ಜಾತ್ಯತೀತರು ಇಂತಹವರಿಗೆ ಸರ್ವಧರ್ಮಸಮಭಾವದ ಬುದ್ಧಿಮಾತು ಹೇಳುವರೇ ?

ಫಲಕ ಪ್ರಸಿದ್ಧಿಗಾಗಿ

೧. ಮತಾಂಧರು ಶಿಕ್ಷಕರಾಗಿದ್ದರೂ, ಅವರು ಹಿಂದೂದ್ವೇಷಿಗಳಾಗಿಯೇ ಇರುತ್ತಾರೆ !

ಹಾಥರಸ (ಉತ್ತರಪ್ರದೇಶ)ದ ‘ಸಾಯಿಮಾ ಮನ್ಸೂರ್ ಪಬ್ಲಿಕ್ ಸ್ಕೂಲ್’ನಲ್ಲಿ ಹಿಂದೂ ವಿದ್ಯಾರ್ಥಿಯು ಮುಸಲ್ಮಾನ ಶಿಕ್ಷಕ ಮಹಮ್ಮದ್ ಅದನಾನ್ ಅವರಿಗೆ ‘ರಾಮ್ ರಾಮ್’ ಎಂದು ಹೇಳಿದ್ದಕ್ಕಾಗಿ ಹಿಂದೂ ವಿದ್ಯಾರ್ಥಿಗೆ ಕಿರುಕುಳ ನೀಡಿದ್ದಾರೆ. ಇದನ್ನು ಹಿಂದೂಗಳು ವಿರೋಧಿಸಿದ ನಂತರ, ಅದನಾನ್ ಅವರನ್ನು ವಜಾಗೊಳಿಸಲಾಯಿತು.

೨. ಹಗರಣಗಳನ್ನು ಮಾಡುವ ಚರ್ಚ್‌ಗಳ ಸರಕಾರೀಕರಣ ಯಾವಾಗ ?

ದೇಶದ ಅತಿದೊಡ್ಡ ಕ್ರೈಸ್ತ ಸ್ವಯಂಸೇವಾ ಸಂಸ್ಥೆ ‘ಚರ್ಚ್ ಆಫ್ ನಾರ್ತ್ ಇಂಡಿಯಾ’ ದ ವಿದೇಶದಿಂದ ದೇಣಿಗೆ ಸ್ವೀಕರಿಸುವ ಎಫ್.ಸಿ.ಆರ್.ಎ. ಅನುಜ್ಞಪ್ತಿಯನ್ನು ಕೇಂದ್ರ ಗೃಹ
ಸಚಿವಾಲಯ ರದ್ದುಗೊಳಿಸಿದೆ. ವಿದೇಶಿ ದೇಣಿಗೆ ನಿಯಮ ಗಳನ್ನು ಉಲ್ಲಂಘಿಸಿದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.

೩. ಇದು ಭದ್ರತಾ ವ್ಯವಸ್ಥೆಗೆ ಲಜ್ಜಾಸ್ಪದ !

ಲೋಕಸಭೆಯಲ್ಲಿ ಇಬ್ಬರು ವ್ಯಕ್ತಿಗಳು ಪ್ರೇಕ್ಷಕರ ಗ್ಯಾಲರಿಯಿಂದ ಸಭಾಂಗಣಕ್ಕೆ ಜಿಗಿದು ಬಣ್ಣದ ಹೊಗೆಬಿಡುವ ಪುಡಿ ಎಸೆದರು. ಇದರಿಂದ ಸಭಾಂಗಣದಲ್ಲಿ ಹಳದಿ ಬಣ್ಣದ ಹೊಗೆ ಆವರಿಸಿತು. ಈ ಘಟನೆಗೂ ಮುನ್ನ ಸಂಸತ್ತಿನ ಹೊರಗೆ ಇಬ್ಬರು ವ್ಯಕ್ತಿಗಳಿಂದ ‘ಕಲರ್ ಸ್ಮೋಕ್ ಟ್ಯೂಬ್’ ಮೂಲಕ ಹಳದಿ ಬಣ್ಣದ ಹೊಗೆಯನ್ನು ಬಿಡಲಾಗಿತ್ತು.

