ಅತ್ಯಂತ ಪವಿತ್ರ ಭೂಮಿ ಹಿಂದೂಸ್ಥಾನದ ಆತ್ಮವಾಗಿರುವ ಮರ್ಯಾದಾಪುರುಷೋತ್ತಮ ಪ್ರಭು ಶ್ರೀರಾಮರ ಮಂದಿರಕ್ಕಾಗಿ ನಡೆದ ದೀರ್ಘಾವಧಿಯ ಸಂಘರ್ಷವು ಹಿಂದೂಗಳ ಆತ್ಮಸನ್ಮಾನ ಹಾಗೂ ರಾಷ್ಟ್ರೀಯ ಸ್ವಾಭಿಮಾನಕ್ಕಾಗಿ ವಿಶ್ವದ ಇತಿಹಾಸದಲ್ಲಿ ಅಮರವಾಗಿದೆ ! ಭಾರತದ ಸಂಸ್ಕೃತಿಯ ವ್ಯಾಖ್ಯೆ, ಭಾರತೀಯ ಸಭ್ಯತೆಯ ಆದರ್ಶ, ಭಾರತೀಯ ಜೀವನ ಮೌಲ್ಯಗಳನ್ನು ಪ್ರತಿನಿಧಿಸುವ ರಘುಕುಲವಂಶದ ಅಯೋಧ್ಯಾಪತಿ ಶ್ರೀರಾಮರ ಭವ್ಯ ಮಂದಿರ ಕೊನೆಗೂ ನಿರ್ಮಾಣವಾಗಿ ಅಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ ದೈವೀ ಸೂಕ್ಷ್ಮ ಮುಹೂರ್ತ ಕಾಲ ಸಮೀಪಿಸಿದೆ ! ಹಿಮಾಲಯದಿಂದ ಹಿಡಿದು ಹಿಂದೂಮಹಾಸಾಗರದ ವರೆಗೆ ಪ್ರತಿಯೊಬ್ಬರನ್ನೂ ಐಕ್ಯತೆಯ ಬಂಧನದಲ್ಲಿ ಬಂಧಿಸುವ ‘ಶ್ರೀರಾಮ’ ಎಂಬ ಪದವು ಅಲೌಕಿಕ ರಾಷ್ಟ್ರಸೂತ್ರವಾಗಿದೆ ! ಪ್ರತಿಯೊಬ್ಬರ ಮನಸ್ಸಿನಲ್ಲಿರುವ ಶ್ರೀರಾಮರ ಮಂದಿರದ ನಿರ್ಮಾಣವು ಕೇವಲ ಇಸ್ಲಾಮಿಕ್ ಆಕ್ರಮಣಕಾರರ ಪರಾಭವವಲ್ಲ, ಕೇವಲ ಅಧರ್ಮದ ಮೇಲೆ ಧರ್ಮದ ವಿಜಯವಲ್ಲ, ಅದರ ಜೊತೆಗೆ ಕಲಿಯುಗಾಂತರ್ಗತ ಆರನೇ ಕಲಿಯುಗದಲ್ಲಿನ ಸತ್ಯಯುಗದ ನವನಿರ್ಮಾಣದ, ಸ್ವಧರ್ಮಾಧಿಷ್ಠಿತ ಸ್ವರಾಷ್ಟ್ರ, ಎಲ್ಲ ಶಕ್ತಿಸಂಪನ್ನ, ಸುವ್ಯವಸ್ಥಾಪ್ರಧಾನ, ಎಲ್ಲ ಸೌಲಭ್ಯಯುಕ್ತ, ಸುಖೀ, ಸಮೃದ್ಧ, ಸುಸಂಸ್ಕೃತ ಸುರಾಜ್ಯದ ಸೂರ್ಯೋದಯದ ನಾಂದಿಯಾಗಿದೆ !
ಹಿಂದೂ ರಾಷ್ಟ್ರದ ಹೆಜ್ಜೆಯ ಗುರುತು !
ಅಶ್ವಮೇಧ ಯಜ್ಞ ಮಾಡಿ ಸಾವಿರಾರು ವರ್ಷಗಳವರೆಗೆ ಇಡೀ ಪೃಥ್ವಿಯ ಮೇಲೆ ರಾಜ್ಯವಾಳಿದ ಪ್ರಭು ಶ್ರೀರಾಮರ ರಾಮರಾಜ್ಯವು ಆದರ್ಶ ರಾಷ್ಟ್ರದ ಮತ್ತು ರಾಜ ಶ್ರೀರಾಮರು ರಾಷ್ಟ್ರಕ್ಕಾಗಿ ತ್ಯಾಗ ಮಾಡುವುದರ ಸರ್ವೋತ್ತಮ ಉದಾಹರಣೆಯಾಗಿದ್ದಾರೆ. ಅವರು ವಚನಪಾಲನೆಗಾಗಿ ರಾಜಸಿಂಹಾಸನವನ್ನು ತ್ಯಜಿಸಿದರು !
