, (೨.೯.೨೦೨೧)

ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಜಗತ್ತಿನ ಅಸಾಮಾನ್ಯ ಗ್ರಂಥವೆಂದು ನಿತ್ಯ ಸ್ಮರಣೆಯಲ್ಲಿ ಉಳಿಯುವವು !

ಸದ್ಗುರು ಡಾ. ವಸಂತ ಆಠವಲೆ

ಸನಾತನದ ಅನೇಕ ಗ್ರಂಥಗಳಲ್ಲಿನ ಶೇ. ೩೦ ರಿಂದ ೮೦ ದಷ್ಟು ವಿಷಯವು ಪೃಥ್ವಿಯಲ್ಲಿ ಇಂದಿನ ತನಕ ಯಾವುದೇ ಗ್ರಂಥದಲ್ಲಿ ಇಲ್ಲದಂತಹ ಸಂಪೂರ್ಣ ಹೊಸ ವಿಷಯವಾಗಿದೆ. ಅದು ಋಷಿಮುನಿಗಳ ಹಾಗೆ ಧ್ಯಾನಕ್ಕೆ ಹೋಗಿ ವಿಶ್ವಬುದ್ಧಿಯಿಂದ ಸಿಕ್ಕಿದ ಅತೀಂದ್ರಿಯ ಜ್ಞಾನವಾಗಿದೆ. ಶಾಸ್ತ್ರೀಯ (ವೈಜ್ಞಾನಿಕ) ಪರಿಭಾಷೆಯಲ್ಲಿರುವ ಧರ್ಮಶಿಕ್ಷಣವು ಈ ಗ್ರಂಥಸಂಪತ್ತಿನ ವೈಶಿಷ್ಟ್ಯವಾಗಿದೆ. ಸಾವಿರಾರು ಸಾಧಕರಿಗೆ ಈ ಗ್ರಂಥದ ಬಗ್ಗೆ ಬಂದಿರುವ ಅನುಭೂತಿಗಳು ಗ್ರಂಥದಲ್ಲಿನ ಚೈತನ್ಯವನ್ನು ಸಿದ್ದಗೊಳಿಸುವ ಆಧ್ಯಾತ್ಮಿಕ ಪ್ರಮಾಣಪತ್ರವೇ ಆಗಿದೆ !

ಸದ್ಗುರು (ದಿ) ಡಾ. ವಸಂತ ಬಾಳಾಜಿ ಆಠವಲೆ (೨೦೧೩)

೫. ಧರ್ಮಪ್ರಚಾರಕ ಸಂತರ ಸರಮಾಲೆಯನ್ನು ತಯಾರಿಸುವ ಗ್ರಂಥಗಳು

ಸನಾತನದ ಗ್ರಂಥಗಳ ಜ್ಞಾನಾಮೃತವನ್ನು ಕೃತಿಯಲ್ಲಿ ತಂದು ಅಂದರೆ ಯೋಗ್ಯ ಸಾಧನೆಯನ್ನು ಮಾಡಿ ೧.೨.೨೦೨೪ ರ ತನಕ ೧೨೨ ಜನರು ಸಂತಪದವಿಯನ್ನು ಗಳಿಸಿದ್ದಾರೆ ಮತ್ತು ೧೦೫೪ ಸಾಧಕರು ಸಂತಪದವಿಯತ್ತ ಮಾರ್ಗಕ್ರಮಿಸುತ್ತಿದ್ದಾರೆ. ಸನಾತನದ ಅನೇಕ ಸಂತರು ಹಾಗೂ ಉನ್ನತ ಸಾಧಕರು ಧರ್ಮಪ್ರಚಾರಕರೆಂದು ಸೇವೆಯನ್ನು ಮಾಡುತ್ತಿದ್ದಾರೆ. ಸಂತರ ವಾಣಿಯಲ್ಲಿನ ಚೈತನ್ಯದಿಂದ ಹಾಗೂ ಸಂತರು ಮತ್ತು ಉನ್ನತ ಸಾಧಕರ ಮೇಲಿರುವ ಈಶ್ವರೀಕೃಪೆಯಿಂದ ಸನಾತನದ ಅಧ್ಯಾತ್ಮಪ್ರಸಾರದ ಕಾರ್ಯವು ಅನೇಕ ಪಟ್ಟು ಹೆಚ್ಚಾಗುತ್ತಿದೆ

೬. ಸನಾತನದ ಗ್ರಂಥಗಳ ಬಗ್ಗೆ ಸಮಾಜದ ಸಂತ ಮಹಾತ್ಮರ ಅಭಿಪ್ರಾಯ !

