ವಾಷಿಂಗ್ಟನ್ – ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಮಾಡುವ ದೇಶದ ಪಟ್ಟಿ ಅಮೆರಿಕದಿಂದ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಅಮೆರಿಕಾವು ಪಾಕಿಸ್ತಾನ ಮತ್ತು ಚೀನಾದ ಸಮಾವೇಶ ಮಾಡಿದೆ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಇದನ್ನು ವಿರೋಧಿಸುತ್ತಾ, ‘ಅಮೇರಿಕಾದ ಈ ವರದಿ ಏಕ ಪಕ್ಷಿಯವಾಗಿ ಇದೇ ಮತ್ತು ಭೇದ ಭಾವ ಮಾಡುತ್ತಿದೆ, ಎಂದು ಹೇಳಿದೆ. ಈ ಪಟ್ಟಿಯಲ್ಲಿ ಮ್ಯಾನ್ಮಾರ್, ರಷ್ಯಾ, ಇರಾನ್, ಉತ್ತರ ಕೋರಿಯಾ ಮತ್ತು ಸೌದಿ ಅರೇಬಿಯಾ ಸಹಿತ ಅನೇಕ ದೇಶಗಳ ಹೆಸರು ಇರುವುದಾಗಿ ಅಮೆರಿಕಾದ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕನ್ ಇವರು ಪ್ರಸಿದ್ಧಿ ಪತ್ರದಲ್ಲಿ ಹೇಳಿದ್ದಾರೆ. ಈ ದೇಶಗಳ ‘ವಿಶೇಷ ಆತಂಕ’ ಇರುವ ದೇಶದ ಪಟ್ಟಿಯಲ್ಲಿ ಸಮಾವೇಶಗೊಳಿಸಲಾಗಿದೆ. ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಯಗೆ ಸಂಬಂಧಿತ ಗಂಭೀರ ಪ್ರಕರಣಗಳು ಇಲ್ಲಿ ನೋಂದಾಯಿಸಲಾಗಿದೆ. ಪಾಕಿಸ್ತಾನದಲ್ಲಿ ಧರ್ಮನಿಂದನೆ ಕಾನೂನು ಅಸ್ತಿತ್ವದಲ್ಲಿ ಇದೆ. ಅದನ್ನು ದೊಡ್ಡ ಪ್ರಮಾಣದಲ್ಲಿ ದುರುಪಯೋಗ ಮಾಡಲಾಗುತ್ತಿದೆ. ಅದರ ಬಗ್ಗೆ ವಿಚಾರಣೆ ನಡೆಸದಿದ್ದರೆ ಪಾಕಿಸ್ತಾನದ ಬಗ್ಗೆ ಅಂತರಾಷ್ಟ್ರೀಯ ಸ್ತರದಲ್ಲಿ ಟಿಕೆ ಟಿಪ್ಪಣಿ ಆಗುತ್ತಿವೆ. ಈ ಕಾನೂನಿನ ದುರುಪಯೋಗ ಪಡಿಸಿಕೊಂಡು ಇಲ್ಲಿಯ ಕಟ್ಟರವಾದಿಗಳು ಹಿಂದೂ, ಸಿಖ್, ಕ್ರೈಸ್ತ, ಜೈನ, ಬೌದ್ಧ ಮತ್ತು ಅಹಮದಿಯಾ ಮುಸಲ್ಮಾನ ಈ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿ ಮಾಡುತ್ತಾರೆ.
ಪಾಕಿಸ್ತಾನ, ”ಧಾರ್ಮಿಕ ಸ್ವಾತಂತ್ರ್ಯ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಸಂರಕ್ಷಣೆ ಮಾಡುವುದಕ್ಕಾಗಿ ನಾವು ಅನೇಕ ಪ್ರಯತ್ನಗಳು ಮಾಡುತ್ತಿದ್ದೇವೆ. (ಈ ಹಾಸ್ಯಸ್ಪದ ದಾವೆಯ ಮೇಲೆ ಯಾರು ವಿಶ್ವಾಸ ಇಡುವರು ? – ಸಂಪಾದಕರು) ನಮಗೆ, ಧಾರ್ಮಿಕ ಅಸಹಿಷ್ಣುತೆ ಮತ್ತು ಇಸ್ಲಾಂದ ಕುರಿತು ತಿರಸ್ಕಾರ ಇದನ್ನು ಎದುರಿಸುವುದು ಪರಸ್ಪರ ಹೊಂದಾಣಿಕೆ ಮತ್ತು ಗೌರವದ ಆಧಾರದಲ್ಲಿ ಮಾಡಬಹುದು ಎಂಬುದು ನಮಗೆ ವಿಶ್ವಾಸ ಇದೆ, ಈ ಅಂಶಗಳ ಕುರಿತು ಪಾಕಿಸ್ತಾನವು ಅಮೆರಿಕಾದ ಜೊತೆಗೆ ದ್ವಿಪಕ್ಷಯ ಚರ್ಚೆ ಕೂಡ ನಡೆಸಿದೆ.
(ಸೌಜನ್ಯ: India Today)
ಸಂಪಾದಕರ ನಿಲುವು* ಪಾಕಿಸ್ತಾನದಲ್ಲಿನ ಹಿಂದೂಗಳ ದುಸ್ಥಿತಿ ಎಲ್ಲರಿಗೂ ತಿಳಿದ ವಿಚಾರ. ಆದ್ದರಿಂದ ಅಮೆರಿಕ ಇಂತಹ ವರದಿ ಸಲ್ಲಿಸಿ ಮೌನವಾಗಿ ಕುಳಿತುಕೊಳ್ಳುವುದು ಅಥವಾ ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧ ತಾಕಿತ್ತು ಮಾಡುವುದೇ ? ಇದನ್ನು ಕಾದು ನೋಡಬೇಕು ! |