ಅಯೋಧ್ಯೆಯ ಶ್ರೀರಾಮಲಲ್ಲಾನ ಮೂರ್ತಿಯ ಶಿಲ್ಪಿ ಶ್ರೀ. ಅರುಣ ಯೋಗಿರಾಜರ ಆಧ್ಯಾತ್ಮಿಕ ಗುಣವೈಶಿಷ್ಟ್ಯಗಳು !

‘ಅಯೋಧ್ಯೆಯಲ್ಲಿ ಸ್ಥಾಪನೆಯಾದ ೫ ವರ್ಷದ ಶ್ರೀರಾಮಲಲ್ಲಾನ ಮನಮೋಹಕ ಮೂರ್ತಿಯ ದರ್ಶನವನ್ನು ಪಡೆದಿರುವ ಎಲ್ಲರೂ ರಾಮಮಯ ಆಗಿದ್ದಾರೆ. ಈ ಸುಂದರ ಮೂರ್ತಿಯನ್ನು ತಯಾರಿಸಿದ ಶಿಲ್ಪಿ ಶ್ರೀ. ಅರುಣ ಯೋಗಿರಾಜರ ಆಧ್ಯಾತ್ಮಿಕ ಗುಣವೈಶಿಷ್ಟ್ಯಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

ಶ್ರೀ. ಅರುಣ ಯೋಗಿರಾಜ

೧. ಶಿಲ್ಪಿ ಶ್ರೀ. ಯೋಗಿರಾಜರ ಆಧ್ಯಾತ್ಮಿಕ ಗುಣವೈಶಿಷ್ಟ್ಯಗಳು!

೧ ಅ. ಅಹಂ ಅಲ್ಪ ಮತ್ತು ಭಾವ ಹೆಚ್ಚಿರುವುದು : ಶಿಲ್ಪಿ ಶ್ರೀ. ಅರುಣ ಯೋಗಿರಾಜ ಇವರಲ್ಲಿ ಅಹಂ ಅಲ್ಪ ಮತ್ತು ಕರ್ತೃತ್ವದ ಭಾವ ಕಡಿಮೆಯಿದೆ. ಇದರಿಂದಾಗಿ ಅವರ ಕಲೆಯಿಂದ ಅಹಂ ಅರಿವಾಗದೇ ಭಾವದ ಅರಿವಾಗುತ್ತದೆ. ಅವರು ಶ್ರೀರಾಮಲಲ್ಲಾನ ಮೂರ್ತಿಯನ್ನು ಭಕ್ತಿಯಿಂದ ತಯಾರಿಸಿದ್ದು ಆ ಮೂರ್ತಿಯ ಮುಖದಿಂದ ೫ ವರ್ಷದ ಬಾಲಕ ಶ್ರೀರಾಮಲಲ್ಲಾನ ಮನಸ್ಸಿನ ಭಾವ ಸಹಜವಾಗಿ ಮತ್ತು ಎದ್ದು ಕಾಣುತ್ತದೆ.

೧ ಆ. ಕೃತಜ್ಞತಾಭಾವದಿಂದಾಗಿ ವಿನಮ್ರ ಸ್ವಭಾವವಿರುವುದು : ಶಿಲ್ಪಿ ಯೋಗಿರಾಜ ಇವರಿಗೆ ಶ್ರೀರಾಮಲಲ್ಲಾನ ಮೂರ್ತಿಯನ್ನು ತಯಾರಿಸುವ ಅವಕಾಶ ದೊರಕಿದಾಗ ಅವರಿಗೆ ಅದರಿಂದ ದೊಡ್ಡಸ್ತಿಕೆಯೆನಿಸಲಿಲ್ಲ. ಬದಲಾಗಿ ಭಗವಂತನು ತನ್ನ ಸುಂದರ ಮೂರ್ತಿಯನ್ನು ತಯಾರಿಸಲು ಅವಕಾಶವನ್ನು ನೀಡಿದ್ದಾನೆ ಎಂದು ಅವರಿಗೆ ಕೃತಜ್ಞತೆಯೆನಿಸಿತು. ಅವರಲ್ಲಿರುವ ಈ ಕೃತಜ್ಞತಾ ಭಾವದಿಂದ ಅವರ ಸ್ವಭಾವ ಅತ್ಯಂತ ವಿನಮ್ರವಾಗಿದೆ. ಇದರಿಂದ ಶ್ರೀ. ಯೋಗಿರಾಜರ ವಿನಮ್ರತೆಯಿಂದ ಅವರು ಪ್ರತಿಯೊಬ್ಬರಿಗೂ ತಮ್ಮವರು ಮತ್ತು ಬೇಕಾದವರೆಂದು ಅನಿಸುತ್ತದೆ.

