Karnataka Child Marriage : ರಾಜ್ಯದಲ್ಲಿ ಬಾಲ್ಯವಿವಾಹದಿಂದ ವರ್ಷದಲ್ಲೇ ೨೮ ಸಾವಿರ ೬೫೭ ಬಾಲಕಿಯರು ಗರ್ಭಿಣಿಯರು !

ಬೆಂಗಳೂರು – ರಾಜ್ಯದಲ್ಲಿ ಈಗ ಭ್ರೂಣಪತ್ತೆ, ಭ್ರೂಣ ಹತ್ಯೆ ಇಂತಹ ಅನೇಕ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಬೆನ್ನಲ್ಲೇ ಬಾಲ್ಯವಿವಾಹ ಮತ್ತು ಅಪ್ರಾಪ್ತ ವಯಸ್ಸಿನ ಹುಡುಗಿಯರು ಗರ್ಭಿಣಿಯಾಗುವ ಪ್ರಕರಣಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತಿದೆ. ರಾಜ್ಯ ಸರಕಾರವು ಬಾಲ್ಯ ವಿವಾಹ ತಡೆಯುವುದಕ್ಕಾಗಿ ಕಾನೂನು ರೂಪಿಸಿ ಅದನ್ನು ಕಟ್ಟುನಿಟ್ಟಾಗಿ ಪಾಲಿಸಲು ನಿಶ್ಚಯಿಸಿದೆ. ಆದರೂ ರಾಜ್ಯದಲ್ಲಿ ಒಂದು ವರ್ಷದಲ್ಲಿ ೨೮ ಸಾವಿರದ ೬೫೭ ಅಪ್ರಾಪ್ತ ಬಾಲಕಿಯರು ಗರ್ಭಿಣಿಯಾಗಿರುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಿಭಾಗದಿಂದ ಮಾಹಿತಿ ಬಹಿರಂಗವಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ೯೨೧ ಬಾಲಕಿಯರು ಗರ್ಭಿಣಿ ಆಗಿದ್ದು ಸುರಪುರ ತಾಲೂಕಿನಲ್ಲಿ ೩೦೦ ಕ್ಕೂ ಹೆಚ್ಚಿನ ಬಾಲಕಿಯರು ಗರ್ಭಿಣಿಯಾಗಿದ್ದಾರೆ. ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಮಕ್ಕಳ ರಕ್ಷಣಾ ಇಲಾಖೆಯವರ ಕಣ್ತಪ್ಪಿಸಿ ಬಾಲ್ಯ ವಿವಾಹ ನಡೆಯುತ್ತಿರುವುದು ಬಹಿರಂಗವಾಗಿದೆ.

ಸಂಪಾದಕೀಯ ನಿಲುವು

ಇಡೀ ದೇಶದಲ್ಲಿ ಬಾಲ್ಯವಿವಾಹದ ಮೇಲೆ ನಿಷೇಧ ಇರುವಾಗ ಇಷ್ಟೊಂದು ಬೃಹತ್‌ ಪ್ರಮಾಣದಲ್ಲಿ ಬಾಲ್ಯವಿವಾಹ ನಡೆಯುವವರೆಗೆ ಸರಕಾರ ಮತ್ತು ಪೊಲೀಸರು ನಿದ್ರಿಸುತ್ತಿದ್ದರೆ ?