ಹೂಸ್ಟನ್ (ಅಮೇರಿಕಾ) – ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಭಗವಾನ್ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಸಮಾರಂಭಕ್ಕೆ ರಾಮನಗರಿ ಸಜ್ಜುಗೊಂಡಿದೆ. ಶ್ರೀರಾಮನ ಪ್ರಾಣಪ್ರತಿಷ್ಠಾಪನೆಯ ಸಮಾರಂಭಕ್ಕೆ ದೇಶವಷ್ಟೇ ಅಲ್ಲ ವಿಶ್ವದೆಲ್ಲೆಡೆ ಸಂಭ್ರಮ ನರ್ಮಾಣವಾಗಿದೆ. ಜನವರಿ 7 ರಂದು ಹೂಸ್ಟನ್(ಅಮೇರಿಕಾ)ನಲ್ಲಿ ಹಿಂದೂ ಅಮೇರಿಕನ್ ಸಮುದಾಯದ ಸದಸ್ಯರು ‘ಜೈ ಶ್ರೀ ರಾಮ್’ ಎಂದು ಘೋಷಣೆಯೊಂದಿಗೆ ವಾಹನ ಫೇರಿ ನಡೆಸಿದರು. ಈ ಮೆರವಣಿಗೆಯು ಮಾರ್ಗಮಧ್ಯೆ 11 ದೇವಾಲಯಗಳಿಗೆ ಭೇಟಿ ನೀಡುತ್ತಾ ಮುಂದೆ ಸಾಗಿತು. ಶ್ರೀರಾಮ ಮಂದಿರದ ಛಾಯಾಚಿತ್ರದೊಂದಿಗೆ ಭಾರತದ ಧ್ವಜ ಮತ್ತು ಅಮೆರಿಕಾದ ಧ್ವಜವನ್ನು ಹಿಡಿದು ಮೆರವಣಿಗೆಯಲ್ಲಿ 500 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಈ ವಾಹನ ಫೇರಿಯಲ್ಲಿ 216 ನಾಲ್ಕು ಚಕ್ರದ ವಾಹನಗಳಿದ್ದವು. ಹೂಸ್ಟನ್‌ನ ಸಮಾಜ ಸೇವಕಿ ಜುಗಲ್ ಮಲಾನಿ ಅವರು ಧ್ವಜ ತೋರಿಸಿದ ಬಳಿಕ ಶ್ರೀ ಮೀನಾಕ್ಷಿ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆಯು ರಿಚ್‌ಮಂಡ್‌ನಲ್ಲಿರುವ ಶ್ರೀ ಶಾರದಾಂಬಾ ದೇವಸ್ಥಾನದಲ್ಲಿ ಮುಕ್ತಾಯಗೊಂಡಿತು.
ಸುಮಾರು 2 ಸಾವಿರದ 500 ಭಕ್ತರು ಭಜನೆಗಳೊಂದಿಗೆ ವಿವಿಧ ದೇವಾಲಯಗಳಿಗೆ ವಾಹನ ಮೆರವಣಿಗೆಯನ್ನು ಸ್ವಾಗತಿಸಿದರು. ದೇವಾಲಯದಲ್ಲಿ ನೆರೆದಿದ್ದ ಪ್ರತಿಯೊಬ್ಬ ವ್ಯಕ್ತಿಯೂ ‘ಜೈ ಶ್ರೀ ರಾಮ್’ ಘೋಷಣೆ ಮತ್ತು ಶಂಖಗಳ ನಾದದಿಂದ ಮಂತ್ರಮುಗ್ಧರಾದಂತಿತ್ತು. ಎಲ್ಲೆಲ್ಲೂ ಭಕ್ತಿಮಯ ವಾತಾವರಣವಿತ್ತು. ‘ಶ್ರೀರಾಮನೇ ಹ್ಯೂಸ್ಟನ್‌ಗೆ ಬಂದಿದ್ದಾನೆ’ ಎಂದು ಹಲವರಿಗೆ ಅನುಭೂತಿ ಬಂತು. ಶ್ರೀ. ಉಮಂಗ್ ಮೆಹ್ತಾ ಹೇಳಿದರು.