Growing Hatred of Hindus in America: ಅಮೇರಿಕಾದಲ್ಲಿ ಹೆಚ್ಚುತ್ತಿರುವ ಹಿಂದೂ ದ್ವೇಷದ ವಿರುದ್ಧ ಹೋರಾಡುವ ಆವಶ್ಯಕತೆ ಇದೆ !

ಅಮೇರಿಕಾದಲ್ಲಿನ ಭಾರತೀಯ ಮೂಲದ ಸಂಸದ ಶ್ರೀ ಠಾಣೇದಾರ ಇವರಿಂದ ಕರೆ !

ವಾಷಿಂಗ್ಟನ್ (ಅಮೇರಿಕಾ) – ನಾವು ಇತ್ತೀಚೆಗೆ ಹಿಂದೂದ್ವೇಷ (ಹಿಂದೂಫೋಬಿಯಾ) ಹೆಚ್ಚಾಗುವುದನ್ನು ನೋಡುತ್ತಿದ್ದೇವೆ. ನಾವು ‘ಕ್ಯಾಲಿಫೋರ್ನಿಯಾ ಎಸ್.ಬಿ 403’ (ಜನಾಂಗೀಯ ತಾರತಮ್ಯವನ್ನು ನಿಷೇಧಿಸುವ ಮಸೂದೆ) ಅನ್ನು ಸಹ ನೋಡುತ್ತಿದ್ದೇವೆ. ಇಂತಹ ಮಸೂದೆಗಳು ಕೇವಲ ಆರಂಭವಾಗಿದೆ. ಪ್ರಪಂಚದಾದ್ಯಂತ ದೇವಸ್ಥಾನಗಳು ಮತ್ತು ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆ. ಈ ಹಿಂದೂದ್ವೇಷದ ವಿರುದ್ಧ ಹೋರಾಡುವುದು ಅಗತ್ಯವಿದೆ. ಅಮೇರಿಕಾದ ಸಂಸತ್ತಿನಲ್ಲಿ ‘ಹಿಂದೂ ಕಾಕಸ್’ (ಸಮಾನ ಮನಸ್ಕ ಸಂಸದರ ಗುಂಪು) ಸ್ಥಾಪಿಸಲು ಇದು ಒಂದು ಕಾರಣವಾಗಿದೆ, ಎಂದು ‘ಹಿಂದೂ ಆಕ್ಷನ್’ ಸಂಸ್ಥೆಯು ಆಯೋಜಿಸಿದ್ದ ವಿವಿಧ ಭಾರತೀಯ ಅಮೇರಿಕಾ ಗುಂಪಿನ ಪ್ರತಿನಿಧಿಯ ಸಭೆಯಲ್ಲಿ ಅಮೇರಿಕಾದ ಭಾರತೀಯ ವಂಶದ ಸಂಸದ ಶ್ರೀ ಠಾಣೇದಾರ ಇವರು ಹೇಳಿಕೆ ನೀಡಿದರು.

1. ಠಾಣೇದಾರ ತಮ್ಮ ಮಾತನ್ನು ಮುಂದುವರಿಸಿ, ಇದೇ ಮೊದಲಬಾರಿ ಅಮೇರಿಕಾದ ಸಂಸತ್ತಿನಲ್ಲಿ `ಹಿಂದೂ ಕಾಕಸ’ ಸ್ಥಾಪನೆಯಾಗಿದೆ. ಜನರಿಗೆ ಅವರ ಧರ್ಮವನ್ನು ಆಚರಿಸಲು ಧಾರ್ಮಿಕ ಸ್ವಾತಂತ್ರ್ಯ ಸಿಗಬೇಕೆಂದು ನಾವು ಅನೇಕ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಈ ಭಯ, ಕಟ್ಟರತೆ ಮತ್ತು ದ್ವೇಷವನ್ನು ಎದುರಿಸಬೇಕಾಗಿದೆ; ಕಾರಣ ಅಮೇರಿಕೆಯಲ್ಲಿ ದ್ವೇಷಕ್ಕೆ ಸ್ಥಾನವಿರಬಾರದು. ಜನರ ಧಾರ್ಮಿಕ ಹಕ್ಕಿನ ವಿರುದ್ಧದ ದ್ವೇಷಕ್ಕೆ ಸ್ಥಾನ ಇರಬಾರದು. ಆದುದರಿಂದ ನಾವು ಸಭಾಂಗಣದಲ್ಲಿ ಈ ಬಗ್ಗೆ ಗಮನ ಕೇಂದ್ರಿಕರಿಸುತ್ತಿದ್ದೇವೆ.

2. `ಅಮೇರಿಕನ್‌ ಹಿಂದೂ ಆರ್ಗನಸೇಶನ್’ನೊಂದಿಗೆ ಸಂಬಂಧಿಸಿದ ಸುಹಾಗ ಶುಕ್ಲಾ ಇವರು ಮಾತನಾಡಿ, ಹಿಂದೂಗಳು ದೊಡ್ಡ ಪ್ರಮಾಣದಲ್ಲಿ ಹಿಂದೂ ವಿರೋಧಿ ಹೇಳಿಕೆ ಮತ್ತು ದ್ವೇಷಗಳನ್ನು ಎದುರಿಸುತ್ತಿದ್ದಾರೆ, ವಿಶೇಷವಾಗಿ ವಿಶ್ವವಿದ್ಯಾಲಯಗಳ ಪ್ರದೇಶದಲ್ಲಿ ಈ ಘಟನೆಗಳು ಹೆಚ್ಚಿದೆ. ಕಳೆದ ಎರಡು ವರ್ಷಗಳಲ್ಲಿ ಹಿಂದೂ ವಿರೋಧಿ ಘಟನೆಗಳಲ್ಲಿ ಹೆಚ್ಚಳವಾಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತದ ಎಷ್ಟು ಸಂಸದರು ದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯ ಮತ್ತು ದ್ವೇಷದ ವಿರುದ್ಧ ಹೋರಾಡ ಹೇಳುತ್ತಾರೆ ?