ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಕೈ ಬೆರಳುಗಳಿಂದ, ಹಾಗೆಯೇ ಕಣ್ಣುಗಳಿಂದ ಪ್ರಕ್ಷೇಪಿಸುವ ತೇಜತತ್ತ್ವರೂಪಿ ಪ್ರಕಾಶದ ಪ್ರಯೋಗ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಸಾಧನೆ ಮಾಡುವ ಉನ್ನತ ವ್ಯಕ್ತಿಯ ದೇಹದಿಂದ ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚತತ್ತ್ವಗಳು ಸತತವಾಗಿ ಪ್ರಕ್ಷೇಪಿಸುತ್ತಿರುತ್ತವೆ. ಈ ಪಂಚತತ್ತ್ವಗಳಲ್ಲಿನ ತೇಜತತ್ತ್ವವನ್ನು ಅನುಭವಿಸುವುದು ಸ್ವಲ್ಪ ಸುಲಭವಾಗಿದೆ. ತೇಜತತ್ತ್ವವು ನಮಗೆ ಉಷ್ಣತೆ ಮತ್ತು ಪ್ರಕಾಶದ ಮಾಧ್ಯಮದಿಂದ ಅರಿವಾಗುತ್ತದೆ. ಇವುಗಳಲ್ಲಿನ ಪ್ರಕಾಶದ ಅನುಭೂತಿ ಯನ್ನು ಪಡೆಯಲಿಕ್ಕಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕೆಲವು ಪ್ರಯೋಗಗಳನ್ನು ಮಾಡಿದರು. ‘ಯಾವುದಾದರೊಂದು ಸ್ಥಳದ ಕಡೆಗೆ ಅವರು ಕೈ ಮಾಡಿದ ನಂತರ ಅಥವಾ ಆ ಸ್ಥಳದ ಕಡೆಗೆ ಅವರು ನೋಡಿದ ನಂತರ ಕೈ ಬೆರಳುಗಳಿಂದ ಅಥವಾ ಕಣ್ಣುಗಳಿಂದ ತೇಜತತ್ತ್ವ ಪ್ರಕಾಶದ ರೂಪದಲ್ಲಿ ಪ್ರಕ್ಷೇಪಿಸುವುದರಿಂದ ಆ ಜಾಗದಲ್ಲಿ ಯಾವ ಬದಲಾವಣೆಗಳನ್ನು ಅನುಭವಿಸಬಹುದು ?’, ಈ ಸಂದರ್ಭದಲ್ಲಿ ಈ ಪ್ರಯೋಗವಿತ್ತು. ಇಲ್ಲಿ ಈ ಕುರಿತು ಬಂದಿರುವ ಅನುಭೂತಿಗಳನ್ನು ಮತ್ತು ಆ ಅನುಭೂತಿಗಳ ಹಿಂದಿನ ಶಾಸ್ತ್ರವನ್ನು ಕೊಡಲಾಗಿದೆ. ಕಳೆದ ವಾರ ಇದರ ಕೆಲವು ಅಂಶಗಳನ್ನು ನೀಡಲಾಗಿತ್ತು. ಈ ವಾರ ಅದರ ಮುಂದಿನ ಭಾಗ ನೋಡೋಣ.

