ಜ್ಞಾನವಾಪಿಯಲ್ಲಿ ಮತ್ತೆ ಹಿಂದೂಗಳಿಗೆ ಪೂಜೆಗೆ ಅವಕಾಶ !

  • ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶ !

  • 1993ರಲ್ಲಿ ಅಂದಿನ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಮೌಖಿಕ ಆದೇಶ ನೀಡಿ ಪೂಜೆ ನಿಲ್ಲಿಸಿದ್ದರು !

ಶ್ರೀ. ನೀಲೇಶ್ ಕುಲಕರ್ಣಿ, ವಿಶೇಷ ಪ್ರತಿನಿಧಿ, ವಾರಣಾಸಿ, ಉತ್ತರ ಪ್ರದೇಶ

ಎಡದಿಂದ ಮೊದಲ ಸಾಲಿನಲ್ಲಿ ಅರ್ಜಿದಾರರಾದ ಸೀತಾ ಸಾಹು, ರೇಖಾ ಪಾಠಕ್, ಮಂಜು ವ್ಯಾಸ್, ವಕೀಲ ವಿಷ್ಣು ಶಂಕರ್ ಜೈನ್, ವಕೀಲ ಸುಭಾಷ್ ಚತುರ್ವೇದಿ, ವಕೀಲ ದೀಪಕ್ ಸಿಂಗ್ ಮತ್ತು ಶ್ರೀ. ಸೋಹನಲಾಲ್

ವಾರಣಾಸಿ, ಜನವರಿ 31 (ಸುದ್ದಿ) – ಜ್ಞಾನವಾಪಿಯ ‘ವ್ಯಾಸ’ ನೆಲಮಾಳಿಗೆಯಲ್ಲಿ ನಿತ್ಯ ಪೂಜೆ ಸಲ್ಲಿಸಲು ಹಿಂದೂಗಳಿಗೆ ಜಿಲ್ಲಾ ನ್ಯಾಯಾಲಯ ಅನುಮತಿ ನೀಡಿದೆ. ಈ ನಿರ್ಧಾರದಿಂದಾಗಿ ಈಗ ಪ್ರತಿಯೊಬ್ಬ ಹಿಂದುವೂ ಈ ನೆಲಮಾಳಿಗೆಗೆ ಹೋಗಿ ದರ್ಶನ ಮತ್ತು ಪೂಜೆಯನ್ನು ಮಾಡಬಹುದಾಗಿದೆ. 1993ರ ಮೊದಲು ಇಲ್ಲಿ ನಿತ್ಯ ಪೂಜೆ ನಡೆಯುತ್ತಿತ್ತು; ಆದರೆ ಆಗಿನ ಸರಕಾರ ಇದನ್ನು ನಿಷೇಧಿಸಿತ್ತು. ಈಗ ಪೂಜೆಗೆ ಅನುಮತಿ ನೀಡಬೇಕೆಂದು ಹಿಂದೂ ಪಕ್ಷ ಆಗ್ರಹಿಸಿತ್ತು. ಮುಂದಿನ 7 ದಿನಗಳಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ವ್ಯವಸ್ಥೆ ಮಾಡುವಂತೆ ವಾರಣಾಸಿಯ ಜಿಲ್ಲಾಧಿಕಾರಿಗೆ ನ್ಯಾಯಾಲಯ ಆದೇಶಿಸಿದೆ. ನ್ಯಾಯಾಲಯದ ಆದೇಶದ ನಂತರ ಪ್ರಸ್ತುತ ಕಾಶಿ ವಿಶ್ವನಾಥ ದೇವಸ್ಥಾನದ ಆವರಣದಲ್ಲಿ ನಂದಿಯ ಮುಂಭಾಗದಿಂದ ಜ್ಞಾನವಾಪಿ ವ್ಯಾಸ ನೆಲಮಾಳಿಗೆಗೆ ಹೋಗುವ ರಸ್ತೆಯನ್ನು ನಿರ್ಮಿಸಲಾಗುವುದು. ಸದ್ಯ ಇಲ್ಲಿ ಕಬ್ಬಿಣದ ಬೇಲಿ ಅಳವಡಿಸಲಾಗಿದೆ. ‘ಕಾಶಿ ವಿಶ್ವನಾಥ ಟ್ರಸ್ಟ್’ ಅಡಿಯಲ್ಲಿ ನೆಲಮಾಳಿಗೆಯಲ್ಲಿ ಪೂಜೆ ನಡೆಯಲಿದೆ. ಕೆಲವು ದಿನಗಳ ಹಿಂದೆ, ಪುರಾತತ್ವ ಇಲಾಖೆಯ ಸಮೀಕ್ಷೆಯು ಜ್ಞಾನವಾಪಿಯಲ್ಲಿ ದೇವಾಲಯವನ್ನು ಕೆಡವಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬುದಕ್ಕೆ ಪುರಾವೆಗಳನ್ನು ಬಹಿರಂಗಪಡಿಸಿದೆ ಎಂದು ಅವರ ವರದಿ ಬಹಿರಂಗಪಡಿಸಿತ್ತು. ಅದರ ನಂತರ ಈಗ ಹಿಂದೂಗಳಿಗೆ ಪೂಜೆ ಮಾಡಲು ಅನುಮತಿ ನೀಡಲಾಗಿದೆ.

