‘೨೨.೧.೨೦೨೪ ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಶುಭಹಸ್ತ ಗಳಿಂದ ಅಯೋಧ್ಯೆಯಲ್ಲಿನ ಭವ್ಯ ಮತ್ತು ನೂತನ ಶ್ರೀರಾಮ ಮಂದಿರದಲ್ಲಿ ಶ್ರೀರಾಮರ ಬಾಲಕರೂಪದ (೫ ವರ್ಷದ ಬಾಲಕನ ರೂಪದ) ಮೂರ್ತಿಯ ಪ್ರಾಣಪ್ರತಿಷ್ಠೆಯನ್ನು ಮಾಡಲಾಯಿತು. ಕಳೆದ ೫೦೦ ವರ್ಷಗಳಿಂದ ಸಂಪೂರ್ಣ ವಿಶ್ವದ ಹಿಂದೂಗಳು ಈ ಕ್ಷಣವನ್ನು ಆತುರದಿಂದ ನಿರೀಕ್ಷಿಸುತ್ತಿದ್ದರು. ಅನೇಕ ಹಿಂದೂದ್ವೇಷಿಗಳಿಂದ, ‘ಕೇವಲ ಮಂದಿರ ನಿರ್ಮಾಣದಿಂದ ಏನಾಗುವುದು ?’, ಎನ್ನುವ ಹೇಳಿಕೆಯನ್ನು ನೀಡಿ ಹಿಂದೂಗಳನ್ನು ಮಾನಸಿಕವಾಗಿ ದುರ್ಬಲಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಈ ದೃಷ್ಟಿಯಿಂದ ಶ್ರೀರಾಮನ ಬಗ್ಗೆ ಭಾವವಿರುವ ಶ್ರದ್ಧಾಳುಗಳು (ಸಾಧಕರು) ಮತ್ತು ಭಕ್ತರಿಗೆ ಅಯೋಧ್ಯೆಯಲ್ಲಿನ ಶ್ರೀರಾಮಮಂದಿರ ಪುನರ್ಸ್ಥಾಪನೆಯ ಆಧ್ಯಾತ್ಮಿಕ ಮಹತ್ವ ತಿಳಿಯಬೇಕೆಂದು ಈ ಲೇಖನವಿದೆ !
೧. ಅಯೋಧ್ಯೆಯಲ್ಲಿನ ಶ್ರೀರಾಮಮಂದಿರ ಸ್ಥಾಪನೆಯು ಸಮಷ್ಟಿ ಪ್ರಾರಬ್ಧ ಕಡಿಮೆಯಾಗಿ ಸಮಷ್ಟಿ ಕ್ರಿಯಮಾಣದಲ್ಲಿ ಹೆಚ್ಚಳವಾಗುವ, ಅಂದರೆ ಶೀಘ್ರಗತಿಯಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗುವುದರ ಸಂಕೇತವಾಗಿದೆ
ಯಾವಾಗ ನಕಾರಾತ್ಮಕ ಸಮಷ್ಟಿ ಪ್ರಾರಬ್ಧ ಹೆಚ್ಚಳ ಆಗುತ್ತದೆಯೋ, ಆಗ ಚೈತನ್ಯದ ಸ್ರೋತಗಳಾಗಿರುವ ದೇವಸ್ಥಾನಗಳು ನಷ್ಟವಾಗುತ್ತವೆ, ಯಾವಾಗ ಸಕಾರಾತ್ಮಕ ಸಮಷ್ಟಿ ಕ್ರಿಯಮಾಣ ಹೆಚ್ಚಾಗುತ್ತದೆಯೋ, ಆಗ ಶಕ್ತಿ ಮತ್ತು ತೇಜಯುಕ್ತ ದೇವಸ್ಥಾನಗಳ ನಿರ್ಮಾಣ ಅಥವಾ ದೇವತೆಗಳ ಪ್ರಕಟೀಕರಣ ವಾಗುವ ಪ್ರಕ್ರಿಯೆ ನಡೆಯುತ್ತದೆ’, ಇದು ಸೂಕ್ಷ್ಮದ ಶಾಸ್ತ್ರವಾಗಿದೆ. ಕಳೆದ ಅನೇಕ ವರ್ಷಗಳಿಂದ (೧೯೯೯ ರಿಂದ) (೨೪ ವರ್ಷ ಗಳಿಗಿಂತಲೂ ಹೆಚ್ಚು ಅವಧಿಯಿಂದ) ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಾರ್ಗದರ್ಶನಕ್ಕನುಸಾರ ಸಾಧನೆ ಮಾಡುತ್ತಿರುವ ಸಾಧಕರ ಸಮಷ್ಟಿ ಸಾಧನೆಯಿಂದ ಮತ್ತು ವಿವಿಧ ಸಂತರ ಮಾರ್ಗದರ್ಶನಕ್ಕನುಸಾರ ವಿಶ್ವದಾದ್ಯಂತದ ಸಾಧಕರು ಮಾಡುತ್ತಿರುವ ವ್ಯಷ್ಟಿ ಸಾಧನೆಯಿಂದ ಸಮಷ್ಟಿ ಪ್ರಾರಬ್ಧದ ಮೇಲೆ ಪರಿಣಾಮವಾಗುತ್ತಿದೆ ಮತ್ತು ರಜ-ತಮದ ಪ್ರಮಾಣದ ಶೇಕಡಾವಾರು ಪ್ರಮಾಣವು ಸ್ವಲ್ಪ ಕಡಿಮೆಯಾಗುತ್ತಿದೆ. ಸಮಷ್ಟಿ ಕ್ರಿಯಮಾಣದಿಂದ ಸಾತ್ತ್ವಿಕತೆ ಹೆಚ್ಚಾಗುವುದರಿಂದ ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ಸ್ಥಾಪನೆ ಸಾಧ್ಯವಾಗುತ್ತಿದೆ. ಸಾಧಕರು ಈ ರೀತಿ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯನ್ನು ಮುಂದುವರಿಸಿದರೆ ಸಮಷ್ಟಿ ಕ್ರಿಯಮಾಣ ಹೆಚ್ಚಾಗುವುದು. ಇದರಿಂದ ಸಮಷ್ಟಿ ಪ್ರಾರಬ್ಧ ಕಡಿಮೆಯಾಗಿ ಶೀಘ್ರದಲ್ಲಿಯೇ ಹಿಂದೂ ರಾಷ್ಟ್ರದ ಸುಪ್ರಭಾತವಾಗುವುದು. ಸಂಕ್ಷಿಪ್ತವಾಗಿ ಹೇಳುವುದಾದರೆ, ಅಯೋಧ್ಯೆಯಲ್ಲಿನ ಶ್ರೀರಾಮಮಂದಿರದ ಪುನರ್ಸ್ಥಾಪನೆಯು ಸಮಷ್ಟಿ ಪ್ರಾರಬ್ಧ ಕಡಿಮೆಯಾಗಿ ಸಮಷ್ಟಿ ಕ್ರಿಯಮಾಣ ಹೆಚ್ಚಾಗುವ, ಅಂದರೆ ಶೀಘ್ರದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗುವುದರ ಸಂಕೇತವಾಗಿದೆ !