(ಸದ್ಗುರು) ಡಾ. ಮುಕುಲ ಗಾಡಗೀಳ

೩. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಎದುರಿಗೆ ನೋಡಿದಾಗ ಆ ಭಾಗದಲ್ಲಿನ ಪ್ರಕಾಶವು ಹೆಚ್ಚಾಗುವುದು ಅಥವಾ ಕತ್ತಲು ಕಡಿಮೆಯಾಗುವುದು

೩ ಅ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ತೊಲೆ ಮತ್ತು ಛಾವಣಿಯ ಮೇಲೆ ಬಿದ್ದಿರುವ ಟ್ಯೂಬ್‌ಲೈಟಿನ ಪ್ರಕಾಶದ ಕಡೆಗೆ ನೋಡುವುದು : ಪ್ರಯೋಗವನ್ನು ಮಾಡುವಾಗ ತೊಲೆಯ ಮೇಲಿನ ಟ್ಯೂಬ್‌ಲೈಟ್‌ ಉರಿಯುತ್ತಿತ್ತು. ಆದ್ದರಿಂದ ಅದರ ಪ್ರಕಾಶವು ತೊಲೆ ಮತ್ತು ಅದರ ಲಂಬಕೋನದಲ್ಲಿ ಅದಕ್ಕೆ ಹತ್ತಿರವಿರುವ ಕೋಣೆಯ ಛಾವಣಿಯ ಸ್ವಲ್ಪ ಭಾಗದ ಮೇಲೆ ಬಿದ್ದಿತ್ತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಟ್ಯೂಬ್‌ಲೈಟ್‌ನ ಪ್ರಕಾಶವು ಬೀಳುತ್ತಿರುವ ಜಾಗದ ದಿಶೆಯಲ್ಲಿ ನೋಡತೊಡಗಿದರು ಮತ್ತು ಅವರು ಟ್ಯೂಬ್‌ಲೈಟಿನ ಪ್ರಕಾಶದಲ್ಲಿ ಏನು ಬದಲಾವಣೆಯಾಗುತ್ತದೆ ?’, ಎಂಬುದನ್ನು ನಮಗೆಲ್ಲ ಸಾಧಕರಿಗೆ ನೋಡಲು ಹೇಳಿದರು.

೩ ಅ ೧. ಅನುಭೂತಿ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರು ತೊಲೆ ಮತ್ತು ಛಾವಣಿಯ ಮೇಲೆ ಬಿದ್ದಿರುವ ಟ್ಯೂಬ್‌ಲೈಟಿನ ಪ್ರಕಾಶದ ಕಡೆಗೆ ನೋಡಿದಾಗ ಅಲ್ಲಿನ ಪ್ರಕಾಶವು ಹೆಚ್ಚಾಗಿರುವುದು ಮತ್ತು ಅದು ತಿಳಿನೀಲಿಯಾಗಿರುವುದು ಕಾಣಿಸಿತು, ಹಾಗೆಯೇ ಕೈಯಿಂದ ಎಷ್ಟು ಭಾಗದಲ್ಲಿ ಪ್ರಕಾಶ ಹೆಚ್ಚಾಯಿತೋ, ಅದಕ್ಕಿಂತಲೂ ಕಣ್ಣುಗಳಿಂದ ನೋಡಿದ ಭಾಗ ದಲ್ಲಿ ಪ್ರಕಾಶ ಇನ್ನೂ ಜಾಸ್ತಿಯಾಗಿರುವುದು ಕಾಣಿಸಿತು.

೩ ಅ ೧ ಅ. ಅನುಭೂತಿಯ ಹಿಂದಿನ ಶಾಸ್ತ್ರ : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಇಡೀ ದೇಹದಿಂದ ತೇಜತತ್ತ್ವವು ಪ್ರಕಾಶದ ರೂಪದಲ್ಲಿ ಪ್ರಕ್ಷೇಪಿಸುತ್ತದೆ. ಅದು ಅವರ ಕಣ್ಣುಗಳಿಂದಲೂ ಪ್ರಕ್ಷೇಪಿಸುತ್ತದೆ. ಇಡೀ ದೇಹದಲ್ಲಿ ಕಣ್ಣುಗಳು ತೇಜತತ್ತ್ವವನ್ನು ಅರಿತುಕೊಳ್ಳುವ ಜ್ಞಾನೇಂದ್ರಿಯಗಳಾಗಿವೆ, ಹಾಗೆಯೇ ಆ ತೇಜತತ್ತ್ವವನ್ನು ಪ್ರಕ್ಷೇಪಿಸುವ ಮುಖ್ಯ ಮಾಧ್ಯಮವೂ ಆಗಿವೆ. ಆದ್ದರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ತೊಲೆ ಮತ್ತು ಛಾವಣಿಯ ಮೇಲೆ ಬಿದ್ದಿರುವ ಟ್ಯೂಬ್‌ಲೈಟಿನ ಪ್ರಕಾಶದ ಕಡೆಗೆ ನೋಡಿದಾಗ ಅವರ ಕಣ್ಣುಗಳಿಂದ ಪ್ರಕ್ಷೇಪಿಸಿದ ತೇಜತತ್ತ್ವರೂಪಿ ಪ್ರಕಾಶದಿಂದ ಟ್ಯೂಬ್‌ಲೈಟಿನ ಪ್ರಕಾಶದಲ್ಲಿ ಹೆಚ್ಚಳವಾಗಿರುವುದು ಕಾಣಿಸಿತು, ಹಾಗೆಯೇ ಅವರಲ್ಲಿನ ವಿಷ್ಣುತತ್ತ್ವ ಮತ್ತು ಈಶ್ವರಭಕ್ತಿಯಿಂದಲೂ ಟ್ಯೂಬ್‌ಲೈಟಿನ ಪ್ರಕಾಶವು ತಿಳಿನೀಲಿಯಾಗಿರುವುದು ಕಾಣಿಸಿತು.
