‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ’ ಪ್ರಕ್ರಿಯೆಯ ಬಗ್ಗೆ ಸನಾತನ ಆಶ್ರಮದ ಶೇ. ೬೭ ಆಧ್ಯಾತ್ಮಿಕ ಮಟ್ಟದ ಸೌ. ಸುಪ್ರಿಯಾ ಮಾಥೂರರಿಂದ ಶ್ರೀಮತಿ ಅಶ್ವಿನಿ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೨) ಇವರಿಗೆ ಕಲಿಯಲು ಸಿಕ್ಕಿದ ಅಂಶಗಳು !

ಸೌ. ಸುಪ್ರಿಯಾ ಮಾಥೂರ

೨೦೧೯ ರಲ್ಲಿ ಶ್ರೀಮತಿ ಅಶ್ವಿನಿ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೨)ಇವರು ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆ ಪ್ರಕ್ರಿಯೆಗಾಗಿ ಗೋವಾದ ರಾಮನಾಥಿಯ ಸನಾತನ ಆಶ್ರಮಕ್ಕೆ ಬಂದಿದ್ದರು. ಸೌ. ಸುಪ್ರಿಯಾ ಮಾಥೂರರು  (ಆಧ್ಯಾತ್ಮಿಕ ಮಟ್ಟ ಶೇ. ೬೭) ಪೂರ್ಣವೇಳೆ ಸಾಧನೆ ಮಾಡುವವರಿಗೆ ಪ್ರಕ್ರಿಯೆಯನ್ನು ಮಾಡಿಸುತ್ತಾರೆ. ಈ ಪ್ರಕ್ರಿಯೆಯ ಸಂದರ್ಭದಲ್ಲಿ ಶ್ರೀಮತಿ ಅಶ್ವಿನಿ ಪ್ರಭು ಹಾಗೂ ಇತರ ಸಾಧಕರಿಂದಾದ ತಪ್ಪುಗಳು ಹಾಗೂ ಮನಸ್ಸಿನ ಪ್ರಕ್ರಿಯೆಯ ಪ್ರಸಂಗಗಳನ್ನು ಅವರು ಹೇಳಿದಾಗ ಸೌ. ಸುಪ್ರಿಯಾ ಮಾಥೂರರು ಸಾಧಕರಿಗೆ ಮುಂದಿನ ದೃಷ್ಟಿಕೋನವನ್ನು ನೀಡಿದರು. ಶ್ರೀಮತಿ ಅಶ್ವಿನಿ ಪ್ರಭು ಇವರಿಗೆ ಪ್ರಕ್ರಿಯೆ ಯಿಂದ ಕಲಿಯಲು ಸಿಕ್ಕಿದ ಅಂಶಗಳನ್ನು ಮುಂದೆ ಕೊಡಲಾಗಿದೆ.  ೨೫/೨೪ ನೇ ಸಂಚಿಕೆಯಲ್ಲಿ ಅದರ ಕೆಲವು ಭಾಗ ನೋಡಿದೆವು ಈ ವಾರದ ಅದರ ಮುಂದಿನ ಭಾಗ ನೋಡೋಣ.

ಹಿಂದಿನ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/109350.html

ಭಾಗ ೨

ಶ್ರೀಮತಿ ಅಶ್ವಿನಿ ಪ್ರಭು

೪. ಪ್ರಸಂಗ – ‘ಸಾಧನೆಯ ಪ್ರಯತ್ನಗಳಾಗದಿರುವಾಗ ನಮ್ಮ ಸಾಧನೆಯ ವರದಿ ತೆಗೆದುಕೊಳ್ಳಬಾರದು’, ಎಂದೆನಿಸುವುದು

