ಆರೋಪ ಪತ್ರ ದಾಖಲಿಸಿದ ನಂತರ ಭಾರತದ ನಿಲುವು ಸ್ಪಷ್ಟವಾಗುವುದು ! – ಕೆನಡಾದ ದೈನಿಕದ ದಾವೆ

ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ಹತ್ಯೆ ಪ್ರಕರಣ

ಇಬ್ಬರು ಆರೋಪಿಗಳ ಗುರುತು ಪತ್ತೆ ಆಗಿದ್ದು ಆದಷ್ಟು ಬೇಗನೆ ಅವರ ಬಂಧನ !

ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್

ಓಟಾವಾ (ಕೆನಡಾ) – ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ಇವನ ಹತ್ಯೆಯ ಪ್ರಕರಣದಲ್ಲಿ ಕೆನಡಾದಲ್ಲಿನ ರಾಯಲ್ ಕೆನೆಡಿಯನ್ ಮೌಂಟೇನ್ ಪೊಲೀಸರು ಇಬ್ಬರು ಆರೋಪಿಗಳ ಗುರುತು ಪತ್ತೆ ಹಚ್ಚಿದ್ದಾರೆ. ಮುಂದಿನ ಕೆಲವು ವಾರದಲ್ಲಿ ಅವರನ್ನು ಬಂಧಿಸಬಹುದು ಎಂದು ಹೇಳಲಾಗಿದೆ. ‘ಈ ಇಬ್ಬರು ಆರೋಪಿಗಳು ಈಗಲೂ ಕೆನಡಾದಲ್ಲಿಯೇ ಇದ್ದಾರೆ’, ಎಂದು ಕೆನೆಡಾದಲ್ಲಿನ ‘ಗ್ಲೋಬ್ ಅಂಡ್ ಮೇಲ್’ ಈ ದೈನಿಕದಿಂದ ಸಮಾಚಾರ ನೀಡಲಾಗಿದೆ.

೧. ಈ ವಾರ್ತೆಯಲ್ಲಿ, ಎರಡು ಆರೋಪಿಗಳ ಮೇಲೆ ಆರೋಪ ಪಟ್ಟಿ ದಾಖಲಿಸಿದ ನಂತರ ಇದರಲ್ಲಿ ಭಾರತದ ನಿಲುವಿನ ಮಾಹಿತಿ ಬಹಿರಂಗವಾಗಬಹುದು. ಕಳೆದ ೬ ತಿಂಗಳಿಂದ ಪೊಲೀಸರು ಇವರಿಬ್ಬರ ಮೇಲೆ ನಿಗಾ ವಹಿಸಿದ್ದಾರೆ.

೨. ಕೆನಡಾ ಭಾರತದ ಮೇಲೆ ಮಾಡಿರುವ ಆರೋಪದ ಸಾಕ್ಷಿ ಒದಗಿಸಿದರೆ ಆಗ ಭಾರತ ಆ ದೃಷ್ಟಿಯಿಂದ ಕ್ರಮ ಕೈಗೊಳ್ಳಬಹುದು ಎಂದು ಈ ಹತ್ಯೆಯ ಸಂದರ್ಭದಲ್ಲಿ ಭಾರತವು ಮೊದಲೇ ಸ್ಪಷ್ಟಪಡಿಸಿತ್ತು; ಆದರೆ ಕೆನಡಾದಿಂದ ಇಲ್ಲಿಯವರೆಗೆ ಭಾರತಕ್ಕೆ ಯಾವುದೇ ಸಾಕ್ಷಿ ಒದಗಿಸಿಲ್ಲ.