ಕೈಯಿಂದ ಯಾವ ತೇಜತತ್ತ್ವರೂಪಿ ಪ್ರಕಾಶಕಿರಣಗಳು ಪ್ರಕ್ಷೇಪಿಸುತ್ತವೆಯೋ, ಅವು ನಿರ್ದಿಷ್ಟ ಭಾಗದಲ್ಲಿ ಪ್ರಕ್ಷೇಪಿಸುತ್ತವೆ. ನಾವು ಕಣ್ಣುಗಳಿಂದ ತುಂಬಾ ದೊಡ್ಡ ಭಾಗವನ್ನು ನೋಡಬಹುದು. ಆದ್ದರಿಂದ ಕಣ್ಣುಗಳಿಂದ ಪ್ರಕ್ಷೇಪಿಸಿದ ತೇಜತತ್ತ್ವರೂಪಿ ಪ್ರಕಾಶವು ಅಷ್ಟು ಭಾಗದಲ್ಲಿ ಹರಡುತ್ತದೆ; ಆದ್ದರಿಂದ ಕೈಯಿಂದ ಎಷ್ಟು ಭಾಗದಲ್ಲಿ ಪ್ರಕಾಶ ಹೆಚ್ಚಾಯಿತೋ, ಅದಕ್ಕಿಂತ ಹೆಚ್ಚು ಭಾಗದಲ್ಲಿ ಕಣ್ಣುಗಳಿಂದ ಪ್ರಕಾಶ ಬಿದ್ದಿರುವುದು ಕಾಣಿಸಿತು.

೩ ಆ. ತೊಲೆ, ಗೋಡೆ ಮತ್ತು ಛಾವಣಿ ಇವುಗಳು ಒಂದಕ್ಕೊಂದು ಜೋಡಿಸಿದ ಸ್ಥಳದಲ್ಲಿ ಸಿದ್ಧವಾದ ಮೂಲೆಯಲ್ಲಿ ಇರುವ ಕತ್ತಲಿನ ಕಡೆಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೋಡುವುದು : ತೊಲೆಯ ಬಲಬದಿಯಲ್ಲಿನ ಕೊನೆಯ ಭಾಗ, ಅದರ ಮುಂದಿನ ಲಂಬಕೋನದಲ್ಲಿನ ಅಡ್ಡ ಗೋಡೆ ಮತ್ತು ಅವುಗಳ ಲಂಬಕೋನದಲ್ಲಿನ ಛಾವಣಿ ಇವುಗಳು ಒಂದಕ್ಕೊಂದು ಜೋಡಿಸಿದ ಸ್ಥಳದಲ್ಲಿ ತ್ರಿಕೋನದ ಒಂದು ಮೂಲೆ ತಯಾರಾಗಿದೆ. ಅಲ್ಲಿ ಸ್ವಲ್ಪ ಕತ್ತಲು ಇತ್ತು. ಆ ಮೂಲೆಯಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೋಡಿದರು ಮತ್ತು ಅವರು ನಮಗೆ ‘ಅಲ್ಲಿನ ಕತ್ತಲಿನಲ್ಲಿ ಏನು ಬದಲಾವಣೆಯಾಗುತ್ತದೆ ?’, ಎಂಬುದನ್ನು ನಿರೀಕ್ಷಣೆ ಮಾಡಲು ಹೇಳಿದರು.

