ಒಂದು ಲಿಟರ್ ನೀರಿನ ಪ್ಲಾಸ್ಟಿಕ್ ಬಾಟಲಿಯಲ್ಲಿ ೧ ರಿಂದ ೪ ಲಕ್ಷ ಪ್ಲಾಸ್ಟಿಕ್‌ನ ಸೂಕ್ಷ್ಮ ಕಣ ಪತ್ತೆ ! – ಸಂಶೋಧನೆಯ ನಿಷ್ಕರ್ಷ

‘ವಾಟರ್ ಫಿಲ್ಟರ್‘ ಗಳಲ್ಲೂ ಪ್ಲಾಸ್ಟಿಕ್ ಕಣಗಳು ಸೇರಿರುತ್ತವೆ !

ನವ ದೆಹಲಿ – ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ರಟಜರ್ಸ್ ವಿಶ್ವವಿದ್ಯಾಲಯದ ಸಂಶೋಧಕರು ‘ಪ್ರೊಸೀಡಿಂಗ್ಸ್ ಆಫ್ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್‘ ನಲ್ಲಿ ಪ್ರಕಟಿಸಿದ ಅಧ್ಯಯನದಲ್ಲಿ, ಸಂಪೂರ್ಣವಾಗಿ ಮುಚ್ಚಿದ ಪ್ಲಾಸ್ಟಿಕ್ ನೀರಿನ ಬಾಟಲಿಯಲ್ಲಿ ಸರಾಸರಿ ಒಂದು ಲೀಟರ್ ನೀರಿನಲ್ಲಿ ಅಂದಾಜು ೧ ರಿಂದ ೪ ಲಕ್ಷ ‘ನ್ಯಾನೋ ಪ್ಲಾಸ್ಟಿಕ್‘ನ ಸೂಕ್ಷ್ಮ ಕಣಗಳು ಇರುತ್ತವೆ, ಎಂದು ನಿರೀಕ್ಷಿಸಲಾಗಿದೆ. ಈ ಸೂಕ್ಷ್ಮ ಕಣಗಳು ಆರೋಗ್ಯಕ್ಕೆ ಹಾನಿಕಾರಕವೇ ? ಈ ಕುರಿತು ಸಂಶೋಧನೆ ನಡೆಯುತ್ತಿದೆ. ರಟಗರ್ಸ್ ವಿಶ್ವವಿದ್ಯಾಲಯದ ವಿಷಶತಜ್ಞ ಮತ್ತು ಈ ಸಂಶೋಧನಾ ಅಧ್ಯಯನದ ಸಹ ಲೇಖಕರಾದ ಫೋಬಿ ಸ್ಟಾಪಲ್ಟನ್ ರವರ ಹೇಳಿಕೆ ಪ್ರಕಾರ, ಈ ಕಣಗಳು ಮಾನವರ ಸಹಿತ ಇತರ ಸಸ್ತಿನಿಗಳ ದೇಹವನ್ನು ಪ್ರವೇಶಿಸಿದಾಗ, ಅವು ಜೀವಕೋಶಗಳ ಮೇಲೆ ನಿಖರವಾಗಿ ಏನು ಮತ್ತು ಯಾವ ಪ್ರಮಾಣದಲ್ಲಿ ಪರಿಣಾಮ ಬೀರುತ್ತವೆ ? ಅದನ್ನು ಅಧ್ಯಯನ ಮಾಡುವುದು ಅವಶ್ಯಕವಾಗಿದೆ ಎಂದರು.‌‌

ಈ ಸಂಶೋಧನೆಗಾಗಿ ಹೊಸದಾಗಿ ಅಭಿವೃದ್ಧಿ ಪಡಿಸಿದ ‘ಲೇಸರ್‘ ತಂತ್ರಜ್ಞಾನವನ್ನು ಬಳಸಲಾಗಿದ್ದು, ಈ ಮೂಲಕ ಅತಿ ಚಿಕ್ಕ ಚೂರುಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ. ಸೂಕ್ಷ್ಮ ಕಣಗಳನ್ನು ಮುಖ್ಯವಾಗಿ; ಪ್ಲಾಸ್ಟಿಕ್ ಬಾಟಲಿಯಿಂದಲೇ ನೀರಿನಲ್ಲಿ ಬೆರತಿರುತ್ತದೆ. ಇದಲ್ಲದೆ ನೀರನ್ನು ಸೋಸಲು ಬಳಸುವ ಫಿಲ್ಟರ್‌ನ ಪ್ಲಾಸ್ಟಿಕ್ ಕೂಡ ನೀರಿನೊಂದಿಗೆ ಬೆರೆಯುತ್ತಿದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.‌‌