ಹಲ್ಲುನೋವಿಗೆ ರಾಮಬಾಣ ಉಪಾಯವೆಂದರೆ ಸ್ಪಟಿಕ !

ಮನೆಮದ್ದು ಎಂದರೆ ಆಪತ್ಕಾಲದಲ್ಲಿನ ಸಂಜೀವಿನಿ

೧. ವಯೋವೃದ್ಧ ತಾಯಿಯ ಶಾರೀರಿಕ ಕ್ಷಮತೆ ತುಂಬಾ ಕಡಿಮೆ ಆಗಿದ್ದರಿಂದ ಹಲ್ಲುಗಳಿಗೆ ಉಪಚಾರ ಮಾಡಲು ಸಾಧ್ಯವಾಗದಿರುವುದು

‘ನನ್ನ ತಾಯಿ ಶ್ರೀಮತಿ ಪ್ರಭಾವತಿ ಗಜಾನನ ಶಿಂದೆ (ಆಧ್ಯಾತ್ಮಿಕ ಮಟ್ಟ ಶೇ. ೬೬, ವಯಸ್ಸು ೮೭ ವರ್ಷ) ಇವಳನ್ನುಕಳೆದ ೩ ವರ್ಷಗಳಲ್ಲಿ ೪ ಬಾರಿ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಬೇಕಾಯಿತು. ಒಮ್ಮೆ ತಲೆಯ ಶಸ್ತ್ರಚಿಕಿತ್ಸೆ ನಡೆಯಿತು. ಅವಳ ಹೃದಯದ ಕ್ಷಮತೆ ಕಡಿಮೆಯಿದೆ (ಶೇ. ೨೦) ಮತ್ತು ಮೂತ್ರಪಿಂಡಗಳ ಕ್ಷಮತೆಯೂ ಕಡಿಮೆಯಿದೆ. ಅವಳಿಗೆ ಮೂಲವ್ಯಾಧಿ ಇದೆ ಹಾಗೂ ರಕ್ತದಲ್ಲಿನ ಅನೇಕ ಘಟಕಗಳ ಪ್ರಮಾಣ ಹೆಚ್ಚು-ಕಡಿಮೆ ಇರುತ್ತದೆ. ಕ್ಷಮತೆ ಕಡಿಮೆ ಇರುವು ದರಿಂದ ಅವಳು ಕೋಣೆಯಲ್ಲಿಯೇ ಮಲಗಿರುತ್ತಾಳೆ. ಕಳೆದ ಕೆಲವು ತಿಂಗಳುಗಳಿಂದ ಅವಳ ಹಲ್ಲುಗಳು ತುಂಬಾ ನೋಯುತ್ತಿದ್ದವು ಮತ್ತು ಅವು ಅಲ್ಲಾಡುತ್ತಿದ್ದವು; ಆದರೆ ಶಾರೀರಿಕ ಸ್ಥಿತಿ ಸೂಕ್ಷ್ಮವಿದ್ದ ಕಾರಣ ಅದಕ್ಕೆ ವೈದ್ಯಕೀಯ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿರಲಿಲ್ಲ.

ಸದ್ಗುರು ರಾಜೇಂದ್ರ ಶಿಂದೆ

೨. ದಂತವೈದ್ಯರು ತಾಯಿಯ ಹಲ್ಲುಗಳನ್ನು ತೆಗೆಯಲು ಸುಸಜ್ಜಿತ ವ್ಯವಸ್ಥೆ ಇರುವ ಆಸ್ಪತ್ರೆಗೆ ಸೇರಿಸಲು ಹೇಳಿದರು

ತಾಯಿಯ ಹಲ್ಲುನೋವು ತುಂಬಾ ಹೆಚ್ಚಾಯಿತು ಮತ್ತು ಹಲ್ಲುಗಳು ಹೆಚ್ಚು ಅಲುಗಾಡತೊಡಗಿದವು. ೧೫.೬.೨೦೨೩ ರಂದು ನಾವು ತಾಯಿಯನ್ನು ಹಲ್ಲು ತೆಗೆಯುವ ಸಲುವಾಗಿ ದಂತವೈದ್ಯರಲ್ಲಿಗೆ ಕರೆದುಕೊಂಡು ಹೋದೆವು. ತಾಯಿಯ ಕಾಯಿಲೆಯ ಕಡತ ಮತ್ತು ವಯಸ್ಸು ಹಾಗೂ ಅವಳ ಒಟ್ಟು ಶಾರೀರಿಕ ಸ್ಥಿತಿಯನ್ನು ನೋಡಿ ಅವರು, “ಇವರ ಹಲ್ಲುಗಳನ್ನು ತೆಗೆಯಬೇಕಾದರೆ ಇವರನ್ನು ಶಸ್ತ್ರಚಿಕಿತ್ಸಾಕೊಠಡಿ (ಆಪರೇಶನ್ ಥೇಟರ್), ತುರ್ತುನಿಗಾ ಘಟಕ (ಐಸಿಯು ಯುನಿಟ್), ಅರವಳಿಕೆ ನೀಡುವ ತಜ್ಞರು ಹಾಗೂ ದಂತವೈದ್ಯರು ಇರುವ ಆಸ್ಪತ್ರೆಗೆ ಸೇರಿಸಬೇಕಾಗುವುದು” ಎಂದು ಹೇಳಿದರು.

