ಸಾಧಕರು ಮತ್ತು ಕಾರ್ಯಕರ್ತರಿಗೆ ಮಹತ್ವದ ಸೂಚನೆ !
‘ಭಾರತದಾದ್ಯಂತ ವಿವಿಧ ಸ್ಥಳಗಳಲ್ಲಿ ಜಿಲ್ಲಾಸ್ತರದ ಅಧಿವೇಶನಗಳು, ‘ಹಿಂದೂ ರಾಷ್ಟ್ರ-ಜಾಗೃತಿ ಸಭೆಗಳು’, ಹಿಂದೂಸಂಘಟನಾ ಮೇಳಗಳು, ವಾಚಕರ ಸಮ್ಮೇಳನ ಗಳು, ಪತ್ರಕರ್ತರ ಪರಿಷತ್ತು ಇತ್ಯಾದಿ ಕಾರ್ಯಕ್ರಮಗಳು ಹಾಗೂ ಕಾರ್ಯಾಗಾರ ಹಾಗೂ ಶಿಬಿರಗಳ ಆಯೋಜನೆ ಮಾಡಲಾಗುತ್ತದೆ. ಈ ಕಾರ್ಯಕ್ರಮಗಳು ನಿರ್ವಿಘ್ನವಾಗಿ ನೆರವೇರಬೇಕೆಂದು ಹಾಗೂ ಅವುಗಳಿಂದ ಸಂಪೂರ್ಣ ಫಲಶ್ರುತಿ ಪಡೆಯಲು ಈ ಕಾರ್ಯಕ್ರಮದ ದಿನದ ೧-೨ ದಿನಗಳ ಮೊದಲು ಆರಂಭಿಸಿ ಕಾರ್ಯಕ್ರಮ ಪೂರ್ಣಗೊಳ್ಳುವ ವರೆಗೆ ಸಾಧಕರು ಈ ಮುಂದಿನ ಆಧ್ಯಾತ್ಮಿಕ ಸ್ತರದ ಉಪಾಯಗಳನ್ನು ಮಾಡಬೇಕು.
೧. ಸಂಕಟಗಳು ಹಾಗೂ ಅಡಚಣೆಗಳು ದೂರವಾಗಿ ಕಾರ್ಯಕ್ರಮದ ಸ್ಥಳದ ಸುತ್ತಲೂ ಸಂರಕ್ಷಣಾಕವಚವು ನಿರ್ಮಾಣವಾಗಲು ಅದಕ್ಕನುಗುಣವಾದ ಪ್ರಾರ್ಥನೆಯನ್ನು ಶ್ರೀಕೃಷ್ಣನ ನಾಮಜಪದ ಮಂಡಲದಲ್ಲಿ ಬರೆಯುವುದು
ಕಾರ್ಯಕ್ರಮದ ನಿಯೋಜನೆ ಆದ ತಕ್ಷಣ ಕಾಗದದಲ್ಲಿ ಮೊದಲು ಶ್ರೀಕೃಷ್ಣನ ನಾಮಜಪದ ಮಂಡಲ ಹಾಕಿ ನಂತರ ಅದರಲ್ಲಿ ಈ ಮುಂದಿನ ಪ್ರಾರ್ಥನೆಯನ್ನು ಬರೆಯಬೇಕು, ‘ಹೇ ಶ್ರೀಕೃಷ್ಣಾ, ‘… ಈ ಕಾರ್ಯಕ್ರಮದಲ್ಲಿ ಬರುವ ಎಲ್ಲ ಅಡಚಣೆಗಳನ್ನು ನಾಶಗೊಳಿಸು. ಸಂಪೂರ್ಣ ಕಾರ್ಯಕ್ರಮ ನಿರ್ವಿಘ್ನವಾಗಿ ನೆರವೇರಲಿ ಹಾಗೂ ಕಾರ್ಯಕ್ರಮದ ಉದ್ದೇಶ ಸಫಲವಾಗಲಿ’, ಎಂದು ನಿನ್ನ ಚರಣಗಳಲ್ಲಿ ಪ್ರಾರ್ಥನೆ. ಏನಾದರೂ ವಿಶಿಷ್ಟ ಅಡಚಣೆಗಳು ಬರುತ್ತಿದ್ದರೆ, ಅದು ದೂರವಾಗಬೇಕೆಂದು ನಾಮಜಪದ ಮಂಡಲದಲ್ಲಿ ಪ್ರಾರ್ಥನೆಯನ್ನು ಬರೆಯಬೇಕು.