ಮಾಧ್ಯಮದೊಂದಿಗೆ ಮಾತನಾಡುತ್ತಿರುವ ವಕೀಲ ವಿಷ್ಣು ಶಂಕರ್ ಜೈನ್

ನ್ಯಾಯಾಲಯದ ತೀರ್ಪು ಐತಿಹಾಸಿಕ ! – ವಕೀಲ ವಿಷ್ಣು ಶಂಕರ್ ಜೈನ್

ಹಿಂದೂ ಪಕ್ಷದ ಪರ ವಕೀಲ ವಿಷ್ಣು ಶಂಕರ್ ಜೈನ್ ಮಾತನಾಡಿ, ಹಿಂದೂಗಳ ಕನಸು ನನಸಾಗಿದೆ. ವ್ಯಾಸ ಕುಟುಂಬದವರು ಈಗ ನೆಲಮಾಳಿಗೆಯಲ್ಲಿ ಪೂಜೆ ಮಾಡುತ್ತಾರೆ. ಪೂಜೆಗೆ ಅನುಮತಿ ಕೇಳಿದೆವು. ಸೋಮನಾಥ ವ್ಯಾಸರ ಕುಟುಂಬವು 1993 ರವರೆಗೆ ನೆಲಮಾಳಿಗೆಯಲ್ಲಿ ಪೂಜೆ ಮಾಡುತ್ತಿದ್ದರು. 1993 ರ ನಂತರ, ಅಂದಿನ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಮೌಖಿಕ ಆದೇಶದ ಮೇರೆಗೆ ನೆಲಮಾಳಿಗೆಯಲ್ಲಿ ಪೂಜೆಯನ್ನು ನಿಲ್ಲಿಸಲಾಯಿತು. ಈ ಬಗ್ಗೆ ಯಾವುದೇ ಲಿಖಿತ ಆದೇಶವಿಲ್ಲ. ನ್ಯಾಯಾಧೀಶ ಕೆ.ಎಂ. ಪಾಂಡೆ ಅವರು ಫೆಬ್ರವರಿ 1, 1986 ರಂದು ಶ್ರೀರಾಮಜನ್ಮಭೂಮಿಯಲ್ಲಿನ ಶ್ರೀ ರಾಮಮಂದಿರದ ಬೀಗ ತೆರೆಯಲು ನಿರ್ಧರಿಸಿದ್ದರು. ಇಂದಿನ ನಿರ್ಧಾರವನ್ನು ನ್ಯಾಯಾಧೀಶ ಪಾಂಡೆಯವರ ತೀರ್ಪಿನೊಂದಿಗೆ ಹೋಲಿಸುತ್ತಿದ್ದೇವೆ. ವಾರಣಾಸಿ ಜಿಲ್ಲಾ ನ್ಯಾಯಾಲಯದ ತೀರ್ಪು ಐತಿಹಾಸಿಕವಾಗಿದೆ. ಈ ಹಿಂದೆ ಹಿಂದೂ ಸಮುದಾಯದ ಪೂಜೆಯನ್ನು ನಿಲ್ಲಿಸಲು ಸರಕಾರ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿತ್ತು, ಇಂದು ನ್ಯಾಯಾಲಯ ಅದನ್ನು ರದ್ದುಗೊಳಿಸಿದೆ. ಇನ್ನು ಮುಂದೆ, ವಜೂಖಾನವನ್ನು (ಪ್ರಾರ್ಥನೆ ಮಾಡುವ ಮೊದಲು ಕೈಕಾಲು ತೊಳೆಯುವ ಸ್ಥಳ) ಸಮೀಕ್ಷೆ ಮಾಡುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.