೪. ಇಡೀ ದೇಶಕ್ಕಾಗಿ ಇಂತಹ ನಿರ್ಧಾರ ಆವಶ್ಯಕ !

ಅಸ್ಸಾಂ ಸರಕಾರದ ಅನುದಾದಲ್ಲಿ ನಡೆಸುತ್ತಿದ್ದ ೧ ಸಾವಿರದ ೨೮೧ ಮದರಸಾಗಳನ್ನು ಮುಚ್ಚಲಾಗಿದೆ ಮತ್ತು ಅಲ್ಲಿ ಈಗ ಆಂಗ್ಲ ಮಾಧ್ಯಮದ ಶಾಲೆಗಳನ್ನು ತೆರೆಯಲಾಗಿದೆ. ಇಲ್ಲಿ ಇಸ್ಲಾಂ ಬದಲಿಗೆ, ಎಂದಿನಂತೆ ಎಲ್ಲರಿಗೂ ಕಲಿಸುವ ವಿಷಯಗಳನ್ನು ಕಲಿಸಲಾಗುತ್ತಿದೆ.

೫. ಜನತಾ ದಳ (ಸಂಯುಕ್ತ) ಪಕ್ಷದ ಮುಸಲ್ಮಾನ ಪ್ರೀತಿಯನ್ನು ತಿಳಿಯಿರಿ !

‘ಸಂಸತ್ತಿನಲ್ಲಿ ನುಸುಳಿದವರು ಮುಸಲ್ಮಾನನಾಗಿರಲಿಲ್ಲ, ಎಂಬ ಬಗ್ಗೆ ನಾನು ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಆರೋಪಿಗಳು ಮುಸಲ್ಮಾನ ಆಗಿದ್ದರೆ ಭಾಜಪವು ಬಿರುಗಾಳಿ ಎಬ್ಬಿಸುತ್ತಿತ್ತು’ ಎಂದು ಬಿಹಾರದ ಜನತಾ ದಳ (ಸಂಯುಕ್ತ) ಪಕ್ಷದ ಅಧ್ಯಕ್ಷ ಲಾಲನ್ ಸಿಂಗ್ ಹೇಳಿದ್ದಾರೆ.

೬. ಜಾತ್ಯತೀತರು ಇಂತಹವರಿಗೆ ಸರ್ವಧರ್ಮಸಮಭಾವದ ಬುದ್ಧಿಮಾತು ಹೇಳುವರೇ ?

ನಟ ಶಾರುಖ್ ಖಾನ್ ಮತ್ತು ಅವರ ಕುಟುಂಬದವರು ಶಿರ್ಡಿಯಲ್ಲಿ ಶ್ರೀ ಸಾಯಿಬಾಬಾರ ದರ್ಶನ ಪಡೆದರು. ಈ ಕಾರಣದಿಂದಾಗಿ, ಮುಸಲ್ಮಾನ ಮೂಲಭೂತವಾದಿಗಳು ಶಾರುಖ್ ಖಾನ್ ಇವರು ಮೂರ್ತಿ ಪೂಜಿಸುತ್ತಾರೆ ಎಂದು ಆರೋಪಿಸಿದರು ಮತ್ತು ‘ಎಕ್ಸ’ ನಲ್ಲಿ ದ್ವೇಷಪೂರಿತ ಹೇಳಿಕೆ ಗಳನ್ನು ನೀಡಿ, ಅವರನ್ನು ‘ಕಾಫೀರ’ ಎಂದು ಕರೆದರು.

೭. ಜಾತ್ಯತೀತ ದೇಶದಲ್ಲಿ ಇಂತಹ ಬೇಡಿಕೆ ಹೇಗೆ ಮಾಡಲಾಗುತ್ತದೆ ?

ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಶಾಸಕ ಐವನ್ ಡಿಸೋಜಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ‘ಕ್ರೈಸ್ತರ ಅಭಿವೃದ್ಧಿಗೆ ಮುಂಗಡಪತ್ರದಲ್ಲಿ ಕನಿಷ್ಠ
೫೦೦ ಕೋಟಿ ರೂ. ಮೀಸಲಿಡಬೇಕು ಎಂದು ಆಗ್ರಹಿಸಿದ್ದಾರೆ.