೧ ಇ. ಶಿಷ್ಯಭಾವದಿಂದ ಗುರುಕೃಪೆಯನ್ನು ಸಂಪಾದಿಸಲು ಸಾಧ್ಯವಾಗುವುದು : ಶ್ರೀ. ಯೋಗಿರಾಜರಲ್ಲಿ ಆದರ್ಶ ಶಿಷ್ಯನ ವಿನಮ್ರತೆ, ಆಜ್ಞಾಪಾಲನೆ, ಸೇವಾವೃತ್ತಿ ಮುಂತಾದ ಅನೇಕ ಗುಣಗಳಿವೆ. ಇದರಿಂದ ಅವರ ಮೇಲೆ ಗುರುಸ್ಥಾನದಲ್ಲಿರುವ ಅವರ ತಂದೆಯ ಕೃಪಾಶೀರ್ವಾದವಿದೆ. ಈ ಕೃಪೆಯಿಂದ ಅವರಿಗೆ ಶಿಲ್ಪಕಲೆ ಬಳುವಳಿಯಾಗಿ ಸಿಕ್ಕಿದ್ದು, ಸಾತ್ತ್ವಿಕ ಶಿಲ್ಪವನ್ನು ತಯಾರಿಸುವ ಮಹತ್ವಪೂರ್ಣ ಜ್ಞಾನ ಮತ್ತು ವಿದ್ಯೆ ದೊರಕಿದೆ.

೧ ಈ. ಸೂಕ್ಷ್ಮವನ್ನು ಅರಿಯುವ ಒಳ್ಳೆಯ ಕ್ಷಮತೆ : ಶ್ರೀ. ಯೋಗಿರಾಜರಲ್ಲಿ ಸಾತ್ತ್ವಿಕ ಶಿಲ್ಪವನ್ನು ತಯಾರಿಸುವ ಆಂತರಿಕ ತಳಮಳವಿರುವುದರಿಂದ ಅವರ ಮೇಲೆ ಭಗವಂತನ ಕೃಪೆಯಾಗಿದೆ. ಇದರಿಂದ ಅವರಲ್ಲಿ ಸೂಕ್ಷ್ಮವನ್ನು ಅರಿಯುವ ವಿಶಿಷ್ಟ ಕ್ಷಮತೆಯಿದೆ. ಈ ಕ್ಷಮತೆಯಿಂದ ಯಾವಾಗ ಅವರು ಶ್ರೀರಾಮಲಲ್ಲಾನ ಮೂರ್ತಿಯನ್ನು ನಿರ್ಮಿಸುತ್ತಿದ್ದರೋ, ಆಗ ದೇವಶಿಲ್ಪಿ ವಿಶ್ವಕರ್ಮನು ಅವರಿಗೆ ಸೂಕ್ಷ್ಮದಿಂದ ಸಾತ್ತ್ವಿಕ ಶಿಲ್ಪವನ್ನು ನಿರ್ಮಿಸುವ ಸೂಕ್ಷ್ಮ ಜ್ಞಾನವನ್ನು ನೀಡುತ್ತಿದ್ದನು. ಅದರಂತೆಯೇ ಈ ಮೂರ್ತಿಯನ್ನು ನಿರ್ಮಿಸುತ್ತಿರುವಾಗ ಅವರಿಗೆ ೫ ವರ್ಷದ ಬಾಲಕ ಶ್ರೀ ರಾಮಲಲ್ಲಾನ ದರ್ಶನವಾಗುತ್ತಿತ್ತು. ಈ ಕಾರಣದಿಂದ ಅವರಿಂದ ಶ್ರೀರಾಮಲಲ್ಲಾನ ಪರಿಪೂರ್ಣ ಮೂರ್ತಿ ಸಿದ್ಧವಾಯಿತು.