೪ ಅ. ದೃಷ್ಟಿಕೋನ

೧. ‘ಸಾಧನೆಯ ಪ್ರಯತ್ನಗಳು ಆಗದಿರುವಾಗ, ನಮ್ಮ ಉತ್ಸಾಹವು ಕಡಿಮೆ ಇರುತ್ತದೆ. ಸಾಧನೆಯಲ್ಲಿ ಮನಸ್ಸಿನಿಂದ ಹೆಚ್ಚು ಪಾಲ್ಗೊಳ್ಳುವುದಿರುತ್ತದೆ.  ಮನಸ್ಸಿನಲ್ಲಿ ಉತ್ಸಾಹವಿದ್ದರೆ, ಪ್ರತಿಯೊಂದು ಕೃತಿ ಯೋಗ್ಯ ಸಮಯದಲ್ಲಿಯೇ ಆಗುತ್ತದೆ. ಮನಸ್ಸಿನ ಸ್ಥಿತಿಯಿಂದ ಕೃತಿಯ ಮೇಲೆ ಪರಿಣಾಮವಾಗುತ್ತದೆ ಮತ್ತು ರಿಯಾಯಿತಿ ತೆಗೆದುಕೊಳ್ಳುವುದು, ಮುಂದೂಡುವಿಕೆ ಮತ್ತು ನಿರುತ್ಸಾಹ ಹೆಚ್ಚುತ್ತದೆ.

೨. ಉತ್ಸಾಹವನ್ನು ಹೆಚ್ಚಿಸಲು ದಿನಕ್ಕೆ ೫ ಬಾರಿ ಆತ್ಮನಿವೇದನೆಯನ್ನು ಮಾಡಬೇಕು. ಸತತವಾಗಿ ಅನುಸಂಧಾನದಲ್ಲಿದ್ದರೆ ಚೈತನ್ಯ ಮತ್ತು ಉತ್ಸಾಹದಲ್ಲಿ ಹೆಚ್ಚಳವಾಗುತ್ತದೆ ಮತ್ತು ತತ್ಪರತೆಯಿಂದ ಕೃತಿಗಳನ್ನು ಮಾಡಲು ಸಾಧ್ಯವಾಗುತ್ತದೆ. ಕೃತಿಗೆ ಭಾವದ ಪ್ರಯತ್ನಗಳನ್ನು ಜೋಡಿಸಿ ಪ್ರತಿಯೊಂದು ಕೃತಿಯನ್ನು ಮಾಡಿದರೆ ಅದರಿಂದ ಸಾಧನೆಯಾಗುತ್ತದೆ.

೩. ಮನುಷ್ಯನಿಗೆ ವ್ಯಾವಹಾರಿಕ ಜೀವನದಲ್ಲಿ ತುಂಬಾ ಆಶೆಗಳಿರುತ್ತವೆ. ಅನೇಕ ಬಾರಿ ವಿಫಲನಾದರೂ, ಅವನು ಪ್ರಯತ್ನಿಸುವುದನ್ನು ಬಿಡದೇ ಪುನಃ ಪುನಃ ಪ್ರಯತ್ನಿಸುತ್ತಾನೆ. ಸಾಧನೆಯಲ್ಲಿಯೂ ಹೀಗೆಯೇ ಪ್ರಯತ್ನಿಸಬೇಕು. ಸಂಪೂರ್ಣ ಜೀವನವು ಪ್ರಾರಬ್ಧದ ಮೇಲೆ ಅವಲಂಬಿಸಿರುತ್ತದೆ; ಆದರೆ ಯೋಗ್ಯ ಕ್ರಿಯಮಾಣವನ್ನು ಉಪಯೋಗಿಸಿದರೆ ಪ್ರಾರಬ್ಧವು ಸಹನೀಯವಾಗುತ್ತದೆ. ಅದಕ್ಕಾಗಿ ಎಲ್ಲ ಪ್ರಾರಬ್ಧಗಳ ವಿಚಾರಗಳಲ್ಲಿಯೂ ಆಧ್ಯಾತ್ಮಿಕ ದೃಷ್ಟಿಕೋನದ ವಿಚಾರವನ್ನೇ ಮಾಡಬೇಕು.