೩ ಆ ೧. ಅನುಭೂತಿ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರು ತ್ರಿಕೋನ ಮೂಲೆಯಲ್ಲಿನ ಕತ್ತಲಿನ ಕಡೆಗೆ ನೋಡಿದಾಗ ಅಲ್ಲಿ ಗೋಲಾಕಾರ ಪ್ರಕಾಶ ಕಾಣಿಸುವುದು, ಆ ಪ್ರಕಾಶದಲ್ಲಿ ಹಳದಿ ಮತ್ತು ಗುಲಾಬಿ ಬಣ್ಣ ಕಾಣಿಸುವುದು, ಹಾಗೆಯೇ ನಂತರ ಮೂಲೆ
ಯಲ್ಲಿನ ಸಂಪೂರ್ಣ ಭಾಗವು ಪ್ರಕಾಶಮಾನವಾಗಿ ಕಾಣಿಸುವುದು : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ತೊಲೆ, ಅದರ ಮುಂದಿನ ಗೋಡೆ ಮತ್ತು ಮೇಲಿನ ಛಾವಣಿಯ ಇವು ಒಂದಕ್ಕೊಂದು ಜೋಡಿಸಿದ ಸ್ಥಳದಲ್ಲಿ ಆಗಿರುವ ತ್ರಿಕೋನ ಮೂಲೆಯಲ್ಲಿ ಕತ್ತಲಿನ ಕಡೆಗೆ ನೋಡಿದಾಗ ಅಲ್ಲಿ ಮೊದಲು ಗೋಲಾಕಾರ ಬಿಳಿ ಪ್ರಕಾಶ ಬಿದ್ದಿರುವುದು ಕಾಣಿಸಿತು. ಆ ಬಿಳಿ ಪ್ರಕಾಶದಲ್ಲಿ ಹಳದಿ ಮತ್ತು ಗುಲಾಬಿ ಬಣ್ಣವೂ ಕಾಣಿಸಿತು. ಸ್ವಲ್ಪ ಸಮಯದ ನಂತರ ಆ ಪೂರ್ಣ ಮೂಲೆಯಲ್ಲಿ ಪ್ರಕಾಶ ಹರಡಿತು.

೩ ಆ ೧ ಅ. ಅನುಭೂತಿಯ ಹಿಂದಿನ ಶಾಸ್ತ್ರ : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕಣ್ಣುಗಳಿಂದ ತೇಜತತ್ತ್ವದ ಪ್ರಕಾಶವು ಮೂಲೆಯ ಕಡೆಗೆ ಪ್ರಕ್ಷೇಪಿಸಿತು ಮತ್ತು ಮೂಲೆಯ ಆಕಾರದಿಂದ ಅದಕ್ಕೆ ಗೋಲಾಕಾರ ಪ್ರಾಪ್ತವಾಯಿತು. ಆ ಬಿಳಿ ಗೋಲಾಕಾರದ ಪ್ರಕಾಶದಲ್ಲಿ ತಿಳಿ ಹಳದಿ ಮತ್ತು ಗುಲಾಬಿ ಬಣ್ಣ ಕಾಣಿಸುವುದರ ಕಾರಣವೆಂದರೆ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿನ ಚೈತನ್ಯ ಮತ್ತು ‘ಪ್ರೀತಿ’ ಈ ಗುಣಗಳು. ಚೈತನ್ಯದ ಸೂಕ್ಷ್ಮದಲ್ಲಿನ ಬಣ್ಣವು ಹಳದಿಯಾಗಿದೆ ಮತ್ತು ಪ್ರೀತಿಯ ಸೂಕ್ಷ್ಮದಲ್ಲಿನ ಬಣ್ಣವು ತಿಳಿ ಗುಲಾಬಿಯಾಗಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕಣ್ಣುಗಳಿಂದ ಪ್ರಕ್ಷೇಪಿಸುವ ಪ್ರಕಾಶವು ಹೆಚ್ಚಾಗಿರುವುದರಿಂದ ಸಂಪೂರ್ಣ ಮೂಲೆಯಲ್ಲಿ ಪ್ರಕಾಶ ಹರಡಿತು.