೧ ಉ. ಭಕ್ತಿಯಿಂದ ಭಗವಂತನ ಅಖಂಡ ಅನುಸಂಧಾನದಲ್ಲಿದ್ದು ಭಗವಂತನೊಂದಿಗೆ ತಾದಾತ್ಮ್ಯವನ್ನು ಪಡೆಯುವುದು : ಶ್ರೀ. ಯೋಗಿರಾಜರು ಶ್ರೀ ರಾಮಲಲ್ಲಾನ ಮೂರ್ತಿಯನ್ನು ನಿರ್ಮಿಸುತ್ತಿರುವಾಗ ಹಸಿವು-ನೀರಡಿಕೆಯನ್ನು ಗಮನಿಸದೇ ಸಂಪೂರ್ಣ ಮೈಮರೆತು ಶಿಲ್ಪವನ್ನು ಕೆತ್ತುತ್ತಿದ್ದರು. ಮೂರ್ತಿಯನ್ನು ಸಿದ್ಧಪಡಿಸುವ ಸ್ಥೂಲದ ಪ್ರಕ್ರಿಯೆ ನಡೆಯುತ್ತಿರುವಾಗ ಶಿಲ್ಪಿ ಶ್ರೀ. ಯೋಗಿರಾಜರಲ್ಲಿರುವ ಭಕ್ತಿಯಿಂದ ಅವರು ಭಗವಂತನ ಅಖಂಡ ಅನುಸಂಧಾನದಲ್ಲಿದ್ದು ಭಗವಂತನ ಮೂರ್ತಿಯನ್ನು ತಯಾರಿಸುತ್ತಿದ್ದರು. ಭಗವಂತನೊಂದಿಗೆ ಅಂಶಾತ್ಮಕವಾಗಿ ಏಕರೂಪವಾಗಿದ್ದರಿಂದ ಶ್ರೀರಾಮಲಲ್ಲಾನ ಶಿಲ್ಪವನ್ನು ಕೆತ್ತುತ್ತಿರುವಾಗ ಅವರು ಕೆಲವು ಕ್ಷಣ ಸಾಯುಜ್ಯ ಮುಕ್ತಿಯ ಅನುಭೂತಿಯನ್ನು ಪಡೆದರು.

ವಿವಿಧ ಯೋಗಮಾರ್ಗಾನುಸಾರ ಶ್ರೀ ಅರುಣ ಯೋಗಿರಾಜರ ಸಾಧನೆ

ಕು. ಮಧುರಾ ಭೋಸಲೆ

೩. ಶಿಲ್ಪಿ ಶ್ರೀ. ಅರುಣ ಯೋಗಿರಾಜರು ಉತ್ತಮ ಶಿಷ್ಯರಾಗಿದ್ದು, ಅವರ ಮಾರ್ಗಕ್ರಮಣ ಸಂತತ್ವದೆಡೆಗೆ ನಡೆದಿದೆ

ಶಿಲ್ಪಿ ಶ್ರೀ. ಅರುಣ ಯೋಗಿರಾಜರಲ್ಲಿ ಆದರ್ಶ ಶಿಷ್ಯನ ಅನೇಕ ಗುಣಗಳಿವೆ. ಇದರಿಂದ ಅವರ ಮೇಲೆ ಶ್ರೀಗುರುಗಳ ಕೃಪೆಯಿದೆ. ಅದೇ ರೀತಿ ಅವರಲ್ಲಿ ಸಾತ್ತ್ವಿಕ ಮೂರ್ತಿಯನ್ನು ತಯಾರಿಸಲು ಆವಶ್ಯಕವಿರುವ ತಳಮಳ ಮತ್ತು ಭಗವಂತನ ಬಗ್ಗೆ ಭಕ್ತಿಬಾವವಿದೆ. ಇದರಿಂದ ಅವರ ಮೇಲೆ ಭಗವಂತನ ಕೃಪೆಯ ಸುರಿಮಳೆಯಾಗುತ್ತಿದೆ. ಈ ರೀತಿ ಗುರುಕೃಪೆ ಮತ್ತು ದೇವಕೃಪೆ ಪ್ರಾಪ್ತವಾಗಿದ್ದರಿಂದ ಶ್ರೀ. ಅರುಣ ಯೋಗಿರಾಜರ ನಡೆ ಶಿಷ್ಯತ್ವದಿಂದ ಸಂತತ್ವದೆಡೆಗೆ ವೇಗವಾಗಿ ಸಾಗುತ್ತಿದೆ. ‘ಅವರು ಬೇಗನೆ ಸಂತಪದವಿಯನ್ನು ಪಡೆಯುವರು’ ಎಂದು ಅನಿಸುತ್ತದೆ. ಶ್ರೀ. ಯೋಗಿರಾಜರು ಆದರ್ಶ ಶಿಲ್ಪಿಗಳಾಗಿದ್ದು, ಅವರು ನಿರ್ಮಿಸಿರುವ ಶಿಲ್ಪಗಳು ಕೇವಲ ಶಿಲ್ಪಕಲೆಯ ದೃಷ್ಟಿಯಿಂದ ಮಾತ್ರವಲ್ಲ, ಬದಲಾಗಿ ಅಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಉತ್ಕೃಷ್ಟ ಮತ್ತು ಪರಿಪೂರ್ಣವಾಗಿರುತ್ತವೆ. ಇದರಿಂದ ಅವರು ನಿರ್ಮಿಸಿರುವ ಶ್ರೀ ರಾಮಲಲ್ಲಾನ ಮೂರ್ತಿಯಲ್ಲಿ ಪ್ರಾಣಪ್ರತಿಷ್ಠೆಯ ಮೊದಲು ಶೇ. ೨೫ ರಷ್ಟು ಮತ್ತು ಪ್ರಾಣಪ್ರತಿಷ್ಠೆಯಾದ ಬಳಿಕ ಶೇ. ೩೫ ರಷ್ಟು ರಾಮತತ್ತ್ವ ಕಾರ್ಯನಿರತವಾಗಿದೆ. ಶ್ರೀ. ಯೋಗಿರಾಜರ ಶಿಲ್ಪಕಲೆಯ ಮಾಧ್ಯಮದಿಂದ ಸಾಧನೆಯಾಗಿ ಅವರಿಗೆ ಈ ಜನ್ಮದಲ್ಲಿ ಸಂತಪದವಿ ಪ್ರಾಪ್ತವಾಗಿ ಮುಂದಿನ ಜನ್ಮದಲ್ಲಿ ಸಾಯುಜ್ಯಮುಕ್ತಿ ಪ್ರಾಪ್ತವಾಗಲಿದೆ.

