
ಪುಣೆ – ಪುಣೆಯ ಸನಾತನ ಸಂಸ್ಥೆಯ ೫೮ ನೇ ವ್ಯಷ್ಟಿ ಸಂತ ಪೂ. (ಶ್ರೀಮತಿ) ವಿಜಯಾಲಕ್ಷ್ಮಿ ಕಾಳೆಅಜ್ಜಿ (ವಯಸ್ಸು ೮೮ ವರ್ಷ) ಇವರು ೨೪ ಡಿಸೆಂಬರ್ ೨೦೨೩ ರಂದು ಬೆಳಗ್ಗೆ ೭ ಗಂಟೆಗೆ ದೇಹತ್ಯಾಗ ಮಾಡಿದರು. ವೃದ್ಧಾಪ್ಯದಿಂದಾಗಿ ಅವರು ಅನಾರೋಗ್ಯದಲ್ಲಿದ್ದರು. ಸನಾತನದ ಧರ್ಮಪ್ರಚಾರಕರಾದ ಸದ್ಗುರು ಸ್ವಾತಿ ಖಡಾಯೆ ಅವರು ಫಾಲ್ಗುಣ ಶುಕ್ಲ ಪಕ್ಷ ನವಮಿಯಂದು (೧೭.೩.೨೦೧೬) ಅವರನ್ನು ‘ಸಂತ’ ಎಂದು ಘೋಷಿಸಿದ್ದರು. ಪೂ. (ಶ್ರೀಮತಿ) ವಿಜಯಾಲಕ್ಷ್ಮಿ ಕಾಳೆಅಜ್ಜಿ ಅವರು ಆನಂದದಲ್ಲಿ, ಸ್ಥಿರವಾಗಿ ಮತ್ತು ಶಾಂತವಾಗಿದ್ದರು. ಅವರಿಗೆ ಸೇವೆಯನ್ನು ಮಾಡುವ ತೀವ್ರ ತಳಮಳ ಇತ್ತು. ಇಳಿ ವಯಸ್ಸಿನಲ್ಲೂ ತಮ್ಮನ್ನು ಬದಲಾಯಿಸುವ ತಳಮಳವು ತೀವ್ರವಾಗಿತ್ತು. ಅವರು ಪುಣೆಯ ಸನಾತನ ಸಂಸ್ಥೆಯ ಸಾಧಕಿ ಆಧುನಿಕ ವೈದ್ಯೆ ಜ್ಯೋತಿ ಕಾಳೆ ಅವರ ತಾಯಿಯಾಗಿದ್ದಾರೆ. ಪೂ. ಅಜ್ಜಿಯವರು ಸೊಸೆ, ಮಗಳು, ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ. ಡಿಸೆಂಬರ್ ೨೪ ರಂದು ಮಧ್ಯಾಹ್ನ ನವಿ ಪೇಠ್‌ನಲ್ಲಿರುವ ವೈಕುಂಠ ಸ್ಮಶಾನದಲ್ಲಿ ಅವರ ಅಂತ್ಯಸಂಸ್ಕಾರ ಮಾಡಲಾಯಿತು. ಸನಾತನ ಸಂಸ್ಥೆಯ ಸಂತರಾದ (ಸೌ.) ಮನೀಷಾ ಪಾಠಕ ಇವರು ಅಜ್ಜಿಯ ಪಾರ್ಥಿವ ಶರೀರದ ದರ್ಶನ ಪಡೆದು ಪುಷ್ಪ ಮಾಲೆ ಅರ್ಪಿಸಿದರು.
ಸನಾತನ ಸಂಸ್ಥೆಯ ೫೭ ನೆಯ ಸಂತ ಪೂ. (ಶ್ರೀಮತಿ) ಆನಂದಿ ಪಾಟೀಲ ಅಜ್ಜಿಯವರಿಂದ ದೇಹತ್ಯಾಗ !
ದೇವಸ್ಥಾನಗಳ ಪ್ರತಿನಿಧಿಗಳು ಮತ್ತು ಹಿಂದೂಗಳ ಸಂಘಟನೆ ಅಗತ್ಯ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ರಾಷ್ಟ್ರ ರಕ್ಷಣೆಗಾಗಿ ಮುಂಬಯಿನಲ್ಲಿ ನಡೆದ ‘ಶ್ರೀ ರಾಜಮಾತಂಗಿ ಮಹಾಯಜ್ಞ’!
ಶ್ರೀ ರಾಜಮಾತಂಗಿ ಮಹಾಯಜ್ಞವು ನಿರ್ವಿಘ್ನವಾಗಿ ನೆರವೇರಲು ಶ್ರೀ ಸಿದ್ಧಿವಿನಾಯಕನ ಚರಣಗಳಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸದ್ಗುರುಗಳು ಮತ್ತು ಸಂತರಿಂದ ಪ್ರಾರ್ಥನೆ !
ಸದ್ಗುರು ಅನುರಾಧಾ ವಾಡೇಕರ್ ಅವರ ಶುಭಹಸ್ತದಿಂದ ಮುಂಬಯಿನಲ್ಲಿ ಶ್ರೀ ಮಹಾಗಣಪತಿ ಮತ್ತು ಭೂಮಿ ಪೂಜೆ !
ಗುರುಕಾರ್ಯದ ಧ್ಯಾಸವಿರುವ ಮತ್ತು ಪರಾತ್ಪರ ಗುರು ಡಾ. ಆಠವಲೆ ಅವರ ಬಗ್ಗೆ ಭಾವವಿರುವ ಪೂ. ಸಾಂತಪ್ಪ ಗೌಡ !