೨. ದೇವಸ್ಥಾನಗಳಿಂದಾಗಿ ಸಮಷ್ಟಿಯಿಂದ ಧರ್ಮಾಚರಣೆಯಾಗುವುದು ಮತ್ತು ಅದರಿಂದ ಸಮಷ್ಟಿ ಪ್ರಾರಬ್ಧ ಕಡಿಮೆಯಾಗುವುದು
೨ ಅ. ಸಮಷ್ಟಿ ಪ್ರಾರಬ್ಧವೆಂದರೇನು ? : ಯಾವುದಾದರೊಂದು ದೇಶದಲ್ಲಿ ಏನೂ ಬೆಳೆಯದಿದ್ದರೆ ಅಥವಾ ಯಾವುದೇ ಖನಿಜಗಳಿಲ್ಲದಿದ್ದರೆ, ಆ ದೇಶದಲ್ಲಿನ ಜನರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಮತ್ತು ದೇಶದ ವಿವಿಧ ವ್ಯವಹಾರಗಳನ್ನು ನಡೆಸಲು ಆ ದೇಶ ಇತರ ದೇಶಗಳಿಂದ ಸಾಲ ಪಡೆಯ ಬೇಕಾಗುತ್ತದೆ. ಈ ಪ್ರಕ್ರಿಯೆಯಿಂದ ದೇಶದಲ್ಲಿನ ಪ್ರತಿಯೊಬ್ಬ ನಾಗರಿಕ, ಅಂದರೆ ಜನ್ಮತಾಳಿದ ಮಗುವಿನಿಂದ ಹಿಡಿದು ವೃದ್ಧರ ವರೆಗೆ ಎಲ್ಲರ ತಲೆಯ ಮೇಲೆ ದೇಶದ ಸಾಲದ ಹೊರೆ ಇರುತ್ತದೆ. ನಂತರ ಇತರ ದೇಶಗಳು ಸಾಲವನ್ನು ತೀರಿಸಲು ಹೇಳಿದಾಗ ಆ ದೇಶದಲ್ಲಿನ ಜನರಿಗೆ ಸಾಲ ತೀರಿಸಲು ವಿವಿಧ ತೊಂದರೆಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ನಿಸರ್ಗ, ಪಂಚತತ್ತ್ವಗಳು ಮತ್ತು ರಾಷ್ಟ್ರದಲ್ಲಿ ಆಧ್ಯಾತ್ಮಿಕ ಸ್ತರದಲ್ಲಿ ಘಟಿಸುವ ಈ ಪ್ರಕ್ರಿಯೆ ಎಂದರೆ ಸಮಷ್ಟಿ ಪ್ರಾರಬ್ಧ !
೨ ಆ. ಸಮಷ್ಟಿ ಕ್ರಿಯಮಾಣ ಎಂದರೇನು ? : ಮೇಲಿನ ಉದಾಹರಣೆ ಯಿಂದ ಇತರ ದೇಶಗಳ ಸಾಲದಿಂದ ಜೀವಿಸುವ ದೇಶಗಳ ಜನರು ಕ್ಲಪ್ತ ಸಮಯದಲ್ಲಿ ಜಾಗೃತರಾಗಿ ಸಾಲ ತೀರಿಸಲು ಸಾಮೂಹಿಕವಾಗಿ ಯೋಗ್ಯ ಪರಿಹಾರೋಪಾಯಗಳನ್ನು ಮಾಡಿದರೆ ಆ ದೇಶಕ್ಕೆ ತನ್ನ ಸ್ವತಂತ್ರ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಸಮಷ್ಟಿಯು ಸಾಧನೆ ಮತ್ತು ಧರ್ಮಾಚರಣೆ ಮಾಡಿ ನಿಸರ್ಗ ಮತ್ತು ಪಂಚತತ್ತ್ವಗಳ ಸಾತ್ತ್ವಿಕತೆಯನ್ನು ಹೆಚ್ಚಿಸುವುದೆಂದರೆ ಸಮಷ್ಟಿ ಕ್ರಿಯಮಾಣ !
೨ ಇ. ಸಮಷ್ಟಿ ಕ್ರಿಯಮಾಣವನ್ನು ಹೆಚ್ಚಿಸುವುದರಲ್ಲಿ ದೇವಸ್ಥಾನಗಳ
ಮಹತ್ವ : ಯಾವಾಗ ಬಹುಸಂಖ್ಯಾತ ಜನರು ಧರ್ಮಾಚರಣೆ ಮತ್ತು ಸಾಧನೆಯಿಂದ ದೂರವಾಗುತ್ತಾರೆಯೋ, ಆಗ ಸಮಷ್ಟಿ ಪ್ರಾರಬ್ಧದ ವೇಗ ಹೆಚ್ಚಾಗುತ್ತದೆ. ಸಮಷ್ಟಿ ಪ್ರಾರಬ್ಧ ಹೆಚ್ಚಾಗುವುದರಿಂದ ವಿವಿಧ ರೀತಿಯ ಮಹಾಮಾರಿ, ಯುದ್ಧ, ನೈಸರ್ಗಿಕ ಸಂಕಟಗಳನ್ನು ರಾಷ್ಟ್ರವು ಎದುರಿಸಬೇಕಾಗುತ್ತದೆ. ಸಮಷ್ಟಿ ಪ್ರಾರಬ್ಧ ಶೇ. ೭೦ ಕ್ಕಿಂತ ಹೆಚ್ಚಾದರೆ ರಾಷ್ಟ್ರಯುದ್ಧ, ಮಹಾಮಾರಿಯಂತಹ ಭೀಕರ ಸಂಕಟಗಳನ್ನು ಎದುರಿಸಬೇಕಾಗುತ್ತದೆ. ತದ್ವಿರುದ್ಧ ಸಮಷ್ಟಿ ಕಠಿಣ ಸಾಧನೆ ಮತ್ತು ಧರ್ಮಾಚರಣೆ ಮಾಡಿ ಸಾತ್ತ್ವಿಕತೆಯನ್ನು ವೃದ್ಧಿಗೊಳಿಸಿದರೆ, ಇಂತಹ ಸಂಕಟಗಳ ಪ್ರಭಾವ ಕಡಿಮೆಯಾಗುತ್ತದೆ. ದೇವಸ್ಥಾನಗಳಲ್ಲಿ ಧರ್ಮಕ್ಕನುಸಾರ ಯೋಗ್ಯ ವ್ಯವಸ್ಥಾಪನೆ ಮಾಡಿದರೆ ಸ್ವಲ್ಪ ಪ್ರಮಾಣದಲ್ಲಿಯಾದರೂ ಸಮಷ್ಟಿಯಿಂದ ಧರ್ಮಾಚರಣೆ ಆಗುತ್ತದೆ. ಈ ಧರ್ಮಾಚರಣೆಯಿಂದಾಗಿ ಸಮಷ್ಟಿಯ ಸಾತ್ತ್ವಿಕತೆ ಹೆಚ್ಚಾಗುತ್ತದೆ. ದೇವಸ್ಥಾನಗಳ ಮೂಲಕ ಸಮಷ್ಟಿಯಿಂದ ಧರ್ಮಾಚರಣೆಯಾಗಬೇಕೆಂದು ದೇವಸ್ಥಾನ ಗಳನ್ನು ಸರಕಾರೀಕರಣದಿಂದ ಮುಕ್ತಗೊಳಿಸಿ ಅವುಗಳ ವ್ಯವಸ್ಥಾಪನೆಯನ್ನು ಭಕ್ತರಿಗೆ ಒಪ್ಪಿಸುವುದು ಆವಶ್ಯಕವಾಗಿದೆ.
೨ ಈ. ಶ್ರೀರಾಮಮಂದಿರದಿಂದಾಗಿ ಸಮಷ್ಟಿಯಿಂದ (ಜನರಿಂದ) ದೊಡ್ಡ ಪ್ರಮಾಣದಲ್ಲಿ ಧರ್ಮಾಚರಣೆಯಾಗುವುದರಿಂದ ಸಮಷ್ಟಿಯ ಸಾತ್ತ್ವಿಕತೆ ಹೆಚ್ಚಾಗುವುದು : ಶ್ರೀರಾಮಮಂದಿರದ ಪುನರ್ಸ್ಥಾಪನೆಯು ವಿಶ್ವದಾದ್ಯಂತದ ೧೩೦ ಕೋಟಿಗಿಂತಲೂ ಹೆಚ್ಚು ಹಿಂದೂಗಳ ಶ್ರದ್ಧೆಗೆ ಸಂಬಂಧಿಸಿದ ವಿಷಯವಾಗಿದೆ. ಈ ಸಮಾರಂಭದಲ್ಲಿ ಬಹುಸಂಖ್ಯಾತ ಹಿಂದೂಗಳಿಗೆ ಸ್ಥೂಲದಿಂದ ಭಾಗವಹಿಸಲು ಸಾಧ್ಯವಾಗದಿದ್ದರೂ, ಎಲ್ಲ ಕಡೆಯ ಹಿಂದೂಗಳು ತಮ್ಮ ತಮ್ಮ ಸ್ಥಳಗಳಲ್ಲಿಯೇ ಧರ್ಮಾಚರಣೆಗೆ ಸಂಬಂಧಿಸಿದ ವಿವಿಧ ರೀತಿಯ ಕೃತಿಗಳನ್ನು ಮಾಡಿದ್ದಾರೆ, ಉದಾ. ಶ್ರೀರಾಮಜ್ಯೋತಿಯನ್ನು ಪ್ರಜ್ವಲಿಸುವುದು, ಶ್ರೀರಾಮನ ನಾಮಜಪವನ್ನು ಮಾಡುವುದು, ಶ್ರೀರಾಮತತ್ತ್ವವನ್ನು ಆಕರ್ಷಿಸುವ ರಂಗೋಲಿ ಹಾಕುವುದು, ಶ್ರೀರಾಮನ ಸಾತ್ತ್ವಿಕ ಆರತಿ-ಭಜನೆ ಮಾಡುವುದು ಇತ್ಯಾದಿ. ಇದರಿಂದ ಒಟ್ಟಾರೆ ಸಮಷ್ಟಿಯ ಸಾತ್ತ್ವಿಕತೆ ಹೆಚ್ಚಾಗಿದೆ. ಆದರೆ ನಿಜವಾದ ಕರ್ಮಹಿಂದೂಗಳು ಇಂತಹ ಕೃತಿಯನ್ನು ಕೇವಲ ಒಂದು ದಿನಕ್ಕೆ ಸೀಮಿತವಾಗಿಡದೆ ಶ್ರೀರಾಮನ ಬಗ್ಗೆ ಕೃತಜ್ಞತೆಯೆಂದು ಆದರ್ಶ ರಾಮರಾಜ್ಯ ಸ್ಥಾಪನೆಯಾಗಬೇಕೆಂದು ಪ್ರತಿದಿನ ಸ್ವಯಂ ಸಾಧನೆ ಮತ್ತು ಧರ್ಮಾಚರಣೆಯನ್ನು ಮಾಡುವುದು ಮತ್ತು ಇತರರಿಗೆ ಕಲಿಸುವುದು ಮತ್ತು ಇದರ ಜೊತೆಗೆ ದೇವಸ್ಥಾನ ಸರಕಾರೀಕರಣ, ಮತಾಂತರ, ‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇಂತಹ ಪಿಡುಗುಗಳ ವಿರುದ್ಧ ಸಂಘರ್ಷ ಮಾಡುವ ಸಂಕಲ್ಪ ಮಾಡಬೇಕು. ಈ ಸಂಕಲ್ಪಕ್ಕಾಗಿ ಅವರಿಗೆ ಶ್ರೀರಾಮನ ಆಶೀರ್ವಾದ ಪ್ರಾಪ್ತವಾಗುವುದು.
೩. ಶ್ರೀರಾಮನ ಬಗ್ಗೆ ಇರುವ ಸಮಷ್ಟಿ ಭಾವದಿಂದ ಪ್ರಾಣಪ್ರತಿಷ್ಠೆಯಂದು ಶೇ. ೫೦ ರಿಂದ ೧೦೦ ರಷ್ಟು ಶ್ರೀರಾಮತತ್ತ್ವ ಕಾರ್ಯನಿರತವಾಗುವುದು
ಇತರ ದಿನಗಳಲ್ಲಿ ಶ್ರೀರಾಮನ ತತ್ತ್ವ ಶೇ. ೫ ರಷ್ಟು ಪ್ರಮಾಣದಲ್ಲಿ ಮಾತ್ರ ಕಾರ್ಯನಿರತವಾಗಿರುತ್ತದೆ. ಆದರೆ ಶ್ರೀರಾಮಮಂದಿರದಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠೆಯಂದು ಶೇ. ೫೦ ರಿಂದ ೧೦೦ ರಷ್ಟು ಶ್ರೀರಾಮತತ್ತ್ವ ಕಾರ್ಯನಿರತವಾಗಲಿಕ್ಕಿದೆ. ಇದಕ್ಕೆ ‘ಸಮಷ್ಟಿ ಭಾವ’ವೇ ಕಾರಣವಾಗಿದೆ. ‘ಭಾವವಿದ್ದಲ್ಲಿ ದೇವರು’, ಇದು ಅಧ್ಯಾತ್ಮದ ಒಂದು ಸಿದ್ಧಾಂತವಾಗಿದೆ. ಶ್ರದ್ಧಾಳುಗಳು ತಮ್ಮ ಆಧ್ಯಾತ್ಮಿಕ ಮಟ್ಟಕ್ಕನುಸಾರ ಭಾವನಾತ್ಮಕ ಭಾವ, ಭಾವ, ಭಕ್ತಿ ಮತ್ತು ಶ್ರದ್ಧೆ ಇವುಗಳಲ್ಲಿನ ಒಂದು ಹಂತದಲ್ಲಿರುತ್ತಾರೆ. ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಶ್ರೀರಾಮನ ಮೂರ್ತಿಯ ಪ್ರಾಣಪ್ರತಿಷ್ಠೆ ಆಗುವಾಗುತ್ತಿರುವಾಗ ಇಡೀ ವಿಶ್ವದಲ್ಲಿ ಹಿಂದೂ ಶ್ರದ್ಧಾಳುಗಳಲ್ಲಿ ಅವರ ಆಧ್ಯಾತ್ಮಿಕ ಮಟ್ಟಕ್ಕನುಸಾರ ಭಾವನಾತ್ಮಕ ಭಾವ, ಭಾವ, ಭಕ್ತಿ ಮತ್ತು ಶ್ರದ್ಧೆ ಇತರ ದಿನಗಳ ತುಲನೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಜಾಗೃತವಾಗಿರುವುದು. ಎಲ್ಲೆಡೆ ಸಮಷ್ಟಿ ಭಾವಜಾಗೃತವಾಗಿರುವುದರಿಂದ ಈ ಸಮಾರಂಭದಿಂದ ಅತ್ಯಂತ ಭಾವಪೂರ್ಣ ಲಾಭಪಡೆಯಲು ಸಾತ್ತ್ವಿಕ ಮತ್ತು ಆಧ್ಯಾತ್ಮಿಕ ಪ್ರಯತ್ನಿಸುವ ಸಮಷ್ಟಿಗೆ ಶೇ. ೧೦೦ ರಷ್ಟು ಲಾಭವಾಗಲಿಕ್ಕಿದೆ. ಸಂಕ್ಷಿಪ್ತದಲ್ಲಿ ಹೇಳುವುದಾದರೆ ಉಳಿದ ದಿನಗಳ ತುಲನೆಯಲ್ಲಿ ಈ ದಿನ ಸಮಷ್ಟಿಗೆ ೧೦ ರಿಂದ ೨೦ ಪಟ್ಟು ಹೆಚ್ಚು ಪ್ರಮಾಣದಲ್ಲಿ ಶ್ರೀರಾಮತತ್ತ್ವದ ಲಾಭವಾಗಲಿಕ್ಕಿದೆ.
