Police Raid On J&K Terrorist Bases : ಜಮ್ಮು-ಕಾಶ್ಮೀರದಲ್ಲಿ 50 ಭಯೋತ್ಪಾದಕರ ನೆಲೆಗಳ ಮೇಲೆ ಪೊಲೀಸ್ ದಾಳಿ : 10 ಜನರ ಬಂಧನ !

ಶ್ರೀನಗರ – ಪೊಲೀಸರು ಉಗ್ರವಾದಿಗಳು ಮತ್ತು ಅವರ ಬೆಂಬಲಿಗರನ್ನು ಬಂಧಿಸಲು ಜಮ್ಮು-ಕಾಶ್ಮೀರದಲ್ಲಿ 50 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದರು. ಇದರಲ್ಲಿ ಕೇವಲ ಕಠುವಾ ಜಿಲ್ಲೆಯೊಂದರಲ್ಲಿಯೇ 17 ಸ್ಥಳಗಳಲ್ಲಿ ದಾಳಿ ನಡೆಸಿ ಭಯೋತ್ಪಾದಕರಿಗೆ ನೆರವು ನೀಡಿದ 10 ಜನರನ್ನು ಬಂಧಿಸಲಾಗಿದೆ. (ಕಾಶ್ಮೀರದಲ್ಲಿ ಭಯೋತ್ಪಾದಕರ ಕಾರ್ಯಾಚರಣೆ ನಡೆಯುವುದರ ಹಿಂದಿನ ಒಂದು ಪ್ರಮುಖ ಕಾರಣವೆಂದರೆ ಅಲ್ಲಿನ ಜನರು ಭಯೋತ್ಪಾದಕರಿಗೆ ನೀಡುತ್ತಿರುವ ಬೆಂಬಲ ಮತ್ತು ಅವರು ನೀಡುತ್ತಿರುವ ನೆರವು ಆಗಿದೆ. ಆದಕಾರಣ, ಭಯೋತ್ಪಾದಕರ ಬೆಂಬಲಿಗರ ಮೇಲೆ ಕ್ರಮ ಕೈಗೊಂಡರೆ ಮಾತ್ರ ಕಾಶ್ಮೀರದಲ್ಲಿ ಭಯೋತ್ಪಾದಕತೆ ಸ್ವಲ್ಪ ಮಟ್ಟಿಗೆ ನಿಲ್ಲಬಹುದು ! – ಸಂಪಾದಕರು) ಅವರಿಂದ ಇಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಮ್ಮು ವಿಭಾಗದ ಸಹಾಯಕ ಮಹಾನಿರ್ದೇಶಕ ಆನಂದ್ ಜೈನ್ ಮಾತನಾಡಿ, ಪೊಲೀಸರು ಭಯೋತ್ಪಾದಕರಿಗೆ ಬೆಂಬಲ ನೀಡುವ ಅನೇಕ ಶಂಕಿತ ವ್ಯಕ್ತಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಪೋಲೀಸರು ಮುಂದಿನ ತನಿಖೆಯನ್ನು ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಇಷ್ಟು ದೊಡ್ಡ ಪ್ರಮಾಣದಲ್ಲಿ ಭಯೋತ್ಪಾದಕರು ನೆಲೆಗಳನ್ನು ಸ್ಥಾಪಿಸುವವರೆಗೆ ಪೊಲೀಸರು ಏನು ಮಾಡುತ್ತಿದ್ದರು ?