Bengaluru Women Molested : ಬೆಂಗಳೂರಿನಲ್ಲಿ ನಡುರಸ್ತೆಯಲ್ಲಿ ಯುವಕನಿಂದ ಯುವತಿಯ ಮೇಲೆ ದೌರ್ಜನ್ಯ !

ಬೆಂಗಳೂರು – ಬೆಂಗಳೂರಿನ ಬಿಟಿಎಂ ಲೇಔಟ್‌ನ ಸುದ್ಧಗುಂಟೆಪಾಳ್ಯದಲ್ಲಿ ನಡುರಸ್ತೆಯಲ್ಲಿ ಯುವಕನೊಬ್ಬ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಘಟನೆ ‘ಸಿಸಿಟಿವಿ ಕ್ಯಾಮೆರಾ’ದಲ್ಲಿ ಸೆರೆಯಾಗಿದೆ. ಅನುಚಿತವಾಗಿ ವರ್ತಿಸಿದ ನಂತರ ಆರೋಪಿ ಯುವಕ ಸ್ಥಳದಿಂದ ಪರಾರಿಯಾಗಿದ್ದಾನೆ. ಕರ್ನಾಟಕ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿರುವ ಕಾರಣ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಇದು ಪೊಲೀಸ್ ಮತ್ತು ಆಡಳಿತಕ್ಕೆ ನಾಚಿಕೆಗೇಡು! – ಸಂಪಾದಕರು)

‘ದೊಡ್ಡ ನಗರಗಳಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ!’ – ಗೃಹ ಸಚಿವ ಜಿ. ಪರಮೇಶ್ವರ

ದೊಡ್ಡ ನಗರಗಳಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ, ಎಂದು ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ ಈ ಘಟನೆ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ. ಈ ಬಗ್ಗೆ ಯಾವುದೇ ಕಾನೂನು ಕ್ರಮ ಕೈಗೊಳ್ಳಬೇಕಾದರೆ, ಅದನ್ನು ಕಾನೂನಿನ ಪ್ರಕಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಬೆಂಗಳೂರಿನ ವಿಡಿಯೋವೊಂದು ಪ್ರಸಾರವಾದ ನಂತರ ಜಿ. ಪರಮೇಶ್ವರ ಈ ಪ್ರತಿಕ್ರಿಯೆ ನೀಡಿದ್ದಾರೆ ಎಂದು ‘ಇಂಡಿಯಾ ಟುಡೆ’ ವರದಿಯಲ್ಲಿ ಉಲ್ಲೇಖಿಸಿದೆ.

ಸಂಪಾದಕೀಯ ನಿಲುವು

  • ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದ ನಂತರ ಅಪರಾಧಿಗಳ ಉದ್ಘಟತನ ಹೆಚ್ಚಾಗಿದೆ ಎಂದು ಕಳೆದ ಕೆಲವು ಸಮಯದ ಘಟನೆಗಳಿಂದ ತಿಳಿದುಬರುತ್ತದೆ. ಹಾಗಾಗಿ, ‘ಇದು ಸಾಮಾನ್ಯ ಜನರ ಸರಕಾರವಲ್ಲ, ಬದಲಾಗಿ ಅಪರಾಧಿಗಳ ಸರಕಾರ’, ಎಂದು ಯಾರಿಗಾದರೂ ಅನ್ನಿಸಿದರೆ ತಪ್ಪೇನು? ಪ್ರಜಾಪ್ರಭುತ್ವದ ರಾಜನಾದ ಜನರಿಗೆ ಇಂತಹ ಸರಕಾರವನ್ನು ಕೆಳಗಿಳಿಸುವ ಹಕ್ಕಿದೆ!
  • ಹುಡುಗಿಯರು ಈಗ ಸರಕಾರ ಮತ್ತು ಪೊಲೀಸರು ತಮ್ಮನ್ನು ರಕ್ಷಿಸುತ್ತಾರೆ, ಎಂಬ ಭ್ರಮೆಯಲ್ಲಿರದೆ, ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಲು ಸ್ವಯಂ ರಕ್ಷಣಾ ತರಬೇತಿಯನ್ನು ಪಡೆಯಬೇಕು!
  • ಇಂತಹವರ ರಾಜ್ಯದಲ್ಲಿ ಅಪರಾಧ ಯಾವಾಗಲಾದರೂ ಕಡಿಮೆಯಾಗುತ್ತದೆಯೇ? ಇಂತಹವರನ್ನು ಆಯ್ಕೆ ಮಾಡಿದವರಿಗೆ ಇದು ಶಿಕ್ಷೆಯೇ ಸರಿ!