ಹಿಂದೂಗಳು ತಮ್ಮ ಧರ್ಮವನ್ನು ತಿಳಿದುಕೊಳ್ಳದಿದ್ದರೆ ಅನೇಕ ‘ಶ್ರದ್ಧಾ’ಳಿಗೆ ‘ಲವ್‌ ಜಿಹಾದ್‌’ನ್ನು ಎದುರಿಸಬೇಕಾಗಬಹುದು !

ಪ್ರತಿಯೊಂದು ಧರ್ಮಕ್ಕೆ ಅಥವಾ ಪಂಥಕ್ಕೆ ತನ್ನದೇ ಆದ ಒಂದು ಬೇರೆಯೇ ಸಂಸ್ಕೃತಿ ಇರುತ್ತದೆ. ಅದಕ್ಕನುಸಾರ ಆಯಾ ಸಮಾಜದ ಘಟಕಗಳ ಮೇಲೆ ಆ ರೀತಿಯ ಸಂಸ್ಕಾರ ಗಳಾಗುತ್ತವೆ. ಬಾಲ್ಯದಿಂದಲೇ ಆಗುವ ಈ ಸಂಸ್ಕಾರಗಳಿಂದ ವ್ಯಕ್ತಿಯು ರೂಪುಗೊಳ್ಳುತ್ತಿರುತ್ತಾನೆ. ಆ ಸಂಸ್ಕಾರಗಳು ಸಮಾಜದ ದೃಷ್ಟಿಯಿಂದ ಯೋಗ್ಯವಾಗಿರಲಿ ಅಥವಾ ಅಯೋಗ್ಯವಾಗಿರಲಿ, ಆ ವ್ಯಕ್ತಿಗೆ ಅವು ಯೋಗ್ಯವೇ ಅನಿಸುತ್ತದೆ; ಏಕೆಂದರೆ ತೀರಾ ಬಾಲ್ಯಾವಸ್ಥೆಯಿಂದಲೇ ಅವರು ಅದನ್ನೇ ಅನುಭವಿಸುತ್ತಾ ಬಂದಿರುತ್ತಾನೆ. ಇತ್ತೀಚೆಗೆ ‘ಲವ್‌-ಜಿಹಾದ್‌’ನ ಅನೇಕ ಪ್ರಕರಣಗಳು ಪದೇಪದೇ ಬೆಳಕಿಗೆ ಬರುತ್ತಿವೆ. ಇವು ಮೊಗಲರು ಭಾರತಕ್ಕೆ ಬಂದಾಗಿನಿಂದಲೇ ಪ್ರಾರಂಭವಾಗಿದೆ. ಇದರ ಅನೇಕ ಉದಾಹರಣೆಗಳಿವೆ; ಆದರೆ ಒಂದು ವ್ಯತ್ಯಾಸವೆಂದರೆ ಆ ಸಮಯದಲ್ಲಿ ‘ಲವ್‌-ಜಿಹಾದ್’ ಈ ‘ಲೇಬಲ್’ ಇರಲಿಲ್ಲ. ಇಂದಿನ ಯುವ ವಿದ್ಯಾವಂತ ಯುವತಿಯರು ಇಂತಹ ಪ್ರಕರಣಗಳಲ್ಲಿ ಮೋಸ ಹೋಗುವ ಸಾಧ್ಯತೆಯು ಹೆಚ್ಚಿದೆ. ಈ ಲೇಖನವು ಇದರ ಬಗ್ಗೆ ಗಮನವನ್ನು ಸೆಳೆಯುತ್ತದೆ !

