ಸರ್ವೋಚ್ಚ ನ್ಯಾಯಾಲಯವು ರಾಮಜನ್ಮಭೂಮಿಯ ಮೊಕದ್ದಮೆಯಲ್ಲಿ, ಮಸೀದಿಗಾಗಿ ೫ ಎಕರೆ ಭೂಮಿಯನ್ನು ನೀಡಬೇಕು ಎಂಬಂತಹ ತೀರ್ಪನ್ನೂ ನೀಡಿದೆ. ಈ ತೀರ್ಪು ಸರ್ವೋಚ್ಚ ನ್ಯಾಯಾಲಯದ್ದಾಗಿರುವುದರಿಂದ ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ಈ ತೀರ್ಪಿನ ನಂತರ ಇದಕ್ಕೆ ಸಂಬಂಧಿಸಿದಂತೆ ನಾನು ಒಂದು ಅರ್ಜಿಯನ್ನೂ ಸಲ್ಲಿಸಿದ್ದೆ, ‘ಮುಸಲ್ಮಾನರಿಗೆ ಯಾವುದೇ ರೀತಿಯಲ್ಲಿ ಭೂಮಿಯನ್ನು ನೀಡುವುದು, ತಪ್ಪಾಗಿದೆ. ಈ ಆದೇಶವನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು.’ ‘ಕಟ್ಟಬೇಕಾಗಿರುವ ಮಸೀದಿ ನಿರ್ಮಾಣವಾಗಬಾರದೆಂದು ಹಿಂದೂ ಸಮಾಜಕ್ಕೆ ಅನಿಸಬೇಕು’, ಎಂದು ನಾನು ಭಾವಿಸುತ್ತೇನೆ; ಏಕೆಂದರೆ ಹಿಂದೂಗಳ ಹಣ, ಸರಕಾರದ ಹಣ ಅಥವಾ ಸರಕಾರದ ಭೂಮಿಯಲ್ಲಿ ಯಾವುದೇ ಮಸೀದಿ ಕಟ್ಟುವಂತಿಲ್ಲ. ಈ ಕಟ್ಟಡದ, ಅಂದರೆ ಬಾಬರಿ ಮಸೀದಿಯ ಬದಲು ಅವರಿಗೆ ಭೂಮಿ ನೀಡುವುದು ದೊಡ್ಡ ತಪ್ಪಾಗಿದೆ. ಆ ಮಸೀದಿಯ ಭೂಮಿಪೂಜೆಯ ವಿಷಯ ಬಂದರೆ, ಮುಸಲ್ಮಾನರಲ್ಲಿ ಭೂಮಿ ಪೂಜೆ ಮಾಡುವುದಿಲ್ಲ. ಕಾಮಗಾರಿಯನ್ನು ಅವರು ಯಾವಾಗಲೂ ಮಾಡಬಹುದು. ನನ್ನ ತಿಳುವಳಿಕೆಗನುಸಾರ ನಮ್ಮ ಯಾವುದೇ ರಾಜಕೀಯ ನೇತಾರ, ಸರಕಾರಿ ಪದಾಧಿಕಾರಿ, ಪ್ರಧಾನಮಂತ್ರಿ, ಮುಖ್ಯಮಂತ್ರಿ ಅಥವಾ ಯಾವುದೇ ಮಂತ್ರಿ ಅಥವಾ ರಾಜ್ಯ ಸಚಿವರು ಇಂತಹ ಕಾರ್ಯಕ್ರಮಕ್ಕೆ ಹೋಗಬಾರದು; ಏಕೆಂದರೆ ‘ಈ ದೇಶದಲ್ಲಿ ಬಾಬರನ ಹೆಸರಿನಲ್ಲಿ ಏನಾದರೂ ನಿರ್ಮಾಣ ಆಗುವುದನ್ನು ನಾವು ಹಿಂದೂಗಳು ಮೂಲತಃ ಸಹಿಸುವುದಿಲ್ಲ ಮತ್ತು ಅದನ್ನು ನಾವು (ಹಿಂದೂಗಳು) ಸಹಿಸಬಾರದು. ಅದರಲ್ಲಿ ಯಾರೂ ಪಾಲ್ಗೊಳ್ಳಬಾರದು ಮತ್ತು ಆ ಕಾರ್ಯಕ್ರಮವನ್ನು ಪೂರ್ಣ ಬಹಿಷ್ಕರಿಸ ಬೇಕೆಂದು ಎಂಬುದು ನನ್ನ ಮನವಿ.
– ಪೂ. (ನ್ಯಾಯವಾದಿ) ಹರಿ ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ.