ರೈಲ್ವೆ ಸಿಬ್ಬಂದಿ ಕಪ್ತಾನ ಸಿಂಗ ಅವರ ಹೋರಾಟಕ್ಕೆ ಸಂದ ಜಯ

ಗ್ವಾಲಿಯರ (ಮಧ್ಯಪ್ರದೇಶ) – ರೈಲ್ವೆಯ ಕಾರ್ಖಾನೆಯಿಂದ ಹಾಸಿಗೆ ಮತ್ತು ಕುರ್ಚಿಗಳನ್ನು ಕದ್ದ ಪ್ರಕರಣದಲ್ಲಿ ರೈಲ್ವೆಯ ಹಿರಿಯ ಅಧಿಕಾರಿಯ ವಿರುದ್ಧ 11 ವರ್ಷಗಳ ನಂತರ ಪ್ರಕರಣ ದಾಖಲಿಸುವಂತೆ ವಿಶೇಷ ರೈಲ್ವೆ ನ್ಯಾಯಾಲಯ ಆದೇಶಿಸಿದೆ.
ಈ ಪ್ರಕರಣದ ಕುರಿತು ರೈಲ್ವೆ ಸಿಬ್ಬಂದಿ ಕಪ್ತಾನ ಸಿಂಗ್ ಅವರು ಮಾತನಾಡಿ, 1ಸೆಪ್ಟೆಂಬರ್ 19, 2014 ರಂದು ರಾತ್ರಿ ಸಿಥೌಲಿ (ಗ್ವಾಲಿಯರ್)ಯ ರೈಲ್ವೆ ಸ್ಪ್ರಿಂಗ್ ಕಾರ್ಖಾನೆಯ ಅತಿಥಿ ಗೃಹದಿಂದ ಹಾಸಿಗೆ ಮತ್ತು 4 ಕುರ್ಚಿಗಳನ್ನು ಹಿರಿಯ ಅಧಿಕಾರಿ ವಿವೇಕ ಪ್ರಕಾಶ್ ಅವರ ಬಂಗಲೆಗೆ ತೆಗೆದುಕೊಂಡು ಹೋಗುತ್ತಿದ್ದರು. ಅವರನ್ನು ವಿಚಾರಿಸಿದಾಗ ಅನುಮತಿ ಪಡೆದುಕೊಂಡು ಸಾಮಗ್ರಿಗಳನ್ನು ಕೊಂಡೊಯ್ಯುತ್ತಿರುವುದಾಗಿ ಅವರು ಹೇಳಿದರು; ಆದರೆ ಇದು ಅನುಮಾನಾಸ್ಪದವಾಗಿ ಕಂಡುಬಂದಿದ್ದರಿಂದ ತನಿಖೆ ನಡೆಸಲಾಯಿತು. ಆಗ ನಕಲಿ ಗೇಟಪಾಸ್ (ಮುಖ್ಯ ದ್ವಾರದಿಂದ ಹೋಗಿ ಬರಲು ಅನುಮತಿ) ಬಳಸಿ ಅವರು ರೈಲ್ವೆಯ ಆಸ್ತಿಯನ್ನು ಕದಿಯುತ್ತಿರುವುದು ಬೆಳಕಿಗೆ ಬಂದಿತು. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಯಿತು; ಆದರೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ವಿಶೇಷ ರೈಲ್ವೆ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಯಿತು. ಅದರಂತೆ 2025 ರಲ್ಲಿ ವಿಜಯ ಪ್ರಕಾಶ ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶ ನೀಡಿದೆ. ನನ್ನ ಹಿರಿಯ ಅಧಿಕಾರಿ ವಿಜಯ ಪ್ರಕಾಶ ಅವರೊಂದಿಗೆ ನನಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ರೈಲ್ವೆಯ ಆಸ್ತಿಯನ್ನು ಹೀಗೆ ತೆಗೆದುಕೊಂಡು ಹೋಗುವುದು ಅಪರಾಧ. ಹಿರಿಯ ಅಧಿಕಾರಿಯೇ ಹೀಗೆ ಮಾಡಿದರೆ, ಪ್ರಕರಣವು ಇನ್ನಷ್ಟು ಗಂಭೀರವಾಗುತ್ತದೆ. ನಿಯಮಗಳು ಮತ್ತು ಕಾನೂನುಗಳು ಕೇವಲ ಸಾಮಾನ್ಯರಿಗಷ್ಟೇ ಅನ್ವಯಿಸುತ್ತವೆಯೇ?, ಎಂದು ಅವರು ಪ್ರಶ್ನಿಸಿದರು.
ಸಂಪಾದಕೀಯ ನಿಲುವುಹಿರಿಯ ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧ ಹೋರಾಡಿದ ಕಪ್ತಾನ್ ಸಿಂಗ ಅವರಿಗೆ ಅಭಿನಂದನೆಗಳು! ಪ್ರತಿಯೊಬ್ಬ ನಾಗರಿಕನೂ ಪ್ರಾಮಾಣಿಕನಾಗಿ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಿದರೆ, ದೇಶದಲ್ಲಿ ಭ್ರಷ್ಟಾಚಾರ ಉಳಿಯುವುದಿಲ್ಲ! |