ವಾರಣಾಸಿ ಜಿಲ್ಲಾಡಳಿತಕ್ಕೆ ಜ್ಞಾನವಾಪಿಯ ನಿಯಂತ್ರಣ

ವಾರಣಾಸಿ ಜಿಲ್ಲಾಡಳಿತವು ಜ್ಞಾನವಾಪಿ ಆವರಣದ ದಕ್ಷಿಣ ನೆಲಮಾಳಿಗೆಯನ್ನು ಜನವರಿ 24 ರಂದು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. ಈ ಸಂಬಂಧ ಆಚಾರ್ಯ ವೇದವ್ಯಾಸ ಪೀಠದ ಪ್ರಧಾನ ಅರ್ಚಕ ಶೈಲೇಂದ್ರ ಕುಮಾರ್ ಪಾಠಕ್ ಪ್ರಕರಣ ದಾಖಲಿಸಿದ್ದರು. ನಂತರ ವಾರಣಾಸಿ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿಯ ದಕ್ಷಿಣ ನೆಲಮಾಳಿಗೆಯ ನಿಯಂತ್ರಣವನ್ನು ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಹಸ್ತಾಂತರಿಸಿತ್ತು.

ಜ್ಞಾನವಾಪಿ ಪ್ರಕರಣದಲ್ಲಿ ನ್ಯಾಯವಾದಿಗಳು ಮತ್ತು ಅರ್ಜಿದಾರರೊಂದಿಗೆ `ಸನಾತನ ಪ್ರಭಾತ’ ದ ವಿಶೇಷ ಪ್ರತಿನಿಧಿಯೊಂದಿಗೆ ಸಂವಾದ!

ಇದನ್ನೆಲ್ಲಾ ಬಾಬಾ ವಿಶ್ವನಾಥರೇ ಮಾಡುತ್ತಿದ್ದು, ನಾವು ಕೇವಲ ನಿಮಿತ್ತ ಮಾತ್ರ ! – ವಕೀಲ ವಿಷ್ಣು ಶಂಕರ ಜೈನ

ಫೆಬ್ರವರಿ 1, 1986 ರಂದು ನ್ಯಾಯಮೂರ್ತಿ ಕೆ. ಎಂ. ಪಾಂಡೆಯವರು ಅಯೋಧ್ಯೆಯ ಶ್ರೀರಾಮ ಮಂದಿರದ ಬೀಗವನ್ನು ತೆರೆದು ಅಲ್ಲಿ ಪೂಜೆ ಮಾಡಲು ಹಿಂದೂಗಳಿಗೆ ಅನುಮತಿ ನೀಡಿದ್ದಂತೆಯೇ, ಜ್ಞಾನವಾಪಿಯ ಸಂದರ್ಭದಲ್ಲಿ ನೀಡಿರುವ ನಿರ್ಣಯವನ್ನು ಕೂಡ ನೋಡಬೇಕು. ಜ್ಞಾನವಾಪಿ ಪ್ರಕರಣದ ಸಂದರ್ಭದಲ್ಲಿ ಇದೊಂದು ಮೈಲುಗಲ್ಲಾಗಿದೆ. ಇದೆಲ್ಲವನ್ನೂ ಬಾಬಾ ವಿಶ್ವನಾಥರೇ ಮಾಡಿಕೊಳ್ಳುತ್ತಿದ್ದಾರೆ. ನಾವೆಲ್ಲರೂ ಕೇವಲ ನಿಮಿತ್ತ ಮಾತ್ರರಾಗಿದ್ದೇವೆ. ಸಂವಿಧಾನದ ಕಲಂ 25ರ `ಧರ್ಮಸ್ವಾತಂತ್ರ್ಯ’ದ ಅಧಿಕಾರದ ಅಡಿಯಲ್ಲಿ ಹಿಂದೂಗಳಿಗೆ ಅಲ್ಲಿ ಪೂಜೆ ಮಾಡಲು ಅನುಮತಿ ಸಿಗಲಿದೆ.