 ಅ. ಇಂದಿನ ಮೆಕಾಲೆ ಪ್ರಭಾವದ ವಿದೇಶಿ ಶಿಕ್ಷಣಪದ್ಧತಿಯಿಂದ ಇಂದಿನ ಪೀಳಿಗೆ ಹಿಂದೂ ಧರ್ಮದ ಆಚಾರ ವಿಚಾರಗಳಿಂದ ದೂರ ಹೋಗಿದೆ. ಈ ಹಿನ್ನೆಲೆಯಲ್ಲಿ ಹಿಂದೂಗಳಿಗೆ ಧರ್ಮಜ್ಞಾನ ಸಿಗಬೇಕೆಂದು ಸನಾತನವು ಪ್ರಕಾಶಿಸಿದ ಧಾರ್ಮಿಕ ಗ್ರಂಥಗಳು ಪ್ರಶಂಸನೀಯವಾಗಿವೆ – ಶ್ರೀ ಶ್ರೀ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜರು, ಶ್ರೀರಾಮಕ್ಷೇತ್ರ ಮಹಾಸಂಸ್ಥಾನ, ಕನ್ಯಾಡಿ, ದಕ್ಷಿಣ ಕನ್ನಡ.

೭. ಸನಾತನದ ಗ್ರಂಥದಲ್ಲಿರುವ ಜ್ಞಾನಕ್ಕೆ ವಾರ್ತಾಪತ್ರಿಕೆಗಳು, ಸಾಮಾಜಿಕ ಪ್ರಸಾರಮಾಧ್ಯಮಗಳ ಮೂಲಕ ಪ್ರಸಿದ್ಧಿ !

ಸನಾತನ ಸಂಸ್ಥೆ ಮತ್ತು ಸಂಸ್ಥೆಯೊಂದಿಗೆ ಜೋಡಣೆಯಾಗಿರುವ ಸಂಸ್ಥೆಗಳು ಹಾಗೂ ಸಮವಿಚಾರಿ ಸಂಸ್ಥೆಗಳ ಸಾಮಾಜಿಕ ಜಾಲತಾಣ (ಟ್ವಿಟರ (ಎಕ್ಸ್), ವಾಟ್ಸ್‌ಆಪ್, ಟೆಲಿಗ್ರಾಮ ಮುಂತಾದ ಜಾಲತಾಣಗಳು) ಮತ್ತು ಫೇಸ್‌ಬುಕ್ ಮೂಲಕ ಸನಾತನದ ಗ್ರಂಥಗಳ ಮಾಹಿತಿಯನ್ನು ಪ್ರಕಾಶಿಸಲಾಗುತ್ತದೆ. ತಿತಿತಿ.ಥಿouಣube.ಛಿom/ಆhಚಿಡಿmಚಿshiಞshಚಿಟಿ ಈ ಲಿಂಕ್‌ನಲ್ಲಿ ಧರ್ಮಶಿಕ್ಷಣ ವಾಹಿನಿಯಲ್ಲಿ (ಚಾನಲ್) ಸನಾತನದ ಗ್ರಂಥಗಳಲ್ಲಿರುವ ಜ್ಞಾನದ ಆಧಾರಿತ ಅನೇಕ ವಿಷಯಗಳಲ್ಲಿ ೮ ಭಾಷೆಗಳಲ್ಲಿ ದೃಶ್ಯಚಿತ್ರ (ವಿಡಿಯೋ) ಲಭ್ಯವಿವೆ.

