ಮನುಷ್ಯ ಜನ್ಮವು ಪದೇಪದೇ ಸಿಗುವುದಿಲ್ಲ, ಆದುದರಿಂದ ಮನುಷ್ಯ ಜೀವನದ ಸಮಯವು ಬಹುಮೂಲ್ಯವಾಗಿದೆ. ಪ್ರತಿಯೊಬ್ಬರ ಆಯುಷ್ಯವು ಸೀಮಿತ ಮತ್ತು ಅನಿಶ್ಚಿತ ಕಾಲದ್ದಾಗಿರುತ್ತದೆ. ಈ ಸೀಮಿತ ಮತ್ತು ಅನಿಶ್ಚಿತ ಕಾಲದಲ್ಲಿಯೇ ನಮಗೆ ಮನುಷ್ಯ ಜನ್ಮದ ಸಾರ್ಥಕ ಮಾಡಿಕೊಳ್ಳಬೇಕಾಗಿದೆ. ಈ ಸಮಯವನ್ನು ಯೋಗ್ಯ ರೀತಿಯಲ್ಲಿ ಸದುಪಯೋಗ ಮಾಡಿ ಹೆಚ್ಚು ಹೆಚ್ಚು ಸಮಯ ಒಳ್ಳೆಯ ಕೆಲಸಕ್ಕಾಗಿ, ಅಂದರೆ ದೇವರು, ದೇಶ ಮತ್ತು ಧರ್ಮಕ್ಕಾಗಿ ಕೊಡಬೇಕು. ಅದಕ್ಕಾಗಿ ಸಮಯದ ಅಪವ್ಯಯ ಮಾಡದೆ ಪರಿಶ್ರಮದಿಂದ ಕರ್ಮವನ್ನು ಮಾಡುವುದು ಆವಶ್ಯಕವಾಗಿದೆ. ದೇವರಿಗೆ ಪ್ರಾರ್ಥನೆಯನ್ನು ಮಾಡಿ ನಿಯೋಜನೆ ಮತ್ತು ಕೃತಿ ಮಾಡಿದರೆ ಕಾರ್ಯವು ಸಮಯದಲ್ಲಿ ಪೂರ್ಣವಾಗಲು ಸಹಾಯವಾಗುತ್ತದೆ.