ಶ್ರೀ. ನಿಷಾದ ದೇಶಮುಖ

೧. ‘ಕಾನ್ವೆಂಟ್‌ ಸ್ಕೂಲ್‌’ನಿಂದಾಗಿ ಮಕ್ಕಳಲ್ಲಿ ಪಾಶ್ಚಿಮಾತ್ಯ ವಿಕೃತಿಯ ಪ್ರಭಾವ

‘ಕಾನ್ವೆಂಟ್‌ ಸ್ಕೂಲ್‌’ನಲ್ಲಿ ಶಿಕ್ಷಣ ಪಡೆಯುವ ಮಕ್ಕಳ ಪ್ರಮಾಣ ಹೆಚ್ಚಿದೆ. ‘ಕಾನ್ವೆಂಟ್‌ ಸ್ಕೂಲ್’ ಮತ್ತು ಹಿಂದೂ ಸಂಸ್ಕೃತಿ ಇವುಗಳ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಆದುದರಿಂದ ಅಜ್ಞಾನದಿಂದ ಮಕ್ಕಳಲ್ಲಿ ಪಾಶ್ಚಿಮಾತ್ಯ ವಿಕೃತಿಯು ಪ್ರಭಾವ ಬೀರುತ್ತದೆ ಮತ್ತು ‘ಹಿಂದೂ ಸಂಸ್ಕೃತಿ ಎಂದರೆ ಹಿಂದುಳಿದ ವಿಚಾರ’, ಎಂಬ ತಿಳುವಳಿಕೆ ಅವರ ಮನಸ್ಸಿನ ಮೇಲಾಗುತ್ತದೆ ಮತ್ತು ಇದೇ ನಿಜವಾದ ಅಪಾಯದ ಗಂಟೆಯಾಗಿರುತ್ತದೆ. ಪ್ರತಿಯೊಂದು ಇಲ್ಲಿಂದಲೇ ಆರಂಭವಾಗುತ್ತದೆ. ಮನೆಯ ವ್ಯಕ್ತಿಗಳು ಇಂತಹ ಮಕ್ಕಳಿಗೆ ದೇವರ ಪೂಜೆ ಮಾಡಲು ಹೇಳಿದರೆ ಅವರಿಗೆ ಬೇಸರವಾಗುತ್ತದೆ. ಇಂತಹ ಪರಿಸ್ಥಿತಿ ಉದ್ಭವಿಸಲು ಪಾಲಕರೇ ಜವಾಬ್ದಾರರಾಗಿದ್ದಾರೆ, ಎಂದು ಅನಿಸುತ್ತದೆ; ಏಕೆಂದರೆ ಅವರು ಯಾವತ್ತೂ ಸ್ವತಃ ತಮ್ಮ ಧರ್ಮವನ್ನು ತಿಳಿದುಕೊಳ್ಳಲಿಲ್ಲ, ಸಂಸ್ಕೃತಿಯನ್ನು ತಿಳಿದುಕೊಳ್ಳಲಿಲ್ಲ, ಹೀಗಿರುವಾಗ ಅವರು ತಮ್ಮ ಮಕ್ಕಳಿಗೆ ಏನು ಸಂಸ್ಕಾರವನ್ನು ನೀಡಬಲ್ಲರು ?

೨. ‘ಲವ್‌ ಜಿಹಾದ್‌’ನ ಸಮಸ್ಯೆಯನ್ನು ಪರಿಹರಿಸಲು ಹಿಂದೂ ಸಂಸ್ಕೃತಿಯ ಆಚರಣೆ ಆವಶ್ಯಕ !

ಕಟ್ಟರವಾದಿ (ಮೂಲಭೂತವಾದಿಗಳು) ತಮ್ಮ ಮುಸಲ್ಮಾನ ಸಮಾಜದಲ್ಲಿ ಯಾವ ಸಂಸ್ಕಾರಗಳನ್ನು ಮಾಡಲಾಗಿದೆಯೋ ಅದಕ್ಕನುಸಾರವೇ ವರ್ತಿಸುತ್ತಾರೆ ! ಹೀಗಿರುವಾಗ ನಮ್ಮ ಮೇಲೆ ನಮ್ಮ ಸನಾತನ ಹಿಂದೂ ಧರ್ಮದ ಸಂಸ್ಕಾರಗಳಾಗಿದ್ದಿದ್ದರೆ ಇಂತಹ ವಿರುದ್ಧ ವಿಚಾರಸರಣಿಯ ಸಮಾಜ ಘಟಕಗಳ ಸಂಪರ್ಕಕ್ಕೆ ಬರುವ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ. ಅಂದರೆ ಇಂತಹ ‘ಲವ್‌ ಜಿಹಾದ್‌’ನಂತಹ ಸಮಸ್ಯೆಯೇ ಉದ್ಭವಿಸುತ್ತಿರಲಿಲ್ಲ. ಇಲ್ಲಿ ನಮ್ಮ ಸಂಸ್ಕೃತಿಯ ಆಚರಣೆಯ ಅವಶ್ಯಕತೆಯಿದೆ !

