೨೫/೧೬ ನೇ ಸಂಚಿಕೆಯಲ್ಲಿ ಮುದ್ರಿಸಲಾದ ಲೇಖನದಲ್ಲಿ ಸದ್ಗುರು ರಾಜೇಂದ್ರ ಶಿಂದೆಯವರು ಸಾಧನೆಯನ್ನು ಪ್ರಾರಂಭಿಸಿದನಂತರ ಅವರಿಗೆ ‘ಯೋಗಃ ಕರ್ಮಸು ಕೌಶಲಮ್ |’, ಇದರಂತೆ ಪ್ರತಿಯೊಂದು ಕೃತಿಯನ್ನು ಮಾಡಬೇಕು’, ಇದು ಹೇಗೆ ಕಲಿಯಲು ಸಿಕ್ಕಿತು’, ಎಂಬುದನ್ನು ನೋಡಿದೆವು. ಇಂದಿನ ಭಾಗದಲ್ಲಿ ‘ಸತ್ಸಂಗದಲ್ಲಿ ಜಿಜ್ಞಾಸುಗಳ ಸಂದೇಹ ನಿವಾರಣೆ ಮಾಡಿ ಅವರಿಗೆ ಪ್ರತ್ಯಕ್ಷ ಸಾಧನೆಯಲ್ಲಿನ ಕೃತಿಗಳನ್ನು ಮಾಡಲು ಹೇಗೆ ಪ್ರೋತ್ಸಾಹಿಸಿದರು ?’ ಮತ್ತು ಸಾಧನೆಯಲ್ಲಿ ಪ್ರಗತಿಯನ್ನು ಮಾಡಿಕೊಳ್ಳಲು ಅದರ ಲಾಭ ಹೇಗೆ ಆಯಿತು ?’, ಎಂಬುದನ್ನು ಕೊಡಲಾಗಿದೆ.
೪. ‘ಸತ್ಸಂಗದಲ್ಲಿ ಸಾಧನೆಯಲ್ಲಿ ಬರುವ ಅಡಚಣೆ ಮತ್ತು ಸಂದೇಹಗಳನ್ನು ಉತ್ತಮ ರೀತಿಯಲ್ಲಿ ನಿವಾರಿಸಿದಾಗ ಸಾಧನೆಗೆ ಪ್ರೇರಣೆ ಸಿಗುವುದು
೪ ಅ. ಸತ್ಸಂಗದಲ್ಲಿ ಸಾಧನೆಯನ್ನು ಮಾಡಲು ಹೇಳಿದ ನಂತರ ಸಾಧನೆಯಲ್ಲಿ ಬರುವ ಅಡಚಣೆಗಳನ್ನು ಕೇಳಿ ಅವುಗಳ ನಿವಾರಣೆ ಮಾಡುವುದು : ‘ಸತ್ಸಂಗದಲ್ಲಿ ತಾತ್ತ್ವಿಕ ವಿಷಯ ಗಳನ್ನು ಹೇಳುವುದರೊಂದಿಗೆ ಪ್ರತ್ಯಕ್ಷ ಕೃತಿ ಮಾಡಲು ಹೆಚ್ಚು ಮಹತ್ವವನ್ನು ಕೊಡಲಾಗುತ್ತಿತ್ತು, ಉದಾ. ಕುಲದೇವತೆ ಮತ್ತು ದತ್ತ ಈ ನಾಮಜಪಗಳನ್ನು ಮಾಡಲು ಹೇಳಿದನಂತರ ನಾಮಜಪವನ್ನು ಮಾಡುವಾಗ ಬರುವ ಅಡಚಣೆಗಳನ್ನು ಕೇಳಿ, ಅವುಗಳ ಬಗ್ಗೆ ಸಂದೇಹ ನಿವಾರಣೆ ಮಾಡಲಾಗುತ್ತಿತ್ತು. ಸತ್ಸಂಗಸೇವಕರಿಗೆ ಜಿಜ್ಞಾಸುಗಳ ಯಾವುದಾದರೊಂದು ಪ್ರಶ್ನೆಗೆ ಉತ್ತರವನ್ನು ಕೊಡಲು ಸಾಧ್ಯವಾಗದಿದ್ದಲ್ಲಿ ಅವರು ಜವಾಬ್ದಾರ ಸಾಧಕರನ್ನು ಕೇಳಿ ಮುಂದಿನ ಸತ್ಸಂಗದಲ್ಲಿ ಉತ್ತರವನ್ನು ಹೇಳುತ್ತಿದ್ದರು.
