ಚರ್ಮದ ಆರೋಗ್ಯ ‘ಸೌಂದರ್ಯವರ್ಧಕ’ಗಳಿಗಿಂತ ‘ಆಹಾರ’ದ ಮೇಲೆ ಹೆಚ್ಚು ಅವಲಂಬಿಸಿರುತ್ತದೆ !

ಚರ್ಮದ (ತ್ವಚೆಯ) ಆರೋಗ್ಯದ ಬಗ್ಗೆ ಮಾತನಾಡುವಾಗ ಮೊದಲು ಸೌಂದರ್ಯವರ್ಧಕಗಳೇ ಕಣ್ಣೆದುರು ಬರುತ್ತವೆ; ಆದರೆ ನಮ್ಮ ದೇಹದ ರಕ್ಷಣಾಗೋಡೆಯಾಗಿರುವ ಚರ್ಮದ ಪೋಷಣೆಯು ನಾವು ಸೇವಿಸುವ ಆಹಾರವನ್ನೇ ಅವಲಂಬಿಸಿರುತ್ತದೆ. ಆದುದರಿಂದ ನಾವು ಮೊದಲು ಚರ್ಮದ ಬಗೆಗಿನ ಸಾಮಾನ್ಯ ಮಾಹಿತಿಯನ್ನು ತಿಳಿದುಕೊಳ್ಳೋಣ. ಚರ್ಮಕ್ಕೆ ಹೊರ ಮತ್ತು ಒಳ ಎಂಬ ಎರಡು ಪದರುಗಳಿರುತ್ತವೆ. ಒಳಗಿನ ಪದರಿನ ಆಶ್ರಯದಿಂದ ರಕ್ತನಾಳಗಳು ಚರ್ಮದ ಎರಡೂ ಪದರಗಳನ್ನು ರಕ್ಷಿಸುತ್ತ್ತವೆ. ಜೀವಕೋಶಗಳು ಹಳೆಯದಾದಂತೆ ಅವು ಒಳಗಿನಿಂದ ಹೊರಗಿನ ದಿಕ್ಕಿಗೆ ಹೋಗುತ್ತವೆ ಮತ್ತು ಮೃತ ಜೀವಕೋಶಗಳನ್ನು ದೇಹದಿಂದ ಹೊರಗೆ ಹಾಕಲಾಗುತ್ತದೆ.

೧. ಚರ್ಮದ ಕಾರ್ಯ

ಅ. ಚರ್ಮವನ್ನು ‘ರಕ್ಷಣಾಗೋಡೆ’ ಎಂದು ಕರೆಯ ಲಾಗುತ್ತದೆ; ಏಕೆಂದರೆ ಬಾಹ್ಯ ವಾತಾವರಣದಿಂದ ಮತ್ತು ರೋಗಾಣುಗಳಿಂದ ಅದು ನಮ್ಮನ್ನು ರಕ್ಷಿಸುತ್ತದೆ.

ಆ. ಚರ್ಮವು ಸೂರ್ಯನ ಬೆಳಕಿನ ಸಹಾಯದಿಂದ ‘ಡಿ’ ಜೀವಸತ್ವವನ್ನು ತಯಾರಿಸುತ್ತದೆ. ಯಾರಲ್ಲಿ ಈ ಜೀವಸತ್ವ ಕಡಿಮೆ ಇರುತ್ತದೆಯೋ, ಅವರು ಬೆಳಗಿನ ಎಳೆಬಿಸಿಲನ್ನು ಮೈಮೇಲೆ ತೆಗೆದುಕೊಳ್ಳಬೇಕು.

ಇ. ಚರ್ಮವು ಶರೀರದ ಉಷ್ಣತೆ ಮತ್ತು ನೀರಿನ ಪ್ರಮಾಣವನ್ನು ನಿಯಂತ್ರಿಸುವ ಮಹತ್ವದ ಕಾರ್ಯವನ್ನು ಮಾಡುತ್ತಿರುತ್ತದೆ. ಜ್ವರದಲ್ಲಿ ನಮಗೆ ಬೆವರು ಬರುವುದಿಲ್ಲ ಮತ್ತು ಶರೀರದ ತಾಪಮಾನ ಏರುತ್ತದೆ. ಔಷಧವನ್ನು ಸೇವಿಸಿದ ನಂತರ ನಮಗೆ ಬೆವರು ಬಂದು ಜ್ವರ ಕಡಿಮೆ ಆಗುತ್ತದೆ.

