ಪೋರಬಂದರ್ (ಗುಜರಾತ್) ಕರಾವಳಿಯಲ್ಲಿ ೩ ಸಾವಿರದ ೩೦೦ ಕೆಜಿ ಮಾದಕ ವಸ್ತು ವಶ !

  • ೨ ಸಾವಿರ ಕೋಟಿ ರೂಪಾಯಿಗಿಂತಲೂ ಹೆಚ್ಚು ಬೆಲೆ !

  • ಇರಾನ್ ದೋಣಿಯಿಂದ ೫ ವಿದೇಶಿ ವ್ಯಾಪಾರಿಗಳ ಬಂಧನ !

ಕರ್ಣಾವತಿ (ಗುಜರಾತ್) – ಇಲ್ಲಿನ ಸಮುದ್ರ ತೀರದಲ್ಲಿ ೩ ಸಾವಿರದ ೩೦೦ ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳ ಬೆಲೆ ೨ ಸಾವಿರ ಕೋಟಿ ರೂಪಾಯಿಗಿಂತಲೂ ಹೆಚ್ಚಾಗಿದ್ದು, ಇರಾನ್ ದೋಣಿಗಳಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ೫ ವಿದೇಶಿ ವ್ಯಾಪಾರಿಗಳನ್ನೂ ಬಂಧಿಸಲಾಗಿದೆ. ಈ ವ್ಯಾಪಾರಿಗಳು ಇರಾನ್ ಅಥವಾ ಪಾಕಿಸ್ತಾನಿ ಪ್ರಜೆಗಳು ಎಂದು ಶಂಕಿಸಲಾಗಿದೆ. ಭಯೋತ್ಪಾದನಾ ನಿಗ್ರಹ ದಳ, ನೌಕಾಪಡೆ ಮತ್ತು ‘ದೆಹಲಿ ಮಾದಕ ದ್ರವ್ಯ ನಿಯಂತ್ರಣ ವಿಭಾಗ’ ಜಂಟಿ ಕಾರ್ಯಾಚರಣೆಯ ಭಾಗವಾಗಿ ಈ ಕಾರ್ಯಾಚರಣೆ ನಡೆಸಲಾಯಿತು.
ಗಿರ್ ಸೋಮನಾಥ್ ಪೊಲೀಸರು ೫ ದಿನಗಳ ಹಿಂದೆ ೩೫೦ ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಅಂದಿನಿಂದ ಸಂಬಂಧಪಟ್ಟ ಕಳ್ಳಸಾಗಣೆದಾರರನ್ನು ಹಿಡಿಯಲು ಜಂಟಿ ಕಾರ್ಯಾಚರಣೆ ನಡೆಯುತ್ತಿದೆ. ಇದು ಕಡಲ ಗಡಿಯಲ್ಲಿ ಮಾದಕ ವಸ್ತುಗಳ ವಶಪಡಿಸಿಕೊಂಡ ಅತಿದೊಡ್ಡ ಪ್ರಕರಣವಾಗಿದೆ.