೪ ಆ. ಸಂದೇಹಗಳ ಬಗ್ಗೆ ಶಾಸ್ತ್ರಶುದ್ಧ(ವೈಜ್ಞಾನಿಕ) ಉತ್ತರಗಳು ದೊರಕುವುದರಿಂದ ಮುಂದಿನ ಹಂತದ ಸಾಧನೆಯನ್ನು ಮಾಡಲು ಪ್ರೇರಣೆ ಸಿಗುವುದು : ನಾನು ಸಂಕಷ್ಟಿ ಚತುರ್ಥಿ ಮತ್ತು ಇತರ ಪ್ರಾಸಂಗಿಕ ಉಪವಾಸಗಳನ್ನು ಮಾಡುತ್ತಿದ್ದೆನು. ನಾನು ಸತ್ಸಂಗದಲ್ಲಿ, ‘ಇದನ್ನು ಮುಂದುವರೆಸಬಹುದೇ ?’, ಎಂದು ಕೇಳಿದೆನು. ಆಗ ಸತ್ಸಂಗಸೇವಕರು ನನಗೆ, ‘ಉಪವಾಸ ಮಾಡುವುದು’, ಇದು ಕರ್ಮಕಾಂಡದ ಸಾಧನೆಯಾಗಿದ್ದು ‘ನಾಮಜಪ ಮಾಡುವುದು’, ಉಪಾಸನಾಕಾಂಡದ, ಅಂದರೆ ಮುಂದಿನ ಹಂತದ ಸಾಧನೆಯಾಗಿದೆ. ‘ನಾಮಜಪ ಮಾಡುವುದು’, ಇದು ಹೆಚ್ಚು ಸೂಕ್ಷ್ಮ ಸ್ತರದ್ದಾಗಿದೆ. ಉಪವಾಸಕ್ಕಿಂತ ನಾಮಜಪದಿಂದ ಹೆಚ್ಚು ಸಮಯ ಭಗವಂತನ ಅನುಸಂಧಾನದಲ್ಲಿರುತ್ತೇವೆ. ‘ಮನುಷ್ಯನು ಮುಂದಿನ ತರಗತಿಗೆ ಹೋದ ನಂತರ ಹಿಂದಿನ ತರಗತಿಯ ಅಧ್ಯಯನ ಮಾಡುತ್ತಾನೆಯೇ ?’’ ಎಂದು ಅದರ ಹಿಂದಿನ ಶಾಸ್ತ್ರವನ್ನು ಹೇಳಿದರು. ಈ ರೀತಿ ಸತ್ಸಂಗದಲ್ಲಿ ಶಾಸ್ತ್ರಬದ್ಧ ಉತ್ತರಗಳು ದೊರಕುವುದರಿಂದ ತನ್ನಿಂದ ತಾನೇ ಸಾಧನೆ ಮಾಡಬೇಕೆಂದು ನನ್ನ ಮನಸ್ಸಿನ ನಿರ್ಧಾರವಾಗಿ ಮುಂದಿನ ಹಂತದ ಸಾಧನೆ ಮಾಡಲು ನನಗೆ ಸ್ಫೂರ್ತಿ ಸಿಕ್ಕಿತು.
೪ ಇ. ಪ್ರತಿ ೨-೩ ತಿಂಗಳಿಗೊಮ್ಮೆ ಸನಾತನ ಸಂಸ್ಥೆಯ ಪ್ರಚಾರಸೇವಕರು ಅಥವಾ ಜವಾಬ್ದಾರ ಸಾಧಕರು ಎಲ್ಲ ಸಾಧಕರಿಗೆ ಮಾರ್ಗದರ್ಶನ ಮಾಡುವುದು : ಇದಲ್ಲದೇ ಪ್ರತಿ ೨-೩ ತಿಂಗಳಿಗೊಮ್ಮೆ ಸನಾತನ ಸಂಸ್ಥೆಯ ಪ್ರಚಾರ ಸೇವಕರು ಅಥವಾ ಜವಾಬ್ದಾರ ಸಾಧಕರು ಸುತ್ತಮುತ್ತಲಿನ ಊರುಗಳ ಎಲ್ಲ ಸಾಧಕರನ್ನು ಒಟ್ಟುಗೂಡಿಸಿ ಮಾರ್ಗದರ್ಶನವನ್ನು ಮಾಡು ತ್ತಿದ್ದರು. ಇದರಿಂದ ಸಾಧಕರ ಮನಸ್ಸಿನಲ್ಲಿನ ಉತ್ತರ ಸಿಗದಿರುವ ಪ್ರಶ್ನೆಗಳಿಗೆ ಉತ್ತರಗಳು ಸಿಗುತ್ತಿದ್ದವು ಮತ್ತು ಇತರ ಸಾಧಕರ ಪ್ರಶ್ನೆಗಳಿಗೆ ನೀಡಿದ ಉತ್ತರಗಳಿಂದ ಕಲಿಯಲು ಸಿಗುತ್ತಿತ್ತು.
೪ ಈ. ಸಾಧಕರ ಅನುಭೂತಿಗಳ ವಿಶ್ಲೇಷಣೆ ಮಾಡುವುದು : ಸತ್ಸಂಗದಲ್ಲಿ ಸಾಧಕರು ತಮ್ಮ ಅನುಭೂತಿಗಳನ್ನು ಹೇಳುತ್ತಿದ್ದರು. ಅವುಗಳ ವಿಶ್ಲೇಷಣೆಯನ್ನೂ ಮಾಡಲಾಗುತ್ತಿತ್ತು. ಸಾಧಕರ ಸಂದೇಹಗಳ ನಿವಾರಣೆ ಮಾಡಿ ಸಾಧನೆಗಾಗಿ ಅವರ ಬುದ್ಧಿಯ ನಿರ್ಧಾರವನ್ನು ಮಾಡಿಸಿಕೊಂಡು ಅವರನ್ನು ಸಾಧನೆಯಲ್ಲಿ ಮುಂದೆ ಮುಂದೆ ಒಯ್ಯುವ ಈ ಪದ್ಧತಿಯು ನನಗೆ ತುಂಬಾ ಇಷ್ಟವಾಯಿತು. ನನಗೆ ಸಾಧನೆ ಅಥವಾ ಅಧ್ಯಾತ್ಮದ ಬಗ್ಗೆ ಏನೂ ಗೊತ್ತಿರಲಿಲ್ಲ. ನನ್ನ ಮನಸ್ಸಿನಲ್ಲಿ ಬರುವ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರಗಳು ಸಿಗುವುದರಿಂದ ನನ್ನ ಸಾಧನೆಯ ಸ್ಫೂರ್ತಿಯು ಜಾಗೃತವಾಗಿದ್ದು ತಳಮಳ ಹೆಚ್ಚುತ್ತ ಹೋಯಿತು ಮತ್ತು ನನ್ನ ಸಾಧನೆಯು ಯಾವುದೇ ವಿಕಲ್ಪಗಳು ಬರದೇ ಮುಂದುವರಿಯಿತು.