ತಾವು ಗೆದ್ದ ರಾಜ್ಯಗಳನ್ನು ಸುಗ್ರೀವ ಹಾಗೂ ವಿಭೀಷಣರಿಗೆ ಹಿಂದಿರುಗಿಸಿದರು, ಆದರ್ಶ ರಾಜ್ಯಭಾರಕ್ಕಾಗಿ ದೈವೀ ಧರ್ಮಪತ್ನಿಯನ್ನೂ ತ್ಯಜಿಸುವ ಪ್ರಜಾಹಿತದಕ್ಷ ರಾಜ ಪ್ರಭು ಶ್ರೀರಾಮರೇ ಆಗಿದ್ದಾರೆ ! ಅವರು ನಮ್ರತೆ, ವಚನಬದ್ಧತೆ, ನೈತಿಕತೆ, ಸುಸಂಸ್ಕೃತಿಯ ಸರ್ವೋಚ್ಚ ಆದರ್ಶರಾಗಿದ್ದಾರೆ. ಅವರು ಬ್ರಾಹ್ಮತೇಜ ಹಾಗೂ ಕ್ಷಾತ್ರತೇಜದ ಪ್ರತಿರೂಪವಾಗಿದ್ದಾರೆ ! ಅಸುರರ ವಿನಾಶ ಹಾಗೂ ಆದರ್ಶ ರಾಷ್ಟ್ರ ನಿರ್ಮಾಣಕ್ಕಾಗಿಯೇ ಅವರ ಅವತಾರವಾಗಿದೆ !
೨೦೧೯ ರ ವರೆಗೆ ಜಗತ್ತಿನ ಬಲಿಷ್ಠ ಆರ್ಥಿಕ ಸ್ಥಿತಿಯ ರಾಷ್ಟ್ರಗಳಲ್ಲಿ ೧೦ ನೇ ಸ್ಥಾನದಲ್ಲಿದ್ದ ಭಾರತ ಈಗ ೩ ನೇ ಸ್ಥಾನದ ಶಕ್ತಿಯಾಗಲು ನೋಡುತ್ತಿದೆ ! ರಾಮಲಲ್ಲಾ ಡೇರೆಯಿಂದ ಹೊರಗೆ ಬಂದ ನಂತರ ಇಷ್ಟು ಬದಲಾವಣೆಯಾಗಲು ಸಾಧ್ಯವಿದ್ದರೆ, ಶ್ರೀರಾಮರು ಅವರ ಭವ್ಯ ಪಾವನ ಮಂದಿರದಲ್ಲಿ ಪ್ರಾಣಪ್ರತಿಷ್ಠೆಯಾಗಿ ಅವರ ತತ್ತ್ವ ಸಂಪೂರ್ಣ ವಿಶ್ವದಾದ್ಯಂತ ಕಾರ್ಯನಿರತವಾಗುವಾಗ ಭಾರತಭೂಮಿ ವಿಶ್ವಗುರು ಆಗಲು ಬಹಳ ಸಮಯ ತಗಲಲಾರದು. ಶ್ರೀರಾಮ ಮಂದಿರದ ನಿರ್ಮಾಣವು ಕೇವಲ ಸ್ಥೂಲದಿಂದ ರಾಜಕೀಯವೆನಿಸಿದರೂ ಅದರ ಸೂಕ್ಷ್ಮ ಆಧ್ಯಾತ್ಮಿಕ ಪರಿಣಾಮವು ದೂರದ ವರೆಗೆ ಹಾಗೂ ಸರ್ವವ್ಯಾಪಿಯಾಗಿದೆ. ೧೦ ವರ್ಷಗಳ ಹಿಂದೆ ಅಪರಾಧವೆಂಬಂತೆ ತೋರುತ್ತಿದ್ದ ‘ಹಿಂದೂ ರಾಷ್ಟ್ರ’ ಈ ಶಬ್ದದ ಜಯಘೋಷ ಈಗ ಆರಂಭವಾಗಿರುವುದು, ಇದು ರಾಮಲಲ್ಲಾನ ಲೀಲೆ ಅಲ್ಲವೇ ? ಅಸಾಧ್ಯವಾದದ್ದು ಸಾಧ್ಯವಾಗುತ್ತಿದೆ, ಹಾಗೆಯೇ ಇಂದು ಸ್ವಲ್ಪಮಟ್ಟಿಗೆ ಕಷ್ಟವೆನಿಸುವ ಹಿಂದೂ ರಾಷ್ಟ್ರ ನಿಜವಾಗಿಯೂ ಸಾಕಾರವಾಗಲಿಕ್ಕಿದೆ ಹಾಗೂ ಇದುವೇ ಶ್ರೀರಾಮ ಮಂದಿರ ನಿರ್ಮಾಣದ ಸೂಕ್ಷ್ಮದ ಕಾರ್ಯವಾಗಿದೆ !
