ಚೀನಾ ತನ್ನ ಕ್ಷಿಪಣಿಯಲ್ಲಿ ಮದ್ದು ಗುಂಡಿನ ಬದಲು ನೀರು ತುಂಬಿದೆ !-ಅಮೇರಿಕಾದ ಗುಪ್ತಚರರ ವರದಿ

ಅಮೇರಿಕಾದ ಗುಪ್ತಚರರ ವರದಿಯಲ್ಲಿ ಬಹಿರಂಗ

ಸೈನ್ಯಾಧಿಕಾರಿಯಿಂದ ಭ್ರಷ್ಟಾಚಾರ ನಡೆಸಿರುವ ಆರೋಪ !

ವಾಷಿಂಗ್ಟನ್ (ಅಮೇರಿಕಾ) – ಚೀನಾದ ಕ್ಷಿಪಣಿಯಲ್ಲಿ ಗುಂಡು ಮದ್ದಿನ ಬದಲು ನೀರು ತುಂಬಿದೆ. ಈ ಕ್ಷಿಪಣಿಗಳ ಮುಚ್ಚಳ ಕೂಡ ವ್ಯವಸ್ಥಿತವಾಗಿ ತೆಗೆಯಲು ಆಗದು. ಈ ಕ್ಷಿಪಣೆಗಳ ಉಡಾವಣೆ ಕೂಡ ಸಾಧ್ಯವಿಲ್ಲ. ಕಾರಣ ಆಗಲಿ ನೂರಾರು ಕೊರತೆಗಳು ಕಂಡು ಬಂದಿದೆ ಎಂದು ಅಮೇರಿಕಾದ ಗುಪ್ತಚರರ ವರದಿಯಲ್ಲಿ ಬಹಿರಂಗ ಪಡಿಸಿದೆ. ‘ಬ್ಲೂಮಬರ್ಗ್’ನಿಂದ ಸಂಗ್ರಹಿಸಲಾಗಿರುವ ಮಾಹಿತಿಯ ಪ್ರಕಾರ ಚೀನಾದ ಸೈನ್ಯದಳದಲ್ಲಿನ ಉಪಕರಣಗಳು ಖರೀದಿಯಲ್ಲಿ ಭ್ರಷ್ಟಾಚಾರ ಎಷ್ಟೊಂದು ಹೆಚ್ಚಾಗಿದೆ ಎಂದರೆ ಅದರ ಪರಿಣಾಮ ಶಸ್ತ್ರಾಸ್ತ್ರದ ಗುಣಮಟ್ಟದಲ್ಲಿ ಕೂಡ ಆಗಿದೆ.

ಈ ವರದಿಯಲ್ಲಿ, ೨೦೨೧ ರಲ್ಲಿ ಶಿನಜಿಯಾಂಗ ಮರುಭೂಮಿಯಲ್ಲಿ ನೂರಾರು ಪರಮಾಣು ಕ್ಷಿಪಣಿಗಳು ತಯಾರಿಸಿರುವ ಮಾಹಿತಿ ಬಹಿರಂಗವಾಗಿತ್ತು. ಚೀನಾ ಇದರ ಉಪಯೋಗ ನೆರೆಯ ದೇಶಗಳಿಗೆ ಹೆದರಿಸಲು ಮಾಡುವುದಾಗಿತ್ತು. ನಂತರ ೨೦೨೨ ಮತ್ತು ೨೦೨೩ ರಲ್ಲಿ ಚೀನಾದ ನೆರೆಯ ತೈವಾನಿಗೆ ತೊಂದರೆ ನೀಡಿತು ಮತ್ತು ಅದರ ಕಡೆಗೆ ಕ್ಷಿಪಣಿಗಳನ್ನು ಬಿಟ್ಟಿತು.

ಚೀನಾದ ಸೈನ್ಯದಳದಲ್ಲಿನ ಭ್ರಷ್ಟಾಚಾರದಿಂದ ಕೆಲವು ತಿಂಗಳ ಹಿಂದೆ ರಕ್ಷಣಾ ಸಚಿವ ಲಿ ಶಾಂಗಫು ಇವರನ್ನು ಸ್ಥಾನದಿಂದ ಇಳಿಸಲಾಗಿತ್ತು. ಇದಲ್ಲದೆ ಇತ್ತೀಚಿಗೆ ಶಿ ಜಿನಪಿಂಗ ಇವರು ಚೀನಾ ಸೈನ್ಯದಳದಲ್ಲಿನ ೯ ಹಿರಿಯ ಅಧಿಕಾರಿಗಳನ್ನು ಕೂಡ ಹೊರದುಡಿತ್ತು.

(ಸೌಜನ್ಯ: Kanal13)

ಸಂಪಾದಕರ ನಿಲುವು

* ಚೀನಾ ತನ್ನನ್ನು ಎಷ್ಟೇ ಆಧುನಿಕ ಎಂದು ಹೇಳಿದರೂ, ಅದರ ಉತ್ಪಾದನೆಗಳು ಎಷ್ಟು ಕೀಳಮಟ್ಟದ್ದಿರುತ್ತದೆ, ಇದು ಪದೇ ಪದೇ ಜಗತ್ತಿನ ಎದುರು ಬರುತ್ತಿದೆ !