೧. ಜೀವನವನ್ನು ಆನಂದವಾಗಿಡಲು ನಿಸರ್ಗದ ದೊಡ್ಡ ಪಾಲು ‘ಬಣ್ಣವು ವಿಶ್ವದ ಸೌಂದರ್ಯದ ಸಾರವಾಗಿದೆ. ಆಕಾಶದ ಬಣ್ಣ ನೀಲಿ, ಗಿಡಗಳ ಬಣ್ಣ ಹಸಿರು, ವಿವಿಧ ಹೂವುಗಳ ಅನೇಕ ಬಣ್ಣಗಳು, ಕಾಮನಬಿಲ್ಲಿನ ಏಳುಬಣ್ಣಗಳು. ವಿಚಾರ ಮಾಡಿರಿ ಈ ಎಲ್ಲ ಬಣ್ಣಗಳು ಇಲ್ಲದೇ ಇದ್ದಿದ್ದರೆ ಈ ಸೃಷ್ಟಿ ಮತ್ತು ಪರ್ಯಾಯವಾಗಿ ನಮ್ಮ ಜೀವನದಲ್ಲಿ ರಸವೇ ಇರಲಾರದು.
೨. ನಮ್ಮ ಆಹಾರ ನೈಸರ್ಗಿಕ ಬಣ್ಣಗಳಿಂದ ಪರಿಪೂರ್ಣವಾಗಿರಬೇಕು !
ಕಲ್ಪನೆ ಮಾಡಿ ನೋಡಿ ಬಿಳಿ ಅನ್ನದ ಮೇಲೆ ಬಿಳಿ ತೊವ್ವೆ, ಬಿಳಿ ಚಪಾತಿ, ರೊಟ್ಟಿಯ ಜೊತೆಗೆ ತಿನ್ನಲು ಬಿಳಿ ಪಲ್ಯೆ, ಸಾರು, ಚಟ್ನಿ, ಕೋಸಂಬರಿ ಈ ಎಲ್ಲವೂ ಬಿಳಿಬಣ್ಣ, ಬಿಳಿ ಜಿಲೇಬಿ, ಬಿಳಿ ಉಂಡೆ, ಬಿಳಿ ಗುಲಾಬಜಾಮೂನು, ಬಿಳಿ ಮಾವಿನಹಣ್ಣುಗಳಿದ್ದರೆ ತಿನ್ನುವ ಇಚ್ಛೆಯಾದರೂ ಆಗಬಹುದೇ ? ಆಹಾರದಲ್ಲಿನ ಈ ಬಣ್ಣಗಳ ವೈವಿಧ್ಯವು ಕೇವಲ ನೇತ್ರಸುಖಕ್ಕಾಗಿ ಮಾತ್ರವಲ್ಲ ಅದರ ಮುಂದೆ ಹೋಗಿ ಇನ್ನೂ ಹಲವು ಉಪಯೋಗಗÀಳಿವೆ. ನಮ್ಮ ಆಹಾರದಲ್ಲಿ ಪ್ರತಿಯೊಂದು ಬಣ್ಣಕ್ಕೆ ಒಂದು ವಿಶಿಷ್ಟ ಸ್ಥಾನವಿದೆ, ಆದ್ದರಿಂದಲೇ ನಮ್ಮ ಆಹಾರವು ನೈಸರ್ಗಿಕ ಬಣ್ಣಗಳಿಂದ ಪರಿಪೂರ್ಣ ಆಗಿರಬೇಕು.
೩. ಆಹಾರ ಪದಾರ್ಥಗಳಲ್ಲಿ ಬಣ್ಣಗಳ ಮಹತ್ವ !
೩ ಅ. ಕೆಂಪು ಬಣ್ಣ : ಇದು ನಮ್ಮ ರಕ್ತ ಮತ್ತು ಸ್ನಾಯುಗಳ ಜೀವಕೋಶಗಳ ಬಣ್ಣವಾಗಿದೆ. ಕೆಂಪು ಬಣ್ಣದ ಆಹಾರವು ನಮ್ಮ ಶರೀರದಲ್ಲಿನ ಚೈತನ್ಯವನ್ನು ಜಾಗೃತಗೊಳಿಸುತ್ತದೆ, ರಕ್ತವನ್ನು ಹೆಚ್ಚಿಸುತ್ತದೆ ಮತ್ತು ನಿರೋಗಿಯಾಗಿ ಇಡುತ್ತದೆ. ಈ ಬಣ್ಣದ ಮೂಲ ಗುಣಧರ್ಮವು ಉಷ್ಣವಾಗಿರುವುದರಿಂದ ಶರೀರವನ್ನು ಆನಂದ ಮತ್ತು ಚುರುಕಾಗಿಡಲು ಸಹಾಯ ಮಾಡುತ್ತದೆ. ಉದಾ. ಟೊಮೆಟೊ, ಬೀಟರೂಟ್, ಸೇಬು, ಕೆಂಪು ಮೂಲಂಗಿ, ಕೆಂಪು
ರಾಜಗಿರಿ, ರಾಗಿ, ಖರ್ಜೂರ, ಸ್ಟ್ರಾಬೇರಿ ಮತ್ತು ಚೇರಿ ಇತ್ಯಾದಿಗಳು.