೨. ಸಭಾಗೃಹದಲ್ಲಿ ಭಜನೆ ಹಾಕುವುದು ಹಾಗೂ ಊದುಬತ್ತಿಯಿಂದ ಅಲ್ಲಿ ಶುದ್ಧೀಕರಣ ಮಾಡುವುದು
ಕಾರ್ಯಕ್ರಮದ ಸ್ಥಳದ ವಾತಾವರಣದ ಶುದ್ಧಿಗಾಗಿ ಕಾರ್ಯಕ್ರಮವು ಆರಂಭವಾಗುವ ಮೊದಲು ಹಾಗೂ ಕಾರ್ಯಕ್ರಮದ ಸಮಯದಲ್ಲಿ ಸಭಾಗೃಹದಲ್ಲಿ ಪ.ಪೂ. ಭಕ್ತರಾಜ ಮಹಾರಾಜರ ಭಜನೆಗಳು ಅಥವಾ ಕ್ಷಾತ್ರಗೀತೆ ಯನ್ನು ಸಣ್ಣ ಧ್ವನಿಯಲ್ಲಿ ಹಾಕಿಡಬೇಕು. ಕಾರ್ಯಕ್ರಮವು ಹಿಂದಿ ಅಥವಾ ಮರಾಠಿ ಭಾಷೆಯಲ್ಲಿದ್ದರೆ ಅದಕ್ಕನುಸಾರ ಆ ಭಾಷೆಯಲ್ಲಿನ ಭಜನೆ ಹಾಕಬೇಕು. ಕಾರ್ಯಕ್ರಮ ಆರಂಭವಾಗುವ ಮೊದಲು ಸಭಾಗೃಹದ ಮತ್ತು ‘ಹಿಂದೂ-ರಾಷ್ಟ್ರ ಜಾಗೃತಿ ಸಭೆ’ ಮೈದಾನದಲ್ಲಿದ್ದರೆ ಅಲ್ಲಿನ ವ್ಯಾಸಪೀಠವನ್ನು ಊದುಬತ್ತಿಯಿಂದ ಶುದ್ಧೀಕರಣಗೊಳಿಸಬೇಕು. ಕಾರ್ಯಕ್ರಮ ನಡೆಯುವಾಗ ನಡುನಡುವೆ ಊದುಬತ್ತಿ ಹಚ್ಚಲು ಒಬ್ಬ ಸಾಧಕನನ್ನು ನೇಮಕ ಮಾಡಬೇಕು. ಸಾಧ್ಯವಿದ್ದರೆ ಉಪಾಯ ಕ್ಕಾಗಿ ಸಭಾಗೃಹದ ೪ ಮೂಲೆಗಳಲ್ಲಿ ಒಂದೊಂದು ಪೆಟ್ಟಿಗೆ ಇಡಬೇಕು. ಅದರ ಒಳಭಾಗ ಸಭಾಗೃಹದ ದಿಕ್ಕಿಗೆ ಇರಬೇಕು.
೩. ಸಭಾಗೃಹದಲ್ಲಿ ಒತ್ತಡದ ಅರಿವಾಗುತ್ತಿದ್ದರೆ ಅಥವಾ ಕಾರ್ಯಕ್ರಮದ ಜವಾಬ್ದಾರ ಸಾಧಕನಿಗೆ ಏನಾದರೂ ತೊಂದರೆ ಆಗುತ್ತಿದ್ದರೆ ಲಿಂಬೆ ಹಣ್ಣಿನಿಂದ ಅವನ ದೃಷ್ಟಿ ತೆಗೆಯುವುದು
ಸೂಕ್ಷ್ಮದಲ್ಲಿನ ವಿಷಯ ತಿಳಿಯುವ ಶೇ. ೬೦ ಅಥವಾ ಅದಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವಿರುವ ಸಾಧಕ ಅಥವಾ ಭಾವವಿರುವ ಸಾಧಕನು ಕಾರ್ಯಕ್ರಮದ ೩೦ ನಿಮಿಷ ಮೊದಲು ‘ಸಭಾಗೃಹದಲ್ಲಿ ಒತ್ತಡದ ಅರಿವಾಗುತ್ತದೆಯೇ ?’, ಎಂಬುದನ್ನು ನೋಡಬೇಕು. ಒತ್ತಡದ ಅರಿವಾಗುತ್ತಿದ್ದರೆ ಸಭಾಗೃಹದಲ್ಲಿ ವ್ಯಾಸಪೀಠದ ವಿರುದ್ಧ ದಿಕ್ಕಿನ ಗೋಡೆಯ ಸಮೀಪ ವ್ಯಾಸಪೀಠದ ಕಡೆಗೆ ಮುಖ ಮಾಡಿ ನಿಂತುಕೊಂಡು ಒಂದು ಲಿಂಬೆಯಿಂದ ಸಂಪೂರ್ಣ ಸಭಾಗೃಹದ ದೃಷ್ಟಿ ತೆಗೆಯಬೇಕು. ದೃಷ್ಟಿ ತೆಗೆಯುವಾಗ ಲಿಂಬೆ ಹಣ್ಣನ್ನು ಬಲಗೈಯ ಮುಷ್ಟಿಯಲ್ಲಿ ಹಿಡಿದು ಕೈಯನ್ನು ಗಡಿಯಾರದ ಮುಳ್ಳಿನ ದಿಕ್ಕಿನಲ್ಲಿ ೬ ಸಲ ಹಾಗೂ ವಿರುದ್ಧ ದಿಕ್ಕಿನಲ್ಲಿ ೬ ಸಲ ವರ್ತುಲಾಕಾರದಲ್ಲಿ ತಿರುಗಿಸಿ ದೃಷ್ಟಿ ತೆಗೆಯಬೇಕು. ನಂತರ ಆ ಲಿಂಬೆಯನ್ನು ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಬೇಕು. ಕಾರ್ಯಕ್ರಮದ ಜವಾಬ್ದಾರಿ ಇರುವ ಸಾಧಕನಿಗೆ ಏನಾದರೂ ತೊಂದರೆ ಆಗುತ್ತಿದ್ದರೆ ಅವನಿಗೂ ಇದೇ ರೀತಿಯಲ್ಲಿ ದೃಷ್ಟಿ ತೆಗೆಯಬೇಕು.
೪. ಸಾಧಕ-ವಕ್ತಾರರಿಗೆ ಆಧ್ಯಾತ್ಮಿಕ ತೊಂದರೆಯಾಗಬಾರದೆಂದು ಅವರು ಕಾರ್ಯಕ್ರಮದ ಸಮಯದಲ್ಲಿ ಲಿಂಬೆಹಣ್ಣನ್ನು ತಮ್ಮ ಬಳಿ (ಕಿಸೆಯಲ್ಲಿ) ಇಟ್ಟುಕೊಳ್ಳಬೇಕು
ಕಾರ್ಯಕ್ರಮವನ್ನು ಸಂಬೋಧಿಸುವ ಸಾಧಕ-ವಕ್ತಾರರಿಗೆ ಆಧ್ಯಾತ್ಮಿಕ ತೊಂದರೆಯಾಗಬಾರದೆಂದು ಅವರು ಕಾರ್ಯಕ್ರಮದ ಸಮಯದಲ್ಲಿ ತನ್ನ ಬಳಿ (ಕಿಸೆಯಲ್ಲಿ) ಒಂದು ಲಿಂಬೆ ಹಣ್ಣನ್ನು ಇಟ್ಟುಕೊಳ್ಳಬೇಕು ಹಾಗೂ ತನ್ನ ರಕ್ಷಣೆಗಾಗಿ ಪ್ರಾರ್ಥನೆ ಮಾಡಬೇಕು. ಕಾರ್ಯಕ್ರಮದ ನಂತರ ಅವರು ತನ್ನ ಕಿಸೆಯಲ್ಲಿದ್ದ ಲಿಂಬೆಯನ್ನು ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಬೇಕು. ಹರಿಯುವ ನೀರು ಸಿಗದಿದ್ದರೆ ಲಿಂಬೆಯನ್ನು ನಿರ್ಜನ ಸ್ಥಳದಲ್ಲಿ ಎಸೆಯಬೇಕು ಅಥವಾ ಮೂರು ರಸ್ತೆಗಳು ಕೂಡುವಲ್ಲಿ ಇಡಬೇಕು. ಲಿಂಬೆಯನ್ನು ವಿಸರ್ಜಿಸುವ ಮೊದಲು ಆ ಲಿಂಬೆಯ ಬಣ್ಣ ಬದಲಾಗಿದ್ದರೆ, ಅದರ ಮೇಲೆ ಆಕೃತಿ ಮೂಡಿದರೆ ಅಥವಾ ಕಲೆಯಾಗಿರುವುದು ಕಂಡು ಬಂದರೆ ಕ್ಯಾಮೆರಾದಿಂದ ಅಥವಾ ಒಳ್ಳೆಯ ಸಂಚಾರವಾಣಿಯಿಂದ ಅದರ ಛಾಯಾಚಿತ್ರವನ್ನು ತೆಗೆಯಬೇಕು. ಆ ಛಾಯಾಚಿತ್ರ ಹಾಗೂ ಆ ಸಂದರ್ಭದಲ್ಲಿನ ಅನುಭೂತಿ ಹಾಗೂ ತನ್ನ ರಕ್ಷಣೆಯಾಗಿರುವ ಅಥವಾ ತೊಂದರೆದಾಯಕ ಅನುಭೂತಿ ಬಂದಿದ್ದರೆ ಅದನ್ನು ಬರೆದು ರಾಮನಾಥಿ ಆಶ್ರಮದ ಗ್ರಂಥ ವಿಭಾಗಕ್ಕೆ ಕಳುಹಿಸಬೇಕು. ಕಾರ್ಯಕ್ರಮದ ದಿನ ಸಾಧಕ-ವಕ್ತಾರರು ನಾಮಜಪಾದಿ ಆಧ್ಯಾತ್ಮಿಕ ಉಪಾಯದ ಕಡೆಗೂ ಗಮನಹರಿಸಬೇಕು. ‘ಇದರ ಜೊತೆಗೆ ಕಾರ್ಯಕ್ರಮ ನಿರ್ವಿಘ್ನವಾಗಿ ನೆರವೇರಬೇಕೆಂದು’ ವ್ಯಾಸಪೀಠದ ಮೇಲೆ (ಹೊರಗೆ ಕಾಣದ ರೀತಿಯಲ್ಲಿ) ಲಿಂಬೆ ಹಣ್ಣನ್ನು ಇಡಬೇಕು.
೫. ಅಡಚಣೆಗಳು ದೂರವಾಗಬೇಕೆಂದು ‘ನಿರ್ವಿಚಾರ’ ಈ ನಾಮಜಪ ಮಾಡಬೇಕು.
ಕಾರ್ಯಕ್ರಮದಲ್ಲಿ ತುಂಬಾ ಅಡಚಣೆ ಬರುತ್ತಿದ್ದರೆ ಈ ಮೇಲಿನ ಉಪಾಯದ ಹೊರತು ಶೇ. ೬೦ ಅಥವಾ ಅದಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟದ ಸಾಧಕನಿಗೆ ಅಥವಾ ಸಂತರಿಗೆ ಆ ಅಡಚಣೆ ದೂರವಾಗಲು ‘ನಿರ್ವಿಚಾರ’ ಈ ನಾಮಜಪ ಮಾಡಲು ಹೇಳಬೇಕು. ಕಾರ್ಯಕ್ರಮದ ಸ್ಥಳದಲ್ಲಿ ಇದರ ಹೊರತು ಇನ್ನೇನಾದರೂ ತೊಂದರೆಯ ಅರಿವಾಗುತ್ತಿದ್ದರೆ ಉಪಾಯದ ವಿಷಯದಲ್ಲಿ ಜವಾಬ್ದಾರ ಸಾಧಕರಿಗೆ ವಿಚಾರಿಸಬೇಕು. ಧರ್ಮಪ್ರೇಮಿಗಳ ಸಂಘಟನೆಗಳ ದೃಷ್ಟಿಯಲ್ಲಿ ಮಹತ್ವ ಪೂರ್ಣ ಪಾತ್ರವಹಿಸುವ ಈ ಕಾರ್ಯಕ್ರಮಗಳಲ್ಲಿ ವಿಘ್ನ ಗಳನ್ನು ತರಲು ಕೆಟ್ಟ ಶಕ್ತಿಗಳು ಪ್ರಯತ್ನಿಸಬಹುದು. ಎಷ್ಟೇ ಅಡಚಣೆ ಬಂದರೂ ಸಾಧಕರು ಭಯಪಡಬಾರದು. ಶ್ರೀ ಗುರುಗಳ ಮೇಲೆ ಅಪಾರ ಶ್ರದ್ಧೆಯನ್ನಿಟ್ಟು ಎಲ್ಲ ಆಧ್ಯಾತ್ಮಿಕ ಉಪಾಯಗಳನ್ನು ಗಾಂಭೀರ್ಯದಿಂದ ಹಾಗೂ ಭಾವಪೂರ್ಣವಾಗಿ ಮಾಡಬೇಕು.’ – ಸದ್ಗುರು ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.