೨೦೧೯ ರಲ್ಲಿ ಶ್ರೀಮತಿ ಅಶ್ವಿನಿ ಪ್ರಭು ಇವರು ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆ ಪ್ರಕ್ರಿಯೆಗಾಗಿ ಗೋವಾದ ರಾಮನಾಥಿಯ ಸನಾತನ ಆಶ್ರಮಕ್ಕೆ ಬಂದಿದ್ದರು. ಸೌ. ಸುಪ್ರಿಯಾ ಮಾಥೂರರು ಪೂರ್ಣವೇಳೆ ಸಾಧನೆ ಮಾಡುವವರಿಗೆ ಪ್ರಕ್ರಿಯೆಯನ್ನು ಮಾಡಿಸುತ್ತಾರೆ. ಈ ಪ್ರಕ್ರಿಯೆಯ ಸಂದರ್ಭದಲ್ಲಿ ಶ್ರೀಮತಿ ಅಶ್ವಿನಿ ಪ್ರಭು ಹಾಗೂ ಇತರ ಸಾಧಕರಿಂದಾದ ತಪ್ಪುಗಳು ಹಾಗೂ ಮನಸ್ಸಿನ ಪ್ರಕ್ರಿಯೆಯ ಪ್ರಸಂಗಗಳನ್ನು ಅವರು ಹೇಳಿದಾಗ ಸೌ. ಸುಪ್ರಿಯಾ ಮಾಥೂರರು ಸಾಧಕರಿಗೆÉ ಮುಂದಿನ ದೃಷ್ಟಿಕೋನವನ್ನು ನೀಡಿದರು. ಶ್ರೀಮತಿ ಅಶ್ವಿನಿ ಪ್ರಭು ಇವರಿಗೆ ಪ್ರಕ್ರಿಯೆಯಿಂದ ಕಲಿಯಲು ಸಿಕ್ಕಿದ ಅಂಶಗಳನ್ನು ಮುಂದೆ ಕೊಡಲಾಗಿದೆ. (ಭಾಗ ೧)
೧. ಪ್ರಸಂಗ – ಪರಿಸ್ಥಿತಿಯನ್ನು ದೂಷಿಸುವುದು
೧ ಅ. ದೃಷ್ಟಿಕೋನ
೧. ‘ಪರಿಸ್ಥಿತಿ ಹೇಗೂ ಇರಲಿ, ಅದರಲ್ಲಿ ತಾಳ್ಮೆಯು ಬಹಳ ಮಹತ್ವದ್ದಾಗಿರುತ್ತದೆ.
೨. ಪರಿಸ್ಥಿತಿಯನ್ನು ವಿವರಿಸಿ ಕ್ಷಮೆ ಯಾಚಿಸುವುದು ಸಹ ಒಂದು ರೀತಿಯ ಸ್ಪಷ್ಟೀಕರಣವೇ ಆಗಿದೆ.
೩. ಸಾಧನೆಯಲ್ಲಿ ‘ನಾನು ಎಲ್ಲಿ ಹಿಂದೆ ಉಳಿದಿದ್ದೇನೆ ?’, ಎಂಬುದರ ವಿಚಾರ ಮಾಡುವ ಪ್ರಯತ್ನಗಳು ಹೆಚ್ಚಾಗಬೇಕು.
೪. ‘ಪರಿಸ್ಥಿತಿ ಬದಲಾಗಬೇಕು’, ಎಂಬ ವಿಚಾರಕ್ಕಿಂತ ‘ಆ ಪರಿಸ್ಥಿತಿಯಲ್ಲಿ ಏನು ಮಾಡಬೇಕು ?’, ಎನ್ನುವ ವಿಚಾರ ಆಗಬೇಕು, ಇದು ಸಾಧನೆಯಾಗಿದೆ.
೫. ‘ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳದೆ, ಈ ಪರಿಸ್ಥಿತಿಯು ಸಾಧನೆಗಾಗಿಯೇ ಉದ್ಭವಿಸಿದೆ’, ಎಂಬ ಚಿಂತನೆ ಹೆಚ್ಚಾಗಬೇಕು.
೨. ಪ್ರಸಂಗ – ಬುದ್ಧಿಗೆ ಅರಿವಾದರೂ ಪರಿಸ್ಥಿತಿ ಸ್ವೀಕಾರವಾಗದೇ ಪ್ರತಿಕ್ರಿಯೆ ಬರುವುದು ಹಾಗೂ ಅದಕ್ಕೆ ಸ್ಪಷ್ಟೀಕರಣ ನೀಡುವುದು
೨ ಅ. ದೃಷ್ಟಿಕೋನ
೧. ನಮಗೆ ಸ್ವಭಾವದೋಷ ನಿರ್ಮೂಲನೆಯಲ್ಲಿ ಸ್ವಯಂ ಸೂಚನೆಯು ಶೇ. ೫೦ ಹಾಗೂ ಕೃತಿಯ ಸ್ತರದ ಪ್ರಯತ್ನ ಗಳು ಶೇ. ೫೦ ರಷ್ಟು ಸಹಾಯ ಮಾಡುತ್ತದೆ.