೪. ನೋಡಿ ಶಿಲ್ಪಿಯ ಭಕ್ತಿ

ಲಭಿಸಿತು ಪ್ರಭು ರಾಮರಾಯರ ಪ್ರೀತಿ !

ಭಕ್ತಿರಸಪೂರ್ಣ ಶ್ರೀರಾಮನ ಮೂರ್ತಿ !

ಮನೋಹರಮಯ ಸುಂದರ ಕಲಾಕೃತಿ ||೧||

ಶ್ರೀರಾಮಲಲ್ಲಾನ ಸುಂದರ ಮೂರ್ತಿ |

ನೀಡುವುದು ದಿವ್ಯತ್ವದ ಅನುಭೂತಿ ||೨||

ಯೋಗಿರಾಜರು ನಿರ್ಮಿಸಿದರು ಸುಂದರ ಮೂರ್ತಿ |

ಬಣ್ಣಿಸುವುದು ಹೇಗೆ ಅವರ ಕೀರ್ತಿ ||೩||

ಭಾವಭಕ್ತಿಯ ಸಂಗಮದಲ್ಲಿ |

ನಿರ್ಮಾಣವಾಯಿತು ಶ್ರೀರಾಮರ ಮೂರ್ತಿ ||೪||

ನೋಡಿ ಶಿಲ್ಪಿಯ ಭಕ್ತಿ |

ಲಭಿಸಿತು ಪ್ರಭು ರಾಮರಾಯರ ಪ್ರೀತಿ ||೫||

ಪ್ರಾಣಪ್ರತಿಷ್ಠೆಯ ಶುಭ ಮುಹೂರ್ತದಲ್ಲಿ ||

ಸ್ವರ್ಗವೇ ಅವತರಿಸಿತು ಈ ಭೂಮಿಯಲ್ಲಿ ||೬||

ಅಂತರಾಳದಿಂದ ಅವತರಿಸಿದ ತೇಜೋಮಯ ಜ್ಯೋತಿ |

ಮಾಡಲು ಪ್ರಭು ಶ್ರೀರಾಮನ ದಿವ್ಯ ಆರತಿ ||೭||

ಪ್ರಭು ಶ್ರೀರಾಮರಿಗೆ ಮಾಡಿ ಭಾವಮಯ ಆರತಿ |

ಕೃತಜ್ಞತಾ ಪುಷ್ಪ ಪ್ರಭುಚರಣಗಳಿಗೆ ಅರ್ಪಣೆ ||೮||

೫. ಕೃತಜ್ಞತೆ : ‘ಎಲ್ಲ ರೀತಿಯಿಂದಲೂ ಆದರ್ಶ ಶಿಲ್ಪಿ ಮತ್ತು ಶಿಷ್ಯರಾಗಿರುವ ಶ್ರೀ. ಅರುಣ ಯೋಗಿರಾಜರ ಗುಣವೈಶಿಷ್ಟ್ಯಗಳು ಈ ಲೇಖನದ ಮಾಧ್ಯಮದಿಂದ ಕಲಿಯಲು ಸಿಕ್ಕಿದವು’, ಇದಕ್ಕಾಗಿ ನಾನು ಶ್ರೀಗುರುಚರಣಗಳಲ್ಲಿ ಕೃತಜ್ಞತೆಯ ಭಾವದಿಂದ ಈ ಲೇಖನ ರೂಪಿ ಭಾವಪುಷ್ಪವನ್ನು ಅರ್ಪಿಸುತ್ತೇನೆ.

ಸುಶ್ರೀ ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೫) (ಸೂಕ್ಷ್ಮದಿಂದ ದೊರಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ(೧.೨.೨೦೨೪)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.