೩ ಆ. ಕೇಸರಿ ಬಣ್ಣ : ಮುಂಜಾನೆಯ ಸಮಯದಲ್ಲಿನ ಆಕಾಶದಲ್ಲಿನ ಈ ಬಣ್ಣವು ಶರೀರದಲ್ಲಿ ನವನಿರ್ಮಾಣ ಮತ್ತು ಉತ್ಸಾಹವನ್ನು ನೀಡುತ್ತದೆ. ಇದರಲ್ಲಿ ‘ಅ’ ಜೀವಸತ್ತ್ವವು ಸಾಕಷ್ಟು ಪ್ರಮಾಣದಲ್ಲಿರುತ್ತದೆ, ಅದು ಕಣ್ಣುಗಳಿಗೆ ಮತ್ತು ತ್ವಚೆಗಾಗಿ ಉಪಯುಕ್ತವಾಗಿರುತ್ತದೆ. ಉದಾ. ಗಜ್ಜರಿ, ಪಪ್ಪಾಯಿ, ಕಿತ್ತಳೆ, ಚೆನ್ನಂಗಿ ಬೇಳೆ ಇತ್ಯಾದಿಗಳು ಮೂಲದಲ್ಲಿ ಉಷ್ಣವಾಗಿರುವ ಈ ಬಣ್ಣವು ಶರೀರ ದಲ್ಲಿನ ಉಷ್ಣತೆಯನ್ನು ಸಮವಾಗಿಡಲು ಸಹಾಯ ಮಾಡುತ್ತದೆ.
೩ ಇ. ಹಳದಿ ಬಣ್ಣ : ತಂಪು ಪ್ರಕೃತಿ ಇರುವ ವ್ಯಕ್ತಿಯಲ್ಲಿ ಉಷ್ಣತೆಯನ್ನು ನಿರ್ಮಿಸುವುದು ಇದು ಈ ಬಣ್ಣದ ಮುಖ್ಯ ಕೆಲಸವಾಗಿದೆ ! ಶರೀರದಲ್ಲಿನ ಅಗ್ನಿಯನ್ನು ಪ್ರಜ್ವಲಿಸುವುದರೊಂದಿಗೆ ಚಯಾಪಚಯದ (ಮೆಟಬಾಲಿಜಮ್‌ನ) ಕ್ರಿಯೆಯನ್ನು ನಿಯಮಿತವಾಗಿಡಲು ಸಹಾಯ ಮಾಡುತ್ತದೆ. ಇದರಲ್ಲಿ ‘ಅ’ ಜೀವಸತ್ವವು ಸಾಕಷ್ಟು ಪ್ರಮಾಣದಲ್ಲಿ ದೊರಕುತ್ತದೆ. ಉದಾ. ಮಾವಿನಹಣ್ಣು, ಬಾಳೆಹಣ್ಣು, ಹಳದಿ ದೊಣ್ಣೆಮೆಣಸಿನಕಾಯಿ, ಅನಾನಸ, ಹಾಗೆಯೇ ಎಲ್ಲ ಪ್ರಕಾರದ ಬೇಳೆಗಳು ಮತ್ತು ಬೆಲ್ಲ ಇತ್ಯಾದಿಗಳು.
೩ ಈ. ಹಸಿರು ಬಣ್ಣ : ಈ ಬಣ್ಣವು ಚೈತನ್ಯ, ನಿರ್ಮಿತಿ, ಊರ್ಜೆ ಮತ್ತು ಬೆಳವಣಿಗೆ ಇವುಗಳ ಪ್ರತೀಕವಾಗಿದೆ. ಅದೇ ರೀತಿ ಶಾಂತ ಮತ್ತು ತಂಪು ಪ್ರವೃತ್ತಿಯದ್ದಾಗಿದೆ. ಶರೀರದಲ್ಲಿನ ಮೃತ ಜೀವಕೋಶಗಳನ್ನು ತೆಗೆದುಹಾಕಿ ಆರೋಗ್ಯಕರ ಹೊಸ ಜೀವಕೋಶಗಳನ್ನು ನಿರ್ಮಿಸುವುದು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ರೋಗಗಳನ್ನು ತಡೆಗಟ್ಟುವುದು, ಇದೆಲ್ಲವನ್ನು ಹಸಿರುಬಣ್ಣ ಮಾಡುತ್ತದೆ. ಕಣ್ಣಿಗೆ ಹಿತವೆನಿಸುವ ಈ ಬಣ್ಣವು ಅಷ್ಟೇ ಆರೋಗ್ಯಕರವಾಗಿದೆ. ಉದಾ. ಎಲ್ಲ ಹಸಿರು ಸೊಪ್ಪುತರಕಾರಿಗಳು ಮತ್ತು ಹಣ್ಣುಗಳು.
