ಸಾಧನೆಯನ್ನು ಆರಂಭಿಸಿದ ನಂತರ ಯಾವುದಾದರೂ ಘಟನೆಯಾಗುವುದರ ಹಿಂದೆ ಹೆಚ್ಚಾಗಿ ಆಧ್ಯಾತ್ಮಿಕ ಕಾರಣಗಳೇ ಹೆಚ್ಚು ಪ್ರಮಾಣದಲ್ಲಿರುತ್ತವೆ ಎಂದು ತಿಳಿದ ನಂತರ ನಾನು ಪ್ರತಿಯೊಂದು ಬಾರಿ ಆಧ್ಯಾತ್ಮಿಕ ಮಟ್ಟದ ಕಾರಣಗಳನ್ನು ಹುಡುಕುತ್ತಿರುತ್ತೇನೆ. ಉದಾ. ಕಳೆದ ೪- ೫ ಶತಮಾನಗಳಲ್ಲಿ ಭಾರತದ ಮೇಲೆ ಪರಕೀಯರು ಏಕೆ ದಾಳಿ ಮಾಡಿದರು, ಇದಕ್ಕೆ ಅನೇಕ ಮಾನಸಿಕ ಮತ್ತು ಬೌದ್ಧಿಕ ಕಾರಣಗಳನ್ನು ಹೇಳಲಾಗುತ್ತದೆ. ನನ್ನ ದೃಷ್ಟಿಯಿಂದ ಮಹತ್ವದ ಕಾರಣ ಎಂದರೆ, `ಹಿಂದೂಗಳು ಸಾಧನೆ ಮಾಡುವುದನ್ನು ಬಿಟ್ಟಿರುವುದರಿಂದ ಅವರಲ್ಲಿನ ಸತ್ತ್ವ ಗುಣ ಕಡಿಮೆ ಆಯಿತು. ಆದ್ದರಿಂದ ರಜ-ತಮ ಹೆಚ್ಚಿರುವ ಪರಕೀಯರಿಗೆ ಸುಲಭವಾಗಿ ಹಿಂದೂಗಳ ಮೇಲೆ ದಾಳಿ ನಡೆಸಲು ಸಾಧ್ಯವಾಯಿತು’. ನನ್ನ ಇಂತಹ ಆಧ್ಯಾತ್ಮಿಕ ಹಿನ್ನೆಲೆಯಿಂದ ನನಗೆ ಯಾವುದೇ ವಿಷಯದ ಸಂದರ್ಭದಲ್ಲಿ ಮಾನಸಿಕ ಮತ್ತು ಬೌದ್ಧಿಕ ಮಟ್ಟದಲ್ಲಿ ಲೇಖನ ಬರೆಯಲು ಕಠಿಣವಾಗುತ್ತಿತ್ತು. ಆದ್ದರಿಂದ ಈಗ ಮಾನಸಿಕ ಮತ್ತು ಬೌದ್ಧಿಕ ಮಟ್ಟದಲ್ಲಿನ ಜ್ಞಾನ ಇರುವ ಅನೇಕ ಗ್ರಂಥಗಳನ್ನು ಓದಿದ ಬಳಿಗೆ ನನಗೆ ಅದು ಅಲ್ಪಸಲ್ಪ ಮಟ್ಟಿಗೆ ತಿಳಿಯುತ್ತಿದೆ.
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ (೨೮.೧.೨೦೨೪)