೫. ಹಿಂದೂ ರಾಷ್ಟ್ರದ (ರಾಮ ರಾಜ್ಯದ) ಸ್ಥಾಪನೆಯ ದೃಷ್ಟಿಯಲ್ಲಿ ವಿವಿಧ ದೇವಸ್ಥಾನಗಳ ಸ್ಥಾಪನೆ ಮತ್ತು ಅವುಗಳಿಂದಾಗುವ ಆಧ್ಯಾತ್ಮಿಕ ಲಾಭ
ಶ್ರೀರಾಮ ಮಂದಿರ ಸ್ಥಾಪನೆಯಾಗುವಾಗ ಹಿಂದೂ ಸಮಾಜದಲ್ಲಿ ‘ಅಯೋಧ್ಯಾ ತೋ ಝಾಂಕೀ ಹೈ, ಕಾಶಿ, ಮಥುರಾ, ಭೋಜಶಾಲಾ ಅಭೀ ಬಾಕಿ ಹೈ |
(ಅರ್ಥ : ಅಯೋಧ್ಯೆಯಲ್ಲಿ ರಾಮಜನ್ಮ ಭೂಮಿಯಾಗುವುದು, ಒಂದು ಸಣ್ಣ ಪ್ರಾರಂಭವಾಗಿದೆ. ಇನ್ನು ಕಾಶಿ, ಮಥುರಾ ಮತ್ತು ಭೋಜಶಾಲೆಯಲ್ಲಿಯೂ ದೇವಸ್ಥಾನಗಳನ್ನು ನಿರ್ಮಿಸುವುದು ಬಾಕಿಯಿದೆ.)’ ಎಂಬ ಘೋಷಣೆ ಮೊಳಗತೊಡಗಿದೆ. ಆಧ್ಯಾತ್ಮಿಕ ದೃಷ್ಟಿಯಲ್ಲಿ ಈ ದೇವಸ್ಥಾನಗಳ ಸ್ಥಾಪನೆ ಯಾವುದರ ಸಂಕೇತವಾಗಿದೆ ? ಮತ್ತು ಸಾಧಾರಣ ಈ ಪ್ರಕ್ರಿಯೆ ಯಾವಾಗ ಘಟಿಸುವುದು ? ಎಂಬುದನ್ನು ಸಂಕ್ಷಿಪ್ತದಲ್ಲಿ ಮುಂದೆ ಕೊಡಲಾಗಿದೆ. ಇದರ ತಖ್ತೆ ೯ ನೇ ಪುಟದಲ್ಲಿದೆ.
೪. ಶ್ರೀರಾಮಮಂದಿರದಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠೆಯಾಗುವ ಸಮಯದ ಆಧ್ಯಾತ್ಮಿಕ ಮಹತ್ವ
ಸೂರ್ಯಕುಲದಲ್ಲಿ ಭಗವಾನ ಶ್ರೀರಾಮನ ಜನ್ಮವಾಗಿತ್ತು. ಶ್ರೀರಾಮನು ತಮ್ಮ ಸಂಪೂರ್ಣ ಜೀವನಕಾಲದಲ್ಲಿ (ಅವತಾರ ಕಾಲದಲ್ಲಿ) ಶೇ. ೭೦ ರಷ್ಟು ತಾರಕ ಕಾರ್ಯ (ಭಕ್ತರ ಆಧ್ಯಾತ್ಮಿಕ ಉನ್ನತಿ, ರಾಮರಾಜ್ಯ ಸ್ಥಾಪನೆ ಇತ್ಯಾದಿ) ಮತ್ತು ಶೇ. ೩೦ ರಷ್ಟು ಮಾರಕ ಕಾರ್ಯ (ವಿವಿಧ ಅಸುರರು ಮತ್ತು ರಾವಣ ಮುಂತಾದವರ ವಧೆ) ಮಾಡಿದ್ದಾರೆ. ಇದರಿಂದ ಶ್ರೀರಾಮತತ್ತ್ವದ ಕಾರ್ಯ ಸೂರ್ಯನಾಡಿಗೆ ಮತ್ತು ತಾರಕ ಶಕ್ತಿ ಪ್ರಧಾನವಾಗಿರುವುದು ಸ್ಪಷ್ಟವಾಗುತ್ತದೆ.
ಮಕರಸಂಕ್ರಾಂತಿಯಂದು ಅಂದರೆ ಸೂರ್ಯನು ಉತ್ತರಾಯಣದಲ್ಲಿ ಪ್ರವೇಶ ಮಾಡುವ ಕಾಲದಲ್ಲಿ ಬ್ರಹ್ಮಾಂಡದ ಸೂರ್ಯನಾಡಿ ಜಾಗೃತವಾಗಿರುತ್ತದೆ, ಇದು ಈ ಕಾಲದ ಆಧ್ಯಾತ್ಮಿಕ ಮಹತ್ವವಾಗಿದೆ. ಸೂರ್ಯನಾಡಿ ಸಾತ್ತ್ವಿಕತೆ, ತಾರಕ ಶಕ್ತಿ ಮತ್ತು ಆಧ್ಯಾತ್ಮಿಕ ಉನ್ನತಿಗೆ ಸಂಬಂಧಿಸಿರುತ್ತದೆ. ಮಕರಸಂಕ್ರಾಂತಿಯ ಮುಂದಿನ ವಾರದಲ್ಲಿ ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಶ್ರೀರಾಮನ ಮೂರ್ತಿಯ ಪ್ರತಿಷ್ಠಾಪನೆಯಾಗಿದೆ. ಸಂಕ್ಷಿಪ್ತದಲ್ಲಿ ಹೇಳುವುದಾದರೆ ಯಾವಾಗ (ಅಂದರೆ ಮಕರಸಂಕ್ರಾಂತಿಯ ನಂತರದ ಕಾಲದಲ್ಲಿ) ಸೂರ್ಯನ ಶಕ್ತಿ ಪ್ರಬಲ ಮತ್ತು ತಾರಕ ಸ್ವರೂಪದಲ್ಲಿರುತ್ತದೆಯೋ, ಆ ಕಾಲದಲ್ಲಿ ಶ್ರೀರಾಮಮಂದಿರದಲ್ಲಿ ಶ್ರೀರಾಮನ ಮೂರ್ತಿ ಸ್ಥಾಪನೆಯಾಗಿದೆ. ಇದೇ ರೀತಿ ‘ಶ್ರೀರಾಮತತ್ತ್ವ ಸೂರ್ಯನಿಗೆ ಮತ್ತು ತಾರಕ ಶಕ್ತಿಗೆ ಸಂಬಂಧಿಸಿರುವುದರಿಂದ ಶ್ರೀರಾಮಮಂದಿರದಲ್ಲಿ ಶ್ರೀರಾಮಮೂರ್ತಿ ಸ್ಥಾಪನೆಯಾಗುವ ಸಮಯದಲ್ಲಿ ಏನೂ ಅಡಚಣೆ ಬರದೆ ನಿರ್ವಿಘ್ನವಾಗಿ ಈ ಸಮಾರಂಭ ನೆರವೇರಿದೆ’, ಎಂಬುದು ಗಮನಕ್ಕೆ ಬರುತ್ತದೆ.