ಪೂ. ಸಂಭಾಜಿ ಭಿಡೆಗುರುಜಿ ಇವರು ದೆಹಲಿಯ ಶ್ರದ್ಧಾ ವಾಲಕರ ಇವಳ ಹತ್ಯೆಯ ಸಂದರ್ಭದಲ್ಲಿನ ‘ಲವ್‌ ಜಿಹಾದ್’ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ವಾಕ್ಯದಲ್ಲಿ ಸುಂದರ ಸಂದೇಶವನ್ನು ನೀಡಿದ್ದಾರೆ, ಅವರು ‘ಟಿಕಲಿವರ ಶ್ರದ್ಧಾ ಅಸತಿ, ತರ ಶ್ರದ್ಧಾ ಟಿಕಲಿ ಅಸತಿ !’ (‘ಟಿಕಲಿಯ ಮೇಲೆ ಶ್ರದ್ಧೆ ಇದ್ದಿದ್ದರೆ, ಶ್ರದ್ಧಾ ಉಳಿಯುತ್ತಿದ್ದಳು !’)

ಸ್ವಲ್ಪದರಲ್ಲಿ ಧರ್ಮಾಚರಣೆಯ ಅಭಾವದಿಂದಲೇ ಈ ಪ್ರಕರಣಗಳಾಗುತ್ತವೆ, ಎಂದು ಪೂ. ಸಂಭಾಜಿ ಗುರುಜಿಗಳಿಗೆ ಹೇಳುವುದಿತ್ತು. ಧರ್ಮದ ಆಚರಣೆಯನ್ನು ಮಾಡುವ ಹಿಂದೂ ಸ್ತ್ರೀಯರ ಕಡೆಗೆ ವಕ್ರದೃಷ್ಟಿಯಿಂದ ನೋಡುವ ಸಾಮಾನ್ಯ ಧೈರ್ಯವೂ ಈ ನರಾಧಮರಿಗೆ ಆಗದಂತಹ ಸಾಮರ್ಥ್ಯ ಹಿಂದೂ ಧರ್ಮದಲ್ಲಿ ಮತ್ತು ನಮ್ಮ ಸಂಸ್ಕೃತಿಯಲ್ಲಿದೆ; ಆದರೆ ಸ್ವರಕ್ಷಣೆಗಾಗಿ ಧರ್ಮವು ನೀಡಿದ ಆಭರಣಗಳನ್ನು ಆಧುನಿಕತೆಯ ಹೆಸರಿನಲ್ಲಿ ಹಿಂದೂ ಸ್ತ್ರೀಯರು ಒಂದೊಂದಾಗಿ ತೆಗೆದು ಹಾಕಿದರು ಮತ್ತು ಇದರಿಂದ ಇಂದಿನ ಸ್ತ್ರೀಯರು ‘ವಿಕೃತಿ’ಯತ್ತ ಸಾಗುತ್ತಿರುವುದು ಕಾಣಿಸುತ್ತದೆ.

೩. ಇಂದಿನ ಪೀಳಿಗೆಗೆ ಧರ್ಮದ ಬಗ್ಗೆ ಹೇಳದ ಕಾರಣ ಅದು ದಾರಿ ತಪ್ಪುತ್ತಿದೆ !

ಆರಂಭದಲ್ಲಿ ಕುಂಕುಮವಿತ್ತು, ಅದರ ಜಾಗವನ್ನು ‘ಟಿಕಲಿ’ ತೆಗೆದುಕೊಂಡಿತು. ನಂತರ ‘ಮ್ಯಾಚಿಂಗ್‌’ನ ಹೆಸರಿನಲ್ಲಿ ಟಿಕಲಿಯ ಬಣ್ಣ ಬದಲಾಗತೊಡಗಿತು. ಕ್ರಮೇಣ ಟಿಕಲಿಯ ಆಕಾರವು ಬದಲಾಗತೊಡಗಿತು ಮತ್ತು ಇಂದಿನ ಪೀಳಿಗೆಗೆ ಟಿಕಲಿ ಹಚ್ಚಿಕೊಳ್ಳುವುದು ಎಂದರೆ ಕಠಿಣವೆನಿಸತೊಡಗಿತು. ನೋಡಿ, ಕೇವಲ ಟಿಕಲಿಯ ವಿಷಯವನ್ನು ತೆಗೆದುಕೊಂಡರೂ ಈ ಟಿಕಲಿ ಉದ್ದೇಶಪೂರ್ವಕವಾಗಿ ಚಲನಚಿತ್ರ ಮತ್ತು ಮಾಲಿಕೆಗಳ ಮಾಧ್ಯಮಗಳಿಂದ ಸ್ತ್ರೀಯರ ಹಣೆಯ ಮೇಲಿಂದ ಯಾವಾಗ ಅದೃಶ್ಯವಾಯಿತೋ, ಅದು ಗೊತ್ತಾಗಲೇ ಇಲ್ಲ. ಹಿಂದೂ ಸ್ತ್ರೀಯರ ಉಡುಗೆತೊಡುಗೆಗಳ ಬಗ್ಗೆ ಮಾತನಾಡುವುದೇ ಕಷ್ಟ. ಮೊದಲು ರವಿಕೆ (ಬ್ಲೌಸ್) ಹೇಗಿತ್ತು ? ಮತ್ತು ಸದ್ಯ ಇಂದಿನ ‘ಬ್ಲೌಸ್’ ಹೇಗಿದೆ, ಎಂಬ ಬಗ್ಗೆ ನೀವೇ ವಿಚಾರ ಮಾಡಿರಿ ! ಇದು ವಿಕೃತಿ ಅಲ್ಲವೇ ? ಇಂತಹ ಬದಲಾವಣೆ ಮುಸಲ್ಮಾನ ಸ್ತ್ರೀಯರಲ್ಲಿ ಏಕೆ ಆಗುವುದಿಲ್ಲ ? ಮುಸಲ್ಮಾನ ಪುರುಷರು ತಮ್ಮ ಸಾಂಪ್ರದಾಯಿಕ ಪೈಜಾಮಾ-ಕುರ್ತಾ ಉಡುಪನ್ನು ಇಂದಿಗೂ ‘ಹೆಮ್ಮೆಯಿಂದ’ ಧರಿಸುತ್ತಾರೆ, ಆದರೆ ನಮ್ಮ ವಿಷಯದಲ್ಲಿ ಹೀಗೇಕೆ ? ಏಕೆಂದರೆ ನಮಗೆ ನಮ್ಮ ಧರ್ಮವನ್ನು ಯಾರೂ ಹೇಳಲಿಲ್ಲ ! ಯಾರೂ ಕಲಿಸಲಿಲ್ಲ ! ಆದುದರಿಂದ ನಮ್ಮ ಇಂದಿನ ಪೀಳಿಗೆ ದಾರಿ ತಪ್ಪುತ್ತಿದೆ.

ಯುವಕರು ವ್ಯಸನಾಧೀನತೆಯಲ್ಲಿ ಮತ್ತು ಯುವತಿಯರು ‘ಲವ್‌ ಜಿಹಾದ್‌’ನಲ್ಲಿ ಸಿಲುಕುತ್ತಿದ್ದಾರೆ.

೪. ಧರ್ಮಶಿಕ್ಷಣ ಪಡೆಯಲು ಇಚ್ಛಾಶಕ್ತಿ ಬೇಕು !