೫. ಸತ್ಸಂಗದಲ್ಲಿ ಸೇವೆಯನ್ನು ಮಾಡುವ ಸಾಧಕರು ‘ಸೇವೆಯನ್ನು ಮಾಡುವಾಗ ಅವರಲ್ಲಿ ಹೇಗೆ ಬದಲಾವಣೆಗಳಾಗುತ್ತಿವೆ ?’, ಎಂಬುದನ್ನು ಹೇಳಿದಾಗ ನನಗೆ ಸೇವೆ ಮಾಡುವ ಪ್ರೇರಣೆ ಸಿಗುವುದು
ಸೇವೆಯನ್ನು ಮಾಡುವ ಸಾಧಕರು ಸತ್ಸಂಗದಲ್ಲಿ ‘ಸೇವೆ ಹೇಗೆ ಆಯಿತು ? ಮತ್ತು ಸೇವೆಯನ್ನು ಮಾಡುವಾಗ ಅವರಲ್ಲಿ ಹೇಗೆ ಬದಲಾವಣೆಗಳಾಗುತ್ತಿವೆ ?’, ಎಂಬುದನ್ನು ಸತತವಾಗಿ ಹೇಳುತ್ತಿದ್ದರು. ಇದರಿಂದ ‘ನನ್ನಲ್ಲಿಯೂ ಸೇವೆ ಯನ್ನು ಮಾಡಬೇಕು’, ಎಂಬ ಉತ್ಸಾಹ ಉಂಟಾಯಿತು. ‘ಕೇವಲ ಕೇಳುವುದಕ್ಕಿಂತ ಅದರಂತೆ ಕೃತಿ ಮಾಡುವುದು ಮಹತ್ವದ್ದಾಗಿದೆ’, ಎಂಬುದನ್ನೂ ಸಾಧಕರ ಮನಸ್ಸಿನ ಮೇಲೆ ಬಿಂಬಿಸಲಾಗುತ್ತಿತ್ತು. ಸತ್ಸಂಗದಲ್ಲಿ ಶ್ರವಣಭಕ್ತಿಗಿಂತ (ಕೇಳುವುದಕ್ಕಿಂತ) ಪ್ರತ್ಯಕ್ಷ ಕೃತಿಗಳನ್ನು ಮಾಡಲು ಮಹತ್ವ ವನ್ನು ನೀಡಲಾಗುತ್ತಿತ್ತು ಮತ್ತು ಆ ವಿಷಯವನ್ನು ಒಳ್ಳೆಯ ರೀತಿಯಲ್ಲಿ ಹೇಳಲಾಗುತ್ತಿತ್ತು. ಆದ್ದರಿಂದ ಸತ್ಸಂಗದಲ್ಲಿ ಬರತೊಡಗಿದ ನಂತರ ಒಂದು ತಿಂಗಳಲ್ಲಿಯೇ ನಾನು ಪ್ರತ್ಯಕ್ಷ ಸೇವೆಯನ್ನು ಮಾಡಲು ಪ್ರಾರಂಭಿಸಿದೆ. ಮೊದಲಿಗೆ ನಾನು ಸಾಪ್ತಾಹಿಕ ‘ಸನಾತನ ಪ್ರಭಾತ’ದ ಸಂಚಿಕೆಗಳನ್ನು ಮಾರಾಟ ಮಾಡುವುದು, ಹಾಗೆಯೇ ಆಗ ಹತ್ತಿರ ಬಂದಿರುವ ಗುರುಪೂರ್ಣಿಮೆಯ ಉತ್ಸವ ಕ್ಕಾಗಿ ಸಮಾಜದಿಂದ ಅರ್ಪಣೆಯನ್ನು ಸಂಗ್ರಹಿಸುವುದು ಇತ್ಯಾದಿ ಸೇವೆಗಳನ್ನು ಮಾಡಲು ಪ್ರಾರಂಭಿಸಿದೆನು.
೬. ಪರಾತ್ಪರ ಗುರು ಡಾ. ಆಠವಲೆಯವರು ಮಾಡಿದ ಅನೇಕ ರೀತಿಯ ಸೇವೆಗಳ ನಿರ್ಮಿತಿ ಮತ್ತು ಅವುಗಳಿಂದ ಸಾಧಕರಿಗೆ ಸಾಧನೆಯಲ್ಲಿ ಮುಂದಿನ ಹಂತಕ್ಕೆ ಹೋಗಲು ಆಗಿರುವ ಲಾಭ !
