‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ನಿಮಿತ್ತ ದೊರಕಿದ ಸೇವೆಯನ್ನು ಮಾಡುವಾಗ ಸಾಧಕಿಗೆ ಗುರುದೇವರ ಕೃಪೆಯಿಂದ ಆನಂದ ಸಿಗುವುದು ಮತ್ತು ಅವರು ಗೋವಾದ ರಾಮನಾಥಿ ಆಶ್ರಮದಲ್ಲಿ ಪಡೆದ ಚೈತನ್ಯದ ಅನುಭೂತಿ !

ಸೌ. ಕೋಮಲ ಹಿರೇಮಠ

‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ನಿಮಿತ್ತ ನಮಗೆ ಸೇವೆಯನ್ನು ಮಾಡುವ ಅವಕಾಶ ಸಿಕ್ಕಿತು. ಈ ಸೇವೆ ಸಿಕ್ಕಿದ್ದಕ್ಕೆ ಮತ್ತು (ಗೋವಾದ) ರಾಮನಾಥಿಯಲ್ಲಿನ ಸನಾತನದ ಆಶ್ರಮಕ್ಕೆ ಬರಲು ಅವಕಾಶ ಸಿಕ್ಕಿದಕ್ಕಾಗಿ ನನಗೆ ಗುರುದೇವರ ಬಗ್ಗೆ ಬಹಳ ಕೃತಜ್ಞತೆ ಅನಿಸುತ್ತಿತ್ತು. ಆ ಸಮಯದಲ್ಲಿ ನನಗೆ ಅರಿವಾದ ಅಂಶಗಳನ್ನು ಇಲ್ಲಿ ಕೊಟ್ಟಿದ್ದೇನೆ.

೧. ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ’ದ ನಿಮಿತ್ತ ಸೇವೆಯನ್ನು ಮಾಡುವಾಗ ಅರಿವಾದ ಅಂಶಗಳು

೧ ಅ. ಸೇವೆಯನ್ನು ಮಾಡುವಾಗ ಭಾಷೆಯ ಅಡಚಣೆ ಬರದಿರುವುದು : ಸೇವೆಯನ್ನು ಮಾಡುವಾಗ ಆರಂಭದಲ್ಲಿ ನನ್ನ ಮನಸ್ಸಿನಲ್ಲಿ ‘ಭಾಷೆಯ ಅಡಚಣೆಯಿಂದ ಸಾಧಕರು ಮಾತ ನಾಡುವುದು ತಿಳಿಯದಿದ್ದರೆ ಸೇವೆಯನ್ನು ಹೇಗೆ ಮಾಡುವುದು ?’, ಎಂಬ ವಿಚಾರ ಬರುತ್ತಿತ್ತು. ಸಾಧಕರು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿರುವಾಗ ನನಗೆ ಅವರ ಮಾತುಗಳು ಶೇ. ೮೫ ರಷ್ಟು ತಿಳಿಯುತ್ತಿತ್ತು. ಅನಂತರ ನನ್ನ ಮನಸ್ಸಿನಲ್ಲಿ ‘ಗುರುದೇವರು ನೀಡಿದ ಈ ಸೇವೆಯನ್ನು ಹೇಗೆ ಮಾಡಬೇಕು ?’, ಎಂಬ ವಿಚಾರ ಬರಲಿಲ್ಲ. ‘ನನ್ನ ಜೊತೆಗಿದ್ದ ಸಾಧಕಿ ಸೌ. ಸಮೃದ್ಧಿ ರಾವುತ್‌ ಮತ್ತು ಕು. ಕಿರಣ ವಟಕರ ಇವರು ಹೇಳಿದಂತೆ ನನಗೆ ಒಳ್ಳೆಯ ರೀತಿಯಲ್ಲಿ ಸೇವೆಯನ್ನು ಮಾಡಲು ಸಾಧ್ಯವಾಗಲಿ’, ಎಂದು ನಾನು ಗುರುದೇವರ ಚರಣಗಳಲ್ಲಿ ಪ್ರಾರ್ಥಿಸುತ್ತಿದ್ದೆನು. ಸಾಧಕಿಯರು ಹೇಳಿದಂತೆ ನಮ್ಮಿಂದ ಸೇವೆಯಾಗುತ್ತಿತ್ತು.

೧ ಆ. ಸಹಸಾಧಕಿಯರು ಸೇವೆಯನ್ನು ಶಾಂತವಾಗಿ ಮತ್ತು ಪ್ರೀತಿಯಿಂದ ತಿಳಿಸಿ ಹೇಳುವುದು ಮತ್ತು ಭಾವದ ಸ್ತರದಲ್ಲಿ ಸೇವೆಯನ್ನು ಮಾಡಿದುದರಿಂದ ಆನಂದ ಸಿಗುವುದು : ಸೇವೆಯನ್ನು ಮಾಡುವಾಗ ನನ್ನ ಮನಸ್ಸಿನಲ್ಲಿ ‘ಸಮೃದ್ಧಿ ಅಕ್ಕ ಮತ್ತು ಕಿರಣ ಅಕ್ಕನವರಿಗೆ ಕೇಳಿದರೆ, ಆಯಿತು’, ಎಂದು ವಿಚಾರ ಬರುತ್ತಿತ್ತು. ಅವರಿಗೆ ಸಾಧನೆ ಮತ್ತು ಸೇವೆಗೆ ಸಂಬಂಧಿಸಿದಂತೆ ಏನು ಕೇಳಿದರೂ, ಅವರಿಬ್ಬರೂ ನಮಗೆ ಶಾಂತವಾಗಿ ಮತ್ತು ಪ್ರೀತಿಯಿಂದ ತಿಳಿಸಿ ಹೇಳುತ್ತಿದ್ದರು. ಅವರು ನಮಗೆ ಅಡುಗೆಮನೆಯಲ್ಲಿ ಕೆಲವು ಸೇವೆಗಳನ್ನು ಮತ್ತು ಮಹೋತ್ಸವಕ್ಕೆ ಬಂದ ಅತಿಥಿಗಳಿಗೆ ಕುಡಿಯಲು ನೀರು ಕೊಡುವ ಸೇವೆಯನ್ನು ಕೊಟ್ಟರು.