ಹಿಂದೂ ಸಮುದಾಯ ಇಂದು ತಥಾಕಥಿತ ಜ್ಞಾನವಾಪಿ ಮಸೀದಿಯ ಒಳಗೆ ಪ್ರವೇಶ ಮಾಡಿದ್ದಾರೆ!-ನ್ಯಾಯವಾದಿ ಮದನ ಮೋಹನ ಯಾದವ

ಇದು ಹಿಂದೂಗಳ ಐತಿಹಾಸಿಕ ವಿಜಯವಾಗಿದೆ. ಕಳೆದ 30 ವರ್ಷಗಳಿಂದ ಹಿಂದೂಗಳಿಗೆ ಪೂಜೆ ಮಾಡಲು ನಿರ್ಬಂಧಿಸಲಾಗಿತ್ತು. ಅದನ್ನು ರದ್ದುಗಳಿಸಲಾಗಿದೆ. ನ್ಯಾಯಾಲಯದ ಈ ಆದೇಶದಿಂದ ಹಿಂದೂ ಸಮಾಜವು ಇಂದು ತಥಾಕಥಿತ ಜ್ಞಾನವಾಪಿ ಮಸೀದಿಯ ಒಳಗೆ ಪ್ರವೇಶಿಸಿದೆ.

ಶೃಂಗಾರ ಗೌರಿಯನ್ನು ಶೋಧಿಸಲು ಹೋಗಿದ್ದೆವು, ಆದರೆ ನಮಗೆ ಸಾಕ್ಷಾತ್ ಶಿವನೇ ಭೇಟಿಯಾದನು! -ಅರ್ಜಿದಾರ ಮಂಜು ವ್ಯಾಸ

ತಲವಾರಿನ ಬಲದಿಂದ ನಮ್ಮ ಪೂಜಾಸ್ಥಾನವನ್ನು ನಷ್ಟಗೊಳಿಸಲಾಗಿತ್ತು. ಇಂದು ನಾವು ಕಾನೂನಿನ ಮೂಲಕ ಜಯಶಾಲಿಗಳಾಗಿದ್ದೇವೆ. ನಾವು ಜ್ಞಾನವಾಪಿಯ ಶೃಂಗಾರ ಗೌರಿ ದೇವಿಯ ಮಂದಿರದ ಪೂಜೆಯನ್ನು ಮಾಡಲು ಅನುಮತಿಯನ್ನು ಕೋರಿದ್ದೆವು. ಅವಳನ್ನು ಶೋಧಿಸಲು ಹೋಗಿದ್ದೆವು: ಆದರೆ ನಮಗೆ ಇಂದು ಸಾಕ್ಷಾತ್ ಶಿವನೇ ಭೇಟಿಯಾದನು !


ಸನಾತನಿ ಹಿಂದೂಗಳಿಗಷ್ಟೇ ಅಲ್ಲ, ಬದಲಾಗಿ ಸಂಪೂರ್ಣ ವಿಶ್ವದ ವಿಜಯ! -ಅರ್ಜಿದಾರರಾದ ಸೀತಾ ಸಾಹು

ಇಂದಿನ ವಿಜಯವು ಸನಾತನ ಮತ್ತು ಸತ್ಯದ ವಿಜಯವಾಗಿದೆ. ಎಲ್ಲರಿಗೂ ಅಭಿನಂದನೆಗಳು ! ನಂದಿಯ ವರ್ಷಗಳ ಕಾಯುವಿಕೆಯು ಈಗ ಪೂರ್ಣಗೊಂಡಿದೆ. ಇದು ಕೇವಲ ಸನಾತನ ಹಿಂದೂಗಳಿಗಷ್ಟೇ ಅಲ್ಲ, ಸಂಪೂರ್ಣ ವಿಶ್ವದ ವಿಜಯವಾಗಿದೆ.’ ಕಾರಣ ಇಂದು ಸತ್ಯ ಗೆದ್ದಿದೆ.