ರಕ್ತರಂಜಿತ ಐತಿಹಾಸಿಕ ಸಂಘರ್ಷದ ಫಲ !
೧೫೨೮ ರಲ್ಲಿ ಬಾಬರನ ಸೇನಾಪತಿ ಮೀರಬಾಕಿಯು ಮಂದಿರವನ್ನು ಕೆಡವಿದಾಗ ಅದನ್ನು ವಶಪಡಿಸಿಕೊಳ್ಳಲು ಇಷ್ಟರ ವರೆಗೆ ಸುಮಾರು ೭೬ ಚಿಕ್ಕ-ದೊಡ್ಡ ಯುದ್ಧಗಳು ನಡೆದವು; ಅನೇಕ ಸಂತ-ಮಹಾತ್ಮರು ಮತ್ತು ಭಕ್ತರು ಪ್ರಾಣಾರ್ಪಣೆ ಮಾಡಿದರು; ಆದರೆ ರಾಮಭಕ್ತ ಹಿಂದೂಗಳ ಯುದ್ಧವನ್ನು ಗೆಲ್ಲುವ ಹುಮ್ಮಸ್ಸು ಸ್ವಲ್ಪವೂ ಕಡಿಮೆಯಾಗಿಲ್ಲ. ಹಿಂದೂಗಳ ಪೀಳಿಗೆಯಿಂದ ಪೀಳಿಗೆಯ ವರೆಗಿನ ಸಂಕಲ್ಪ ಅಜೇಯವಾಗಿ ಉಳಿಯಿತು ! ಈ ಸಂಘರ್ಷಕ್ಕೆ ಹೊಸ ಊರ್ಜೆ ಪ್ರಾಪ್ತಿಯಾಗಿ ೨೩ ಡಿಸೆಂಬರ ೧೯೪೯ ರಂದು ಬಾಬರಿಯ ಕಟ್ಟಡದಲ್ಲಿ ರಾಮಲಲ್ಲಾ ಪ್ರಕಟವಾದರು. ಸ್ವತಂತ್ರ ಹಿಂದೂಸ್ಥಾನದಲ್ಲಿಯೇ ‘ಶ್ರೀರಾಮಜನನದ ಪ್ರಮಾಣವನ್ನು ಕೇಳುವುದು’, ಇದು ಪ್ರತಿಯೊಬ್ಬ ರಾಮಭಕ್ತನ ಹೃದಯದ ಮೇಲಿನ ಆಘಾತವಾಗಿತ್ತು. ೧೯೯೦ ರಲ್ಲಿ ಶ್ರೀರಾಮರಿಗಾಗಿ ಎಲ್ಲ ಜಾತಿ, ಸಂಪ್ರದಾಯ, ಪಂಥ ಎಲ್ಲವನ್ನೂ ಮರೆತು ಲಕ್ಷಗಟ್ಟಲೆ ಕಾರಸೇವಕರು ಸಂಘಟಿತರಾದ ಕಾರಣ ‘ಶ್ರೀರಾಮರು ಹಿಂದೂಗಳನ್ನು ಸಂಘಟಿಸಲು ಸಮರ್ಥರಿದ್ದಾರೆ’, ಎಂಬುದು ಮತ್ತೊಮ್ಮೆ ದೃಢಪಟ್ಟಿತು ! ೧೩೪ ವರ್ಷಗಳಿಂದ ನಡೆಯುತ್ತಿದ್ದ ನ್ಯಾಯಾಂಗ ಹೋರಾಟದ ತೀರ್ಪು ಅತ್ಯಂತ ಗಂಭೀರವಾದ ಸವಾಲುಗಳನ್ನು ಎದುರಿಸಿ ೯ ನವೆಂಬರ ೨೦೧೯ರಲ್ಲಿ ಬಂದು ಹಿಂದೂಗಳ ವಿಜಯವಾಯಿತು ! ಯಾವುದೇ ಒಂದು ಸಮೂಹ ೫೦೦ ವರ್ಷಗಳ ಕಾಲ ಒಂದು ಮಂದಿರಕ್ಕಾಗಿ ಹೋರಾಡುವುದು, ಇದು ವಿಶ್ವದ ಏಕೈಕ ಘಟನೆಯಾಗಿರಬಹುದು.