೪. ನಾವು ಪೂರ್ಣವೇಳೆ ಸಾಧನೆಯನ್ನು ಮಾಡಲು ಸಂಸಾರವನ್ನು ತ್ಯಜಿಸಿರುತ್ತೇವೆ. ಇಷ್ಟೊಂದು ತ್ಯಾಗ ಮಾಡಿದ ಫಲವು ನಮಗೆ ಸಿಕ್ಕೇ ಸಿಗುತ್ತದೆ; ಆದರೆ ಅದನ್ನು ಪಡೆಯುವ ವೇಗವನ್ನು ಹೆಚ್ಚಿಸ ಬೇಕು. ಕೇವಲ ನಮ್ಮ ಕ್ಷಮತೆಯನ್ನು ಮಾತ್ರ ಅವಲಂಬಿಸಿರದೇ ಈಶ್ವರನನ್ನು ಅವಲಂಬಿಸಿದ್ದರೆ, ಉತ್ಸಾಹ, ತತ್ಪರತೆ ಬರುತ್ತದೆ.

೫. ಪ್ರಸಂಗ – ಕೃತಿಯ ಸ್ತರದ ತಪ್ಪುಗಳು ಮರುಕಳಿಸುವುದು

೫ ಅ. ದೃಷ್ಟಿಕೋನ

೧. ಮನಸ್ಸಿನ ಯಾವ ಅಯೋಗ್ಯ ವಿಚಾರದಿಂದ ತಪ್ಪು ಕೃತಿಯಾಗುತ್ತದೆ, ಎಂಬುದರತ್ತ ಗಮನ ಕೊಡಬೇಕು. ‘ಮನಸ್ಸು ಒಂದೇ ಸಲಕ್ಕೆ ಅನೇಕ ವಿಚಾರಗಳನ್ನು ಮಾಡುತ್ತಿರುತ್ತದೆ. ಅದು ಯಾವ ವಿಚಾರದಲ್ಲಿದೆ ? ಸಾಧನೆಗನುಸಾರ ಕಾರ್ಯನಿರತ ವಾಗಿದೆಯೋ ಅಥವಾ ಅನಾವಶ್ಯಕ ವಿಚಾರಗಳಲ್ಲಿದೆ ?’, ಎಂಬುದನ್ನು ಗಮನಿಸಬೇಕು. ಆ ವಿಚಾರಪ್ರಕ್ರಿಯೆ ಬರೆಯಬೇಕು.ಮನಸ್ಸಿನಲ್ಲಿನ ವಿಚಾರಗಳ ಕಡೆಗೆ ಗಮನ ಕೊಡದಿದ್ದರೆ ಅದರ ಮೇಲೆ ಸಾಧನೆಯ ಸಂಸ್ಕಾರವನ್ನು ಮಾಡಲು ಸಾಧ್ಯವಿಲ್ಲ. ಮನಸ್ಸಿನ ಕಡೆಗೆ ಗಮನ ಕೊಡದಿದ್ದರೆ ಎಷ್ಟೇ ಸೇವೆ, ಕಾರ್ಯವನ್ನು ಮಾಡಿದರೂ, ಅದು ಪರಿಪೂರ್ಣವಾಗುವುದಿಲ್ಲ.

೨. ನಾವು ಎಲ್ಲಿಯೂ ಮತ್ತು ಏನೇ ಮಾಡುತ್ತಿದ್ದರೂ, ಪ್ರಕ್ರಿಯೆಯು ಎಲ್ಲ ಕಡೆಗೆ ಒಂದೇ ರೀತಿ ನಡೆಯುತ್ತಿರಬೇಕು. ಆಶ್ರಮದಲ್ಲಿರುವಾಗ ಎಲ್ಲ ಕೃತಿಗಳನ್ನು ಅಚ್ಚುಕಟ್ಟಾಗಿ ಮತ್ತು ಸರಿಯಾಗಿ ಮಾಡುತ್ತೇವೆ. ಹೊರಗೆ ಅಥವಾ ಮನೆಯಲ್ಲಿ ಹೋದ ನಂತರ ಸ್ವಚ್ಛಂದ, ದೋಷಪೂರಿತ ಸ್ವಭಾವವು ಕಾಣಿಸಿಕೊಳ್ಳುತ್ತವೆ; ಏಕೆಂದರೆ ಆಶ್ರಮದಲ್ಲಿ ತೋರಿಕೆಗಾಗಿ ಪ್ರಯತ್ನಿಸುತ್ತೇವೆ. ಮನೆಯಲ್ಲಿ ಯಾರ ಬಂಧನವು ಇಲ್ಲದಿರುವುದರಿಂದ ಪ್ರಕ್ರಿಯೆ ನಿಲ್ಲುತ್ತದೆ. ಹೀಗೆ ಆಗ ಬಾರದೆಂದು ಮನಸ್ಸಿನ ಕಡೆಗೆ ಸತತವಾಗಿ ಗಮನ ಕೊಡಬೇಕು.

