ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಗೆ ರಷ್ಯಾಗೆ ಭೇಟಿ ನೀಡುವಂತೆ ರಷ್ಯಾದ ರಾಷ್ಟ್ರಾಧ್ಯಕ್ಷ ಪುಟೀನ್ ನಿಂದ ಆಮಂತ್ರಣ
ಮಾಸ್ಕೊ (ರಷ್ಯಾ) – ಜಗತ್ತಿನಾದ್ಯಂತ ಕೆಲವು ವಿಚಿತ್ರ ವಿಷಯಗಳು ನಡೆಯುತ್ತಿವೆ. ಅನೇಕ ವಿಷಯಗಳಿಂದ ಪರಿಸ್ಥಿತಿ ಕೂಡ ಹದಗೆಟ್ಟಿದೆ, ಇದರ ಅರಿವು ನನಗೆ ಇದೆ. ಆದರೂ ಕೂಡ ಏಷ್ಯಾದಲ್ಲಿನ ನಿಜವಾದ ಸ್ನೇಹಿತನಾಗಿರುವ ಭಾರತದಲ್ಲಿ ನಮ್ಮ ಸಂಬಂಧ ಒಳ್ಳೆಯದಾಗಿದೆ ಮತ್ತು ಈ ಮುಂದೆ ಕೂಡ ಒಳ್ಳೆಯದಾಗಿರುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಗೆ ನಾನು ರಷ್ಯಾ ಪ್ರವಾಸದ ಆಮಂತ್ರಣ ನೀಡುತ್ತಿದ್ದೇನೆ. ಅವರು ಏನಾದರೂ ರಷ್ಯಾಕೆ ಬಂದರೆ ನಮ್ಮೆಲ್ಲರಿಗೂ ಬಹಳ ಆನಂದವಾಗುವುದೆಂದು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮೀರ್ ಪುಟಿನ್ ಇವರು ಹೇಳಿದ್ದಾರೆ. ಭಾರತದ ವಿದೇಶಾಂಗ ಸಚಿವಾ ಡಾ. ಎಸ್. ಜೈಶಂಕರ್ ಇವರು ಪುಟಿನ್ ಇವರನ್ನು ಮಾಸ್ಕೋದಲ್ಲಿ ಭೇಟಿಯಾದರು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು.
ರಾಷ್ಟ್ರಾಧ್ಯಕ್ಷ ಪುಟಿನ್ ಇವರು ಮಾತು ಮುಂದುವರಿಸಿ, ಭಾರತದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ನಮ್ಮ ಸ್ನೇಹಿತ ನರೇಂದ್ರ ಮೋದಿ ಇವರಿಗೆ ದೊಡ್ಡ ಯಶಸ್ಸು ದೊರೆಯಲಿ ಎಂದು ನಾನು ಅವರಿಗೆ ಶುಭಾಶಯ ನೀಡುತ್ತೇನೆ. ಉಕ್ರೇನ್ ಯುದ್ಧದ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ನನಗೆ ಮೇಲಿಂದ ಮೇಲೆ ಸಲಹೆಗಳು ನೀಡಿದರು, ಹಾಗೂ ಅಲ್ಲಿ ಯಾವ ಪರಿಸ್ಥಿತಿ ಇದೆ ? ಇದನ್ನು ಅವರು ದೂರವಾಣಿಯ ಮೂಲಕ ತಿಳಿದುಕೊಂಡರು. ಶಾಂತಿಯುತವಾಗಿ ಈ ಪ್ರಶ್ನೆ ಹೇಗೆ ಪರಿಹರಿಸಬೇಕು ? ಈ ಪ್ರಯತ್ನ ನರೇಂದ್ರ ಮೋದಿ ಮಾಡುತ್ತಿದ್ದರು ಇದು ನನಗೆ ತಿಳಿದಿದೆ ಎಂದು ಕೂಡ ಪುಟಿನ್ ಇವರು ಹೇಳಿದರು.
Vladimir Putin invites PM Modi to Russia, wishes ‘success to friends in India’ for 2024 polls@abhishekjha157 shares more details#VladimirPutin #PMModi #Russia #India pic.twitter.com/AqDSZzD3su
— News18 (@CNNnews18) December 28, 2023