ಶ್ರೀರಾಮನು ವಿರಾಜಮಾನನಾದನು ಮತ್ತು ಅವನು ತನ್ನ ಆರಾಧ್ಯ ದೇವತೆಯ ಮಾರ್ಗವನ್ನು ಪ್ರಶಸ್ತ(ತೆರವು/ಸರಿ?) ಮಾಡಿದನು!- ಶ್ರೀ ಮಹಂತ ಶಿವಪ್ರಸಾದ ಪಾಂಡೆ ಲಿಂಗಿಯಾ ಮಹಾರಾಜ, ಆದಿ ವಿಶ್ವೇಶ್ವರ ಜ್ಯೋತಿರ್ಲಿಂಗ, ಜ್ಞಾನವಾಪಿ

ಇಂದು ಕೋಟ್ಯಾವಧಿ ಹಿಂದೂಗಳ ವಿಜಯದ ದಿನ. ಭಗವಾನ ರಾಮನು ವಿರಾಜಮಾನನಾದನು ಮತ್ತು ಅವನು ತನ್ನ ಆರಾಧ್ಯನ ಮಾರ್ಗವನ್ನು ಪ್ರಶಸ್ತ(ತೆರವು/ಸರಿ?) ಮಾಡಿ ಮಾಡಿಕೊಟ್ಟನು.

ನಿವೃತ್ತರಾಗುವ ಮುನ್ನ ನ್ಯಾಯಾಧೀಶ ಎ.ಕೆ. ವಿಶ್ವೇಶ್ ಅವರ ಕೊನೆಯ ಆದೇಶ !

ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎ.ಕೆ. ವಿಶ್ವೇಶ್ ಅವರು ಪೂಜೆಗೆ ಅವಕಾಶ ಮಾಡಿಕೊಟ್ಟರು. ಕುತೂಹಲದ ಸಂಗತಿಯೆಂದರೆ, ಇಂದು (ಜನವರಿ 31) ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯಾಧೀಶ ವಿಶ್ವೇಶ್ ಅವರ ಕೆಲಸದ ಕೊನೆಯ ದಿನವಾಗಿತ್ತು. ಅವರ ಅಧಿಕಾರಾವಧಿ ಮುಗಿದು ನಿವೃತ್ತಿಯಾಗಿದ್ದಾರೆ. ಜಿಲ್ಲಾ ನ್ಯಾಯಾಲಯದ ಈ ತೀರ್ಪನ್ನು ಮುಸ್ಲಿಂ ಪಕ್ಷವು ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಿದೆ ಎಂದು ಅವರು ಘೋಷಿಸಿದ್ದಾರೆ.

ಸಂಪಾದಕೀಯ ನಿಲುವು

ಕಳೆದ 30 ವರ್ಷಗಳಿಂದ ಕೇವಲ ಸರಕಾರದ ಮೌಖಿಕ ಆದೇಶದಿಂದ ನಿಲ್ಲಿಸಿದ್ದ ಪೂಜೆ ಪುನರಾರಂಭಿಸಲು ಹಿಂದೂಗಳು ನ್ಯಾಯಾಲಯದ ಮೊರೆ ಹೋಗುವುದು ನಂತರದ ಸರಕಾರಗಳಿಗೆ ನಾಚಿಕೆಗೇಡಿನ ಸಂಗತಿ ! ನಂತರ ಬಂದ ಸರಕಾರಗಳು ಮೌಖಿಕ ಆದೇಶ ನೀಡಿ ಈ ಪೂಜೆಯನ್ನು ಪುನರಾರಂಭಿಸಲಿಲ್ಲವೇಕೆ ? ಇಂಥದೊಂದು ಪ್ರಶ್ನೆ ಪ್ರತಿಯೊಬ್ಬ ಹಿಂದೂವಿನ ಮನದಲ್ಲಿ ಮೂಡುತ್ತದೆ !