ಈ. ಚರ್ಮದ ರೋಗಗಳಾಗುವಲ್ಲಿ ನಾವು ಸೇವಿಸುವ ಆಹಾರವು ತುಂಬಾ ಮಹತ್ವದ ಪಾತ್ರವನ್ನು ವಹಿಸುತ್ತದೆ. ಆಹಾರದಿಂದ ನಮ್ಮ ದೇಹದಲ್ಲಿ ರಸ, ರಕ್ತ, ಮಾಂಸ, ಕೊಬ್ಬು, ಮೂಳೆ, ಮಜ್ಜೆ ಮತ್ತು ಶುಕ್ರ ಈ ೭ ಲೋಹಗಳು ಉತ್ಪನ್ನವಾಗುತ್ತವೆ. ಅದರಲ್ಲಿನ ರಸ ಮತ್ತು ರಕ್ತ ಉತ್ತಮವಾಗಿ ತಯಾರಾದರೆ, ಚರ್ಮವು ಆರೋಗ್ಯಕರ ಮತ್ತು ಕಾಂತಿಯುಕ್ತವಾಗುತ್ತದೆ. ಅದಕ್ಕಾಗಿ ಆಹಾರವೂ ಉತ್ತಮವಾದುದಾಗಿರಬೇಕು.

ವೈದ್ಯೆ (ಸೌ.) ಮುಕ್ತಾ ಲೋಟಲೀಕರ

೨. ಚರ್ಮರೋಗಗಳು ಯಾವುದರಿಂದ ಉಂಟಾಗುತ್ತವೆ ?

ಅ. ಅತಿ ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸುವುದು.

ಆ. ಹೆಚ್ಚು ಪ್ರಮಾಣದಲ್ಲಿ ಖಾರ, ಉಪ್ಪು, ಹುಳಿ ಪದಾರ್ಥಗಳನ್ನು ತಿನ್ನುವುದು. (ಹಸಿ ಮೆಣಸಿನಕಾಯಿ, ಮಾವಿನಮಿಡಿ, ಟೊಮೆಟೊ, ಹುಣಸೆಹಣ್ಣು, ಮೊಸರು, ಪಂಜಾಬಿ ಪದಾರ್ಥಗಳನ್ನು ಸೇವಿಸುವುದು)

ಇ. ಹುಳಿ ಹಾಕಿದ ಪದಾರ್ಥಗಳನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸುವುದು (ಇಡ್ಲಿ, ದೋಸೆ, ಉತ್ತಪ್ಪಾ, ಢೊಕಳಾ, ಬ್ರೆಡ್, ರಸ್ಕ (ಟೋಸ್ಟ) ಇತ್ಯಾದಿಗಳು)

ಈ. ವಿರುದ್ಧ ಪದಾರ್ಥಗಳನ್ನು ಸೇವಿಸುವುದು (ಮಿಲ್ಕಶೇಕ್, ಬಾಳೆಹಣ್ಣಿನ ಶೀಕರಣಿ, ಅನಾನಸ ಹಣ್ಣಿನ ರೈತಾ.)

ಉ. ಮಾಂಸಾಹಾರ ಸೇವಿಸುವ ವ್ಯಕ್ತಿಗೆ ಆ ಆಹಾರವು ಜೀರ್ಣವಾಗದಿದ್ದರೆ ಚರ್ಮರೋಗಗಳಾಗುತ್ತವೆ.

ಊ. ಇದಲ್ಲದೇ ದಿನವಿಡೀ ಬಹಳಷ್ಟು ಸಲ ಚಹಾ ಕುಡಿಯುವುದು, ತಂಪು ಪಾನೀಯ, ರಾತ್ರಿಯ ಜಾಗರಣೆ, ಮಾನಸಿಕ ಒತ್ತಡ, ಸೌಂದರ್ಯವರ್ಧಕಗಳ ಅತಿಯಾದ ಬಳಕೆ, ಮದ್ಯಪಾನದಂತಹ ವ್ಯಸನಗಳು ಇವೆಲ್ಲವುಗಳು ಚರ್ಮರೋಗವಾಗಲು ಕಾರಣವಾಗುತ್ತವೆ.

೩. ಚರ್ಮರೋಗಗಳು ಆಗಬಾರದೆಂದು ಯಾವ ಕಾಳಜಿಯನ್ನು ತೆಗೆದುಕೊಳ್ಳಬೇಕು ?

ಅ. ಆಹಾರದ ಜೀರ್ಣಕ್ರಿಯೆ ಸುಧಾರಿಸಲು ಊಟದ ಸಮಯ ವನ್ನು ಪಾಲಿಸಬೇಕು, ಜೀರ್ಣವಾಗುವಷ್ಟೇ ತಿನ್ನಬೇಕು. ರಾತ್ರಿ ಜಾಗರಣೆಯನ್ನು ಮಾಡಬಾರದು. ಪಡವಲಕಾಯಿ, ಕುಂಬಳ ಕಾಯಿ, ಹೀರೆಕಾಯಿ ಇಂತಹ ತರಕಾರಿಗಳು, ಹಾಗೆಯೇ ಸೌತೆಕಾಯಿ, ಗಜ್ಜರಿ, ಮೂಲಂಗಿ ಇವುಗಳ ಕೊಸಂಬರಿ ಯನ್ನು ತಿನ್ನ ಬೇಕು. ಹಣ್ಣುಗಳಲ್ಲಿ ದ್ರಾಕ್ಷಿ, ದಾಳಿಂಬೆಹಣ್ಣು, ನೆಲ್ಲ್ಲಿಕಾಯಿ ಪಪ್ಪಾಯಿ ಈ ಹಣ್ಣುಗಳನ್ನು ತಿನ್ನಬೇಕು.

