ಪರಾತ್ಪರ ಗುರು ಡಾ. ಆಠವಲೆ ಇವರು ಸಾಧಕರಿಗೆ ‘ಭಾವಜಾಗೃತಿ’ ಬಗ್ಗೆ ಮಾಡಿದ ಅಮೂಲ್ಯ ಮಾರ್ಗದರ್ಶನ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿರಿ – https://sanatanprabhat.org/kannada/104610.html

೯. ಪ್ರತಿಯೊಂದು ಸೇವೆ ಮಾಡುವಾಗ ‘ಈಶ್ವರನ ಅಥವಾ ಸಂತರ ಸೇವೆ ಮಾಡುತ್ತಿದ್ದೇನೆ’ ಎಂಬ ಭಾವ ಇಡುವುದು ಆವಶ್ಯಕವಾಗಿದೆ !

ಕು. ಗುಲಾಬಿ ಧುರಿ : ‘ಗುರುಗಳೇ, ನಾನು ಯಾವಾಗ ಕುಲಕರ್ಣಿ ಕಾಕೂ ಅವರ ((ದಿ.) ಸೌ. ಸುಜಾತಾ ದೇವದತ್ತ ಕುಲಕರ್ಣಿ (ಅಧ್ಯಾತ್ಮಿಕ ಮಟ್ಟ ೬೧) ಇವರ)) ಸೇವೆ ಮಾಡುತ್ತಿದ್ದಾಗ, ಆಗ ಆ ಸೇವೆಯಲ್ಲಿ ಬೇರೆ ಬೇರೆ ಭಾವ ಇಡಲು ಪ್ರಯತ್ನಿಸಿದೆ. ಆ ಸೇವೆ ನೀವೇ ನನ್ನಿಂದ ಮಾಡಿಸಿಕೊಂಡಿದ್ದೀರಿ. ನಂತರ ಅದರ ಬಗ್ಗೆ ಚಿಂತನೆ ಮಾಡಿದಾಗ, ‘ನನ್ನಲ್ಲಿ ಭಾವ ಹೆಚ್ಚಾಗುತ್ತಿದೆ’, ಎಂಬುದು ನನಗೆ ಅನಿಸಿತು. ಅವರ ಸೀರೆ ತೊಳೆಯುವಾಗ ‘ನಾನು ಸಂತರ ಬಟ್ಟೆಯನ್ನು ತೊಳೆಯುತ್ತಿದ್ದೇನೆ’, ಎಂದು ಭಾವ ಇಟ್ಟುಕೊಳ್ಳುತ್ತಿದ್ದೆ.

ಪರಾತ್ಪರ ಗುರು ಡಾ. ಆಠವಲೆ : ‘ನಾನು ಮಾಡುತ್ತಿರುವ ಸೇವೆಯು ಈಶ್ವರನ ಅಥವಾ ಸಂತರ ಸೇವೆ ಆಗಿದೆ’, ಎಂದೇ ವಿಚಾರವಾಗಬೇಕು.

೧೦. ಸಾಧಕಿಯು ಭಾವವಿಟ್ಟು ಸೇವೆ ಮಾಡಿದಾಗ ಈಶ್ವರನು ಆಕೆಯ ಮನಸ್ಸಿನಲ್ಲಿದ್ದ ಸೇವೆಯ ಕುರಿತಾದ ಇಚ್ಛೆಯನ್ನು ಪೂರ್ಣಗೊಳಿಸುವುದು

ಕು. ಗುಲಾಬಿ ಧುರಿ

ಕು. ಗುಲಾಬಿ ಧುರಿ : ಹಿಂದೆ ನಾನು ಸನಾತನದ ಓರ್ವ ಸಂತರ ಸೇವೆ ಮಾಡುತ್ತಿದ್ದೆ. ಅದೇ ರೀತಿಯ ಭಾವವನ್ನು ನಾನು ಕುಲಕರ್ಣಿ ಕಾಕು ಅವರ ಸೇವೆಯಲ್ಲಿಯೂ ಇಟ್ಟುಕೊಂಡಿದ್ದೆ; ನಂತರ ನನಗೆ ಪುನಃ ಸಂತರ ಸೇವೆ (ಸನಾತನದ ೮೬ ನೇ ಸಂತ ಪೂ. (ದಿ.) ಶ್ರೀಮತಿ ಮಾಯಿಣಕರ ಅಜ್ಜಿಯವರ ಸೇವೆ) ಸಿಕ್ಕಿತು. ಸಂತರ ಸೇವೆ ಮಾಡುವಾಗ ‘ಭಾವವು ತುಂಬಾ ಮಹತ್ವದ್ದಾಗಿದೆ’, ಎಂಬುದು ನನ್ನ ಗಮನಕ್ಕೆ ಬಂದಿತು, ಉದಾ. ಸಂತರ ಬಟ್ಟೆ ತೊಳೆಯುವಾಗ ಈಗ ನಾನು ‘ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಬಟ್ಟೆ ತೊಳೆಯುತ್ತಿದ್ದೇನೆ’, ಎಂಬ ಭಾವವನ್ನಿಟ್ಟಿದ್ದೆ. ಒಂದು ದಿನ ನನ್ನ ಮನಸ್ಸಿನಲ್ಲಿ, ‘ನನಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಬಟ್ಟೆ ತೊಳೆಯಲು ಯಾವಾಗ ಸಿಗಬಹುದು’ ಎಂದು ಮನಸ್ಸಿನಲ್ಲಿ ವಿಚಾರ ಬಂತು, ಆಗ ‘ನಮ್ಮಲ್ಲಿರುವ ಭಾವಕ್ಕನುಸಾರ ಈಶ್ವರನು ಪ್ರಸಾದ ನೀಡುವನು, ಎಂಬುದು ಗಮನಕ್ಕೆ ಬಂದಿತು; ನಂತರ ೮ ದಿನ ನನಗೆ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರ ಬಟ್ಟೆ ತೊಳೆಯುವ ಸೇವೆ ಸಿಕ್ಕಿತು. ಒಂದು ಸಲ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರ ಬಟ್ಟೆ ತೊಳೆಯುವಾಗ ನಾನು ‘ಪರಾತ್ಪರ ಗುರುದೇವರ (ಪರಾತ್ಪರ ಗುರು ಡಾ. ಆಠವಲೆ ಇವರ) ಬಟ್ಟೆ ತೊಳೆಯುವ ಸೇವೆ ಮಾಡುತ್ತಿದ್ದೇನೆ’, ಎಂಬ ಭಾವವನ್ನಿಟ್ಟೆ. ಆಗ ಅವರ ಬಟ್ಟೆಯಿಂದ ತುಂಬಾ ಸುಗಂಧ ಬರುತ್ತಿತ್ತು. ಆ ಸಮಯದಲ್ಲಿ ‘ನಾನು ನಿಮ್ಮ ಬಟ್ಟೆಯನ್ನೇ (ಪರಾತ್ಪರ ಗುರು ಡಾ. ಆಠವಲೆ ಇವರ) ಬಟ್ಟೆಯನ್ನೇ ತೊಳೆಯುತ್ತಿದ್ದೇನೆ’, ಎಂದು ನನಗೆ ಅನಿಸಿತು. ಅಷ್ಟರಲ್ಲೇ ಓರ್ವ ಸಾಧಕಿಯು ಅಲ್ಲಿಗೆ ಬಂದು, ”ಇಷ್ಟೊಂದು ಬಟ್ಟೆಗಳನ್ನು ಇಷ್ಟು ಆನಂದದಿಂದ ಹೇಗೆ ತೊಳೆಯುತ್ತಿರುವೆ ?” ಎಂದು ಕೇಳಿದಾಗ, ನಾನು ಯಾವ ಭಾವವನ್ನು ಇಟ್ಟುಕೊಳ್ಳುತ್ತೇನೆ ಆ ಭಾವದ ಬಗ್ಗೆ ಹೇಳಿದೆ. ಆಗ ಅವಳು, ”ತುಂಬಾ ಒಳ್ಳೆಯ ಭಾವ ಇಟ್ಟುಕೊಂಡಿರುವೆ. ‘ಪರಾತ್ಪರ ಗುರು ಡಾಕ್ಟರರ ಬಟ್ಟೆ ತೊಳೆಯಲು ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ’, ಆದರೆ ಆ ರೀತಿಯ ಭಾವ ಇಡಬೇಕು”, ಎಂದು ಹೇಳಿದಳು. ನಂತರ ೨ ದಿನಗಳ ನಂತರ ನನಗೆ ಪ.ಪೂ. ದಾಸ ಮಹಾರಾಜರ ಬಟ್ಟೆ ತೊಳೆಯುವ ಸೇವೆ ಸಿಕ್ಕಿತು. ಆಗ, ‘ಭಕ್ತನು ಈಶ್ವರಪ್ರಾಪ್ತಿಯ ಭಾವ ಇಟ್ಟುಕೊಂಡಾಗ ಈಶ್ವರನು ಬರಲೇ ಬೇಕಾಗುತ್ತದೆ.’ ಎಂದು ಅನಿಸಿತು. ಅಂದಿನಿಂದ ನನ್ನಲ್ಲಿ ಭಾವ ಇನ್ನೂ ಹೆಚ್ಚಾಗತೊಡಗಿತು. ‘ಈಶ್ವರನನ್ನು ಭಕ್ತನು ಅಂತರ್‌ ಮನಸ್ಸಿನಿಂದ ಕರೆದಾಗ, ಈಶ್ವರ ಎಲ್ಲೇ ಇದ್ದರೂ ಅಲ್ಲಿಂದ ಬರಲೇ ಬೇಕಾಗುತ್ತದೆ’ ಎಂಬುದು ನನಗೆ ಅನಿಸಿತು.