೨. ಸಮರ್ಥನೆಯ ಜೊತೆಗೆ ಕ್ಷಮಾಯಾಚನೆ ಮಾಡುವುದರಿಂದ ಏನೂ ಉಪಯೋಗವಾಗುವುದಿಲ್ಲ. ಈಶ್ವರನಿಗೆ ಎಲ್ಲರ ಪರಿಸ್ಥಿತಿ ತಿಳಿದಿರುತ್ತದೆ. ಸಾಧಕನ ಭಕ್ತಿ, ಶ್ರದ್ಧೆ ಹಾಗೂ ತಳಮಳಕ್ಕನುಸಾರ ಈಶ್ವರ ಅವರಿಗೆ ಪರಿಸ್ಥಿತಿಯನ್ನು ಸ್ವೀಕರಿಸಲು ಮತ್ತು ಕಲಿಯಲು ಸಹಾಯ ಮಾಡುತ್ತಾನೆ.
೩. ಆದ್ದರಿಂದ ಇತರರು ಹೇಳಿದ್ದನ್ನು ಕೇಳುವುದು, ಹಾಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದು ಹಾಗೂ ಪ್ರಾಯಶ್ಚಿತ್ತ ತೆಗೆದು ಕೊಳ್ಳುವುದು ಆವಶ್ಯಕವಾಗಿದೆ.
೩. ಪ್ರಸಂಗ – ಸಹನಶೀಲತೆ ಇಲ್ಲದಿರುವುದರಿಂದ ಮನಸ್ಸಿನ ವಿರುದ್ಧ ಪ್ರಸಂಗವಾದಾಗ ಕಿರಿಕಿರಿ ಆಗುವುದು
೩ ಅ. ದೃಷ್ಟಿಕೋನ
೧. ಮನಸ್ಸಿನ ವಿರುದ್ಧ ಪ್ರಸಂಗವಾದಾಗ ಹೇಳುವವರ ಬಗ್ಗೆ ಕಿರಿಕಿರಿಯಾಗಿ ನಮಗೆ ಅದು ಸಹನೆಯಾಗುವುದಿಲ್ಲ. ಆಗ ಮನಸ್ಸಿಗೆ ಸಾಧಕತ್ವವನ್ನು ಕಲಿಸಬೇಕು. ನಮ್ಮ ಮನಸ್ಸಿನ ವಿರುದ್ಧ ವಾದÀ ತಕ್ಷಣ ನಕಾರಾತ್ಮಕ ವಿಚಾರ ಹಾಗೂ ಪ್ರತಿಕ್ರಿಯೆಗಳು ಬರಲಾರಂಭವಾಗುತ್ತದೆ. ‘ನನಗೆ ಚೆನ್ನಾಗಿ ಸಾಧನೆ ಮಾಡಲಿಕ್ಕಿದೆ’, ಎನ್ನುವ ವಿಚಾರವಿದ್ದರೂ ಪ್ರಯತ್ನ ಆಗದೇ ಮನಸ್ಸಿನ ಸಿದ್ಧತೆ ಆಗುವುದಿಲ್ಲ ಹಾಗೂ ‘ತನಗೆ ಮಿತಿಯಿದೆ’, ಎಂದು ಅನಿಸುತ್ತದೆ.
೨. ಪ್ರಯತ್ನದಲ್ಲಿ ರಿಯಾಯಿತಿ ತೆಗೆದುಕೊಳ್ಳದೆ ನಿರಂತರ ಕಲಿಯುವ ಹಾಗೂ ತಿಳಿದುಕೊಳ್ಳುವ ಸ್ಥಿತಿಯಲ್ಲಿರಬೇಕು. ಅದರಲ್ಲಿ ತನ್ನನ್ನು ಬದಲಾಯಿಸಿಕೊಳ್ಳುವ ತಳಮಳ ಹೆಚ್ಚು ಪ್ರಮಾಣದಲ್ಲಿರಬೇಕು.
೩. ಅಯೋಗ್ಯ ವಿಚಾರ ಬಂದಾಗ ಅದರಲ್ಲಿ ಯೋಗ್ಯ ಬದಲಾವಣೆ ಮಾಡಿಕೊಳ್ಳಬೇಕು. ಬದಲಾವಣೆಗಾಗಿ ಕೃತಿಯನ್ನು ಮಾಡದೆ ಕೇವಲ ವಿಚಾರದಲ್ಲಿಯೇ ಇದ್ದರೆ ಪರಿಣಾಮವಾಗುವುದಿಲ್ಲ.
೪. ಕಿರಿಕಿರಿಯಾದರೆ ಶಿಕ್ಷಾಪದ್ಧತಿಯನ್ನು ಉಪಯೋಗಿಸಬೇಕು. ಅದಕ್ಕಾಗಿ ಎಲ್ಲೆಲ್ಲಿ ಇಂತಹ ವಿಚಾರ, ಪ್ರತಿಕ್ರಿಯೆಗಳು ಬರುತ್ತವೆ ಹಾಗೂ ಕಿರಿಕಿರಿಯಾಗುತ್ತದೆ, ಎಂಬ ವಿಷಯದಲ್ಲಿ ಪ್ರತಿ ೨ ಗಂಟೆಗೆ ಒಮ್ಮೆ ಚಿಂತನೆ ಮಾಡಬೇಕು. (ಮುಂದುವರಿಯುವುದು)
– ಶ್ರೀಮತಿ ಅಶ್ವಿನಿ ಪ್ರಭು, ಮಂಗಳೂರು ಸೇವಾಕೇಂದ್ರ, ಮಂಗಳೂರು.