ಹಿಂದೂ ಧರ್ಮದಿಂದ ದೂರ ಹೋದುದರಿಂದಲೇ ಸದ್ಯ ಧರ್ಮದ ಮೇಲೆ ವಿವಿಧ ಮಾಧ್ಯಮಗಳಿಂದ ಆಕ್ರಮಣಗಳು ಆಗುತ್ತಿವೆ. ಇದರಲ್ಲಿನ ಒಂದು ಆಕ್ರಮಣವೆಂದರೆ ‘ಲವ್‌ ಜಿಹಾದ್’ !
ಶ್ರದ್ಧಾ ವಾಲಕರ ಇವಳ ಮೃತ್ಯುವಿನ ಪ್ರಕರಣ ಎಲ್ಲೆಡೆ ಪ್ರಸಿದ್ಧ ವಾಯಿತು. ಅನೇಕ ಸ್ಥಳಗಳಲ್ಲಿ ವಿವಿಧ ಮಾಧ್ಯಮಗಳಿಂದ ಇದನ್ನು ಖಂಡಿಸಲಾಯಿತು; ಆದರೆ ಇದೆಲ್ಲವೂ ಏಕೆ ಘಟಿಸುತ್ತಿದೆ ? ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲ ಮತ್ತು ಅದರಿಂದಾಗಿ ಅವರಿಂದ ಧರ್ಮಾಚರಣೆಯಾಗುವುದಿಲ್ಲ. ಇತರ ಧರ್ಮೀಯರು ತಮ್ಮ ಧರ್ಮದ ಬಗ್ಗೆ ಜಾಗರೂಕ ಮತ್ತು ಶಿಕ್ಷಿತರಾಗಿರುತ್ತಾರೆ, ಆ ರೀತಿ ಹಿಂದೂಗಳು ಇರುವುದು ಕಾಣಿಸುವುದಿಲ್ಲ. ಈ ಸ್ಥಿತಿಯನ್ನು ಬದಲಾಯಿಸಿ ಹಿಂದೂಗಳು ಧರ್ಮಶಿಕ್ಷಣ ಪಡೆದು ಧರ್ಮದ ರಕ್ಷಣೆಯನ್ನು ಮಾಡಬೇಕು. ಇದಕ್ಕಾಗಿ ಸನಾತನ ಸಂಸ್ಥೆಯು ಕಳೆದ ಅನೇಕ ವರ್ಷಗಳಿಂದ ಕಾರ್ಯನಿರತವಾಗಿದೆ. ಸನಾತನ ಸಂಸ್ಥೆ ಮತ್ತು ಅದರ ಸಾಧಕರು ತಮ್ಮ ಹಿಂದೂ ಬಾಂಧವರಿಗೆ ಧರ್ಮದ ಬಗ್ಗೆ ತಿಳಿಯಬೇಕೆಂದು ಉಚಿತ ಮತ್ತು ನಿಮಗೆ ಬೇಕಾದ ಸ್ಥಳಕ್ಕೆ ಬಂದು ಮಾರ್ಗದರ್ಶನ ಮಾಡಲು ತತ್ಪರರಿದ್ದಾರೆ. ನಮ್ಮಲ್ಲಿ ಇಚ್ಛಾಶಕ್ತಿ ಬೇಕು ! ನಿಮ್ಮ ಧರ್ಮದ ಬಗ್ಗೆ ತಿಳಿದುಕೊಳ್ಳಿ ಇಲ್ಲದಿದ್ದರೆ ಭವಿಷ್ಯದಲ್ಲಿ ಇಂತಹ ಅನೇಕ ‘ಶ್ರದ್ಧಾ’ಗಳಿಗೆ ‘ಲವ್‌ ಜಿಹಾದ್‌’ಅನ್ನು ಎದುರಿಸಬೇಕಾಗಬಹುದು.

– ಶ್ರೀ. ಗಜಾನನ ಸಾತಾರ್ಡೆಕರ, ಸಾವಂತವಾಡಿ, ಜಿಲ್ಲೆ ಸಿಂಧುದುರ್ಗ.