೧೧. ‘ಸಂತರು ಯಾವ ದೇವರ ಅನುಸಂಧಾನದಲ್ಲಿ ಇರುತ್ತಾರೆ, ಆ ದೇವತೆಯನ್ನು ಪ್ರಾರ್ಥಿಸಿದರೆ ಸಂತರು ಆ ದೇವತೆ ಹೇಳಿದ್ದನ್ನು ತಕ್ಷಣ ಕೇಳುತ್ತಾರೆ’ ಎಂದು ಸಾಧಕಿಗೆ ಅನುಭೂತಿ ಬರುವುದು

ಕು. ಗುಲಾಬಿ ಧುರಿ : ಸೇವೆ ಮಾಡುವಾಗ ನನ್ನ ಮನಸ್ಸಿನಲ್ಲಿ ಸಂಘರ್ಷವಾದಾಗ, ನಾನು ಭಾವ ಇಡಲು ಪ್ರಯತ್ನಿಸುತ್ತೇನೆ ಮತ್ತು ಇದರಿಂದ ತಕ್ಷಣವೇ ಸಂಘರ್ಷ ಇಲ್ಲವಾಗುತ್ತದೆ ಮತ್ತು ಸೇವೆಯು ಭಾವಪೂರ್ಣವಾಗುತ್ತದೆ. ಈಗ ನಾನು ಪೂ. (ಶ್ರೀಮತಿ) ಮಾಯಿಣಕರ್‌ ಅಜ್ಜಿ ಇವರ ಸೇವೆ ಮಾಡುತ್ತಿದ್ದೇನೆ. ಅವರಿಗೆ ಆಹಾರ ನೀಡುವ ಸೇವೆಯನ್ನು ಮಾಡುತ್ತಿದ್ದೇನೆ. ಅವರಿಗೆ ಊಟ ಉಣಿಸುವಾಗ ಅವರು ನನ್ನ ಕೈಯಿಂದ ತಿನ್ನುತ್ತಿರಲಿಲ್ಲ. ಹಾಗಾಗಿ ನಾನು ಒಬ್ಬ ಸಾಧಕನಿಗೆ, ”ನಾನು ಯಾವ ಭಾವವನ್ನು ಇಡಲಿ ಮತ್ತು ನಾನು ಅವರಿಗೆ ಹೇಗೆ ಆಹಾರವನ್ನು ತಿನ್ನಿಸಲಿ ?”
ಎಂದು ಕೇಳಿದೆ. ಆಗ ಅವರು ತುಂಬಾ ಸುಂದರ ವಿಷಯಗಳನ್ನು ಹೇಳಿದರು ಅವರು, ‘ಸಂತರು ಸದಾ ಈಶ್ವರನ ಅನುಸಂಧಾನ ದಲ್ಲಿರುತ್ತಾರೆ. ಅವರು ದೇವರ ಮಾತನ್ನು ಮಾತ್ರ ಕೇಳುತ್ತಾರೆ.’ ನೀವು ಯಾವ ಸಂತರ ಸೇವೆ ಮಾಡುತ್ತಿದಿಯೋ, ಆ ಸಂತರು ‘ಯಾವ ದೇವತೆಯ ಉಪಾಸನೆ ಮಾಡುತ್ತಿದ್ದಾರೆ ?’, ನಿಮಗೆ ಗೊತ್ತಿದೆಯಲ್ಲ ? ಅವರು ಶ್ರೀರಾಮನ ಅನುಸಂಧಾನದಲ್ಲಿರುತ್ತಾರೆ. ಆದುದರಿಂದ ನೀನು ಶ್ರೀರಾಮನಲ್ಲಿಯೇ, ‘ಹೇ ಶ್ರೀರಾಮನೇ ನೀನೇ ಅವರಿಗೆ ಉಟವನ್ನು ತಿನ್ನಿಸು’ ಎಂದು ಹೇಳು. ಹಾಗೆ ಮಾಡಿದ ನಂತರ, ಸಂತರು ಅದನ್ನು ತಿನ್ನುತ್ತಾರೆ” ಮರುದಿನ ನಾನು ಹಾಗೆ ಮಾಡಲು ಪ್ರಯತ್ನಿಸಿದೆ. ನಾನು ಶ್ರೀರಾಮನಲ್ಲಿ, ‘ಪೂ. ಅಜ್ಜಿ ನಿಮ್ಮ ಅನುಸಂಧಾನದಲ್ಲಿದ್ದಾರೆ ! ನೀನೇ ಬಂದು ಅವರಿಗೆ ಊಟ ಉಣಿಸು’, ಎಂದು ಹೇಳಿದೆ. ಆ ದಿನ ಪೂ. ಅಜ್ಜಿ ಊಟವನ್ನೆಲ್ಲ ತಿಂದರು.