ಹಿಂದುತ್ವನಿಷ್ಠರಿಗೆ ಕುಡಿಯಲು ನೀರು ಕೊಡುವಾಗ ನನಗೆ ಬಹಳ ಆನಂದವಾಗುತ್ತಿತ್ತು. ನನಗೆ ಅವರೆಲ್ಲರಲ್ಲಿ ಗುರುದೇವರ ಅಸ್ತಿತ್ವದ ಅರಿವಾಗುತ್ತಿತ್ತು. ಆ ಸಮಯದಲ್ಲಿ ‘ನಾನು ನನ್ನ ಗುರುಗಳಿಗೆ ಕುಡಿಯಲು ನೀರು ಕೊಡುತ್ತಿದ್ದೇನೆ’, ಎಂಬ ಭಾವ ಇಟ್ಟುಕೊಂಡ ಕಾರಣ ನನಗೆ ಆನಂದ ಸಿಕ್ಕಿತು.

೨. ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ಬಂದ ಚೈತನ್ಯದ ಅನುಭೂತಿ !

ಅ. ‘ನನ್ನ ಮೇಲೆ ಬಂದ ತೊಂದರೆದಾಯಕ ಶಕ್ತಿಯ (ಕಪ್ಪು) ಆವರಣ (ಗೋವಾದ) ರಾಮನಾಥಿಯ ಸನಾತನ ಆಶ್ರಮದಲ್ಲಿನ ಚೈತನ್ಯದಿಂದಾಗಿ ನಾಶವಾಗುತ್ತಿದೆ’, ಎಂದು ನನಗೆ ಅರಿವಾಯಿತು.

ಆ. ನನ್ನ ಮನಸ್ಸಿನಲ್ಲಿ ‘ಆಶ್ರಮವೆಂದರೆ ಗುರುದೇವರು ! ಆಶ್ರಮದಲ್ಲಿನ ಪ್ರತಿಯೊಂದು ವಸ್ತು ಗುರುದೇವರದ್ದಾಗಿದೆ. ಆ ವಸ್ತುಗಳನ್ನು ಯೋಗ್ಯ ರೀತಿಯಲ್ಲಿ ಬಳಸಬೇಕು’, ಎಂಬ ವಿಚಾರ ಬರುತ್ತಿತ್ತು. ನನಗೆ, ‘ಆಶ್ರಮದಲ್ಲಿ ಪ್ರತಿಯೊಬ್ಬ ಸಾಧಕನ ಕಾಳಜಿಯನ್ನು ಎಷ್ಟು ಒಳ್ಳೆಯ ರೀತಿಯಲ್ಲಿ ತೆಗೆದುಕೊಳ್ಳುತ್ತಾರೆ ! ಸಾಧಕರಿಗೆ ಆವಶ್ಯಕ ವಾಗಿರುವ ಸೌಲಭ್ಯವನ್ನು ಸಾಕಷ್ಟು ನೀಡಿದ್ದಾರೆ. ಸಾಧಕರಿಗೆ ಗುರುದೇವರ ಬಹಳ ಆಧಾರವೆನಿಸುತ್ತದೆ !’ ಎಂದು ಅನಿಸಿತು.

ಈ. ‘ನಾನು ನನ್ನ ಮನೆಗೆ ಬಂದಿದ್ದೇನೆ’, ಎಂದು ನನಗೆ ಅನಿಸಿತು.

ಉ. ‘ಪ್ರತಿದಿನ ನನ್ನಲ್ಲಿ ಬದಲಾವಣೆಯಾಗುತ್ತಿದೆ’, ಎಂದು ನನಗೆ ಅರಿವಾಯಿತು. ಗುರುದೇವಾ, ಈ ಅಜ್ಞಾನಿ ಜೀವದಿಂದ ಸೇವೆಯನ್ನು ಮಾಡಿಸಿಕೊಂಡಿದ್ದಕ್ಕಾಗಿ ನಾನು ತಮ್ಮ ಚರಣಗಳಲ್ಲಿ ಅನನ್ಯ ಶರಣಾಗತ ಭಾವದಿಂದ ಕೃತಜ್ಞತೆಯನ್ನು ಅರ್ಪಿಸುತ್ತೇನೆ.’

– ಸೌ. ಕೋಮಲ ಹಿರೇಮಠ, ಶಿವಮೊಗ್ಗ. (೨.೭.೨೦೨೩)