೩. ಆಸ್ಪತ್ರೆಯಲ್ಲಿನ ಯಂತ್ರ ಕೆಟ್ಟು ಹೋಗಿರುವುದರಿಂದ ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಗದಿರುವುದು

ತಾಯಿಯ ಹಲ್ಲು ನೋವು ಹೆಚ್ಚಾದ ಕಾರಣ ಅವಳಿಗೆ ದಿನವಿಡೀ ತುಂಬಾ ತೊಂದರೆಯಾಗುತ್ತಿತ್ತು; ಆದ್ದರಿಂದ ನಾವು ಬೇಗನೇ ತಾಯಿಯ ಹಲ್ಲುಗಳನ್ನು ತೆಗೆಸುವುದೆಂದು ನಿರ್ಧರಿಸಿದೆವು. ದಂತವೈದ್ಯರು ಸೂಚಿಸಿದಂತೆ ನಾವು ಎಲ್ಲ ಸೌಲಭ್ಯಗಳಿರುವ ಆಸ್ಪತ್ರೆಯಲ್ಲಿ ವಿಚಾರಣೆ ಮಾಡಿದೆವು. ಅವರಲ್ಲಿ ಎಲ್ಲ ಸೌಲಭ್ಯವಿತ್ತು. ಅಲ್ಲಿನ ವೈದ್ಯರು ನಮಗೆ, “ಹಲ್ಲು ತೆಗೆಯುವ ಯಂತ್ರ ಕೆಟ್ಟು ಹೋಗಿದೆ. ಅದು ದುರಸ್ತಿ ಆಗುವವರೆಗೆ ಕಾಯಬೇಕಾಗುವುದು. ಯಂತ್ರ ದುರಸ್ತಿ ಆದನಂತರ ನಾವು ತಿಳಿಸುತ್ತೇವೆ. ಹಲ್ಲು ತೆಗೆಯಲು ಸುಮಾರು ೧೫ ಸಾವಿರ ರೂಪಾಯಿ ಮತ್ತು ಔಷಧಗಳ ಖರ್ಚು ಬೇರೆ ಇರುವುದು ಹಾಗೂ ಏನಾದರೂ ಅಡಚಣೆ ಬಂದರೆ ಹೆಚ್ಚು ಹಣ ಬೇಕಾಗುವುದು” ಎಂದು ಹೇಳಿದರು. (ಒಂದು ಹಲ್ಲನ್ನು ತೆಗೆಯಲು ಸಾಮಾನ್ಯವಾಗಿ ೫೦೦ ರಿಂದ ೭೦೦ ರೂಪಾಯಿ ಖರ್ಚಾಗುತ್ತದೆ)

೪. ಸ್ಪಟಿಕದ ನೀರಿನಿಂದ ಬಾಯಿ ಮುಕ್ಕಳಿಸಿದ್ದರಿಂದ ಅಲುಗಾಡುತ್ತಿದ್ದ ಹಲ್ಲುಗಳು ಗಟ್ಟಿಯಾಗುವುದು, ಕೆಲವು ಹಲ್ಲುಗಳು ಬಿದ್ದು ಹೋಗುವುದು ಹಾಗೂ ಹಲ್ಲಿನ ತೊಂದರೆ ನಿಲ್ಲುವುದು

ಈ ಅವಧಿಯಲ್ಲಿ ನಾನು ಸಾಮಾಜಿಕ ಮಾಧ್ಯಮದಲ್ಲಿ ಹಲ್ಲುನೋವಿಗಾಗಿ ಒಂದು ಮನೆಮದ್ದನ್ನು ನೋಡಿದೆ. ಅದಕ್ಕನುಸಾರ ಮುಂಬಯಿಯಿಂದ ಸ್ಪಟಿಕ ತಂದು ಅದನ್ನು ನೀರಿನಲ್ಲಿ ೬-೭ ಸಲ ತಿರುಗಿಸಿ ತಾಯಿಗೆ ಆ ನೀರಿನಿಂದ ಬೆಳಗ್ಗೆ-ಸಾಯಂಕಾಲ ಬಾಯಿ ಮುಕ್ಕಳಿಸಲು ಹೇಳಿದೆ. ಕ್ರಮೇಣ ತಾಯಿಯ ಹಲ್ಲುಗಳ ನೋವು ಕಡಿಮೆಯಾಗುತ್ತಾ ಹೋಯಿತು ಹಾಗೂ ೧೫ ದಿನಗಳ ನಂತರ ಅದು ಸಂಪೂರ್ಣ ನಿಂತಿತು ಹಾಗೂ ಅಲುಗಾಡುತ್ತಿದ್ದ ಹಲ್ಲುಗಳೂ ಕೂಡ ಗಟ್ಟಿಯಾದವು. ಅನಂತರ ಸುಮಾರು ೨ ತಿಂಗಳ ನಂತರ
ಅವಳ ೨ ಹಲ್ಲುಗಳು ಬಿದ್ದುಹೋದವು; ಆದರೆ ಅವು ಬೀಳು ವಾಗ ಅಥವಾ ಬಿದ್ದ ನಂತರ ಏನೂ ತೊಂದರೆಯಾಗಲಿಲ್ಲ.