ಪರಾತ್ಪರ ಗುರು ಡಾ. ಆಠವಲೆ : ತುಂಬಾ ಸುಂದರವಾಗಿದೆ !

ಕು. ಗುಲಾಬಿ ಧುರಿ : ಆ ಸಾಧಕನು, ‘ಸಂತರ ಲಿಂಗದೇಹ ಅಥವಾ ಆತ್ಮವು ದೇವರಿಗೆ ಸ್ಸಂಲಗ್ನವಾಗಿರುತ್ತದೆ. ಆದ್ದರಿಂದ ಅವರು ದೇವರ ಮಾತನ್ನು ಕೇಳುತ್ತಾರೆ. ‘ನನ್ನ ಮುಂದೆ ಯಾರಿದ್ದಾರೆ ಎಂದು ಅವರು ನೋಡುವುದಿಲ್ಲ. ಅವರು ಎಲ್ಲರಲ್ಲಿಯೂ ದೇವರನ್ನೇ ಕಾಣುತ್ತಾರೆ ಎಂದು ಹೇಳಿದರು.

೧೨. ಸೇವೆ ಮಾಡುವಾಗ ಪ್ರತಿಯೊಬ್ಬರಲ್ಲೂ ಈಶ್ವರನನ್ನು ನೋಡಿದರೆ ಖಂಡಿತವಾಗಿಯೂ ಸಂತಸೇವೆಯ ಲಾಭವಾಗುತ್ತದೆ !

ಪರಾತ್ಪರ ಗುರು ಡಾ. ಆಠವಲೆ : ಆ ಸಂತರು ಹೇಗೆ ತಮ್ಮೆದುರಿನಲ್ಲಿ ಇರುವವರಲ್ಲಿ ಈಶ್ವರನನ್ನು ನೋಡುತ್ತಾರೆಯೋ, ಅದೇ ರೀತಿ ನೀವೂ ನೋಡಬೇಕು. ‘ಸಂತರ ಸೇವೆ ಬೇಕು. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಅವರ ಸೇವೆ ಬೇಕು’ ಎಂದು ವಿಚಾರ ಬೇಡ. ‘ಪ್ರತಿಯೊಬ್ಬ ಸಾಧಕರಲ್ಲೂ ಈಶ್ವರನಿದ್ದಾನೆ’ ಎಂಬ ಭಾವ ಇಟ್ಟುಕೊಂಡರೆ ಶ್ರೀ ಸತ್‌ಶಕ್ತಿ (ಸೌ.) ಸಿಂಗಬಾಳ ಇವರ ಸೀರೆಯನ್ನು ತೊಳೆಯುವಾಗ ಸಿಕ್ಕಿದ ಆನಂದವೇ ಸಿಗಲಿದೆ ಮತ್ತು ಬೇಗ ಮುಂದೆ ಹೋಗುವಿರಿ.

ಕು. ಗುಲಾಬಿ ಧುರಿ : ನಿಮ್ಮ ಆಶೀರ್ವಾದವಿದ್ದರೆ ಮಾತ್ರ !

ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

 

ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ-ಪುರಾಣಗಳಲ್ಲಿ ಇವೆ.