೩ ಉ. ಬಿಳಿ ಬಣ್ಣ : ಇದು ಎಲ್ಲ ಬಣ್ಣಗಳೊಂದಿಗೆ ಹೊಂದಿಕೊಳ್ಳುವ (ಸರ್ವಸಮಾವೇಶಕ) ಬಣ್ಣವಾಗಿದೆ’ ಈ ಬಣ್ಣದ ಆಹಾರಪದಾರ್ಥ ಗಳಲ್ಲಿ ಅನೇಕ ಗುಣಗಳು ಒಟ್ಟುಗೂಡಿರುತ್ತವೆ. ಹಾಗೆಯೇ ಈ ಬಣ್ಣವು ಶರೀರದಲ್ಲಿನ ಶಕ್ತಿಗಳ ಸಮತೋಲನವನ್ನಿಡುವ ಕೆಲಸವನ್ನು ಮಾಡುತ್ತದೆ. ಅದೇ ರೀತಿ ನಮ್ಮ ಶರೀರದ ತೂಕವನ್ನು ಸಹಿಸುವ ಮೂಳೆಗಳ ಬಣ್ಣವೂ ಇದೇ ಆಗಿರುವುದರಿಂದ ಅವುಗಳನ್ನು ಗಟ್ಟಿಮುಟ್ಟಾಗಿ ಇಡುವ ಕೆಲಸವನ್ನು ಮಾಡುತ್ತದೆ. ಇದರ ಉತ್ತಮ ಉದಾಹರಣೆಯೆಂದರೆ, ಹಾಲು, ಹಾಲಿನ ಪದಾರ್ಥಗಳು ಮತ್ತು ಬಿಳಿ ಈರುಳ್ಳಿ ಇತ್ಯಾದಿಗಳು.
೩ ಊ. ನೀಲಿ ಬಣ್ಣ : ನಿಸರ್ಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುವ ನೀಲಿ ಬಣ್ಣವು ನೀರಿನ ರೂಪದಲ್ಲಿ ಶರೀರದೊಳಗೆ ಹೋದನಂತರ ಶರೀರವನ್ನು ಸ್ವಚ್ಛ, ನಿರ್ಮಲ ಮತ್ತು ಆರೋಗ್ಯಕಗ್ ವಾಗಿಡಲು ಸಹಾಯ ಮಾಡುತ್ತದೆ.
೩ ಎ. ನೇರಳೆ ಬಣ್ಣ : ನೇರಳೆ ಬಣ್ಣವು ಕೆಂಪು ಮತ್ತು ನೀಲಿ ಬಣ್ಣದ ಮಿಶ್ರಣದಿಂದಾಗಿದೆ. ಈ ಬಣ್ಣವು ಶರೀರದಲ್ಲಿನ ಊರ್ಜೆ ಮತ್ತು ಅದನ್ನು ಉತ್ಪನ್ನ ಮಾಡುವ ವಿಷಯಗಳನ್ನು (ಪರ್ಯಾಯವಾಗಿ ಸಕ್ಕರೆಯ) ಸಮತೋಲನವನ್ನು ಮಾಡುತ್ತದೆ. ಅದಕ್ಕಾಗಿ ಆಹಾರದಲ್ಲಿ ನೇರಳೆ, ಕವಳೆ ಹಣ್ಣುಗಳಿರಬೇಕು.
೩ ಐ. ಕಪ್ಪು ಬಣ್ಣ : ಕಾರ್ಬನ್‌ನ ರೂಪದಲ್ಲಿ ಅಶುದ್ಧತೆಯನ್ನು ಹೀರಿಕೊಂಡು ಶುದ್ಧತೆಯನ್ನು ಸ್ಥಾಪನೆ ಮಾಡುವ ಈ ಬಣ್ಣವು ಪ್ರಸಿದ್ಧವಾಗಿದೆ. ಶರೀರದಲ್ಲಿರುವ ವಿಷಕಾರಿ ಪದಾರ್ಥಗಳನ್ನು ಮತ್ತು ವಾಯುವನ್ನು ಶರೀರದಿಂದ ಹೀರಿಕೊಂಡು ಹೊರಗೆ ಹಾಕುವ ಕೆಲಸವನ್ನು ಇದು ಮಾಡುತ್ತದೆ. ಅದಕ್ಕಾಗಿ ಕಪ್ಪು ದ್ರಾಕ್ಷಿ, ಒಣ ಕಪ್ಪು ದ್ರಾಕ್ಷಿಗಳು, ಯೋಗ್ಯ ಪ್ರಮಾಣದಲ್ಲಿ ಸಾಸಿವೆ ಮತ್ತು ಕಬ್ಬಿಣದ ಬಾಣಲೆಯಲ್ಲಿ ಬೇಯಿಸಿದ ಪಲ್ಯಗಳನ್ನು ಆಹಾರದಲ್ಲಿ ಅವಶ್ಯ ಬಳಸಬೇಕು.’
(ಆಧಾರ : ಮಾಸಿಕ ‘ವೇದಾಯನ’, ದೀಪಾವಳಿ ೨೦೧೨)