೬ ಅ. ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರ ಪ್ರಕೃತಿ, ಆಸಕ್ತಿ ಮತ್ತು ವಯಸ್ಸಿಗನುಸಾರ ಬೇರೆ ಬೇರೆ ಸೇವೆಗಳನ್ನು ಒದಗಿಸಿಕೊಡುವುದು : ಪ.ಪೂ. ಗುರುದೇವರು ‘ಸಾಧಕರ ಸಾಧನೆ ಆಗಬೇಕು’, ಎಂಬುದಕ್ಕಾಗಿ ಅನೇಕ ಸೇವೆಗಳನ್ನು ನಿರ್ಮಿಸಿದರು. ಅವರು ಪ್ರತಿಯೊಬ್ಬರ ಪ್ರಕೃತಿ, ಆಸಕ್ತಿ ಮತ್ತು ವಯಸ್ಸಿಗನುಸಾರ ವಿವಿಧ ರೀತಿಯ ಸೇವೆಗಳನ್ನು ದೊರಕಿಸಿಕೊಟ್ಟರು. ಉದಾಹರಣೆಗೆ ಧರ್ಮಪ್ರಚಾರದ ತಳಮಳ ಮತ್ತು ದೇಹಪ್ರಕೃತಿ ಚೆನ್ನಾಗಿರುವ ಸಾಧಕರಿಗಾಗಿ ಅಧ್ಯಾತ್ಮಪ್ರಸಾರದ ಸೇವೆ, ವಯಸ್ಕರ ಸಾಧಕರಿಗಾಗಿ ಗ್ರಂಥ ಮತ್ತು ನಿಯತಕಾಲಿಕೆಯ ವಿತರಣೆಯ ಲೆಕ್ಕವನ್ನಿಡುವುದು ಅಥವಾ ಸಾಪ್ತಾಹಿಕ ‘ಸನಾತನ ಪ್ರಭಾತ’ಗಳಿಗೆ ಸರಿಯಾಗಿ ಮಡಿಕೆ ಹಾಕುವುದು, ಅವುಗಳ ಮೇಲೆ ಚಂದಾದಾರರ ವಿಳಾಸಗಳನ್ನು ಅಂಟಿಸುವುದು ಇತ್ಯಾದಿ ಅನೇಕ ಸೇವೆಗಳನ್ನು ಒದಗಿಸಿಕೊಟ್ಟರು. ಅಧ್ಯಾತ್ಮಪ್ರಸಾರದ ಈ ಸೇವೆಗಳೆಂದರೆ ಪ್ರತ್ಯಕ್ಷ ಭಗವಂತನ ಸೇವೆಯೇ ಆಗಿವೆ. ಇದರಿಂದ ನನಗೆ ಸಾಧನೆಯಲ್ಲಿ ಮುಂದೆ ಹೋಗಲು ತುಂಬಾ ಲಾಭವಾಯಿತು.
೬ ಆ. ಸೇವೆಯನ್ನು ಮಾಡುವಾಗ ಮನಸ್ಸಿನಲ್ಲಿ ಕೇವಲ ಸೇವೆಯ ವಿಚಾರಗಳೇ ಇರುವುದರಿಂದ ಮನಸ್ಸು ಮಾಯೆಯ ವಿಚಾರಗಳಿಂದ ದೂರವಿರುವುದು ಮತ್ತು ಅದರಿಂದ ಈಶ್ವರೀ ಚೈತನ್ಯವನ್ನು ಗ್ರಹಿಸಲು ಸಾಧ್ಯವಾಗಿ ಸೇವೆಯಲ್ಲಿ ಆನಂದ ಸಿಗುವುದು : ಸೇವೆಯನ್ನು ಮಾಡುವಾಗ, ‘ಮನಸ್ಸು ಸೇವೆಯಲ್ಲಿ ಕೂಡಲೇ ಕಾರ್ಯನಿರತವಾಗುವುದು. ಆದ್ದರಿಂದ ನಾನು ಎಷ್ಟು ಸಮಯ ಸೇವೆಯನ್ನು ಮಾಡುತ್ತಿದ್ದೆನೋ, ಅಷ್ಟು ಸಮಯ ನನ್ನ ಮನಸ್ಸಿನಲ್ಲಿ ಸೇವೆಯ ಹೊರತು ಇತರ ಯಾವುದೇ ವಿಚಾರಗಳು ಇರುತ್ತಿರಲಿಲ್ಲ ಮತ್ತು ಸೇವೆ ಆದನಂತರವೂ ಸ್ವಲ್ಪ ಸಮಯದವರೆಗೆ ನನ್ನ ಮನಸ್ಸಿನಲ್ಲಿ ಆ ಸೇವೆಯ ವಿಚಾರಗಳೇ ಇರುತ್ತಿದ್ದವು.’ ಇದರ ಅತ್ಯಧಿಕ ಲಾಭವೆಂದರೆ ಅಷ್ಟು ಅವಧಿಯವರೆಗೆ ನಾನು ಮಾಯೆಯ ವಿಚಾರಗಳಿಂದ ದೂರ ಇರುತ್ತಿದ್ದೆ. ‘ಮನಸ್ಸು ಸೇವೆಯಲ್ಲಿ ಕಾರ್ಯನಿರತವಾಗುವುದರಿಂದ ಮತ್ತು ಏಕಾಗ್ರವಾಗುವುದರಿಂದ ಹೆಚ್ಚು ಪ್ರಮಾಣದಲ್ಲಿ ಈಶ್ವರೀ ಚೈತನ್ಯವನ್ನು ಪಡೆಯಲು ಸಾಧ್ಯವಾಗುತ್ತದೆ ಮತ್ತು ಆನಂದ ಸಿಗುತ್ತದೆ’, ಇದು ನಿಧಾನವಾಗಿ ನನ್ನ ಗಮನಕ್ಕೆ ಬರತೊಡಗಿತು. ಆದ್ದರಿಂದ ಎಷ್ಟೇ ಸೇವೆಯನ್ನು ಮಾಡಿದರೂ, ದಣಿವಾಗದೇ ನನಗೆ ಉತ್ಸಾಹವೆನಿಸುತ್ತಿತ್ತು.