೫. ಆಧುನಿಕ ವೈದ್ಯರ ದೊಡ್ಡ ಮೊತ್ತದ ಉಪಚಾರ ಮಾಡುವುದಕ್ಕಿಂತ ಮನೆಮದ್ದು ಮಾಡಿದ್ದರಿಂದ ತೊಂದರೆ ಮತ್ತು ಹಣ ಉಳಿಯಿತು

ಇತ್ತೀಚೆಗೆ ಯಾವುದೇ ಕಾಯಿಲೆ ಬಂದರೆ ತಕ್ಷಣ ಆಧುನಿಕ ವೈದ್ಯರಲ್ಲಿಗೆ ಹೋಗಬೇಕಾಗುತ್ತದೆ. ಚಿಕಿತ್ಸೆ ಮಾಡುವ ಮೊದಲು ಬಹಳಷ್ಟು ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ ಹಾಗೂ ದುಬಾರಿ ಮಾತ್ರೆ ಮತ್ತು ಔಷಧಗಳನ್ನು ಸೇವಿಸಬೇಕಾಗುತ್ತದೆ. ಅದಕ್ಕಾಗಿ ತುಂಬಾ ಹಣ ಖರ್ಚಾಗುತ್ತದೆ. ತಾಯಿಯ ಹಲ್ಲು ನೋವಿಗೆ ಮನೆಮದ್ದು ಮಾಡಿದ್ದರಿಂದ ಹಲ್ಲು ತೆಗೆಯುವಾಗ ಆಗುವ ತೊಂದರೆ ಹಾಗೂ ಹಣವೂ ಉಳಿಯಿತು.

೬. ಮುಂಬರುವ ಆಪತ್ಕಾಲದಲ್ಲಿ ಮನೆಮದ್ದುಗಳು ಸಂಜೀವಿನಿ ಕಾರ್ಯವನ್ನು ಮಾಡುವವು !

ಹಿಂದಿನ ಕಾಲದಲ್ಲಿ ಮನೆಮನೆಗಳಲ್ಲಿ ಅಜ್ಜಿಯ ಚೀಲ (ಚಿಕ್ಕ ಬಟ್ಟೆಯ ಚೀಲ) ಇರುತ್ತಿತ್ತು. ಅದರಲ್ಲಿ ಅನೇಕ ಮನೆಮದ್ದುಗಳಿರುತ್ತಿದ್ದವು. ಅವು ತುಂಬಾ ಗುಣಕಾರಿ ಆಗಿರುತ್ತಿದ್ದ್ದವು. ‘ಮುಂಬರುವ ಆಪತ್ಕಾಲದಲ್ಲಿ ಆಧುನಿಕ ವೈದ್ಯರು ಇಲ್ಲದಿರುವಾಗ, ಇಂತಹ ಮನೆಮದ್ದುಗಳು ಚೆನ್ನಾಗಿ ಉಪಯೋಗವಾಗಬಹುದು’, ಎಂಬುದನ್ನು ಗಮನದಲ್ಲಿಟ್ಟುಕೊಂಡು ಇಂತಹ ಮನೆಮದ್ದುಗಳ ಮಾಹಿತಿಯನ್ನು ಪಡೆದು ಅವುಗಳನ್ನು ಮನೆಯಲ್ಲಿ ಸಂಗ್ರಹಿಸಿಟ್ಟರೆ ಲಾಭವಾಗುವುದು. ಸಚ್ಚಿದಾನಂದ ಪರಬ್ರಹ್ಮ ಗುರುದೇವರು ತಾಯಿಯ ಕಠೋರ ಪ್ರಾರಬ್ಧವನ್ನು ತುಂಬಾ ಸುಲಭಗೊಳಿಸಿದರು. ‘ಗುರುಗಳು ಸಾಧಕರ ಮತ್ತು ಶಿಷ್ಯರ ಕಾಳಜಿ ವಹಿಸಿ ಅವರಿಗೆ ಪ್ರಾರಬ್ಧವನ್ನು ಭೋಗಿಸುವ ಶಕ್ತಿಯನ್ನು ನೀಡುತ್ತಾರೆ’, ಎಂಬುದು ನಮಗೆ ಅನುಭವಿಸಲು ಸಿಕ್ಕಿತು. ಇದಕ್ಕಾಗಿ ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು. ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸೂಚಿಸಿದ ಶಬ್ದಸುಮನಗಳನ್ನು ಕೃತಜ್ಞತಾಭಾವದಿಂದ ಅವರ ಚರಣಗಳಿಗೆ ಅರ್ಪಿಸುತ್ತೇನೆ ! – ಸದ್ಗುರು ರಾಜೇಂದ್ರ ಶಿಂದೆ, ದೇವದ ಆಶ್ರಮ, ಪನವೇಲ್. (೪.೧೦.೨೦೨೩)