ಇಸ್ರೇಲ್-ಹಮಾಸ್ ಸಂಘರ್ಷದಿಂದಾಗಿ ಸಮುದ್ರ ವ್ಯಾಪಾರ ಅಸುರಕ್ಷಿತವಾಗಿದೆ ! – ಭಾರತ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಹೇಳಿಕೆ 

ಭಾರತದ ಉಪಸ್ಥಾಯಿ ಪ್ರತಿನಿಧಿ ಆರ್. ರವೀಂದ್ರ

ನ್ಯೂಯಾರ್ಕ್ (ಅಮೇರಿಕಾ) – ಗಾಜಾದಲ್ಲಿ ಕಳೆದ 109 ದಿನಗಳಿಂದ ನಡೆಯುತ್ತಿರುವ ಯುದ್ಧದಿಂದಾಗಿ 25 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದರಿಂದ ಮಾನವಿಯತೆಯ ಬಿಕ್ಕಟ್ಟು ನಿರ್ಮಾಣವಾಗಿರುವುದರೊಂದಿಗೆ ಹಿಂದೂ ಮಹಾಸಾಗರದ ಮೂಲಕ ನಡೆಯುತ್ತಿರುವ ಸಮುದ್ರ  ವ್ಯಾಪಾರಕ್ಕೂ ಧಕ್ಕೆಯಾಗಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಭಾರತದ ಉಪಸ್ಥಾಯಿ ಪ್ರತಿನಿಧಿ ಆರ್. ರವೀಂದ್ರ ಹೇಳಿದರು.

ರವೀಂದ್ರ ತಮ್ಮ ಮಾತನ್ನು ಮುಂದುವರಿಸಿ, 

1. ಭಾರತದ ಹತ್ತಿರ ಅನೇಕ ದಾಳಿಗಳು ನಡೆದಿವೆ. ಇದರಿಂದ ಭಾರತದ ಇಂಧನ ಮತ್ತು ಆರ್ಥಿಕ ಹಿತದ ಮೇಲೆ ನೇರ ಪರಿಣಾಮ ಬೀರಿದೆ. ಗಾಜಾದಲ್ಲಿನ ಯುದ್ಧವು ಭೀಕರವಾಗಿದ್ದು, ಈ ಸಂಕಟವನ್ನು ಸ್ಪಷ್ಟವಾಗಿ  ಒತ್ತಿ ಹೇಳಬೇಕಾಗಿದೆ.

2. ಪ್ಯಾಲೆಸ್ಟೈನ್ ನಿರಾಶ್ರಿತರಿಗೆ ಭಾರತ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ನೆರವು ನೀಡಿದೆ. ಭಾರತ ಇದುವರೆಗೆ 5 ದಶಲಕ್ಷ ಅಮೇರಿಕನ್ ಡಾಲರ್ (41.58 ಕೋಟಿ ರೂಪಾಯಿ) ನೆರವು ನೀಡಿದೆ ಎಂದು ಹೇಳಿದರು.