– (ಸದ್ಗುರು) ಶ್ರೀ. ರಾಜೇಂದ್ರ ಶಿಂದೆ ಇದರಿಂದ ವ್ಯಾವಹಾರಿಕ ಕೆಲಸಗಳು ಮತ್ತು ಈಶ್ವರೀ ಸೇವೆಯಲ್ಲಿನ ವ್ಯತ್ಯಾಸ ನನ್ನ ಗಮನಕ್ಕೆ ಬಂದಿತು.
೬ ಇ. ಇತರ ಸಂಪ್ರದಾಯಗಳಲ್ಲಿ ನಿತ್ಯ ಸೇವೆ ಇರುವುದಿಲ್ಲ : ಇತರ ಆಧ್ಯಾತ್ಮಿಕ ಸಂಸ್ಥೆ ಅಥವಾ ಸಂಪ್ರದಾಯಗಳಲ್ಲಿ ನಿತ್ಯ ಮಾಡಲು ಸೇವೆಗಳು ಇರುವುದಿಲ್ಲ. ಇದ್ದರೂ, ತುಂಬಾ ಕಡಿಮೆ ಇರುತ್ತವೆ. ಆದ್ದರಿಂದ ಸಂಪ್ರದಾಯದಲ್ಲಿನ ಎಲ್ಲರಿಗೂ ಆ ಸೇವೆಗಳು ಸಿಗುವುದಿಲ್ಲ. ಅವರಿಗೆ ಯಾವುದಾದರೊಂದು ತಿಂಗಳಿನಲ್ಲಿ ಅಥವಾ ವರ್ಷದಲ್ಲಿ ಒಂದು ನಿರ್ದಿಷ್ಟ ಅವಧಿ ಗಾಗಿ ಕೆಲವು ಸೇವೆಗಳು ಲಭ್ಯವಿರುತ್ತವೆ.