೩ ಇ. ಸ್ವಲ್ಪ ಕತ್ತಲಿರುವ ಒಂದು ತ್ರಿಕೋನ ಮೂಲೆಯ ಕಡೆಗೆ ಅಂಗೈಯನ್ನು ಮಾಡಿ ಅದರ ಬೆರಳುಗಳಲ್ಲಿನ ಮಧ್ಯಭಾಗಗಳಿಂದ ಮೂಲೆಯ ಕಡೆಗೆ ನೋಡುವುದು ಮತ್ತು ಆ ಸಮಯದಲ್ಲಿ ಆ ಅಂಗೈಯನ್ನು ಅತ್ತಿತ್ತ ಅಲುಗಾಡಿಸುವುದು : ಕೋಣೆಯಲ್ಲಿನ ಚಪ್ಪರ, ತೊಲೆ (ಬೀಮ್) ಮತ್ತು ಗೋಡೆ ಇವುಗಳು ಒಟ್ಟಿಗೆ ಸೇರಿರುವುದರಿಂದ ಒಂದು ತ್ರಿಕೋನ ಮೂಲೆ ತಯಾರಾಗಿದೆ. ಆ ಮೂಲೆಯಲ್ಲಿ ಸ್ವಲ್ಪ ಕತ್ತಲು ಇತ್ತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕತ್ತಲು ಇರುವ ಆ ಮೂಲೆಯ ದಿಶೆಯಲ್ಲಿ ಆಶೀರ್ವಾದದಂತೆ ತಮ್ಮ ಅಂಗೈಯನ್ನು ಮಾಡಿದರು. ಆ ಸಮಯದಲ್ಲಿ ಆ ಅಂಗೈಯ ಬೆರಳುಗಳಲ್ಲಿ ಅಂತರವನ್ನಿಟ್ಟರು ಮತ್ತು ಅವುಗಳ ಮಧ್ಯದಿಂದ ಆ ಮೂಲೆಯ ಕಡೆಗೆ ನೋಡಿದರು. ಮೂಲೆಯ ಕಡೆಗೆ ನೋಡುವಾಗ ಅವರು ಆ ಅಂಗೈಯನ್ನು ಮಣಿಕಟ್ಟಿನಿಂದ ಅತ್ತಿತ್ತ ಅಡ್ಡ ತಿರುಗಿಸಿದರು ಮತ್ತು ನಮಗೆ ಆ ಮೂಲೆಯನ್ನು ನಿರೀಕ್ಷಣೆ ಮಾಡಲು ಹೇಳಿದರು.