‘ರಾಮನಾಮ’ ಹಾಗೂ ಅಯೋಧ್ಯೆಯು ಒಂದು ಸಕಾರಾತ್ಮಕ ಊರ್ಜೆ ಮತ್ತು ಚೈತನ್ಯದ ಮೂಲವಾಗಿದೆ, ಸಂಸ್ಕೃತಿಯ ಸ್ವಾಭಿಮಾನವಾಗಿದೆ. ಇತಿಹಾಸದ ಅರಿವಾಗಿದೆ; ಇಷ್ಟು ಮಾತ್ರವಲ್ಲ, ಧರ್ಮಸಂಸ್ಥಾಪನೆಯ ಮಾರ್ಗ ಮತ್ತು ಅದರ ಮೂಲಕ ಮೋಕ್ಷದ ದ್ವಾರವಾಗಿದೆ ! ಹಿಂದೂ ರಾಷ್ಟ್ರ ನಿರ್ಮಾಣದ ಮೂಲಭೂತ ಆಧಾರವಾಗಿರುವ ಮಂದಿರ ನಿರ್ಮಾಣದ ಅಭೂತಪೂರ್ವ ಕ್ಷಣಗಳ ಸಾಕ್ಷಿದಾರರಾಗುವ ಸೌಭಾಗ್ಯ ಈ ಪೀಳಿಗೆಗೆ ಲಭಿಸಿದೆ. ಶ್ರೀರಾಮರ ವ್ಯಷ್ಟಿ ಹಾಗೂ ಸಮಷ್ಟಿ ವ್ಯಕ್ತಿತ್ವದ ಆದರ್ಶವನ್ನು ಆಚರಣೆಯಲ್ಲಿ ತಂದು ಅದಕ್ಕಾಗಿ ಪ್ರಯತ್ನಿಸುವುದೇ ಕಾಲಾನುಸಾರ ನಿಜವಾದ ರಾಮಭಕ್ತಿಯಾಗಿದೆ. ‘ಮನೆಗೆ ನುಗ್ಗಿ ಶತ್ರುವಿಗೆ ಹೊಡೆಯುವುದು’, ಈ ಆದರ್ಶವನ್ನು ಶ್ರೀರಾಮರು ನಮ್ಮ ಮುಂದೆ ಇಟ್ಟಿದ್ದಾರೆ. ಶತ್ರುವನ್ನು ಗುರುತಿಸುವುದು, ಅವನಷ್ಟೇ ಸಮಾನಬಲದ ಸಿದ್ಧತೆ ಮಾಡುವುದು ಹಾಗೂ ಎಲ್ಲಕ್ಕಿಂತ ಮಹತ್ವದ್ದೆಂದರೆ ವಿಜಯಕ್ಕಾಗಿ ಭಕ್ತರಾಗಿ ಉಪಾಸನೆ ಮಾಡುವುದು, ಎಂಬ ಬೋಧನೆಯನ್ನು ರಾಮಚರಿತ್ರೆ ನಮ್ಮ ಮುಂದಿಡುತ್ತದೆ. ಧರ್ಮದ ಅಧಿಷ್ಠಾನವನ್ನಿಟ್ಟು ಶತ್ರುವಿನಲ್ಲಿ ಭಯಹುಟ್ಟಿಸಲು ಮಾಡಿದಂತಹ ಹಿಂದೂ ಸಂಘಟನೆ ಹಾಗೂ ಧರ್ಮಾಚರಣೆಯಿಂದ ವರ್ತಿಸುವ ಪ್ರಜೆಗಳಿಂದಲೇ ಆದರ್ಶ ಹಿಂದೂ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯವಿದೆ. ಮಂದಿರದ ಮಾಧ್ಯಮದಿಂದ ರಾಮತತ್ತ್ವ ಕಾರ್ಯನಿರತವಾಗಿ ಅದಕ್ಕಾಗಿ ಆಧ್ಯಾತ್ಮಿಕ ಪ್ರೇರಣೆ ಸಿಗಲಿಕ್ಕಿದೆ. ಆದ್ದರಿಂದ ಈಗ ರಾಮಭಕ್ತರು ಉಪಾಸನೆಯ ವೇಗವನ್ನು ಹೆಚ್ಚಿಸಿ ರಾಷ್ಟ್ರೋತ್ಥಾನದ ಕಾರ್ಯದಲ್ಲಿ ಸಿಂಹಪಾಲನ್ನು ಪಡೆಯಲು ಸಂಘಟಿತರಾದರೆ ರಾಮರಾಜ್ಯ ಉದಯಿಸಲು ತಡವಾಗದು !