‘ನಾನು ಅನೇಕ ವರ್ಷಗಳ ಹಿಂದೆ ಪ್ರಸಾರಕ್ಕಾಗಿ ನೈನಿತಾಲಕ್ಕೆ ಹೋಗಿದ್ದೆನು. ಆಗ ಅಲ್ಲಿ ಒಂದು ಏರುಮಾರ್ಗ ಇರುವ ಮಾರ್ಗದಲ್ಲಿ ಆ ನಗರದ ಕಾರ್ಮಿಕರು ಬೆನ್ನಿನ ಮೇಲೆ ಭಾರವನ್ನಿಟ್ಟು ಕೊಂಡು ಹೋಗುತ್ತಿದ್ದರು. ನಾನು ಈ ಕಾರ್ಮಿಕರು ಮಾರ್ಗದ ಕಠಿಣವಾದ ಎತ್ತರಕ್ಕೆ ಹೋಗು ವಾಗ ನೇರವಾಗಿ ಹೋಗದೆ ಹಾವಿನ ಚಲನೆಯಂತೆ ( Zigzag) ನಡೆಯುವುದನ್ನು ನೋಡಿದೆ. ಹೀಗೆ ನಡೆಯುವುದರಿಂದ ಅವರಿಗೆ ಬೇಗನೆ ಆಯಾಸವಾಗುವುದಿಲ್ಲವೆಂಬುದು ನನಗೆ ಅರಿವಾಯಿತು. ಆ ದೃಶ್ಯ ನನ್ನ ಮನಸ್ಸಿನಲ್ಲಿ ಇಂದಿಗೂ ಅಚ್ಚೊತ್ತಿದೆ. ಆದ್ದರಿಂದ ನಾನು ಕೂಡ ವ್ಯಾಯಾಮ ಮಾಡುವಾಗ ಅದೇ ರೀತಿ ನಡೆಯುತ್ತೇನೆ. ‘ಎತ್ತರದ ಮಾರ್ಗವನ್ನು ಕ್ರಮಿಸುವಾಗ ಹಾಗೇಕೆ ಮಾಡಬೇಕು ?’, ಎಂಬುದರ ಕಾರಣವನ್ನು ಮುಂದೆ ಕೊಡಲಾಗಿದೆ.
೧. ಏರು ಮಾರ್ಗದಲ್ಲಿ ನೇರವಾಗಿ ನಡೆಯುವುದ ರಿಂದ ಕಾಲುಗಳ ಸ್ನಾಯುಗಳಿಗೆ ಬರುವ ಒತ್ತಡದ ತುಲನೆಯಲ್ಲಿ ಹಾವಿನ ಚಲನೆಯ ಹಾಗೆ ನಡೆಯುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಆದ್ದರಿಂದ ನಡೆಯುವಾಗ ಆಯಾಸವಾಗದೆ ಸುಲಭದಲ್ಲಿ ಮೇಲೆ ಹೋಗಬಹುದು. ಈ ಪದ್ಧತಿಯಲ್ಲಿ ನಡೆಯುವಾಗ ಏದುಸಿರು ಬರುವುದಿಲ್ಲ.
೨. ವಾಯುವಿಹಾರಕ್ಕೆ ಹೋಗುವಾಗ ಸ್ಥಳ ಕಡಿಮೆಯಿದ್ದರೆ, ನೇರವಾಗಿ ಏರಿನಲ್ಲಿ ನಡೆಯುವ ಬದಲು ಹಾವಿನ ಚಲನೆಯಂತೆ ನಡೆದರೆ ನಡೆಯಲು ಹೆಚ್ಚು ಸ್ಥಳ ಸಿಗುತ್ತದೆ. ಆದರೆ ಇಂತಹ ರಸ್ತೆಗಳಲ್ಲಿ ‘ವಾಹನಗಳ ಪ್ರಮಾಣ ಕಡಿಮೆಯಿದ್ದರೆ ಮಾತ್ರ ಹೀಗೆ ನಡೆಯಲು ಸಾಧ್ಯವಾಗುತ್ತದೆ’, ಎಂಬುದನ್ನು ಗಮನದಲ್ಲಿಡಬೇಕು.’ – ಆಧುನಿಕ ವೈದ್ಯ ದುರ್ಗೇಶ ಸಾಮಂತ (೬೧ ವರ್ಷ), ಸನಾತನ ಆಶ್ರಮ, ರಾಮನಾಥಿ, ಗೋವಾ. (೧೨.೭.೨೦೨೨)