ಬಾಗೇಶ್ವರ ಧಾಮ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರ ಹೇಳಿಕೆ
ನವದೆಹಲಿ – ಶ್ರೀರಾಮನ ಹೆಸರಿನಲ್ಲಿ ರಾಜಕಾರಣ ಮಾಡುವುದು ಸೂಕ್ತವಲ್ಲ. ರಾಜಕಾರಣವನ್ನು ಧರ್ಮದಿಂದ ಮಾಡಬೇಕು. ಧರ್ಮದ ರಾಜಕಾರಣವನ್ನು ಮಾಡುವುದು ಬೇಡ ಎಂದು ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರು ಹೇಳಿದ್ದಾರೆ. ಅವರು ಒಂದು ರಾಷ್ಟ್ರೀಯ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡುತ್ತಿದ್ದರು. ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಶರದ ಪವಾರ ಗುಂಪಿನ ಮುಖಂಡ ಜಿತೇಂದ್ರ ಆವ್ಹಾಡರು ` ಶ್ರೀರಾಮ ಮಾಂಸಾಹಾರಿಯಾಗಿದ್ದನು’, ಎಂಬ ಹೀನಾಯ(?) ಹೇಳಿಕೆಯನ್ನು ನೀಡಿದ್ದರು. ಇದಕ್ಕೆ ಸಂಪೂರ್ಣ ಮಹಾರಾಷ್ಟ್ರದಲ್ಲಿ (?) ಪ್ರತಿಭಟನೆ ವ್ಯಕ್ತವಾಗುತ್ತಿದೆ. ಈ ದೃಷ್ಟಿಕೋನದಿಂದ ಪಂಡಿತ ಶಾಸ್ತ್ರಿಯವರು ನೀಡಿರುವ ಹೇಳಿಕೆ ಮಹತ್ವದ್ದೆಂದು ತಿಳಿಯಲಾಗುತ್ತಿದೆ.
ಶಾಸ್ತ್ರಿಯವರು ಮಾತು ಮುಂದುವರಿಸುತ್ತಾ, ಭಾರತದಲ್ಲಿರುವ ನಾಗರಿಕರಲ್ಲಿ ಜಾಗೃತಿ ಮೂಡಿದೆ. ಈಗ ಅವರು ತಮ್ಮ ಮತವನ್ನು ಅವರ ಬುದ್ಧಿಗೆ ತಿಳಿದಂತೆ ವಿಚಾರ ಮಾಡಿ ನೀಡಬೇಕು. ‘ಭಾರತ ವಿಶ್ವಗುರು ಆಗಬೇಕು’, ಈ ದೂರದೃಷ್ಟಿ ಹೊಂದಿರುವ ಸರಕಾರವನ್ನು ಆಯ್ಕೆ ಮಾಡಬೇಕು. ಶ್ರೀರಾಮ ಎಂದರೆ ಮರ್ಯಾದಾ ಪುರುಷೋತ್ತಮ. ಶ್ರೀರಾಮ ಎಂದರೆ ಸಮೃದ್ಧಿ, ಸಮಗ್ರತೆ ಮತ್ತು ಏಕತೆ. ಶ್ರೀ ರಾಮನ ಹೆಸರಿನಲ್ಲಿ ರಾಜಕಾರಣವನ್ನು ಮಾಡುವುದು ಮೂರ್ಖತನ.
ಸದ್ಯದ ಸಮಯ ಹಿಂದೂ ಧರ್ಮಕ್ಕೆ ಸುವರ್ಣ ಕಾಲ!
ಆ ಸಮಯದಲ್ಲಿ ಧೀರೇಂದ್ರಕೃಷ್ಣ ಶಾಸ್ತ್ರಿ ಅವರು ಜ್ಞಾನವಾಪಿಯಲ್ಲಿ ಶಂಕರನಿದ್ದಾನೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಮಥುರಾ ಶ್ರೀ ಕೃಷ್ಣನದ್ದಾಗಿದೆ. ದೇಶದಲ್ಲಿ ನ್ಯಾಯಾಲಯಗಳಿವೆ. ಭಾರತೀಯ ಪುರಾತತ್ವ ಇಲಾಖೆಗೆ ದೊರಕಿರುವ ದಾಖಲೆಗಳಿಂದ ಸನಾತನ ಧರ್ಮವೇ ಅಲ್ಲಿ ಅಸ್ತಿತ್ವದಲ್ಲಿದೆ ಎಂದು ಸಾಬೀತಾಗುತ್ತದೆ. ಮಹಮ್ಮದ್ ಘೋರಿ, ಅಕಬರ, ಬಾಬರ ಮುಂತಾದವರು ದೇವಸ್ಥಾನಗಳ ಮೇಲೆ ದಾಳಿ ಮಾಡಿದರು. ಅವರು ಮಾಡಿರುವ ಗಾಯಗಳು ಈಗ ವಾಸಿಯಾಗುತ್ತಿದೆ. ಸದ್ಯದ ಕಾಲ ಹಿಂದೂ ಧರ್ಮಕ್ಕಾಗಿ ಮತ್ತು ಹಿಂದೂಗಳಿಗೆ ಸುವರ್ಣ ಸಮಯವಾಗಿದೆ.
‘Politicizing Shri Ram for political gains is idiocy’, asserted @bageshwardham‘s Dhirendra Krishna Shastri.
👉 Politicians who manipulate national politics in the name of Shri Ram are, in fact, revealing their own animosity towards Hindus.
Hindus possess the democratic… pic.twitter.com/DNVolP2MzM
— Sanatan Prabhat (@SanatanPrabhat) January 5, 2024
ಸಂಪಾದಕೀಯ ನಿಲುವುಪ್ರಭು ಶ್ರೀ ರಾಮನ ಹೆಸರಿನಲ್ಲಿ ರಾಜಕಾರಣವನ್ನು ಮಾಡುತ್ತಿರುವ ರಾಜಕಾರಣಿಯ ನರನರಗಳಲ್ಲಿಯೂ ಹಾಸುಹೊಕ್ಕಾಗಿರುವ ಹಿಂದೂದ್ವೇಷವನ್ನು ಬಹಿರಂಗಗೊಳಿಸುತ್ತಿದ್ದಾರೆ. ಹಿಂದೂಗಳು ಇಂತಹವರ ರಾಜಕಾರಣವನ್ನು ಪ್ರಜಾಪ್ರಭುತ್ವ ನೀಡಿರುವ ಶಕ್ತಿಯಿಂದ ಅಂತ್ಯಗೊಳಿಸುತ್ತಾರೆ ಎನ್ನುವುದನ್ನು ಅವರೀಗ ನೆನಪಿನಲ್ಲಿಟ್ಟುಕೊಳ್ಳಬೇಕು! |