೫. ಶ್ರೀರಾಮಮಂದಿರ ಸ್ಥಾಪನೆಯ ಆಧ್ಯಾತ್ಮಿಕ ಪರಿಣಾಮ
‘ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅದಕ್ಕೆ ಸಂಬಂಧಿಸಿದ ಶಕ್ತಿ ಒಟ್ಟಿಗೆ ಇರುತ್ತವೆ’, ಇದು ಅಧ್ಯಾತ್ಮದ ಸಿದ್ಧಾಂತವಾಗಿದೆ. ಆದ್ದರಿಂದ ಶ್ರೀರಾಮ ಮಂದಿರ ಸ್ಥಾಪನೆಯಿಂದ ಶ್ರೀರಾಮ ತತ್ತ್ವವು ಸಂಪೂರ್ಣ ಸಮಷ್ಟಿಯಲ್ಲಿ ಪ್ರಕ್ಷೇಪಣೆಯಾಗಲಿಕ್ಕಿದೆ. ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಿನ ದುಷ್ಟಪ್ರವೃತ್ತಿ ಯನ್ನು ನಾಶಗೊಳಿಸಿ ಸತ್ಪ್ರವೃತ್ತಿಯ ವಿಕಾಸ ಮಾಡುವುದು’, ಇದು
ಶ್ರೀರಾಮತತ್ತ್ವದ ಅನೇಕ ಕಾರ್ಯಗಳಲ್ಲಿನ ಒಂದು ಕಾರ್ಯವಾಗಿದೆ.
ಶ್ರೀರಾಮನು ತಮ್ಮ ಅವತಾರಕಾಲದಲ್ಲಿ ವಿವಿಧ ದುಷ್ಟಪ್ರವೃತ್ತಿ ಗಳನ್ನು ನಾಶ ಮಾಡಿ ಸತ್ಪ್ರವೃತ್ತಿಯನ್ನು ವಿಕಾಸಗೊಳಿಸುವ ಬೋಧನೆಯನ್ನು ತಮ್ಮ ಆಚರಣೆಗಳಿಂದ ನೀಡಿದ್ದಾರೆ. ಶ್ರೀರಾಮನು ಮಾಡಿದ ಸತ್ಪ್ರವೃತ್ತಿಯುಕ್ತ ಆಚರಣೆಯನ್ನೇ ಹಿಂದೂ ಧರ್ಮ ‘ಆದರ್ಶ’ವೆಂದು ಸ್ವೀಕರಿಸಿದೆ, ಉದಾ. ಏಕಪತ್ನಿವ್ರತ, ರಾಷ್ಟ್ರ ಸ್ಥಾಪನೆಗಾಗಿ ತ್ಯಾಗ ಇತ್ಯಾದಿ. (ಈ ವಿಷಯದ ಆಳವಾದ ವಿವೇಚನೆಯನ್ನು ‘ಶ್ರೀರಾಮ : ಹಿಂದೂ ಸಂಸ್ಕೃತಿಯ ಸಾಂಸ್ಕೃತಿಕ ಪುರುಷ’ ಎಂಬ ಇನ್ನೊಂದು ಲೇಖನದಲ್ಲಿ ಮಾಡಲಾಗಿದೆ.)
೬. ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಬಾಲಕರೂಪದ ಶ್ರೀರಾಮನ ಮೂರ್ತಿ ಸ್ಥಾಪನೆಯಾಗುವುದರ ಹಿಂದಿನ ಅಧ್ಯಾತ್ಮಶಾಸ್ತ್ರ
ಶ್ರೀರಾಮನ ಜನ್ಮ ಅಯೋಧ್ಯೆಯಲ್ಲಿ ಆಗಿತ್ತು. ಆದ್ದರಿಂದ ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಬಾಲಕರೂಪದ ಶ್ರೀರಾಮನ ಮೂರ್ತಿಯನ್ನು ಸ್ಥಾಪಿಸಲಾಗಿದೆ, ಎಂಬ ಸ್ಥೂಲದಲ್ಲಿನ ಕಾರಣ ಎಲ್ಲ ಹಿಂದೂ ಸಮಾಜಕ್ಕೆ ತಿಳಿದಿದೆ; ಆದರೆ ಇದರ ಹಿಂದೆ ಒಂದು ವೈಶಿಷ್ಟ್ಯಪೂರ್ಣ ಆಧ್ಯಾತ್ಮಿಕ ಕಾರಣವೂ ಇದೆ. ದೇವತೆಗಳ ಬಾಲಕರೂಪವು ಇಚ್ಛಾಶಕ್ತಿಯ ಪ್ರತೀಕವಾಗಿರುತ್ತದೆ. ಮುಂದೆ ಇಚ್ಛಾಶಕ್ತಿಯಿಂದ ಕ್ರಿಯಾಶಕ್ತಿ ಮತ್ತು ಅದಕ್ಕೂ ಮುಂದೆ ಜ್ಞಾನಶಕ್ತಿಯ ಹಂತಕ್ಕನುಸಾರ ಅವತಾರಗಳು ಕಾರ್ಯವನ್ನು ಮಾಡುತ್ತಾರೆ. ಅವತಾರಗಳು ಉಪಾಸಕರಿಗೆ ಅಥವಾ ಸಮಾಜಕ್ಕೆ ಯಾವ ಶಕ್ತಿಯ ಅವಶ್ಯಕತೆಯಿರುತ್ತದೆಯೋ, ಅದಕ್ಕನುಸಾರ ವಿವಿಧ ದೇವತೆಗಳ ಆಯಾಯ ರೂಪದ ಆರಾಧನೆ ಮಾಡಲು ಹೇಳುತ್ತಾರೆ.