೩ ಇ ೧. ಅನುಭೂತಿ : ಆ ಮೂಲೆಯಲ್ಲಿ ಹೊಗೆಯಂತಹ ಪ್ರಕಾಶ ತಯಾರಾಗಿರುವುದು ಕಾಣಿಸಿತು. ಕೈಯನ್ನು ತೆಗೆದ ನಂತರವೂ ಅಲ್ಲಿ ಯಾವುದಾದರೊಂದು ಸ್ಥಳದಲ್ಲಿ ಧೂಪವನ್ನು ತೋರಿಸಿದಾಗ ಸಂಗ್ರಹವಾಗುವ ಹೊಗೆಯಂತೆ ಕಾಣುವ ಸ್ಥಿರ ವಾಗಿರುವ ಪ್ರಕಾಶದ ಮೋಡವು ಕಾಣಿಸಿತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಆ ಮೂಲೆಯ ದಿಶೆಯಲ್ಲಿ ಮಾಡಿದ ಕೈಯನ್ನು ಹಿಂದೆ ತೆಗೆದುಕೊಂಡ ನಂತರ ಕೆಲವೇ ಸೆಕಂಡುಗಳಲ್ಲಿ ಆ ಪ್ರಕಾಶದ ಮೋಡವು ಕಡಿಮೆ ಯಾಗಿರುವುದು ಕಾಣಿಸಿತು. ಮೂರು ನಿಮಿಷಗಳ ನಂತರವೂ ಆ ಮೂಲೆಯ ಮುಂದೆ ಅದಕ್ಕೆ ಜೋಡಿಸಿದ ಗೋಡೆಯ ಮೂಲೆಗಳು ಮಸುಕಾಗಿ ಕಾಣಿಸುತ್ತಿದ್ದವು, ಅಂದರೆ ಇಲ್ಲಿ ಯವರೆಗೂ ಅಲ್ಲಿ ಸ್ವಲ್ಪ ಹೊಗೆಯಂತೆ ಪ್ರಕಾಶವಿತ್ತು, ಹಾಗೆಯೇ ಅಲ್ಲಿ ತಿಳಿಹಳದಿ ಬಣ್ಣವೂ ಕಾಣಿಸುತ್ತಿತ್ತು.

೩ ಇ ೧ ಅ. ಅನುಭೂತಿಯ ಹಿಂದಿನ ಶಾಸ್ತ್ರ : ಸಾಧನೆ ಮಾಡುವ ಉನ್ನತ ವ್ಯಕ್ತಿಯ ದೇಹದಿಂದ ತೇಜತತ್ತ್ವ ಪ್ರಕ್ಷೇಪಿಸುತ್ತಿರುತ್ತದೆ. ಈ ತೇಜತತ್ತ್ವ ಅವರ ಬೆರಳುಗಳಿಂದ, ಹಾಗೆಯೇ ಅವರ ಅಂಗೈಯಿಂದಲೂ ಪ್ರಕ್ಷೇಪಿಸುತ್ತದೆ. ಬೆರಳುಗಳಿಂದ ಪ್ರಕ್ಷೇಪಿಸುವ ತೇಜತತ್ತ್ವವು ಅತ್ಯಧಿಕ ಪ್ರಕಾಶದ ರೂಪದಲ್ಲಿ, ಅಂಗೈಯಿಂದ ಅದು ಅತ್ಯಧಿಕ ಶಕ್ತಿಯ ರೂಪದಲ್ಲಿ ಹೊರಗೆ ಬೀಳುತ್ತದೆ. ಆದ್ದರಿಂದ ಅಂಗೈಯಿಂದ ಪ್ರಕ್ಷೇಪಿಸುವ ತೇಜತತ್ತ್ವದಲ್ಲಿ ಪೃಥ್ವಿತತ್ತ್ವ, ಅಂದರೆ ಹೆಚ್ಚು ಶಕ್ತಿಯಿರುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮೂಲೆಯ ದಿಶೆಯಲ್ಲಿ ತಮ್ಮ ಅಂಗೈಯನ್ನು ಮಾಡಿ ಮತ್ತು ಬೆರಳುಗಳಲ್ಲಿ ಇಟ್ಟಿರುವ ಅಂತರ ದಿಂದ ಆ ಮೂಲೆಯ ಕಡೆಗೆ ನೋಡಿದರು. ಆಗ ಅವರು ತಮ್ಮ ಅಂಗೈಯನ್ನು ಅತ್ತಿತ್ತ ಅಡ್ಡ ಅಲುಗಾಡಿಸಿದರು. ಆ ಸಮಯ ದಲ್ಲಿ ಆ ಮೂಲೆಯಲ್ಲಿ ಹೊಗೆಯಂತೆ ಆಗಿರುವ ಪ್ರಕಾಶವು ನಮಗೆಲ್ಲ ಸಾಧಕರಿಗೆ ಕಾಣಿಸಿತು. ಇದರ ಕಾರಣವೆಂದರೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕಣ್ಣುಗಳಿಂದ ಮೂಲೆಯ ಕಡೆಗೆ ಪ್ರಕ್ಷೇಪಿಸಿದ ತೇಜತತ್ತ್ವರೂಪಿ ಪ್ರಕಾಶ ಮತ್ತು ಅವರ ಅಂಗೈಯಿಂದ ಮೂಲೆಯ ಕಡೆಗೆ ಪ್ರಕ್ಷೇಪಿಸಿರುವ ಶಕ್ತಿಯುಕ್ತ (ಪೃಥ್ವಿತತ್ತ್ವಯುಕ್ತ) ತೇಜತತ್ತ್ವ ಇವುಗಳ ಸಂಗಮ
ವಾಗಿದೆ. ತೇಜತತ್ತ್ವ ಮತ್ತು ಪೃಥ್ವಿತತ್ತ್ವ ಇವುಗಳ ಸಂಗಮದಿಂದ
ಹೊಗೆ ನಿರ್ಮಾಣವಾಗುತ್ತದೆ. ಅದು ಮೂಲೆ ಇರುವುದರಿಂದ ಅದು ಹೊಗೆಯಂತೆ ಪ್ರಕಾಶ ಕೆಲವು ನಿಮಿಷಗಳವರೆಗೆ ಅಲ್ಲಿಯೇ
ಉಳಿಯಿತು ಮತ್ತು ನಂತರ ಅದು ಕಡಿಮೆ ಆಯಿತು. ಆ ಹೊಗೆಯಂತಿರುವ ಪ್ರಕಾಶವು ಅತ್ತಿತ್ತ ಹರಡಿತು, ಆಗ ತ್ರಿಕೋನ ಮೂಲೆಯ ಮುಂದೆ ಅದಕ್ಕೆ ಜೋಡಿಸಿರುವ ಗೋಡೆಗಳ
೩ ಮೂಲೆಗಳು ಹೊಗೆಯಂತಹ ಪ್ರಕಾಶದಿಂದ ಮಸುಕಾಗಿ ಕಾಣಿಸಿದವು. ಆ ಮಸುಕು ಪ್ರಕಾಶವು ತೇಜತತ್ತ್ವವಾಗಿರುವುದರಿಂದ, ಅಂದರೆ ಅದು ಚೈತನ್ಯವಾಗಿರುವುದರಿಂದ ಮತ್ತು ಅದರ ಬಣ್ಣವು ತಿಳಿಹಳದಿ ಇರುವುದರಿಂದ ಆ ಮೂಲೆಗಳಲ್ಲಿ ತಿಳಿಹಳದಿ ಬಣ್ಣವೂ ಬಂದಿರುವುದು ಕಾಣಿಸಿತು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಿಂದ ಅವರ ಕೈಬೆರಳುಗಳು ಮತ್ತು ಕಣ್ಣುಗಳಿಂದ ಪ್ರಕ್ಷೇಪಿಸುವ ತೇಜ ತತ್ತ್ವದ ಅನುಭೂತಿಯನ್ನು ನಮಗೆ ಪಡೆಯಲು ಸಾಧ್ಯವಾಯಿತು. ಇಂತಹ ಪ್ರಯೋಗಗಳನ್ನು ಇತರ ಯಾರೂ ಮಾಡಿದ್ದು ಕೇಳಿಲ್ಲ ಅಥವಾ ಓದಿಲ್ಲ. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಸಂಶೋಧÀನೆಯ ಹೊಸ ವೇದಿಕೆಯನ್ನು ನಮಗೆ ಒದಗಿಸಿ ಕೊಟ್ಟರು, ಅದಕ್ಕಾಗಿ ನಾವು ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇವೆ.’

– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿಎಚ್, ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧.೧.೨೦೨೩)