೭. ಪರಾತ್ಪರ ಗುರು ಡಾ. ಆಠವಲೆಯವರು ಸದ್ಯದ ಕಾಲಕ್ಕನುಸಾರ ಅಧ್ಯಾತ್ಮದಲ್ಲಿನ ಸಿದ್ಧಾಂತಗಳನ್ನು ವೈಜ್ಞಾನಿಕ ಭಾಷೆಯಲ್ಲಿ ಮಂಡಿಸಿದ್ದರಿಂದ ಅವು ತಕ್ಷಣ ತಿಳಿಯುವುದು ಮತ್ತು ಬುದ್ಧಿಜೀವಿಗಳಿಗೂ ಅದರ ಲಾಭವಾಗುವುದು
ಸತ್ಸಂಗದಲ್ಲಿನ ವಿಷಯಗಳನ್ನು ಶೇಕಡಾವಾರು ಮತ್ತು ತುಲನಾತ್ಮಕ ಕೋಷ್ಟಕ ಇತ್ಯಾದಿಗಳ ಮಾಧ್ಯಮದಿಂದ ವೈಜ್ಞಾನಿಕ ಭಾಷೆಯಲ್ಲಿ ಹೇಳಲಾಗುತ್ತಿತ್ತು. ಆದ್ದರಿಂದ ‘ಯಾವುದಾದರೊಂದು ವಿಷಯದಿಂದ ಏನು ಪಡೆಯ ಬಹುದು ?’, ಎಂಬುದು ಸಹಜ ಗಮನಕ್ಕೆ ಬರುತ್ತಿತ್ತು, ಉದಾಹರಣೆಗೆ ಜ್ಞಾನದಾನದ ಮಹತ್ವವನ್ನು ಹೇಳಲು ಅವರು ಸಿದ್ಧಪಡಿಸಿದ ಒಂದು ಕೋಷ್ಟಕವನ್ನು ಮುಂದೆ ಕೊಡಲಾಗಿದೆ. ಬೋಧನೆಯ (ಜ್ಞಾನದಾನದ) ಮಹತ್ವ ಇದೇ ರೀತಿಯಲ್ಲಿ ‘ವಿಶ್ವಾಸ’ ಮತ್ತು ‘ಶ್ರದ್ಧೆ’ ಅಥವಾ ‘ಶ್ರೀ’ ಮತ್ತು ‘ಓಂ’ ಇವುಗಳಲ್ಲಿನ ವ್ಯತ್ಯಾಸ, ‘ಅಂರ್ತಮನಸ್ಸು ಮತ್ತು ಬಾಹ್ಯಮನಸ್ಸು ಹೇಗೆ ಕಾರ್ಯವನ್ನು ಮಾಡುತ್ತವೆ ?’,
ಮುಂತಾದ ಅನೇಕ ವಿಷಯಗಳನ್ನು ಅವರು ಶೇಕಡಾವಾರು ಮತ್ತು ತುಲನಾತ್ಮಕ ಕೋಷ್ಟಕಗಳನ್ನು ಕೊಟ್ಟು ಸ್ಪಷ್ಟಪಡಿಸಿದ್ದಾರೆ. ಪ.ಪೂ. ಗುರುದೇವರ ಅಧ್ಯಾತ್ಮದಲ್ಲಿನ ಸಿದ್ಧಾಂತಗಳನ್ನು ವೈಜ್ಞಾನಿಕ ಭಾಷೆಯಲ್ಲಿ ಪ್ರಸ್ತುತಪಡಿಸುವ ಈ ಶೈಲಿಯು ಈಗಿನ ಕಾಲಕ್ಕನುಸಾರ ಅತ್ಯಂತ ಪರಿಣಾಮಕಾರಿಯಾಗಿದೆ. ಕಲಿಯುಗದಲ್ಲಿನ ಬುದ್ಧಿಜೀವಿಗಳಿಗೂ ಇದರ ಲಾಭವಾಗುತ್ತಿದೆ.
೮. ಪರಾತ್ಪರ ಗುರು ಡಾ. ಆಠವಲೆಯವರು ‘ಸತ್ಸಂಗದಲ್ಲಿ ಯಾವ ವಿಷಯವನ್ನು ಹೇಗೆ ತೆಗೆದುಕೊಳ್ಳಬೇಕು ?’, ಎಂಬುದರ ಮಾರ್ಗದರ್ಶಕ ಅಂಶಗಳನ್ನು ಸನಾತನದ ‘ಅಧ್ಯಾತ್ಮದ ಪ್ರಾಸ್ತಾವಿಕ ವಿವೇಚನೆ’ ಎಂಬ ಗ್ರಂಥದಲ್ಲಿ ಬರೆದಿಟ್ಟಿದ್ದಾರೆ
ಪರಾತ್ಪರ ಗುರುದೇವರು ‘ಸತ್ಸಂಗದಲ್ಲಿ ಯಾವ ವಿಷಯವನ್ನು ಹೇಗೆ ತೆಗೆದುಕೊಳ್ಳಬೇಕು ?’, ಎಂಬುದರ ಬಗ್ಗೆ ಕೆಲವು ಮಾರ್ಗದರ್ಶಕ ಅಂಶಗಳನ್ನು ‘ಅಧ್ಯಾತ್ಮದ ಪ್ರಾಸ್ತಾವಿಕ ವಿವೇಚನೆ’ ಎಂಬ ಗ್ರಂಥದಲ್ಲಿ ಬರೆದಿಟ್ಟಿದ್ದಾರೆ. ಅದರಂತೆ ಸಾಧನೆ ಮಾಡುವುದರಿಂದ ಎಲ್ಲ ಸಾಧಕರಿಗೆ ಒಳ್ಳೆಯ ರೀತಿಯಲ್ಲಿ ಲಾಭವಾಗುತ್ತಿದೆ. ‘ಸನಾತನದ ಸಾಧಕರು ಯಾವ ವೇಗದಿಂದ ಸಾಧನೆಯಲ್ಲಿ ಶೀಘ್ರಗತಿಯಿಂದ ಪ್ರಗತಿ ಮಾಡಿಕೊಳ್ಳುತ್ತಿದ್ದಾರೆ’, ಎಂಬುದನ್ನು ನೋಡಿದರೆ ಈ ವಿಷಯ ಸಹಜ ಗಮನಕ್ಕೆ ಬರುತ್ತದೆ.
