‘ಈಶ್ವರನ ನಂತರ ನಮ್ಮದೇ ಅಧಿಕಾರ ಇದೆ’, ಹೀಗೆ ತಿಳಿದಿರುವ ದುಷ್ಟ ಅಹಂಕಾರಿ ಪಾಶ್ಚಾತ್ಯರಿಂದ (ಮತ್ತು ಅವರ ಆಂಗ್ಲ ಶಿಕ್ಷಣದ ವಿಲಕ್ಷಣ ಪ್ರಭಾವದಿಂದ ನಮ್ಮ ‘ಸೆಕ್ಯುಲರ್’ (ಜಾತ್ಯಾತೀತ) ಹಿಂದೂ ಪಂಡಿತರು) ಶೃತಿ, ಸ್ಮೃತಿ, ಪುರಾಣಾದಿ ವಾಂಙ್ಮಯವನ್ನು ಅಸೂಯೆಯಿಂದ ನೋಡಲಾಗಿದೆ. ವೇದ ಇದು ಗ್ರಾಮೀಣಗೀತೆ ಆಗಿದೆ, ಇವು ಮಾನವನ ಬಾಲ್ಯಾವಸ್ಥೆಯಲ್ಲಿನ ಪಂಚ (ಮಹಾ) ಭೂತಗಳ ಕಥೆಯಿಂದ ನಿರ್ಮಾಣವಾಗಿರುವ ಬಾಲಿಶ ಕಾವ್ಯಗಳು ಆಗಿವೆ. ಆ ಕಾಲಕ್ಕೆ ಅವು ಅನುರೂಪವಾಗಿದ್ದರು, ಇಂದು ಅದರ ಉಪಯೋಗ ಆಗುವುದಿಲ್ಲ. ಅದನ್ನು ಪ್ರಮಾಣ ಎಂದು ತಿಳಿದರೆ ನಮ್ಮ ಇಂದಿನ ಯಾಂತ್ರಿಕಜ್ಞಾನವನ್ನು (ಟೆಕ್ನೋಲಜಿ) ನೀವು ಕಳೆದುಕೊಳ್ಳಬೇಕಾಗುತ್ತದೆ, ಹೀಗೆ ಹಿಟ್ಲರ್‌ನ ಗೋಬೆಲ್ಸ್‌ನನ್ನು ನಾಚಿಸುವಂತಹ ಪ್ರಚಾರ ಮತ್ತು ಪ್ರಸಾರ ನಡೆಸಲಾಯಿತು. ಅವರು ಎಲ್ಲಾ ಪ್ರಸಾರ ಮಾಧ್ಯಮಗಳನ್ನು ಚೆನ್ನಾಗಿ ಉಪಯೋಗ ಮಾಡಿಕೊಂಡರು. (ಆಧಾರ : ಮಾಸಿಕ, ಘನಗರ್ಜಿತ , ಅಕ್ಟೋಬರ್ ೨೦೨೧)