ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ ಮೌರ್ಯ ಇವರಿಂದ ಪುನಃ ಖೇದಕರ ಹೇಳಿಕೆ !
ನವ ದೆಹಲಿ – ಹಿಂದೂ ಧರ್ಮ ಒಂದು ಅಪಾಯವಾಗಿದೆ. ೧೯೯೫ ರಲ್ಲಿ ಸರ್ವೋಚ್ಚ ನ್ಯಾಯಾಲಯವು, ‘ಹಿಂದೂ ಹೆಸರಿನ ಯಾವುದೇ ಧರ್ಮವಿಲ್ಲ. ಇದು ಒಂದು ಜೀವನ ಪದ್ದತಿಯಾಗಿದೆ ಎಂದು ಹೇಳಿತ್ತು. ಸರಸಂಘಚಾಲಕ ಮೋಹನ ಭಾಗವತ ಇವರು ಕೂಡ ೨ ಬಾರಿ, ‘ಹಿಂದೂ ಹೆಸರಿನ ಯಾವುದೇ ಧರ್ಮವಿಲ್ಲ, ಅದು ಒಂದು ಬದುಕುವ ಕಲೆ ಆಗಿದೆ’ ಎಂದು ಹೇಳಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಕೂಡ, ‘ಹಿಂದೂ ಯಾವುದೇ ಧರ್ಮವಿಲ್ಲ, ಈ ಜನರು ಈ ರೀತಿಯ ಹೇಳಿಕೆ ನೀಡುತ್ತಾರೆ, ಆಗ ಯಾರ ಭಾವನೆಗಳಿಗೆ ನೋವುಂಟಾಗುವುದಿಲ್ಲ; ಆದರೆ ನಾನು ಏನಾದರೂ ರೀತಿಯ ಹೇಳಿಕೆ ನೀಡಿದರೆ, ಆಗ ಸಂಪೂರ್ಣ ದೇಶದಲ್ಲಿ ಭೂಕಂಪ ಆಗುತ್ತದೆ, ಎಂದು ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ ಮೌರ್ಯ ಹೇಳಿಕೆ ನೀಡಿದ್ದಾರೆ. ಮೌರ್ಯ ಇವರು ಈ ಹಿಂದೆ ಶ್ರೀರಾಮಚರಿತಮಾನಸ, ಶ್ರೀಲಕ್ಷ್ಮಿ ದೇವಿ, ಹಿಂದೂ ರಾಷ್ಟ್ರ ಮುಂತಾದರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಆದರೆ ಇಲ್ಲಿಯವರೆಗೆ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.
#WATCH दिल्ली: समाजवादी पार्टी के नेता स्वामी प्रसाद मौर्य का कहना है, ”… हिंदू एक धोखा है… वेसै भी 1995 में सुप्रीम कोर्ट ने कहा था कि हिंदू कोई धर्म नहीं है, यह जीवन जीने की एक शैली है। RSS प्रमुख मोहन भागवत ने भी दो बार कहा है कि चुके हैं कि हिंदू नाम का कोई धर्म नहीं है,… pic.twitter.com/7nVsBK56jL
— ANI_HindiNews (@AHindinews) December 26, 2023
ಸಂಪಾದಕೀಯ ನಿಲುವುಸ್ವಾಮಿ ಪ್ರಸಾದ ಮೌರ್ಯ ನಿರಂತರವಾಗಿ ಹಿಂದೂ ಧರ್ಮದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡುತ್ತಿರುವಾಗ ಅವರ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಇರುವುದು, ಇದು ಪೊಲೀಸ, ಸರಕಾರ ಮತ್ತು ಹಿಂದೂ ಧರ್ಮೀಯರಿಗೆ ನಾಚಿಕೆಗೇಡು ! |