ಕೋಟ್ಯಾಂತರ ಭಾರತೀಯರ ಶ್ರದ್ಧಾಸ್ಥಾನ, ಜೊತೆಗೆ ರಾಷ್ಟ್ರೀಯ ಗುರುತು, ಆದರ್ಶ, ಸ್ವಾಭಿಮಾನ ಮತ್ತು ನಿಷ್ಠೆಯ ವಿಷಯವಾಗಿರುವ ಅಯೋಧ್ಯೆಯಲ್ಲಿ ರಾಮಲಲಾನ ಪ್ರಾಣಪ್ರತಿಷ್ಠಾಪನೆಯ ಸಮಾರಂಭವು ಜನವರಿ ೨೨ ರಂದು ಭಾವಪೂರ್ಣ ಮತ್ತು ಉತ್ಸಾಹಭರಿತ ವಾತಾವರಣದಲ್ಲಿ ಜರುಗಿತು. ಕಳೆದ ಎಷ್ಟೋ ದಿನಗಳಿಂದಷ್ಟೆ ಅಲ್ಲ, ಹಲವಾರು ಶತಮಾನಗಳಿಂದ ಎಲ್ಲಾ ಹಿಂದೂಗಳು ತಮ್ಮ ಕಣ್ಣುಗಳಲ್ಲಿ ತುಂಬಿಡಲು ಕಾಯುತ್ತಿದ್ದ ಕ್ಷಣಕ್ಕಾಗಿ ಹಿಂದೂ ಜನಮನವು ಉತ್ಸುಕತೆಯಿಂದಿತ್ತು, ಆ ಕ್ಷಣ ಇಂದು ಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರ ಮನವಿಯಂತೆ ದೇಶವಾಸಿಗಳು ಈ ಐತಿಹಾಸಿಕ ದಿನವನ್ನು ದೀಪಾವಳಿಯಂತೆ ಆಚರಿಸಿದರು; ಏಕೆಂದರೆ ರಾಷ್ಟ್ರೀಯ ಅವಮಾನ ಮತ್ತು ಗುಲಾಮಗಿರಿಯ ಸಂಕೇತಗಳನ್ನು ನಾಶಪಡಿಸಿ ಸ್ವಾಭಿಮಾನ ಮತ್ತು ಆತ್ಮಗೌರವದ ದೇವಾಲಯವನ್ನು ಎಲ್ಲ ಭಾರತೀಯರಿಗಾಗಿ ತೆರೆಯಲಾಗಿದೆ. ಶ್ರೀರಾಮನ ಜನ್ಮಭೂಮಿಯಲ್ಲಿ ಇಂದು ನಿಂತಿರುವ ಶ್ರೀರಾಮ ಮಂದಿರ ಮತ್ತು ಮೂರ್ತಿ ಪ್ರಾಣಪ್ರತಿಷ್ಠಾಪನೆಯ ಸಮಾರಂಭವು ಹಿಂದೂಗಳ ವಿಜಯದ ಸಂಕೇತವಾಗಿದೆ ಮತ್ತು ಈ ವಿಜಯವು ಹಿಂದೂಗಳ ಇತಿಹಾಸದಲ್ಲಿ ಸುವರ್ಣ ಯುಗವಾಗಿದೆ; ಏಕೆಂದರೆ ಇದರ ಹಿಂದೆ ಹೋರಾಟದ, ಸಂಘರ್ಷದ ಮತ್ತು ಬಲಿದಾನದ ವ್ಯಾಪಕ ಹಿನ್ನೆಲೆಯಿದೆ. ಶ್ರೀರಾಮಜನ್ಮಭೂಮಿಗಾಗಿ ಬಲಿದಾನ ಮಾಡಿದ ಲಕ್ಷಾಂತರ ಧರ್ಮವೀರರು ಮತ್ತು ಮಾತೃಭೂಮಿಯ ಕಳಂಕವನ್ನು ಅಳಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದವರ ಶತಮಾನಗಳ ನೋವು ಕಡಿಮೆಯಾಗಿದೆ. ಅಯೋಧ್ಯೆಯಲ್ಲಿ ಶ್ರೀ ರಾಮಲಲಾವನ್ನು ಮಾತ್ರ ಪ್ರತಿಷ್ಠಾಪಿಸನೆಯ ಜೊತೆಗೆ ಈ ಪ್ರಾಚೀನ ‘ರಾಷ್ಟ್ರಮಂದಿರ’ವನ್ನು ಸಹ ಪುನರ್ನಿರ್ಮಿಸಲಾಗಿದೆ. ಶ್ರೀರಾಮಚಂದ್ರನ ಆದರ್ಶ ಜೀವನದಿಂದ ಪ್ರೇರಣೆ ಪಡೆದು ಸಾಮರ್ಥ್ಯಶಾಲಿ ಮತ್ತು ಆತ್ಮಸ್ಥೈರ್ಯದಿಂದ ಪರಿಪೂರ್ಣವಾದಂತಹ ನವಭಾರತದ್ದೇ ಪ್ರತಿಷ್ಠಾಪನೆಯಾಗಿದೆ. ಇಂದಿನಿಂದ ರಾಮರಾಜ್ಯ ಆರಂಭವಾಗಿದೆ.
ಭಾರತದಲ್ಲಿ ಹಬ್ಬ ಹರಿದಿನಗಳನ್ನು ಆಚರಿಸುವಾಗ ಎಲ್ಲರೂ ಎಷ್ಟು ಸಂತೋಷಪಡುತ್ತಾರೆಯೋ ಅಷ್ಟೇ ಆನಂದವನ್ನು ಭಾರತೀಯರೆಲ್ಲರೂ ಶ್ರೀರಾಮಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ಸಮಾರಂಭದಿಂದ ಅನುಭವಿಸಿದ್ದಾರೆ. ಶ್ರೀರಾಮಲಲಾನು ಅಯೋಧ್ಯೆಯಲ್ಲಿ ಮಾತ್ರವಲ್ಲ, ಎಲ್ಲೆಡೆಯಲ್ಲಿ ತಮ್ಮೊಂದಿಗೆ ಸಮೃದ್ಧಿ, ಸಂಪತ್ತು ತರುತ್ತಿದ್ದಾನೆ. ಆದ್ದರಿಂದ ಈ ಲೋಕಾರ್ಪಣೆಯ ದಿನದಂದು ಕೇವಲ ಭಕ್ತಿಮಯ ಸುವಾಸನೆಯು ಭೂಮ್ಯಾಕಾಶದಲ್ಲಿ ಸುಗಂಧವನ್ನು ಮಾತ್ರ ಪಸರಿಸದೇ, ವ್ಯಾಪಾರ ಮತ್ತು ಆರ್ಥಿಕತೆಯ ರೂಪದಲ್ಲಿ ಶ್ರೀ ಮಹಾಲಕ್ಷ್ಮಿ ದೇವಿಯ ಕೃಪೆಯೂ ಆಗಿದೆ. ಅಯೋಧ್ಯೆಯಲ್ಲಿನ ಅಭಿವೃದ್ಧಿ ಕಾರ್ಯಗಳು ಮತ್ತು ಬೃಹತ್ ಯೋಜನೆಗಳು ಭಾರತದ ಒಟ್ಟಾರೆ ಆರ್ಥಿಕತೆಯ ಮೇಲೆ ಸಕರಾತ್ಮಕ ಮತ್ತು ಅನುಕೂಲಕರ ಪರಿಣಾಮ ಬೀರಲಿವೆ ಎಂದು ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ವರದಿ ಮಾಡಿವೆ. ಆದುದರಿಂದ ಶ್ರೀರಾಮಲಲ್ಲಾನ ಆಗಮನ ಮತ್ತು ಪ್ರಾಣಪ್ರತಿಷ್ಠಾಪನೆಯು ದೇಶಕ್ಕೆ ಮತ್ತೆ ಚೈತನ್ಯ, ಉಲ್ಲಾಸ ಮತ್ತು ಆನಂದವನ್ನು ತಂದಿದೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿಯವರ ಮನವಿಯಂತೆ ಪ್ರಾಣಪ್ರತಿಷ್ಠಾಪನೆಯ ದಿನದಂದು ತಮ್ಮ ಮನದಲ್ಲಿ ‘ಶ್ರೀರಾಮ ಜ್ಯೋತಿ’ಯನ್ನು ಬೆಳಗಿಸುವ ಮೂಲಕ ರಾಷ್ಟ್ರದೀಪವನ್ನು ಬೆಳಗಿಸಲು ಎಲ್ಲರೂ ಒಗ್ಗೂಡಿದ್ದರು.
ವಿರೋಧಿಗಳು ರಾವಣನಂತೆ ವರ್ತಿಸುತ್ತಿರುವುದೇಕೆ ?
೧೫೨೮ ರಿಂದ ಡಿಸೆಂಬರ್ ೬, ೧೯೯೨ ರವರೆಗಿನ ಸುಮಾರು ೪೫೦ ವರ್ಷಗಳ ಅವಧಿಯಲ್ಲಿ, ಹಿಂದೂ ಸಮಾಜವು ವಿವಿಧ ಆಕ್ರಮಣಕಾರರ ವಿರುದ್ಧ ೪೦೦ ಕ್ಕೂ ಹೆಚ್ಚು ಹೋರಾಟಗಳನ್ನು ನಡೆಸಿದೆ. ಅಯೋಧ್ಯೆಯ ದೇವಾಲಯವನ್ನು ಹಿಂದೂ ಸಮುದಾಯಕ್ಕೆ ಪೂಜೆಗಾಗಿ ತೆರೆದಿರಿಸಲು ನ್ಯಾಯಾಲಯದಲ್ಲಿ ಸುದೀರ್ಘ ಹೋರಾಟವನ್ನು ಮಾಡಬೇಕಾಯಿತು. ಇದೀಗ ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠಾಪನೆಯ ಸಮಾರಂಭ ಸಂಭ್ರಮದಿಂದ ನಡೆಯುತ್ತಿರುವಾಗ ಕಳೆದ ಕೆಲ ದಿನಗಳಿಂದ ವಿರೋಧಿಗಳು ಅದನ್ನು ಟೀಕಿಸುತ್ತಿದ್ದಾರೆ. ಈ ಸಮಾರಂಭವನ್ನು ಆನಂದಿಸುವ ಬದಲು, ವಿರೋಧಿಗಳು ಶ್ರೀರಾಮನಿಗೆ ಅವಮಾನಿಸಿ ಒಂದು ರೀತಿಯಲ್ಲಿ ಶ್ರೀರಾಮನನ್ನು ದ್ವೇಷಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಎನ್‌ಸಿಪಿ ಶಾಸಕ ಜಿತೇಂದ್ರ ಆವ್ಹಾಡ್ ಅವರು ‘ಶ್ರೀರಾಮ ಮಾಂಸಾಹಾರಿಯಾಗಿದ್ದನು’ ಎಂದು ಹೇಳುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದರು. ಮತ್ತೊಂದೆಡೆ, ಸನಾತನ ಧರ್ಮವನ್ನು ದ್ವೇಷಿಸುವ ತಮಿಳುನಾಡಿನ ಡಿಎಂಕೆ ಸರಕಾರವು ಶ್ರೀರಾಮ ಮಂದಿರದ ಉದ್ಘಾಟನೆಯ ನೇರ ಪ್ರಸಾರವನ್ನು ನಿಷೇಧಿಸಿದೆ. ಜಳಗಾಂವ್‌ನಲ್ಲಿ ನಡೆದ ಸಮಾರಂಭದಲ್ಲಿ ಸಾಹಿತಿ ಭಾಲಚಂದ್ರ ನೇಮಾಡೆ ಇವರು, ‘ಹಲವು ರಾಮಾಯಣಗಳಲ್ಲಿ ರಾಮ ವಿಭಿನ್ನವಾಗಿದ್ದಾನೆ. ಹೀಗಿರುವಾಗ ಯಾವ ಆಧಾರದಲ್ಲಿ ವಾಲ್ಮೀಕಿಯ ರಾಮ ಏಕೆ ನಿಜವೆಂದು ತಿಳಿಯಬೇಕು ? ವಾಲ್ಮೀಕಿ ಶೃಂಗ ವಂಶದ ಆಸ್ಥಾನದ ಕವಿಯಾಗಿದ್ದರು. ಶೃಂಗರು ಇಷ್ಟಪಟ್ಟಂತೆ ರಾಮಾಯಣ ವಾಲ್ಮೀಕಿಯವರು ಬರೆದಿದ್ದಾರೆ. ಒಂದು ರಾಮಾಯಣದಲ್ಲಿ ಸೀತೆ ರಾಮನನ್ನು ‘ಬುದ್ಧಿ ಇಲ್ವಾ’ ಎಂದು ನಿಂದಿಸುತ್ತಾಳೆ’, ಎಂದೆಲ್ಲ ಹೇಳಿ ತಮ್ಮ ಬುದ್ಧಿಭ್ರಷ್ಟತೆಯ ಪ್ರದರ್ಶನ ಮಾಡಿದ್ದಾರೆ. ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸುಪ್ರೀಂ ಕೋರ್ಟ್ ಪ್ರತಿಜ್ಞಾಪತ್ರದಲ್ಲಿ ‘ರಾಮ ಎಂಬುದು ಕೇವಲ ಕಾಲ್ಪನಿಕ ಪಾತ್ರ’ ಎಂದು ಹೇಳಿತ್ತು. ಜನವರಿ ೨೨ ರಂದು ಶ್ರೀ ರಾಮಲಲಾ ಅವರ ಪ್ರಾಣಪ್ರತಿಷ್ಠಾಪನೆಯ ದಿನದಂದು ನೀಡಲಾಗಿದ್ದ ರಜೆಯನ್ನು ರದ್ದುಗೊಳಿಸುವಂತೆ ಕೋರಿ ಕಾನೂನು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಮುಂಬಯಿ ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿ ಮುಂದಿನಂತೆ ಹೇಳಿದೆ. ‘ಧಾರ್ಮಿಕ ವಿಷಯಗಳಿಗೆ ರಜೆ ಘೋಷಿಸಿದ ನಿರ್ಣಯವು ಸ್ವೇಚ್ಛೆ ಆಗಿರಲು ಸಾಧ್ಯವಿಲ್ಲ. ರಜೆಯ ನಿರ್ಧಾರವು ಜಾತ್ಯತೀತ ತತ್ತ್ವಗಳಿಗೆ ಅನುಗುಣವಾಗಿದೆ. ರಾಜ್ಯದಲ್ಲಿ ವಿವಿಧ ಧರ್ಮಗಳನ್ನು ಪಾಲಿಸಲಾಗುತ್ತದೆ. ಈ ರಾಜಕೀಯ ಪ್ರೇರಿತ ಮತ್ತು ಪ್ರಚಾರಕ್ಕಾಗಿ ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಲಾಗಿದೆ ಎಂದು ತೋರುತ್ತದೆ. ಈ ಅರ್ಜಿಯನ್ನು ಸಲ್ಲಿಸುವಾಗ ಮೂಲಭೂತ ತತ್ತ್ವಗಳನ್ನು ಗಣನೆಗೆ ತೆಗೆದುಕೊಂಡಿಲ್ಲ’, ಎಂದು ಹೇಳಿ ಹೈಕೋರ್ಟ್ ಕಾನೂನು ವಿಭಾಗದ ವಿದ್ಯಾರ್ಥಿಗಳ ಕಿವಿ ಹಿಂಡಿದೆ. ಇದರಿಂದ ‘ಇಂದಿನಿಂದ ರಾಮರಾಜ್ಯ ಆರಂಭವಾದ ನಂತರ ವಿರೋಧಿಗಳ ಚಟುವಟಿಕೆಗಳಿಗೂ ಕಡಿವಾಣ ಬೀಳಲು ಆರಂಭವಾಗಿದೆ’ ಎಂದು ಹೇಳಿದರೆ ತಪ್ಪಾಗದು. ‘ಜಿಹಾದಿ ಮುಸ್ಲಿಂ ದಾಳಿಕೋರರಿಂದ ಧ್ವಂಸಗೊಂಡಿರುವ ಶ್ರೀರಾಮ ಜನ್ಮಭೂಮಿ, ಮಥುರಾದ ಶ್ರೀಕೃಷ್ಣ ಜನ್ಮಭೂಮಿ, ಕಾಶಿಯ ಬಾಬಾ ವಿಶ್ವನಾಥ ಈ ಮೂರು ದೇಗುಲಗಳನ್ನು ಹಿಂದೂಗಳಿಗೆ ಮರಳಿಸಿ ಅಲ್ಲಿ ಭವ್ಯ ಮಂದಿರಗಳನ್ನು ನಿರ್ಮಿಸಬೇಕು’ ಎಂಬುದು ಹಿಂದೂಗಳ ಸಹಜ ಬೇಡಿಕೆಯಾಗಿದೆ. ಈ ಬೇಡಿಕೆಯನ್ನು ಮುಂದಿಡುವಾಗ ಹಿಂದೂಗಳು ಇಂದಿನ ಮುಸ್ಲಿಂ ಸಮಾಜದ ಬಗ್ಗೆ ಯಾವುದೇ ಪೂರ್ವಗ್ರಹ ಅಥವಾ ದ್ವೇಷವನ್ನು ತೋರಿಸಿಲ್ಲ. ತದ್ವಿರುದ್ಧ ಅವರು ಅವರೊಂದಿಗೆ ಚರ್ಚೆ ನಡೆಸುವ ಮೂಲಕ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿದರು; ಆದರೆ ಎಡಪಂಥೀಯರು, ಕಾಂಗ್ರೆಸ್ಸಿಗರು, ಕಪಟಿಗಳು ಮತ್ತು ಪ್ರಗತಿಪರ ನಾಯಕರು ಪದೇ ಪದೇ ಹಿಂದೂಗಳ ಭಾವನೆಗಳನ್ನು ತಿರಸ್ಕಾರದಿಂದ ನೋಡುತ್ತಿದ್ದರು. ಕಾರಸೇವಕರ ಮೇಲೆ ಗುಂಡು ಹಾರಿಸಿದರು, ಅವರನ್ನು ಜೈಲಿಗೆ ಹಾಕುವ ಕೆಲಸವನ್ನು ಅವರು ಕೂಡಲೇ ಮಾಡಿದರು. ಮೇಲಿನ ಎಲ್ಲಾ ಉದಾಹರಣೆಗಳನ್ನು ನೋಡಿದರೆ ಕಾಂಗ್ರೆಸ್, ಪ್ರಗತಿಪರರು, ಕಮ್ಯುನಿಸ್ಟರಂತಹ ವಿರೋಧಿಗಳು ಕೇವಲ ದ್ವೇಷದಿಂದ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಮತ್ತು ಶ್ರೀರಾಮಮೂರ್ತಿ ಪ್ರತಿಷ್ಠಾಪನಾ ಸಮಾರಂಭವನ್ನು ವಿರೋಧಿಸಿ ರಾವಣನಂತೆ ವರ್ತಿಸಿದ್ದಾರೆ. ದ್ವೇಷದಿಂದ ‘ಶ್ರೀರಾಮನೊಡನೆ ದ್ವೇಷದಿಂದ ವರ್ತಿಸಿ ಅವರೊಂದಿಗೆ ಯುದ್ಧ ಮಾಡಬೇಡ. ಶ್ರೀರಾಮನಿಗೆ ಶರಣಾಗು’ ಎಂದು ಅನೇಕರು ರಾವಣನಿಗೆ ಹೇಳಿದರೂ ಅವನು ತನ್ನ ಅಹಂಕಾರದಿಂದ ತನ್ನನ್ನು ತಾನೇ ನಾಶಪಡಿಸಿಕೊಂಡನು. ದುರಹಂಕಾರಿ ರಾವಣನನ್ನು ಶ್ರೀರಾಮನು ವಧಿಸಿದನು. ಆದ್ದರಿಂದ ವಿರೋಧಿಗಳು ದ್ವೇಷದಿಂದ ವಿರೋಧಿಸುವ ಬದಲು ಈ ಸಮಾರಂಭವನ್ನು ಆನಂದಿಸಬೇಕು, ಇಲ್ಲದಿದ್ದರೆ ಅವರ ಸ್ಥಿತಿಯೂ ರಾವಣನಂತೆ ಆಗಲಿದೆ. ಅಯೋಧ್ಯೆಗೆ ಹೋಗಿದ್ದ ಕಾರಸೇವಕರಿಗೆ ಮುಸಲ್ಮಾನರ ಓಲೈಕೆಗಾಗಿ ಚಿತ್ರಹಿಂಸೆ ನೀಡಿದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ಮುಲಾಯಂ ಸಿಂಗ್ ಯಾದವ್ ಅವರನ್ನು ಉತ್ತರಪ್ರದೇಶದ ಜನರು ಅಧಿಕಾರದಿಂದ ಕೆಳಗಿಳಿಸಿದರು. ಅದರಂತೆ ಈ ಸಮಾರಂಭವನ್ನು ವಿರೋಧಿಸುವ ಜನಪ್ರತಿನಿಧಿಗಳನ್ನು ಮುಂದಿನ ಚುನಾವಣೆಯಲ್ಲಿ ಹಿಂದೂಗಳು ಶಾಶ್ವತವಾಗಿ ಮನೆಯಲ್ಲಿ ಕುಳ್ಳಿರಿಸುವರು. ಮಥುರಾದ ಶ್ರೀ ಕೃಷ್ಣ ದೇವಸ್ಥಾನ ಮತ್ತು ಕಾಶಿ ವಿಶ್ವನಾಥ ದೇವಸ್ಥಾನವು ಮುಸ್ಲಿಂ ದಾಳಿಕೋರರ ಕಪಿಮುಷ್ಠಿಯಿಂದ ಮುಕ್ತವಾಗುವ ದಿನವೇ ಹಿಂದೂಗಳಿಗೆ ದಿಗ್ವಿಜಯ ದಿನವಾಗಿರುತ್ತದೆ. ಈ ಗೆಲುವಿನ ಬುನಾದಿಯನ್ನು ರಾಮಲಲಾನ ಪ್ರತಿಷ್ಠಾಪನಾ ದಿನದಂದು ಹಾಕಲಾಗಿದೆ ಎಂಬುದನ್ನು ವಿರೋಧಿಗಳು ನೆನಪಿಸಿಕೊಳ್ಳಬೇಕು!
ಶ್ರೀ ರಾಮಲಲಾ ಅವರ ಪ್ರಾಣಪ್ರತಿಷ್ಠಾಪನೆಯು ಸಾಮರ್ಥ್ಯಶಾಲಿ ಮತ್ತು ಆತ್ಮವಿಶ್ವಾಸದಿಂದ ಪರಿಪೂರ್ಣವಾದಂತಹ ನವಭಾರತದ ಪ್ರಾಣ ಪ್ರತಿಷ್ಠಾಪನೆಯಾಗಿದೆ !