ತದ್ವಿರುದ್ಧ ಯಾವಾಗ ಕಾಲಮಹಾತ್ಮೆಗನುಸಾರ ಸಮಷ್ಟಿಯ ಕಾಲಚಕ್ರದಲ್ಲಿ ಬದಲಾವಣೆಯಾಗುತ್ತದೆಯೋ, ಆ ಸಮಯದಲ್ಲಿ ಆಯಾಯ ಕಾಲದ ಶಕ್ತಿಯ ಸಂಕೇತವಿರುವ ದೇವತೆಯ ದೇವಸ್ಥಾನ ನಿರ್ಮಾಣವಾಗುತ್ತದೆ ಅಥವಾ ದೇವರು ಪ್ರಕಟವಾಗುತ್ತಾರೆ. ಸದ್ಯದ ಕಾಲದಲ್ಲಿ ಕಾಲಮಹಾತ್ಮೆಗನುಸಾರ ಸಮಷ್ಟಿಯ ಕಾಲಚಕ್ರದಲ್ಲಿ ಬದಲಾವಣೆಯಾಗಿ ಸತ್ಯಯುಗದ ದಿಕ್ಕಿಗೆ ಮಾರ್ಗಕ್ರಮಣ ನಡೆದಿದೆ. ಈ ಹಂತದಲ್ಲಿ ಸಮಷ್ಟಿಗೆ ತಾರಕ ಇಚ್ಛಾಶಕ್ತಿಯ ಆವಶ್ಯಕತೆಯಿದೆ. ಆದ್ದರಿಂದ ಈಶ್ವರನು ಸಮಷ್ಟಿಯ ವಿವಿಧ ಜೀವಗಳಿಗೆ ಅಂತಹ ವಿಚಾರವನ್ನು ನೀಡಿ ಕಾಲಕ್ಕನುಸಾರ ಆವಶ್ಯಕವಿರುವ ದೇವತೆಯ ತತ್ತ್ವದ ಶಕ್ತಿಯನ್ನು ಪ್ರಕಟ ಗೊಳಿಸುತ್ತಿದ್ದಾನೆ. ತ್ರೇತಾಯುಗದಲ್ಲಿ ಶ್ರೀರಾಮನÀ ಜನ್ಮ ಮುಂದಿನ ಕೆಲವು ವರ್ಷಗಳಲ್ಲಿ ಆಗುವ ರಾಮರಾಜ್ಯದ ಸ್ಥಾಪನೆಯ ಪ್ರತೀಕ ವಾಗಿತ್ತು. ಅದೇ ರೀತಿ ವರ್ತಮಾನ ಕಾಲದಲ್ಲಿ ಅಯೋಧ್ಯೆಯಲ್ಲಿ ಬಾಲಕರೂಪದ ಶ್ರೀರಾಮಮೂರ್ತಿಯ ಸ್ಥಾಪನೆಯು ಮುಂದಿನ ಕೆಲವು ವರ್ಷಗಳಲ್ಲಿ ಆಗುವ ಹಿಂದೂ ರಾಷ್ಟ್ರದ, ಅಂದರೆ ರಾಮರಾಜ್ಯದ ಸ್ಥಾಪನೆಯ ಸಂಕೇತವಾಗಿದೆ. ತ್ರೇತಾಯುಗದಲ್ಲಿ ಹೇಗೆ ಶ್ರೀರಾಮನಿಗೆ ರಾಮರಾಜ್ಯವನ್ನು ಸ್ಥಾಪಿಸುವ ಮೊದಲು ವನವಾಸ, ಸೀತಾಹರಣದಂತಹ ಅನೇಕ ಕಷ್ಟಗಳನ್ನು ಎದುರಿಸಿ ರಾವಣನನ್ನು ವಧಿಸಬೇಕಾಯಿತು. ಅದೇ ರೀತಿ ಹಿಂದೂ ಸಮಾಜಕ್ಕೂ ಭೀಕರ ಆಪತ್ಕಾಲದಲ್ಲಿ ಆಕ್ರಮಣಗಳು, ಮಹಾಮಾರಿ, ಯುದ್ಧ ಇತ್ಯಾದಿಗಳನ್ನು ಎದುರಿಸಿ ಆ ಮೇಲೆ ರಾಮರಾಜ್ಯದ ಉದಯವಾಗಲಿಕ್ಕಿದೆ.
ಇಲ್ಲಿ ನೀಡಿರುವ ಕೋಷ್ಟಕದಲ್ಲಿ ಹಿಂದೂ ಸಮಾಜದಲ್ಲಿ ‘ಯಾವ ದೇವಸ್ಥಾನಗಳ ಸ್ಥಾಪನೆಯಾಗಬೇಕು’, ಎಂಬ ತುಂಬಾ ತಳಮಳವಿದೆ, ಎನ್ನುವ ಸಂದರ್ಭದಲ್ಲಿ ಕೊಡಲಾಗಿದೆ. ಪ್ರತ್ಯಕ್ಷದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯ ಸೂಕ್ಷ್ಮದಲ್ಲಿನ ಪ್ರಕ್ರಿಯೆ ಮೊದಲು ಇಚ್ಛಾಶಕ್ತಿ, ಆ ಮೇಲೆ ಕ್ರಿಯಾಶಕ್ತಿ ಮತ್ತು ಅನಂತರ ಜ್ಞಾನಶಕ್ತಿ ಹೀಗಿದೆ. ಆದ್ದರಿಂದ ಆಯಾಯ ಶಕ್ತಿಗೆ ಸಂಬಂಧಿಸಿದ ಜಾಗೃತ ಮಂದಿರಗಳು ಭಾರತದ ಪ್ರತಿಯೊಂದು ರಾಜ್ಯ, ನಗರ, ಗ್ರಾಮಗಳಲ್ಲಿ ನಿರ್ಮಾಣವಾಗುತ್ತಿರುವವು. ‘ಸೂಕ್ಷ್ಮದಲ್ಲಿನ ಹಿಂದೂ ರಾಷ್ಟ್ರದ ಪ್ರಕ್ರಿಯೆಯನ್ನು ತಿಳಿದುಕೊಳ್ಳಲು ಮತ್ತು ಅದರ ಆಧ್ಯಾತ್ಮಿಕ ಲಾಭ ಪಡೆಯಲು ಎಲ್ಲ ಹಿಂದೂಗಳು ಸಾಧನೆ ಮಾಡುವಂತೆ ಬುದ್ಧಿಯನ್ನು ನೀಡಬೇಕೆಂದು ಶ್ರೀ ಗುರುಚರಣಗಳಲ್ಲಿ ಪ್ರಾರ್ಥನೆ !
೭. ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ಪುನರ್ಸ್ಥಾಪನೆ, ಇದು ಭಾರತದ ಇಚ್ಛಾಶಕ್ತಿಯ ಕಡೆಗಿನ ಮಾರ್ಗಕ್ರಮಣದ ಪ್ರತೀಕವಾಗಿದೆ
ಹಿಂದೂ ಧರ್ಮವು ಜ್ಞಾನಶಕ್ತಿಯುಕ್ತ ಆಗಿದೆ. ಆದ್ದರಿಂದ ಹಿಂದಿನ ಅನೇಕ ವರ್ಷಗಳಲ್ಲಿ ವಿವಿಧ ಪ್ರಕಾರದ ಆಕ್ರಮಣಗಳಾಗಿದ್ದರೂ ಹಿಂದೂ ಧರ್ಮದ ಅಸ್ತಿತ್ವ ಉಳಿದುಕೊಂಡಿದೆ. ಇದೇ ರೀತಿ ಕಲಿಯುಗದಲ್ಲಿನ ‘ಹಿಂದೂ ರಾಷ್ಟ್ರ’ವೆಂದರೆ ‘ರಾಮರಾಜ್ಯ’ವು ಜ್ಞಾನಶಕ್ತಿಯುಕ್ತ ಆಗಿರುವುದರಿಂದ ಅದು ೧ ಸಾವಿರ ವರ್ಷಗಳ ವರೆಗೆ ಅಸ್ತಿತ್ವದಲ್ಲಿರುವುದು. ಜ್ಞಾನಶಕ್ತಿಯತ್ತ ಸಾಗುವ ಮೊದಲು ಇಚ್ಛಾಶಕ್ತಿಯಿಂದ ಕ್ರಿಯಾ ಮತ್ತು ಆಮೇಲೆ ಕ್ರಿಯೆಯಿಂದ ಜ್ಞಾನ ಹೀಗೆ ಪ್ರವಾಸ ಮಾಡಬೇಕಾಗುತ್ತದೆ. ಹಿಂದಿನ ಕೆಲವು ವರ್ಷಗಳಲ್ಲಿ ಹಿಂದೂ ಸಮಾಜ ಮಾಡುತ್ತಿರುವ ಸಂಘಟಿತ ಪ್ರಯತ್ನದಿಂದ ಭಾರತ ಇಚ್ಛಾಶಕ್ತಿಯ ಹಂತದತ್ತ ಪ್ರಯಾಣಿಸುತ್ತಿದೆ. ಇದರ ಸಂಕೇತವೆಂದು ಶ್ರೀರಾಮಮಂದಿರದ ಪುನರ್ಸ್ಥಾಪನೆಯಾಗುತ್ತಿದೆ. ಇನ್ನು ಮುಂದೆ ‘ಹಿಂದೂಗಳ ಆಧ್ಯಾತ್ಮಿಕ ಸ್ತರದ ಸಂಘಟನೆಯಾಗಿ ಅವರಿಗೆ ಕ್ರಿಯಾಶಕ್ತಿಯ ಮತ್ತು ಅನಂತರ ಜ್ಞಾನಶಕ್ತಿಯ ಹಂತಕ್ಕೆ ಹೋಗಲು ಸಾಧ್ಯವಾಗಿ ಹಿಂದೂ ರಾಷ್ಟ್ರ ಸ್ಥಾಪನೆ ಮಾಡುವ ಸಾಮರ್ಥ್ಯ ಸಿಗಲಿ, ಎಂದು ಪ್ರಭು ಶ್ರೀ ರಾಮ ಮತ್ತು ಶ್ರೀ ಗುರುದೇವರ ಚರಣಗಳಲ್ಲಿ ಪ್ರಾರ್ಥನೆ !
– ಶ್ರೀ. ನಿಷಾದ ದೇಶಮುಖ, (ಸೂಕ್ಷ್ಮದಲ್ಲಿ ಸಿಕ್ಕಿದ ಜ್ಞಾನ) (ಆಧ್ಯಾತ್ಮಿಕ ಮಟ್ಟ ಶೇ. ೬೩), ಸನಾತನ ಆಶ್ರಮ, ರಾಮನಾಥಿ, ಗೋವಾ. (೧೩.೧.೨೦೨೪, ಬೆಳಗ್ಗೆ ೮.೧೫ ರಿಂದ ೧೦.೩೯)