ಆ. ದೇಹದಲ್ಲಿನ ನೀರಿನ ಪ್ರಮಾಣವನ್ನು ಸರಿ ಯಾಗಿಟ್ಟುಕೊಳ್ಳಬೇಕು. ಬಾಯಾರಿಕೆಯಾದಾಗ ಸ್ವಲ್ಪ ಸ್ವಲ್ಪ ನೀರನ್ನು ಕುಡಿಯಬೇಕು. ‘ಚರ್ಮಕಾಂತಿಯುತ ವಾಗಲು ಸಾಕಷ್ಟು ನೀರನ್ನು ಕುಡಿಯ ಬೇಕು’, ಎಂಬ ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುತ್ತವೆ; ಆದರೆ ಅಗತ್ಯವಿದ್ದಷ್ಟೇ ನೀರನ್ನು ಕುಡಿಯುವುದು, ಆರೋಗ್ಯದ ದೃಷ್ಟಿಯಲ್ಲಿ ಯೋಗ್ಯವಾಗಿದೆ ! ಅತಿರೇಕ ಎಂದಿಗೂ ಅಪಾಯಕಾರಿ !

ಇ. ಹಾಲು ಕುಡಿಯುವಾಗ ಅದರಲ್ಲಿ ಯಾವಾಗಲೂ ಚಿಟಿಕೆಯಷ್ಟು ಅರಿಶಿಣವನ್ನು ಹಾಕಿ ಕುಡಿಯಬೇಕು.

ಈ. ಆಯುರ್ವೇದದ ಪ್ರಕಾರ ಚರ್ಮರೋಗಗಳಲ್ಲಿ ರಕ್ತವು ಕಲುಷಿತವಾಗಿರುತ್ತದೆ. ದೇಹದಲ್ಲಿ ಅಧಿಕ ಪ್ರಮಾಣದಲ್ಲಿ ಹೆಚ್ಚಾದ ಪಿತ್ತವು ರಕ್ತದಲ್ಲಿ ಸೇರಿದಾಗ, ರಕ್ತ ಕಲುಷಿತ ವಾಗುತ್ತದೆ. ಈ ಪಿತ್ತವನ್ನು ಕಡಿಮೆ ಮಾಡಲು ವಿರೇಚನ (ಅತಿಸಾರ) ಮತ್ತು ಕಲುಷಿತ ರಕ್ತವನ್ನು ತೆಗೆಯುವುದು, ಈ ಎರಡು ಮುಖ್ಯ ಚಿಕಿತ್ಸೆಗಳನ್ನು ಮಾಡಲಾಗುತ್ತವೆ.

ಉ. ಚರ್ಮದ ಮೇಲೆ ರಾಸಾಯನಿಕಗಳಿರುವ ಸೌಂದರ್ಯ ವರ್ಧಕಗಳನ್ನು ಬಳಸುವ ಬದಲು ನೈಸರ್ಗಿಕ ಪದಾರ್ಥ ಗಳಿರುವ ಎಣ್ಣೆ, ಲೇಪ, ಉಟಣೆ ಇವುಗಳನ್ನು ಬಳಸಬೇಕು.

ಊ. ಚರ್ಮ ಯಾವಾಗಲೂ ಒಣಗಿರಬೇಕು, ಹಸಿ ಇರ ಬಾರದು. ಬಟ್ಟೆಗಳನ್ನು ಸರಿಯಾಗಿ ಬಿಸಿಲಿನಲ್ಲಿ ಒಣಗುವಂತೆ ನೋಡಿಕೊಳ್ಳಬೇಕು. ಒದ್ದೆ ಬಟ್ಟೆಗಳನ್ನು ಧರಿಸುವುದರಿಂದ ಚರ್ಮವು ಹಸಿಯಾಗಿ ಬುರುಸುಜನ್ಯ (ಫಂಗಸ್) ರೋಗ ಗಳಾಗುತ್ತವೆ. (ಮಳೆಗಾಲದಲ್ಲಿ ಹೀಗಾಗುವ ಸಾಧ್ಯತೆ ಹೆಚ್ಚಿರುತ್ತದೆ.)

ಎ. ಬಟ್ಟೆಗಳನ್ನು ಪರಸ್ಪರ ಧರಿಸಲು ಕೊಡುವ ಮೊದಲು ಮತ್ತು ಧರಿಸಿದ ನಂತರ ಅವುಗಳನ್ನು ಅವಶ್ಯ ತೊಳೆಯಬೇಕು.

ವೈದ್ಯೆ (ಸೌ.) ಮುಕ್ತಾ ಲೊಟಲೀಕರ, ಪುಣೆ (೧೮.೧೨.೨೦೨೩)