ಬ್ರಿಟಿಷ್ ಸಂಸದ ಬ್ಲ್ಯಾಕ್‌ಮನ್ ಬಿಬಿಸಿಗೆ ಸಂಸತ್ತಿನಲ್ಲಿ ಛೀಮಾರಿ !

ಶ್ರೀ ರಾಮಲಾಲಾ ಪ್ರಾಣಪ್ರತಿಷ್ಠಾಪನೆಯ ಪಕ್ಷಪಾತದ ವರದಿ ಮಾಡಿದ್ದಕ್ಕೆ ಬಿಬಿಸಿಗೆ ಕಪಾಳಮೋಕ್ಷ !

ಲಂಡನ್ (ಬ್ರಿಟನ್) – ಭಗವಾನ್ ಶ್ರೀರಾಮನ ಜನ್ಮಸ್ಥಳದಲ್ಲಿ ರಾಮ ಮಂದಿರವನ್ನು ಸ್ಥಾಪಿಸಿದಾಗ ಪ್ರಪಂಚದಾದ್ಯಂತದ ಹಿಂದೂಗಳು ಸಂತೋಷಪಟ್ಟರು; ಆದರೆ ದುಃಖದ ಸಂಗತಿಯೆಂದರೆ, ಬಿಬಿಸಿ ಈ ಬಗ್ಗೆ ವರದಿ ಮಾಡುವಾಗ ಮಸೀದಿ ಧ್ವಂಸವನ್ನು ಉಲ್ಲೇಖಿಸಿದೆ. ನಿಸ್ಸಂಶಯವಾಗಿ ಅಲ್ಲಿ ಮಸೀದಿ ಇತ್ತು; ಆದರೆ ಅಲ್ಲಿ ಸುಮಾರು 2 ಸಾವಿರ ವರ್ಷಗಳಿಂದ ದೇವಸ್ಥಾನವಿತ್ತು ಎಂಬುದನ್ನು ಮರೆಯುವುದಾದರೂ ಹೇಗೆ ? ಮುಸ್ಲಿಂ ಪಕ್ಷದ ಸದಸ್ಯರಿಗೆ ನಗರದಲ್ಲಿ 5 ಎಕರೆ ಜಮೀನು ನೀಡಿರುವುದು ನಿಜ, ಈ ಮಾತುಗಳಲ್ಲಿ ಬ್ರಿಟನ್‌ನ ಹುಜೂರ್ ಪಕ್ಷದ (ಕನ್ಸರ್ವೇಟಿವ್) ಸಂಸದ ಬಾಬ್ ಬ್ಲ್ಯಾಕ್‌ಮನ್ ಅವರು ಸಂಸತ್ತಿನಲ್ಲಿ ಅಂಶವನ್ನು ಪ್ರಸ್ತುತಪಡಿಸುವ ಮೂಲಕ ಬ್ರಿಟಿಷ್ ಮಾಧ್ಯಮ ‘ಬಿಬಿಸಿ’ಯನ್ನು ಟೀಕಿಸಿದರು. ‘ಜಗತ್ತಿನಾದ್ಯಂತ ನಡೆಯುತ್ತಿರುವ ಘಟನಾವಳಿಗಳ ಒಂದು ಸಭ್ಯತೆ ಮತ್ತು ಉತ್ತಮ ವಿಮರ್ಶೆಯನ್ನು ಬಿಬಿಸಿಯು ಮಾಡಬೇಕು; ಆದರೆ ಬಿಬಿಸಿಯ ವರದಿಯಲ್ಲಿ ಹಾಗಾಗಲಿಲ್ಲ” ಎಂದು ಎಂಪಿ ಬ್ಲ್ಯಾಕ್‌ಮನ್ ಹೇಳಿದ್ದಾರೆ.

(ಸೌಜನ್ಯ – ET)

ಬ್ರಿಟನ್‌ನ ಇತರ ಸಂಸದರಿಂದಲೂ ಆಕ್ಷೇಪ !

ಸಂಸದ ಬಾಬ್ ಬ್ಲ್ಯಾಕ್‌ಮನ್ ಅವರು ಇತರ ಸಂಸದರಿಗೆ ಮನವಿ ಮಾಡುತ್ತಾ, ‘ಬಿಬಿಸಿಯ ನಿಷ್ಪಕ್ಷಪಾತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಘಟನಾವಳಿಗಳ ಬಗ್ಗೆ ನಿಖರವಾದ ವರದಿ ಮಾಡಲು ಸಂಸತ್ತಿನಲ್ಲಿ ಚರ್ಚೆಯಾಗಬೇಕು. ಅದಕ್ಕಾಗಿ ಸರಕಾರ ಸಮಯ ನಿಗದಿ ಮಾಡಬೇಕು.’ ಇದಾದ ಬಳಿಕ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ ಬಾಬ್ ಬ್ಲ್ಯಾಕ್‌ಮನ್, ಬಿಬಿಸಿ ವರದಿ ಕುರಿತು ಇತರ ಸಂಸದರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ತಪ್ಪಾದ ವರದಿಯು ಅಸಮಾಧಾನವನ್ನು ಉಂಟುಮಾಡಿದೆ ಎಂದು ನಾನು ಹಿಂದೂ ಹಕ್ಕುಗಳ ಬೆಂಬಲಿಗನ ದೃಷ್ಟಿಕೋನದಿಂದ ಹೇಳಲು ಬಯಸುತ್ತೇನೆ ಎಂದು ಅವರು ಹೇಳಿದರು. ಬಿಬಿಸಿ ನಿಷ್ಪಕ್ಷಪಾತವಾಗಿ ವರದಿ ಮಾಡಬೇಕು. (ಭಾರತದ ಎಷ್ಟು ಹಿಂದೂ ಸಂಸದರು ಈ ವಿಷಯದ ಬಗ್ಗೆ ಬಿಬಿಸಿಯನ್ನು ಟೀಕಿಸಿದ್ದಾರೆ ಅಥವಾ ಪ್ರಶ್ನಿಸಿದ್ದಾರೆ ? – ಸಂಪಾದಕರು)

ಸಂಪಾದಕೀಯ ನಿಲುವು

ಬಿಬಿಸಿಯು ಭಾರತ-ದ್ವೇಷ ಮತ್ತು ಹಿಂದೂದ್ವೇಷ ಎಂದು ಎಲ್ಲರಿಗೂ ತಿಳಿದಿದೆ. ಅದಕ್ಕೆ ಬ್ರಿಟಿಷ್ ಸರಕಾರದಿಂದ ಹಣ ಸಿಗುತ್ತದೆ. ಪ್ರಸ್ತುತ ಬ್ರಿಟನ್ ಪ್ರಧಾನಿ ಭಾರತೀಯ ಮೂಲದ ಹಿಂದೂ ಆಗಿದ್ದಾರೆ. ಇದರಿಂದ ಭಾರತ ಮತ್ತು ಹಿಂದೂಗಳಿಗೆ ಯಾವುದೇ ಪ್ರಯೋಜನವಿಲ್ಲ ಎಂದು ತೋರಿಸುತ್ತದೆ !