ಫಿನ್ಲ್ಯಾಂಡ್ ನಲ್ಲಿನ ಹೇಲಸಿಂಕಿ ಕಾಲೇಜಿನ ಸಂಶೋಧನೆಯಲ್ಲಿನ ನಿಶ್ಕರ್ಷ್ !
ಹೇಲಸಿಂಕಿ (ಫಿನ್ಲ್ಯಾಂಡ್) – ತಂದೆ ತಾಯಿ, ಅಜ್ಜ ಅಜ್ಜಿ ಅಥವಾ ಅತ್ತೆ ಮಾವ ಜೊತೆಗೆ ಇದ್ದರೆ ತಾಯಿಯಾಗಿರುವ ಮಹಿಳೆಯ ಮಾನಸಿಕ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ, ಎಂದು ಫಿನ್ಲ್ಯಾಂಡಿನಲ್ಲಿನ ಹೇಲಸಿಂಕಿ ಕಾಲೇಜಿನಲ್ಲಿ ನಡೆಸಿರುವ ಒಂದು ಹೊಸ ಅಧ್ಯಯನದಿಂದ ಬೆಳಕಿಗೆ ಬಂದಿದೆ. ಈ ಅಧ್ಯಯನದ ಪ್ರಕಾರ ಆರೋಗ್ಯವಂತ ಅತ್ತೆ ಮಾವ ಅಥವಾ ತಂದೆ ತಾಯಿ ಅವರ ಜೊತೆಗೆ ಇರುವ ಮಹಿಳೆಯರಲ್ಲಿ ನಿರಾಶೆ ವಿರೋಧಿ ಔಷಧ (ಆಂಟಿ ಡಿಪ್ರೆಶನ್) ಸೇವಿಸುವ ಪ್ರಮಾಣ ಕಡಿಮೆ ಇರುತ್ತದೆ. ಫಿನ್ಲ್ಯಾಂಡಿನ ಹೇಲಸಿಂಕಿ ಕಾಲೇಜಿನಲ್ಲಿನ ಜನಸಂಖ್ಯೆ ವಿಷಯದ ಕುರಿತು ಸಂಶೋಧನೆ ಮಾಡುತ್ತಿರುವ ಡಾ. ನೀನಾ ಮೇತ್ಸಾ ಸಿಮೋಲ ಇವರು, ”ತಂದೆ ತಾಯಿ ೭೦ ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರಾಗಿದ್ದರೆ ಮತ್ತು ಅವರಿಗೆ ಆರೋಗ್ಯದ ಕುರಿತು ಗಂಭೀರ ಸಮಸ್ಯೆ ಇಲ್ಲದಿದ್ದರೆ, ಆಗ ಮಕ್ಕಳಿಗೆ ಜನ್ಮ ನೀಡುವ ಮಹಿಳೆಯರಲ್ಲಿ ನಿರಾಶೆ ವಿರೋಧಿ ಔಷಧ ಖರೀದಿಸುವ ಸಾಧ್ಯತೆ ಕಡಿಮೆ ಇರುತ್ತದೆ.” ಎಂದು ಹೇಳಿದರು.
ಮಾತೆಯ ಮಾನಸಿಕ ಆರೋಗ್ಯಕ್ಕಾಗಿ ಕೌಟುಂಬಿಕ ಸುಸಂವಾದ ಮಹತ್ವದ್ದಾಗಿರುತ್ತದೆ !
೨೦೦೦ ರಿಂದ ೨೦೧೪ ಈ ಕಾಲಾವಧಿಯಲ್ಲಿ ಸಂಶೋಧಕರು ಫಿನ್ಲ್ಯಾಂಡ್ ನಲ್ಲಿ ಮಕ್ಕಳಿರುವ ೪ ಲಕ್ಷದ ೮೮ ಸಾವಿರ ಮಾತೆಯರನ್ನು ಗಮನಿಸುತ್ತಿದ್ದರು. ಸಂಶೋಧಕರ ತಂಡವು, ಮಾತೆಯರ ಜೊತೆಗೆ ಸಹಾಯಕ್ಕೆ ಇದ್ದಾರೆ ಅಥವಾ ಇಲ್ಲ, ಅವರ ಜೊತೆಗೆ ಅಜ್ಜ ಅಜ್ಜಿ, ತಂದೆ ಮತ್ತು ತಾಯಿ ಈ ಇಬ್ಬರ ವಯಸ್ಸು, ಅವರ ಆರೋಗ್ಯದ ನಿರೀಕ್ಷಣೆ ಮಾಡಿದ್ದರು. ಡಾ. ಮೆತ್ಸಾ ಸಿಮೊಲ ಇವರು, ಮಕ್ಕಳಿರುವ ಕುಟುಂಬದಲ್ಲಿ ಅಜ್ಜ ಅಜ್ಜಿಯ ಸಹಕಾರ ಮಹತ್ವದ್ದಾಗಿದೆ ಮತ್ತು ಜನರನ್ನು ನಿರಾಶೆಯಿಂದ ರಕ್ಷಿಸಲು ಇನ್ನೊಬ್ಬರ ಸಹಾಯ ಅವಶ್ಯಕವಾಗಿದೆ. ಕುಟುಂಬದಲ್ಲಿರುವ ಅಜ್ಜ ಅಜ್ಜಿಯ ಆಧಾರ ಮಾತೆಯರನ್ನು ನಿರಾಶೆಯಿಂದ ರಕ್ಷಿಸಬಹುದು.