ಶಾಸ್ತ್ರೀ ಅವರ ಹರಿಹರ ದೇವಸ್ಥಾನದ ಕುರಿತು ನೀಡಿರುವ ಹೇಳಿಕೆಯನ್ನು ಅಮೃತಸರದ ಸುವರ್ಣ ಮಂದಿರದ ಜೊತೆ ಹೋಲಿಕೆ
ಅಮೃತಸರ (ಪಂಜಾಬ) – ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರೀ ಅವರು ಸಂಭಲದಲ್ಲಿನ ಹರಿಹರ ದೇವಸ್ಥಾನದ ಕುರಿತು ನೀಡಿರುವ ಹೇಳಿಕೆಗೆ, ಅಮೃತಸರದ ಸುವರ್ಣಮಂದಿರದ (ಅಂದರೆ ಹರಮಂದಿರ ಸಾಹಿಬ್) ಜೊತೆಗೆ ಹೋಲಿಕೆ ಮಾಡುವ ಪ್ರಯತ್ನವನ್ನು, ಅಲ್ಲಿನ ಸಿಖ್ ಕಟ್ಟರವಾದಿ ಬರ್ಜಿಂದರ್ ಪರವಾನಾ ಮಾಡಿದ್ದಾನೆ. ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರೀ ಅವರನ್ನು ಹತ್ಯೆ ಮಾಡುವುದಾಗಿ ಬರ್ಜಿಂದರ್ ಬೆದರಿಕೆ ಹಾಕಿದ್ದಾನೆ. ಪಂಜಾಬಿನ ಕಪೂರ್ತಲಾ ಜಿಲ್ಲೆ, ಕಾದರಾಬಾದ ಗ್ರಾಮದ ಸಭೆಯಲ್ಲಿ ಪರವಾನಾ ಈ ಬೆದರಿಕೆ ಹಾಕಿದನು.
ಈ ಪ್ರಕರಣದಲ್ಲಿ ‘ಆಂಟಿ ಟೆರರಿಸ್ಟ್ ಫ್ರಂಟ್ ಇಂಡಿಯಾ’ ಮತ್ತು ವಿಶ್ವ ಹಿಂದು ತಃಖ್ತ ಸಂಸ್ಥೆಗಳ ಮುಖ್ಯಸ್ಥ ವೀರೇಶ ಶಾಂಡಿಲ್ಯ ಅವರು ಪೊಲೀಸ್ ಅಧಿಕಾರಿಗಳಿಗೆ 48 ಗಂಟೆಗಳೊಳಗಾಗಿ ಪರವಾನಾ ಅವರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಕ್ರಮ ಕೈಕೊಳ್ಳದಿದ್ದರೆ, ನಾವು ಪಂಜಾಬ್ ಮತ್ತು ಹರಿಯಾಣ ಉಚ್ಛ ನ್ಯಾಯಾಲಯದ ಕದ ತಟ್ಟುವುದಾಗಿ ಅವರು ಹೇಳಿದರು.
Radical Sikh Bajinder Parwana threatens to kill Pandit Dhirendra Krishna Shastri.
Shastri’s statement regarding the Harihar temple, Sambhal was linked to Amritsar’s Harmandir Sahib (Golden Temple)!
Is this an attempt to satisfy the flames of Hindu hatred by connecting unrelated… pic.twitter.com/TaHM30omA1
— Sanatan Prabhat (@SanatanPrabhat) December 2, 2024
ಪರವಾನಾ ಹೇಳಿದ್ದೇನು ?
ಬಾಗೇಶ್ವರ ಧಾಮದ ಸಂತರು “ನಾವು ಹರಮಂದಿರದಲ್ಲಿ ಪೂಜೆ ಮಾಡುತ್ತೇವೆ” ಎಂದು ಹೇಳಿದರು. ಅಭಿಷೇಕ ಮಾಡುತ್ತೇವೆ ಮತ್ತು ದೇವಸ್ಥಾನವನ್ನು ನಿರ್ಮಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಒಂದು ಮಾತನ್ನು ಗಮನದಲ್ಲಿಡಿ, ನಾವು ಇಂದಿರಾ ಗಾಂಧಿ ಅವರನ್ನು ಹತ್ಯೆ ಮಾಡಿದ್ದೇವೆ. ಅವರಿಗೆ ಒಳಗೆ ಕಾಲಿಡಲು ಅನುಮತಿ ಇರಲಿಲ್ಲ. ಲಕ್ಷಾಂತರ ಸೈನಿಕರು ಇಲ್ಲಿಗೆ ಬಂದರು ಮತ್ತು ನಾವು ಅವರನ್ನು ಗುಂಡು ಹಾರಿಸಿ ಮಟ್ಟ ಹಾಕಿದೆವು. ಚಂಡೀಗಢದ ಬಾಂಬ್ ಸ್ಫೋಟದಲ್ಲಿ ಅವರು(ಪಂಜಾಬ್ ಮಾಜಿ ಮುಖ್ಯಮಂತ್ರಿ ಬಿಯಂತ ಸಿಂಗ ಬಾಂಬ್ ಸ್ಫೋಟದಲ್ಲಿ ಮೃತರಾಗಿದ್ದರು) ಹೋದರು. ಇಂದಿನಿಂದ ನಿಮ್ಮ ಎಣಿಕೆ ಆರಂಭವಾಗಿದೆ ಎಂಬುದನ್ನು ಬಾಗೇಶ್ವರ ಬಾಬಾ ಗಮನಕ್ಕೆ ತಂದುಕೊಳ್ಳಬೇಕು. ನಾವು ನಿಮ್ಮ ಮೇಲೆಯೂ ದಾಳಿ ಮಾಡುತ್ತೇವೆ ಮತ್ತು ನಮ್ಮ ಇಚ್ಛೆಯನುಸಾರ ನಿಮ್ಮನ್ನು ಹತ್ಯೆ ಮಾಡುತ್ತೇವೆ. ನೀವು ಬನ್ನಿ, ಹರಮಂದಿರ ಸಾಹಿಬ್ ಬಿಡಿ ಬಾಗೇಶ್ವರ ಬಾಬಾ ಅಮೃತಸರ ಅಥವಾ ಪಂಜಾಬಿಗೆ ಬಂದು ತೋರಿಸಲಿ ಎಂದು ಬರ್ಜಿಂದರ್ ಪರವಾನಾ ಸವಾಲು ಹಾಕಿದ್ದಾನೆ.
ಸಂಪಾದಕೀಯ ನಿಲುವುಹಿಂದು ದ್ವೇಷವನ್ನು ಶಮನಗೊಳಿಸಿಕೊಳ್ಳುವ ಪ್ರಯತ್ನ ಇದಾಗಿದೆಯೇ ? ಎಂಬುದರ ತನಿಖೆ ಮಾಡುವ ಅಗತ್ಯವಿದೆ! |