ಚೀನಾದಿಂದ ಹಣ ಪಡೆದು ಭಾರತದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ‘ನ್ಯೂಸ್‌ಕ್ಲಿಕ್’ ಮುಖ್ಯಸ್ಥರೇ ಕ್ಷಮಾಪಣೆಯ ಸಾಕ್ಷಿದಾರ !

ನವದೆಹಲಿ – ಭಾರತ ವಿರೋಧಿ ಪ್ರಚಾರಕ್ಕಾಗಿ ‘ನ್ಯೂಸ್‌ಕ್ಲಿಕ್’ ಎಂಬ ಸುದ್ದಿ ವೆಬ್‌ಸೈಟ್ ಚೀನಾದಿಂದ ಹಣವನ್ನು ತೆಗೆದುಕೊಂಡಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಸುದ್ದಿ ವೆಬ್‌ಸೈಟ್‌ನ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಮತ್ತು ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಅಮಿತ್ ಚಕ್ರವರ್ತಿ ಅವರು ಕ್ಷಮಾಪಣೆಯ ಸಾಕ್ಷಿಯಾಗಲು ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ಅವರೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ‘ನ್ಯೂಸ್‌ಕ್ಲಿಕ್’ ಚೀನಾದ ಕಮ್ಯುನಿಸ್ಟ್ ಪಕ್ಷದ ಪ್ರಚಾರಕ ನೆವಿಲ್ಲೆ ರಾಯ್ ಸಿಂಘಮ್ ಅವರಿಂದ 38 ಕೋಟಿ ರೂಪಾಯಿ ಪಡೆದುಕೊಂಡಿತ್ತು.

1. ಅಮಿತ್ ಚಕ್ರವರ್ತಿ ದೆಹಲಿಯ ಪಟಿಯಾಲ ಹೌಸ್ ಕೋರ್ಟ್‌ಗೆ, ನಮ್ಮ ಸುದ್ದಿ ವೆಬ್‌ಸೈಟ್ ಚೀನಾದ ಸೂತ್ರದಾರಗಳಿಂದ ಹಣ ಪಡೆದು ಭಾರತ ವಿರೋಧಿ ಪ್ರಚಾರವನ್ನು ಮಾಡಿತು. ಭಾರತದ ಸಾರ್ವಭೌಮತೆಗೆ ಧಕ್ಕೆ ಬರಲಿದೆ ಎಂಬ ವಿಚಾರಗಳನ್ನು ಹರಡಿಸಲಾಯಿತು.

2. ಚಕ್ರವರ್ತಿ ಮತ್ತು ಪೊರಕಾಯಸ್ಥ ಅವರನ್ನು ದೆಹಲಿ ಪೊಲೀಸರು ಅಕ್ಟೋಬರ್ 3 ರಂದು ಬಂಧಿಸಿದ್ದರು. ಇದಕ್ಕೂ ಮುನ್ನ ಪೊಲೀಸರು ದೆಹಲಿಯ ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ಬಳಿಕ ಇಬ್ಬರನ್ನೂ ಬಂಧಿಸಲಾಗಿತ್ತು.

3. ‘ನ್ಯೂಸ್‌ಕ್ಲಿಕ್’ ಮಾಡಿದ ಈ ಕರಾಳ ಕೃತ್ಯದ ಬಗ್ಗೆ ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ಮೊದಲು ಮಾಹಿತಿ ನೀಡಿತ್ತು. ಆ ಬಳಿಕ ವಿಷಯ ಬೆಳಕಿಗೆ ಬಂದಿದೆ.

ನ್ಯೂಸ್‌ಕ್ಲಿಕ್‌ನಿಂದ ಸನಾತನ ಸಂಸ್ಥೆಯ ಬಗ್ಗೆ ದ್ವೇಷಪೂರ್ಣ ಬರಹ !

ನ್ಯೂಸ್‌ಕ್ಲಿಕ್ ಸನಾತನ ಸಂಸ್ಥೆಯ ವಿರುದ್ಧ ಪದೇ ಪದೇ ಬರೆದಿದೆ. ಡಾ. ದಾಭೋಲ್ಕರ್ ಹತ್ಯೆ ಪ್ರಕರಣ ಅಥವಾ ಪನ್ಸಾರೆ, ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆ ಪ್ರಕರಣಗಳ ವರದಿ ಮಾಡುವಾಗ ಸನಾತನ ಸಂಸ್ಥೆಯನ್ನು ‘ನ್ಯೂಸ್‌ಕ್ಲಿಕ್’ ಸುದ್ದಿ ವೆಬ್‌ಸೈಟ್‌ನಲ್ಲಿ ‘ಭಯೋತ್ಪಾದಕ ಸಂಘಟನೆ’ ಎಂದು ಉಲ್ಲೇಖಿಸಿ ಹಲವಾರು ಬಾರಿ ಸಂಸ್ಥೆಯ ವಿರುದ್ಧ ನಿಂದಿಸಲಾಗಿತ್ತು. ಭಾರತದಲ್ಲಿನ ತನಿಖಾ ಸಂಸ್ಥೆಗಳು ಸನಾತನ ಸಂಸ್ಥೆ ಮತ್ತು ಅನೇಕ ಹಿಂದೂ ಸಂಘಟನೆಗಳ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ಚೀನಾ ಪ್ರಾಯೋಜಿತವಾಗಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಬೇಕು.