ಬಿಲ್ಕಿಸ್ ಬಾನೋ ಬಲಾತ್ಕಾರ ಪ್ರಕರಣದಲ್ಲಿ ಅಪರಾಧಿಗಳ ಶಿಕ್ಷೆಯನ್ನು ಮನ್ನಾ ಮಾಡಿದ ಕುರಿತು ಸರ್ವೋಚ್ಚ ನ್ಯಾಯಾಲಯದ ತೀರ್ಪು !

ಮಹಾರಾಷ್ಟ್ರದ ನ್ಯಾಯಾಲಯವು ತೀರ್ಪು ನೀಡಿದ್ದರಿಂದ ಗುಜರಾತ ಸರಕಾರಕ್ಕೆ ಶಿಕ್ಷೆಯನ್ನು ಮನ್ನಾ ಮಾಡುವ ಅಧಿಕಾರವಿಲ್ಲ !

ನವ ದೆಹಲಿ – ಗುಜರಾತ ಸರಕಾರ ಆಗಸ್ಟ್ 15, 2023 ರಂದು ಬಿಲ್ಕಿಸ ಬಾನೋ ಸಾಮೂಹಿಕ ಬಲಾತ್ಕಾರ ಪ್ರಕರಣದ 11 ಅಪರಾಧಿಗಳ ಶಿಕ್ಷೆಯನ್ನು ಮನ್ನಾ ಮಾಡುವ ನಿರ್ಣಯವನ್ನು ತೆಗೆದುಕೊಂಡಿತ್ತು. ಈ ನಿರ್ಣಯವನ್ನು ಪ್ರಶ್ನಿಸಿ ಬಿಲ್ಕಿಸ್ ಬಾನೋ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಾಲಯವು ಗುಜರಾತ ಸರಕಾರದ ನಿರ್ಣಯವನ್ನು ಅನರ್ಹವೆಂದು ಘೋಷಿಸಿದೆ. ಈ ಪ್ರಕರಣದ ತೀರ್ಪನ್ನು ಮಹಾರಾಷ್ಟ್ರದ ನ್ಯಾಯಾಲಯವು ನೀಡಿರುವುದರಿಂದ ದೋಷಿಗಳ ಶಿಕ್ಷೆಯನ್ನು ಮನ್ನಾ ಮಾಡುವ ಹಕ್ಕು ಗುಜರಾತ ಸರಕಾರಕ್ಕೆ ಇಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.

2002 ರಲ್ಲಿ ಧರ್ಮಾಂಧ ಮುಸಲ್ಮಾನರು ಮಾಡಿದ್ದ ಗೋಧ್ರಾ ಹತ್ಯಾಕಾಂಡದ ನಂತರ ಭುಗಿಲೆದ್ದ ಗಲಭೆಯಲ್ಲಿ 11 ಜನರ ಮೇಲೆ ಬಿಲ್ಕಿಸ್ ಬಾನೋ ಇವರ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿರುವ ಆರೋಪವಿತ್ತು. ತದನಂತರ ಅವರ ಕುಟುಂಬದ 7 ಜನರ ಹತ್ಯೆಯಾಗಿತ್ತು. ಈ ಪ್ರಕರಣದಲ್ಲಿ ಈ 11 ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗಿತ್ತು. ದೂರು ಗುಜರಾತಿನಲ್ಲಿ ದಾಖಲಾಗಿದ್ದರೂ, ಮಹಾರಾಷ್ಟ್ರದಲ್ಲಿ ಈ ಪ್ರಕರಣದಲ್ಲಿ ಆರೋಪಿಗಳ ಮೇಲೆ ಆಲಿಕೆ ನಡೆದು ಅವರಿಗೆ ಶಿಕ್ಷೆಯನ್ನು ವಿಧಿಸಲಾಗಿತ್ತು. ಆದ್ದರಿಂದ ಗುಜರಾತ ಸರಕಾರಕ್ಕೆ ಆರೋಪಿಗಳ ಶಿಕ್ಷೆಯನ್ನು ಮನ್ನಾ ಮಾಡುವ ನಿರ್ಣಯವನ್ನು ತೆಗೆದುಕೊಳ್ಳುವ ಅಧಿಕಾರವಿಲ್ಲ. ಈ ಪ್ರಕರಣದಲ್ಲಿ ನಿರ್ಣಯವನ್ನು ತೆಗೆದುಕೊಳ್ಳುವ ಅಧಿಕಾರ ಮಹಾರಾಷ್ಟ್ರ ಸರಕಾರ ವ್ಯಾಪ್ತಿಗೆ ಬರುತ್ತದೆಯೆಂದು ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ನಮೂದಿಸಿದೆ.