ಮಾಲ್ಡಿವ್ಸ್ ನ ಅಂತರಿಕ ಪ್ರಕರಣದಲ್ಲಿ ಯಾವುದೇ ದೇಶ ಹಸ್ತಕ್ಷೇಪ ಮಾಡಿದರೆ ಚೀನಾ ಅದನ್ನು ವಿರೋಧಿಸಲಿದೆ !

ಭಾರತಕ್ಕೆ ಪರೋಕ್ಷವಾಗಿ ಬೆದರಿಕೆ ಹಾಕಿದೆ ಚೀನಾ !

ಬೀಜಿಂಗ (ಚೀನಾ) – ಮಾಲ್ಡಿವ್ಸ್ ನ ಅಂತರಿಕ ಪ್ರಕರಣಗಳಲ್ಲಿ ಯಾವುದೇ ದೇಶದಿಂದ ಹಸ್ತಕ್ಷೇಪ ಮಾಡಲು ಪ್ರಯತ್ನಿಸಿದರೆ ಚೀನಾ ಬಲವಾಗಿ ವಿರೋಧಿಸುವುದು, ಎಂದು ಚೀನಾ ಮಾಲ್ಡಿವ್ಸ್ ಗೆ ಭರವಸೆ ನೀಡಿದೆ. ಇದರಿಂದ ಚೀನಾ ಪರೋಕ್ಷವಾಗಿ ಭಾರತಕ್ಕೆ ಬೆದರಿಕೆ ನೀಡಿದೆ. ಪ್ರಸ್ತುತ ಮಾಲ್ಡಿವ್ಸ್ ನ ರಾಷ್ಟ್ರಪತಿ ಮಹಮ್ಮದ್ ಮೂಯಿಜ್ಜು ಈಗ ಚೀನಾದ ಪ್ರವಾಸದಲ್ಲಿದ್ದಾರೆ. ಚೀನಾದ ರಾಷ್ಟ್ರಪತಿ ಶಿ ಜೀನಪಿಂಗ ಇವರ ಜೊತೆ ಮೂಯಿಜ್ಜು ಇವರ ಭೇಟಿಯ ನಂತರ ಚೀನಾ ಮೇಲಿನ ಭರವಸೆ ನೀಡಿದೆ. ಎರಡು ದೇಶಗಳು ೨೦ ಒಪ್ಪಂದದ ಮೇಲೆ ಸಹಿ ಮಾಡಿದೆ. ಮಾಲ್ಡಿವ್ಸ್ ಚೀನಾ ಯಾತ್ರಿಕರಿಗೆ ಮಾಲ್ಡಿವ್ಸ್ ಗೆ ಕಳಿಸಲು ವಿನಂತಿಸಿದೆ. ಭಾರತ ಮತ್ತು ಮಾಲ್ಡಿವ್ಸ್ ಇವರಲ್ಲಿ ಪ್ರವಾಸೋದ್ಯಮದ ಕುರಿತು ಬೀಗುವಿನ ವಾತಾವರಣ ನಿರ್ಮಾಣವಾಗಿದೆ. ಮಾಲ್ಡಿವ್ಸ್ ನ ಸಚಿವರು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇವರನ್ನು ಟೀಕಿಸಿದ ನಂತರ ಭಾರತೀಯರಿಂದ ಬಹಿಷ್ಕಾರ ಹಾಕಲು ಕರೆ ನೀಡಲಾಗಿದೆ. ಚೀನಾದ ಸರಕಾರದ ಮುಖವಾಣಿ ‘ಗ್ಲೋಬಲ್ ಟೈಮ್ಸ್’ನಲ್ಲಿ ಚೀನಾ ಮತ್ತು ಮಾಲ್ಡಿವ್ಸ್ ಇವರ ಜಂಟಿ ಮನವಿಯ ಕುರಿತು, ಚೀನಾ ಮಾಲ್ಡಿವ್ಸ್ ನ ಸಾರ್ವಭೌಮತ್ವ ಮತ್ತು ರಾಷ್ಟ್ರೀಯ ಗೌರವ ಕಾಪಾಡಲು ಎಲ್ಲಾ ಪ್ರಯತ್ನಗಳಿಗೆ ಸಂಪೂರ್ಣ ಸಹಾಯ ಮಾಡುವುದು. ಹಾಗೂ ಮಾಲ್ಡಿವ್ಸ್ ನ ಆಂತರಿಕ ಪ್ರಕರಣದಲ್ಲಿ ವಿದೇಶಿ ಹಸ್ತಕ್ಷೇಪವನ್ನು ವಿರೋಧಿಸುವುದು. ಚೀನಾ ಮಾಲ್ಡಿವ್ಸ್ ನ ಜೊತೆ ಇರುವ ನೀತಿಗಳನ್ನು ಧೃಡತೆಯಿಂದ ಪಾಲಿಸಲಿದೆ ಎಂದು ಹೇಳಿದರು.

ಸಂಪಾದಕರ ನಿಲುವು

* ಚೀನಾದ ಇಂತಹ ಟೊಳ್ಳು ಬೆದರಿಕೆಗೆ ಭಾರತದ ಗಮನ ನೀಡದೆ ಮಾಲ್ಡಿವ್ಸ್ ಗೆ ಸಾಮ, ದಾಮ, ದಂಡ ಮತ್ತು ಭೇದದ ಮೂಲಕ ಪಾಠ ಕಲಿಸಬೇಕು !