೩. ಪರಾತ್ಪರ ಗುರುದೇವರು ಮನಸ್ಸನ್ನು ಅರ್ಪಣೆ ಮಾಡುವುದಕ್ಕಾಗಿಯೇ ವ್ಯಷ್ಟಿ ಸಾಧನೆಯನ್ನು ಹೇಳಿದ್ದಾರೆ, ಆದರೂ ‘ನಮ್ಮಿಂದ ಕೃತಿಯ ಸ್ತರದಲ್ಲಿ ಏಕೆ ಪ್ರಯತ್ನಗಳಾಗುವುದಿಲ್ಲ ?’, ಎಂಬುದನ್ನು ಕಲಿಯಬೇಕಾದರೆ, ಮನಸ್ಸಿನಲ್ಲಿ ಬರುವ ವಿಚಾರಗಳ ಬಗ್ಗೆ ಚಿಂತನೆ ಮಾಡಲೇ ಬೇಕು. ಏನು ತಿಳಿಯದಿದ್ದರೆ, ಇತರರ ಸಹಾಯವನ್ನು ಪಡೆಯಬೇಕು.

೬. ಪ್ರಸಂಗ – ಮನೆಗೆ ಹೋದ ನಂತರ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಕಡೆಗೆ ದುರ್ಲಕ್ಷವಾಗುವುದು

೬ ಅ. ದೃಷ್ಟಿಕೋನ : ಆಶ್ರಮದಲ್ಲಿರುವಾಗ ನಾವು ನಮ್ಮಲ್ಲಿ ಸಾಧನೆಯ ಬಂಧನವನ್ನು ಹಾಕಿ ಪ್ರಯತ್ನಿಸುತ್ತೇವೆ. ಮನೆಗೆ ಹೋದನಂತರ ಹಾಗೆ ಮಾಡುವುದಿಲ್ಲ. ಆದ್ದರಿಂದ ಸ್ವಭಾವದೋಷಗಳ ತೀವ್ರತೆ ಹೆಚ್ಚುತ್ತದೆ ಮತ್ತು ಪುನಃ ಉಮ್ಮಳಿಸಿ ಬರುವ ಸ್ವಭಾವದೋಷಗಳ ತೀವ್ರತೆಯನ್ನು ಕಡಿಮೆ ಮಾಡಲು ತುಂಬಾ ಸಮಯ ಕೊಡ ಬೇಕಾಗುತ್ತದೆ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗಾಗಿ ಮಾಡಿದ ಪ್ರಯತ್ನಗಳ ಮೇಲೆಯೂ ಪರಿಣಾಮ ಬೀರುತ್ತದೆ. ಪ್ರಕ್ರಿಯೆ ನಿಂತಿರುವುದರಿಂದ ಹೆಚ್ಚು ಪರಿಶ್ರಮಪಡಬೇಕಾಗುತ್ತದೆ.ಅದಕ್ಕಾಗಿ ಸಾತತ್ಯವಿರಿಸÀಲು ಹೆಚ್ಚು ಮಹತ್ವವನ್ನು ಕೊಡಬೇಕು.’

(ಮುಂದುವರಿಯುವುದು)

– ಶ್ರೀಮತಿ ಅಶ್ವಿನಿ ಪ್ರಭು, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೩.೭.೨೦೧೯)