೯. ಸಾಪ್ತಾಹಿಕ ಮತ್ತು ಪಾಕ್ಷಿಕ ಅಭ್ಯಾಸವರ್ಗಗಳು : ಇದಲ್ಲದೇ ಸಾಪ್ತಾಹಿಕ ಮತ್ತು ಪಾಕ್ಷಿಕ ಅಭ್ಯಾಸವರ್ಗ ಗಳಿರುತ್ತಿದ್ದವು. ಇದರಲ್ಲಿ ಸನಾತನದ ಗ್ರಂಥಗಳಲ್ಲಿನ ಅಂಶಗಳ ಬಗ್ಗೆ ಅಧ್ಯಯನವನ್ನು ತೆಗೆದುಕೊಳ್ಳಲಾಗುತ್ತಿತ್ತು. ಮುಂದೆ ಯಾವಾಗ ನಾನು ಸತ್ಸಂಗವನ್ನು ತೆಗೆದುಕೊಳ್ಳಲು ಆರಂಭಿಸಿದೆನೋ ಅಥವಾ ಜಿಜ್ಞಾಸುಗಳ ಪ್ರಶ್ನೆಗಳಿಗೆ ಉತ್ತರ ಗಳನ್ನು ನೀಡತೊಡಗಿದೆನೋ, ಆಗ ನನಗೆ ಅದರ ತುಂಬಾ ಲಾಭವಾಯಿತು, ಅಂದರೆ ಸಮಷ್ಟಿ ಸಾಧನೆ ಮಾಡಲು ಸುಲಭವಾಯಿತು.
ಪರಾತ್ಪರ ಗುರುದೇವರು ಹಾಕಿಕೊಟ್ಟಿರುವ ಈ ಕಾರ್ಯಪದ್ಧತಿಗಳು ಅತ್ಯಂತ ಆದರ್ಶ ಮತ್ತು ಅಧ್ಯಯನ ಪೂರ್ಣ ಆಗಿದ್ದವು. ಯಾರಲ್ಲಿ ಜಿಜ್ಞಾಸುವೃತ್ತಿ ಅಥವಾ ಸಾಧನೆಯ ತಳಮಳವಿದೆಯೋ, ಅವರಿಗೆ ಇದರಿಂದ ಒಳ್ಳೆಯ ಮಾರ್ಗ ಸಿಗುತ್ತದೆ ಮತ್ತು ಸಾಧನೆಯಲ್ಲಿ ಪ್ರಗತಿ ಮಾಡಿಕೊಳ್ಳಬಹುದು.’ ಪರಾತ್ಪರ ಗುರುದೇವರು ಸೂಚಿಸಿದ ಶಬ್ದಪುಷ್ಪಗಳನ್ನು ಕೃತಜ್ಞತಾಭಾವದಿಂದ ಅವರ ಚರಣಗಳಲ್ಲಿ ಅರ್ಪಿಸುತ್ತೇನೆ !
(ಮುಂದುವರಿಯುವುದು) ಇದಂ ನ ಮಮ | (ಅರ್ಥ : ಈ ಬರಹ ನನ್ನದಲ್ಲ.)
– (ಸದ್ಗುರು) ಶ್ರೀ. ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ, ಪನವೇಲ. (೧೬.೧೨.೨೦೨೨)