|
ನವದೆಹಲಿ – ಕೆನಡಾ ಮತ್ತು ಪಾಕಿಸ್ತಾನದಿಂದ ಭಾರತದ ವಿರುದ್ಧ ಕೆಲಸ ಮಾಡುತ್ತಿರುವ ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ‘ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್’ ಭಾರತಕ್ಕೆ ಕೋಟ್ಯಂತರ ರೂಪಾಯಿ ಕಳುಹಿಸಲು ಹೊಸ ವಿಧಾನವನ್ನು ಅಳವಡಿಸಿಕೊಂಡಿದೆ. ಇದಕ್ಕಾಗಿ ಸಾಂಪ್ರದಾಯಿಕ ‘ಹವಾಲಾ’ ಬದಲು ವಿದೇಶಿ ಪ್ರವಾಸಿಗರಿಗೆ ಭಾರತ ಸರಕಾರದ ‘ಎಂ.ಟಿ.ಎಸ್.ಎಸ್.’ ಯೋಜನೆಯ ದುರುಪಯೋಗ ಮಾಡಲಾಯಿತು.
ಈ ಯೋಜನೆಯನ್ನು ‘ಮನಿ ಟ್ರಾನ್ಸಫರ್ ಸ್ಕೀಮ್’ ಎಂದು ಕರೆಯಲಾಗುತ್ತದೆ ಮತ್ತು ಈ ಮೂಲಕ ವಿದೇಶಿ ಪ್ರವಾಸಿಗರು ವರ್ಷದಲ್ಲಿ 30 ಬಾರಿ ವಿದೇಶದಿಂದ ಹಣವನ್ನು ತರಬಹುದು. ಒಂದು ಬಾರಿಗೆ ಗರಿಷ್ಠ 250 ಅಮೆರಿಕನ್ ಡಾಲರ್ ಅಂದರೆ 2 ಲಕ್ಷದ 7 ಸಾವಿರ ರೂಪಾಯಿ ಪಡೆಯಲು ಈ ಯೋಜನೆಯಡಿ ಸೌಲಭ್ಯವಿದೆ. ‘ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್’ ವಿದೇಶಿ ಪ್ರವಾಸಿಗರಿಗೆ ಆಮಿಷ ಒಡ್ಡಿ ವಿದೇಶದಿಂದ ಹಣ ಕಳುಹಿಸಿತ್ತು. ಈ ಹಣವನ್ನು ಪ್ರವಾಸಿಗರ ಪರವಾಗಿ ಭಾರತದಲ್ಲಿನ ಅವರ ಭಯೋತ್ಪಾದಕರಿಗೆ ಒದಗಿಸಲಾಯಿತು. ಈ ವಿಧಾನವನ್ನು ಬಳಸಿಕೊಂಡು ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಖರೀದಿಸಲು ಇದುವರೆಗೆ ಕೋಟ್ಯಂತರ ರೂಪಾಯಿಗಳನ್ನು ಭಾರತಕ್ಕೆ ಕಳುಹಿಸಲಾಗಿದೆ.
ಭಾರತೀಯ ತನಿಖಾ ಸಂಸ್ಥೆಯು ಭಾರತೀಯ ರಿಸರ್ವ್ ಬ್ಯಾಂಕ್ ನೆರವಿನೊಂದಿಗೆ ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಮತ್ತು ‘ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್’ನ ಭಯೋತ್ಪಾದಕರಾದ ಹರ್ವಿಂದರ್ ಸಿಂಗ್ ರಿಂದಾ ಮತ್ತು ಗೋಲ್ಡಿ ಬರಾದ್ ವಿರುದ್ಧ 32 ಸ್ಥಳಗಳಲ್ಲಿ ದಾಳಿ ನಡೆಸಿತು. ಇದರಿಂದ ಈ ಸಂಪೂರ್ಣ ವಿಷಯ ಹೊರಬಿದ್ದಿದೆ.
ಸಂಪಾದಕರ ನಿಲುವು* ಕೆನಡಾದಲ್ಲಿ ಕೆಲಸ ಮಾಡುತ್ತಿರುವ ಈ ಸಂಘಟನೆಯನ್ನು ನಿಷೇಧಿಸುವ ಸಲುವಾಗಿ, ಈಗ ಭಾರತವು ಪಾಕಿಸ್ತಾನದಂತೆ, ಕೆನಡಾಕ್ಕೂ ‘ಭಯೋತ್ಪಾದನೆಯನ್ನು ಪ್ರಾಯೋಜಿಸುವ ದೇಶ’ ಎಂದು ಅದರ ಪ್ರತಿಮೆಯನ್ನು ಜಗತ್ತಿನೆದರು ತರಬೇಕು ! * ಖಲಿಸ್ತಾನಿಗಳು ಈ ಉದ್ದೇಶಕ್ಕಾಗಿ ಬಳಸಿಕೊಂಡ ವಿದೇಶಿ ಪ್ರವಾಸಿಗರ ವಿರುದ್ಧ ಕಠಿಣ ಕ್ರಮದ ಜೊತೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಂಬಂಧಪಟ್ಟ ದೇಶಕ್ಕೆ ಎಚ್ಚರಿಕೆಯನ್ನು ನೀಡಬೇಕು. ಆಗ ಮಾತ್ರ ಇಂತಹ ಘಟನೆಗಳು ನಿಲ್ಲುತ್ತವೆ ! |