೮. ಸನಾತನ ಗ್ರಂಥ ಮುದ್ರಣ

೧ ಕೋಟಿಯತ್ತ ಮಾರ್ಗಕ್ರಮಣ !

೧ ಫೆಬ್ರವರಿ ೨೦೨೪ ರ ತನಕ ಸನಾತನದ ೩೬೪ ಗ್ರಂಥಗಳು ಪ್ರಕಾಶನಗೊಂಡಿವೆ. ಇದರಲ್ಲಿ ಮರಾಠಿ, ಹಿಂದಿ, ಆಂಗ್ಲ, ಗುಜರಾತಿ, ಕನ್ನಡ, ತಮಿಳು, ತೆಲುಗು, ಮಲಯಾಳಮ್, ಬಂಗಾಲಿ, ಓಡಿಯಾ, ಅಸ್ಸಾಮಿ, ಗುರುಮುಖಿ ಮತ್ತು ನೇಪಾಳಿ ಹೀಗೆ ೧೩ ಭಾಷೆಗಳಲ್ಲಿ ೯೫ ಲಕ್ಷ ೭೫ ಸಾವಿರ ಪ್ರತಿಗಳು ಇಂದಿನ ತನಕ ಪ್ರಕಾಶಿತಗೊಂಡಿವೆ. ಬೇಗನೇ ೧ ಕೊಟಿ ಪ್ರತಿಗಳ ಮುದ್ರಣ ಪೂರ್ಣವಾಗುವುದು. ಒಂದು ಆಧ್ಯಾತ್ಮಿಕ ಸಂಸ್ಥೆಯ ಗ್ರಂಥಗಳ ಇಷ್ಟೊಂದು ಪ್ರತಿಗಳು ಮುದ್ರಣವಾಗುವುದು ದುರ್ಲಭವಾಗಿದೆ.

ಸನಾತನದ ಗುರುಕಾರ್ಯದಲ್ಲಿ ನೀವು ಪಾಲ್ಗೊಳ್ಳಿ !

ಧರ್ಮಪ್ರಸಾರ ಮಾಡುವುದರಲ್ಲಿ ಸನಾತನದ ಗ್ರಂಥಗಳ ಮಹತ್ವವನ್ನರಿತು ಗ್ರಂಥ ಕಾರ್ಯದಲ್ಲಿ ಪಾಲ್ಗೊಳ್ಳುವುದು ಸಮಷ್ಟಿ ಸಾಧನೆಯ ಮತ್ತು ಈಶ್ವರೀ ಕೃಪೆಯನ್ನು ಸಂಪಾದಿಸುವ ಅಮೂಲ್ಯ ಅವಕಾಶವಾಗಿದೆ. ಗುರುದೇವರು ವರ್ಗೀಕರಣ ಮಾಡಿ ಇಟ್ಟಿರುವ ೫೦೦೦ ಕ್ಕಿಂತಲೂ ಹೆಚ್ಚು ವಿಷಯವನ್ನು ಆದಷ್ಟು ಬೇಗ ಸಮಾಜಕ್ಕೆ ತಲುಪಿಸುವುದು ಅವಶ್ಯಕವಾಗಿದೆ. ಈ ಕಾರ್ಯದಲ್ಲಿ ತಮಗೆ ಪಾಲ್ಗೊಳ್ಳಲು ಇದ್ದಲ್ಲಿ ನಾವು ನಿಮ್ಮನ್ನು ಸ್ವಾಗತಿಸುತ್ತೇವೆ. ಈ ಕಾರ್ಯದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಹೆಚ್ಚಿನ ಮಾಹಿತಿಗಾಗಿ (೦೮೩೨) ೨೩೧೨೩೩೪ ಈ ಸಂಖ್ಯೆಯಲ್ಲಿ ಅಥವಾ ಗಣಕೀಯ ವಿಳಾಸ [email protected] ಇದದಲ್ಲಿ ಸಂಪರ್ಕಿಸಬೇಕು ಎಂದು ವಿನಂತಿ !